ಬೆಂಗಳೂರು : ಮಲ್ಲಕಂಭ ಕ್ರೀಡೆಯು ಅಪ್ಪಟ ದೇಸಿ ಕ್ರೀಡೆಯಾಗಿದ್ದು, ಆರೋಗ್ಯವಂತ ಸಮಾಜಕ್ಕೆ ಹಾಗೂ ಒಳ್ಳೆಯ ದೇಹಪ್ರಕೃತಿಗೆ ಉತ್ತಮ ಯೋಗಸಾಧನವಾಗಿದೆ (YOGA) ಎಂದು ಜಯನಗರ ವಿಧಾನ ಸಭಾ ಕ್ಷೇತ್ರದ ಶಾಸಕರಾದ(MLA) ಸಿ.ಕೆ.ರಾಮಮೂರ್ತಿ (C.K.Rama Murthy) ಯವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಂಗಳೂರು ನಗರ ಜಿಲ್ಲೆ ಹಾಗೂ ಕರ್ನಾಟಕ ಅಮೆಚೂರ್(Ameture) ಮಲ್ಲಕಂಭ ಅಸೋಸಿಯೇಷನ್ ಇವರ ಸಹಯೋಗದಲ್ಲಿ ರಾಜ್ಯ ಮಟ್ಟದ ಮಲ್ಲಕಂಭ ಕ್ರೀಡೋತ್ಸವ 2025-26ರ ಕಾರ್ಯಕ್ರಮವನ್ನು ಜಯನಗರದ ದುರ್ಗಾಪರಮೇಶ್ವರಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಗಿಡಕ್ಕೆ ನೀರು ಎರೆದು ಉದ್ಘಾಟಿಸಿ ಮಾತನಾಡಿದ ಅವರು, ಶಾಸಕರು ಈ ದೇಸಿ ಕ್ರೀಡೆಯನ್ನ ನೆಲಮಟ್ಟದಿಂದ ಕೆಲ ಮೀಟರ್ ಎತ್ತರದ ಕಟ್ಟಿಗೆ ಕಂಬವನ್ನು ಕುಸ್ತಿಪಟುಗಳು(Wrestlers) ಸಾಧನೆಗಾಗಿ ಬಳಸುತ್ತಿದ್ದರು ಆದರೆ ನಂತರದ ದಿನಗಳಲ್ಲಿ ಇದೇ ಒಂದು ಸ್ವತಂತ್ರ ಕ್ರೀಡೆಯಾಗಿ ರೂಪುಗೊಂಡಿದೆ ಎಂದರು.

ರಾಜ್ಯದ 18 ಜಿಲ್ಲೆಗಳಿಂದ ತಲಾ 16 ಮಲ್ಲಕಂಭ ಕ್ರೀಡಾಪಟುಗಳು ಸೇರಿ ಒಟ್ಟು 300 ಕ್ರೀಡಾಪಟುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿರುತ್ತಾರೆ. ಬೆಂಗಳೂರು ಸೇರಿದಂತೆ 18 ಜಿಲ್ಲೆಗಳಿಂದ ಆಗಮಿಸಿರುವ ಕ್ರೀಡಾಪಟುಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಜಯಶಾಲಿಯಾಗಲಿ ಹಾಗೂ ಇನ್ನು ಹೆಚ್ಚಿನ ಪ್ರೋತ್ಸಾಹ ಮಲ್ಲಕಂಭ ಕ್ರೀಡೆಗೆ ಒದಗಿಸಿಕೊಡಲು ವೈಯಕ್ತಿಕವಾಗಿ ಬದ್ಧನಾಗಿದ್ದೇನೆ ಎಂದು ತಿಳಿಸಿದರು.
ಎಲ್ಲ ಕ್ರೀಡಾಪಟುಗಳನ್ನು ಹುರಿದುಂಬಿಸಿ ಸಂತೋಷ ವ್ಯಕ್ತಪಡಿಸಿದ ಅವರು ಇಷ್ಟು ಅದ್ಬುತ ಕಾರ್ಯಕ್ರಮವನ್ನು ಜಯನಗರದಲ್ಲಿ ಆಯೋಜಿಸಿರುವುದಕ್ಕೆ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಅಭಿನಂಧಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಶ್ರೀಮತಿ ಶಶಿಕಲಾ ಅವರು ಎಲ್ಲರನ್ನ ಸ್ವಾಗತಿಸಿ. ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, 14 ವರ್ಷ ಮೇಲ್ಪಟ್ಟ ಮತ್ತು 14 ವರ್ಷದೊಳಗಿನ ವಿಭಾಗಗಳಲ್ಲಿ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕವಾಗಿ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ದಿನಾಂಕ11 ಮತ್ತು 12ರಂದು ಎರಡೂ ದಿನಗಳು ಸ್ಪರ್ಧೆಗಳು ನಡೆಯಲಿವೆ ಎಂದು ಹೇಳಿದರು.
ವಿಜೇತರಾದವರಿಗೆ ಪ್ರಥಮ ಬಹುಮಾನ ವೈಯಕ್ತಿಕ ವಿಭಾಗದಲ್ಲಿ ರೂ.5000/ದ್ವಿತೀಯ ಬಹುಮಾನ ರೂ.3000/ಹಾಗೂ ತೃತೀಯ ಬಹುಮಾನ ರೂ.2000 ನೀಡಲಾಗುವುದು. ಗುಂಪು ವಿಭಾಗದಲ್ಲಿ ಪ್ರಥಮ ಬಹುಮಾನ ರೂ.10000/- ದ್ವಿತೀಯ ಬಹುಮಾನ ರೂ. 7000 ಮತ್ತು ತೃತೀಯ ಬಹುಮಾನ ರೂ.5000/ನೀಡಲಾಗುವುದು. ರಾಜ್ಯದ ವಿವಿಧ ಭಾಗಗಳಿಂದ ಬೆಂಗಳೂರು ನಗರ ಜಿಲ್ಲೆಗೆ ಆಗಮಿಸಿರುವ ಕ್ರೀಡಾಪಟುಗಳಿಗೆ ಪ್ರಯಾಣ ವೆಚ್ಚ ಮತ್ತು ಊಟೋಪಚಾರವನ್ನು ಇಲಾಖೆಯಿಂದ ಭರಿಸಲಾಗುವುದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ಅಮೆಚೂರು ಮಲ್ಲಕಂಭ ಅಸೋಸಿಯೇಷನ್ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಖಜಾಂಚಿ ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು.

