ಸಾರ್ವಜನಿಕ ಸೇವೆಯಲ್ಲಿ ಜನಸಾಮಾನ್ಯರ ಸಮಸ್ಯೆಗಳಿಗೆ ಮೊದಲ ಆದ್ಯತೆ ನೀಡಿ

ಸಾರ್ವಜನಿಕ ಸೇವೆಯಲ್ಲಿ ಜನಸಾಮಾನ್ಯರ ಸಮಸ್ಯೆಗಳಿಗೆ ಮೊದಲ ಆದ್ಯತೆ ನೀಡಿ: ನೂತನ ಐಪಿಎಸ್ ಪ್ರೊಬೇಷನರ್‍ಗಳಿಗೆ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಕಿವಿಮಾತು
ಜನರೊಂದಿಗೆ ಬೆರೆಯಲು ಕನ್ನಡ ಕಲಿಯಿರಿ: ನವೀನ ತಂತ್ರಜ್ಞಾನಕ್ಕೆ ತಕ್ಕಂತೆ ಸದಾ ಅಪ್‍ಡೇಟ್ ಆಗಿರಲು ಸಲಹೆ

ಬೆಂಗಳೂರು: ಸಾರ್ವಜನಿಕ ಸೇವೆಯಲ್ಲಿ ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಮೊದಲ ಆದ್ಯತೆ ನೀಡಬೇಕು ಹಾಗೂ ಜನರ ಕುಂದುಕೊರತೆಗಳಿಗೆ(Shortcomings) ಸಹಾನುಭೂತಿ ಮತ್ತು ಸಂವೇದನಾಶೀಲತೆಯಿಂದ ಸ್ಪಂದಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್(Dr.Shalini Rajaneesh), ಭಾ.ಆ.ಸೇ., ಅವರು ನೂತನ ಐಪಿಎಸ್ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಕರ್ನಾಟಕ ಕೇಡರ್‍ಗೆ ನಿಯೋಜನೆಗೊಂಡಿರುವ 78ನೇ ಆರ್‍ಆರ್ (2025ನೇ ಬ್ಯಾಚ್)ನ ಐದು ಮಂದಿ ಐಪಿಎಸ್ ಪ್ರೊಬೇಷನರ್‍ಗಳಾದ ಸಂಪ್ರೀತ್ ಸಂತೋಷ್, ರಾಹುಲ್ ಸಿ. ಯರಂತೇಲಿ, ಸೌಭಾಗ್ಯ ಎಸ್. ಬೀಳಗಿಮಠ, ಅಭಿನವ್ ಶರ್ಮಾ ಮತ್ತು ಅಭಿಲಾಷ್, ಸುಂದರಂ ಅವರು ಇಂದು (ಬುಧವಾರ) ವಿಧಾನಸೌಧದಲ್ಲಿ ಮುಖ್ಯ ಕಾರ್ಯದರ್ಶಿಯವರನ್ನು ಸೌಹಾರ್ದಯುತವಾಗಿ ಭೇಟಿಯಾದರು.

ನೂತನ ಅಧಿಕಾರಿಗಳನ್ನು ಕರ್ನಾಟಕ ಕೇಡರ್‍ಗೆ ಆತ್ಮೀಯವಾಗಿ ಸ್ವಾಗತಿಸಿ ಮಾತನಾಡಿದ ಮುಖ್ಯ ಕಾರ್ಯದರ್ಶಿಯವರು, ಇಂದಿನ ಕಾಲಘಟ್ಟದಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ನವೀನ ಆಲೋಚನೆಗಳಿಗೆ ತಕ್ಕಂತೆ ಅಧಿಕಾರಿಗಳು ನಿರಂತರವಾಗಿ  ಅಪ್‍ಡೇಟ್ ಆಗುವುದು ಅತ್ಯಗತ್ಯ ಎಂದು ಮಾರ್ಗದರ್ಶನ ನೀಡಿದರು.

ಸಾರ್ವಜನಿಕರೊಂದಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಬೆರೆಯಲು ಹಾಗೂ ಸ್ಥಳೀಯ ಜನರ ಭಾವನೆಗಳನ್ನು ಹತ್ತಿರದಿಂದ ಅರ್ಥಮಾಡಿಕೊಳ್ಳಲು ಕನ್ನಡ ಭಾμÉಯನ್ನು ಕಲಿಯುವ ಮಹತ್ವವನ್ನು ಅವರು ವಿಶೇಷವಾಗಿ ಒತ್ತಿ ಹೇಳಿದರು. ಅಲ್ಲದೆ, ಈ ಐವರು ಐಪಿಎಸ್ ಪ್ರೊಬೇಷನರ್‍ಗಳಲ್ಲಿ ಮೂವರು ಕರ್ನಾಟಕದವರೇ ಆಗಿರುವುದು ಸಂತಸದ ವಿಷಯ ಎಂದು ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಕಾರ್ಯದರ್ಶಿಯವರು ಎಲ್ಲಾ ನೂತನ ಐಪಿಎಸ್ ಪ್ರೊಬೇಷನರ್‍ಗಳಿಗೆ ಕನ್ನಡ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದರು. ವಿಶೇಷವಾಗಿ, ಸುಸ್ಥಿರ ಅಭಿವೃದ್ಧಿ ಗುರಿಗಳ (Sustainable Development Goals) ಕುರಿತು ಸ್ವತಃ ತಾವೇ ರಚಿಸಿರುವ ‘ಸುಸ್ಥಿರ ಬದುಕಿನ ಆಶಾಕಿರಣ’ ಕೃತಿಯನ್ನು ಮಂಡ್ಯ ಮೂಲದ ಪ್ರೊಬೇಷನರ್ ಸಂಪ್ರೀತ್ ಸಂತೋμï ಅವರಿಗೆ ನೀಡಿ ಶುಭ ಹಾರೈಸಿದರು.

ಮುಖ್ಯ ಕಾರ್ಯದರ್ಶಿಯವರ ಮಾರ್ಗದರ್ಶನಕ್ಕೆ ಕೃತಜ್ಞತೆ ಸಲ್ಲಿಸಿದ ನೂತನ ಐಪಿಎಸ್ ಪ್ರೊಬೇಷನರ್‍ಗಳು, ಕರ್ನಾಟಕ ಕೇಡರ್‍ನಲ್ಲಿ ಜನಪರ, ಪಾರದರ್ಶಕ ಮತ್ತು ದಕ್ಷ ಪೊಲೀಸ್ ಸೇವೆ ಸಲ್ಲಿಸುವ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು.

Hot this week

ಬೆಂಗಳೂರು: ಡಾ.ಮನಮೋಹನ್ ಸಿಂಗ್(Dr.Manamohan Singh) ಬೆಂಗಳೂರು ನಗರ ವಿಶ್ವವಿದ್ಯಾಲಯವು ಎಂ.ಬಿ.ಎ.(MBA)  ಎರಡನೇ...

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಲ್ಲಿ (KPSC) ನಡೆಯುತ್ತಿರುವ ಅಕ್ರಮಗಳನ್ನು ತಡೆಗಟ್ಟುವ ಹಾಗೂ...

ಸೊಲ್ಲಾಪುರ ನಗರದ 52 ನಗರಗಳಲ್ಲಿ ನಕಲಿ ಆಧಾರ್ ಕಾರ್ಡ್, ನಕಲಿ ನೋಟರಿ

ಸೊಲ್ಲಾಪುರದಲ್ಲಿ ‘ಡಾಕ್ಯುಮೆಂಟ್ ಜಿಹಾದ್’ ಮೂಲಕ 1,500 ಕ್ಕೂ ಹೆಚ್ಚು ನಿವೇಶನಗಳನ್ನು (ಪ್ಲಾಟ್)...

ಎ ಐ  ನಿಂದ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯಿಂದ ಜಗತ್ತು ವೇಗವಾಗಿ  ಬದಲಾಗುತ್ತಿದೆ – ಸಿ.ಎ ಡಾ. ವಿಷ್ಣು ಭರತ್

ಎಪಿಎಸ್ ವಿಜ್ಞಾನ ಮತ್ತು ವಾಣಿಜ್ಯ ವಸ್ತುಪ್ರದರ್ಶನದಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶನ   ವಿದ್ಯಾರ್ಥಿಗಳ ವಸ್ತುಪ್ರದರ್ಶನದಿಂದ ಆವಿಷ್ಕಾರ,...

ನ.27ಕ್ಕೆ ಮಿತ್ರರಕ್ಷಕ ಚಿತ್ರ ರಾಜ್ಯಾದ್ಯಂತ  ಬಿಡುಗಡೆಯಾಗುತ್ತಿದೆ

ನೀತು ಫಿಲಂ(Neetu Film) ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗಿರುವ  ಮಿತ್ರರಕ್ಷಕ(Mitrarakshaka) ನವೆಂಬರ್ 27ಕ್ಕೆ...

Topics

ಪುಸ್ತಕದ ಪರಿಚಯ – ಕನ್ನಡ ಕಿಟ್

ಕನ್ನಡ ಕಿಟ್ (Kannada Kit) ಪೋಷಕರು ಮತ್ತು ಕನ್ನಡ ಶಿಕ್ಷಕರಿಗಾಗಿ ಇರುವ...

ಅಂಕಣಕಾರ್ತಿ, ಲೇಖಕಿ ಮಾಧುರಿ ದೇಶಪಾಂಡೆ ಅವರಿಗೆ ‘ಸಾಹಿತ್ಯ ರತ್ನ’ ಪ್ರಶಸ್ತಿ ಪ್ರದಾನ

ಬೆಂಗಳೂರು: ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ(Sree Krishna Raja)...

Related Articles