ಉಡುಪಿಯಲ್ಲಿ ನ. 29 ರಂದು ಐತಿಹಾಸಿಕ ‘ಶ್ರೀ ಮಹಾಧನ್ವಂತರಿ ಯಾಗ’ : 1,000 ವರ್ಷಗಳ ಪ್ರಾಚೀನ ಸೋಮನಾಥ ಜ್ಯೋತಿರ್ಲಿಂಗದ ಪವಿತ್ರ ದಿವ್ಯಾಂಶ ದುರ್ಲಭ ದರ್ಶನ

ಉಡುಪಿಯಲ್ಲಿ ನವೆಂಬರ್ 29 ರಂದು ಐತಿಹಾಸಿಕ ‘ಶ್ರೀ ಮಹಾಧನ್ವಂತರಿ ಯಾಗ’ : 1,000 ವರ್ಷಗಳ ಪ್ರಾಚೀನ ಸೋಮನಾಥ ಜ್ಯೋತಿರ್ಲಿಂಗದ ಪವಿತ್ರ ದಿವ್ಯಾಂಶ ದುರ್ಲಭ ದರ್ಶನ

ಆರೋಗ್ಯಸಂಪನ್ನ ಸಮಾಜ, ರಾಷ್ಟ್ರ ರಕ್ಷಣೆ ಮತ್ತು ಲೋಕಕಲ್ಯಾಣದ ಸಂಕಲ್ಪದೊಂದಿಗೆ ಸನಾತನ ಸಂಸ್ಥೆಯ ಭವ್ಯ ಆಯೋಜನೆ

ಉಡುಪಿ/ಮಂಗಳೂರು: ಆರೋಗ್ಯಸಂಪನ್ನ ಸಮಾಜ, ರಾಷ್ಟ್ರದ ಸುರಕ್ಷತೆ ಹಾಗೂ ವಿಶ್ವಕಲ್ಯಾಣದ ಸಂಕಲ್ಪದೊಂದಿಗೆ ಭಗವಾನ್ ಶ್ರೀಕೃಷ್ಣನ ಪಾವನ ನಗರಿ ಉಡುಪಿಯಲ್ಲಿ ಮುಂಬರುವ ನವೆಂಬರ್ 29, 2026 ರಂದು ಭವ್ಯ ‘ಶ್ರೀ ಮಹಾಧನ್ವಂತರಿ ಯಾಗ’ವನ್ನು(Shri Mahadhanvantari Yaga) ಆಯೋಜಿಸಲಾಗಿದೆ. ಸನಾತನ ಸಂಸ್ಥೆಯ ವತಿಯಿಂದ ಉಡುಪಿಯ ಎಂ.ಜಿ.ಎಂ. ಕಾಲೇಜು(MGM Colleage) ಮೈದಾನದಲ್ಲಿ ಮಧ್ಯಾಹ್ನ 3 ರಿಂದ ಸಂಜೆ 7 ಗಂಟೆಯವರೆಗೆ ನಡೆಯಲಿರುವ ಈ ಐತಿಹಾಸಿಕ ಯಾಗದ ಪ್ರಮುಖ ಆಕರ್ಷಣೆ 1,000 ವರ್ಷಗಳ ಇತಿಹಾಸವನ್ನು ಹೊಂದಿರುವ ಪ್ರಾಚೀನ ‘ಸೋರಟಿ ಸೋಮನಾಥ ಜ್ಯೋತಿರ್ಲಿಂಗ’ದ ಪವಿತ್ರ ದಿವ್ಯಾಂಶಗಳ ದುರ್ಲಭ ಸಾರ್ವಜನಿಕ ದರ್ಶನವಾಗಿರಲಿದೆ. ಇದುವರೆಗೆ 9,000 ಕ್ಕೂ ಹೆಚ್ಚು ಶ್ರದ್ಧಾಳುಗಳು ಈ ಆಯೋಜನೆಗಾಗಿ ನೋಂದಣಿ ಮಾಡಿಕೊಂಡಿದ್ದು, 15,000 ಕ್ಕೂ ಹೆಚ್ಚು ಜನರು ಇದರಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಉಡುಪಿ ಮತ್ತು ಮಂಗಳೂರಿನಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಗಳಲ್ಲಿ ಸನಾತನ ಸಂಸ್ಥೆಯ ವತಿಯಿಂದ ಈ ಮಾಹಿತಿಯನ್ನು ನೀಡಲಾಯಿತು.

 1,000 ವರ್ಷಗಳ ನಂತರ ಪ್ರಾಚೀನ ಸೋಮನಾಥ ಜ್ಯೋತಿರ್ಲಿಂಗದ ದಿವ್ಯಾಂಶಗಳ ದುರ್ಲಭ ದರ್ಶನದ ಅವಕಾಶ

ಚಂದ್ರದೇವನಿಂದ ಸ್ಥಾಪಿಸಲ್ಪಟ್ಟ ಪ್ರಾಚೀನ ‘ಸೋರಠಿ ಸೋಮನಾಥ ಜ್ಯೋತಿರ್ಲಿಂಗ’ದ ಮೇಲೆ ಕ್ರಿ.ಶ. 1026 ರಲ್ಲಿ ಮಹಮೂದ್ ಘಜ್ನವಿಯ ಆಕ್ರಮಣದ ಸಮಯದಲ್ಲಿ ಶ್ರದ್ಧಾಳು ಅರ್ಚಕರು ಜ್ಯೋತಿರ್ಲಿಂಗದ ಪವಿತ್ರ ದಿವ್ಯಾಂಶಗಳನ್ನು ರಹಸ್ಯವಾಗಿ ಸುರಕ್ಷಿತಗೊಳಿಸಿದ್ದರು. ಒಂದು ಸಹಸ್ರಮಾನದವರೆಗೆ (1,000 ವರ್ಷಗಳು) ಜೋಪಾನವಾಗಿ ಇರಿಸಲಾಗಿದ್ದ ಈ ಪವಿತ್ರ ದಿವ್ಯಾಂಶಗಳನ್ನು ತಂಜಾವೂರಿನ ವೇದಕುಲಪತಿ ಶ್ರೀ. ಜಿ.ಕೆ. ಸೀತಾರಾಮನ್ ಗುರೂಜಿ ಅವರ ಮೂಲಕ ಜಗತ್ತಿನ ಮುಂದೆ ತರಲಾಗಿದೆ. ಇವುಗಳಲ್ಲಿ ನಾಲ್ಕು ಪವಿತ್ರ ದಿವ್ಯಾಂಶಗಳನ್ನು ಸನಾತನ ಸಂಸ್ಥೆಗೆ ಹಸ್ತಾಂತರಿಸಲಾಗಿದ್ದು, ಇವುಗಳ ದುರ್ಲಭ ಆಧ್ಯಾತ್ಮಿಕ ದರ್ಶನದ ಲಾಭವು ಯಾಗದಲ್ಲಿ ಉಪಸ್ಥಿತರಿರುವ ಶ್ರದ್ಧಾಳುಗಳಿಗೆ ದೊರೆಯಲಿದೆ. ಅಷ್ಟೇ ಅಲ್ಲದೆ ಈ ಯಾಗದಲ್ಲಿ ಭಗವಾನ್ ಶ್ರೀ ಕೃಷ್ಣನ ಜನ್ಮಸ್ಥಳದ ಪವಿತ್ರ ಮಣ್ಣು ಮತ್ತು ಜಲದ ದರ್ಶನವೂ ಲಭಿಸಲಿದೆ.

ಜಾಗತಿಕ ಸಂಕಷ್ಟಗಳ ಕಾಲಘಟ್ಟದಲ್ಲಿ ಸಾಮೂಹಿಕ ಆಧ್ಯಾತ್ಮಿಕ ಸಂಕಲ್ಪ ಅಗತ್ಯ : ಪೂಜ್ಯ ರಮಾನಂದ ಗೌಡ

ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತರಾದ ಪೂಜ್ಯ ರಮಾನಂದ ಗೌಡ ಅವರು ಮಾತನಾಡಿ, “ಜಾಗತಿಕ ಸಂಘರ್ಷ, ಸಾಂಕ್ರಾಮಿಕ ರೋಗಗಳು ಮತ್ತು ಹವಾಮಾನ ವೈಪರೀತ್ಯದ ಪ್ರಸ್ತುತ ಕಾಲಘಟ್ಟದಲ್ಲಿ ಸಮಸ್ತ ಮಾನವಕುಲದ ಆರೋಗ್ಯ ಹಾಗೂ ರಾಷ್ಟ್ರದ ಸುರಕ್ಷತೆಗಾಗಿ ವೇದಮಂತ್ರಗಳು ಮತ್ತು ಸಾಮೂಹಿಕ ಸಂಕಲ್ಪದೊಂದಿಗೆ ಭಗವಾನ್ ಶ್ರೀ ಧನ್ವಂತರಿಯ ಆರಾಧನೆ ಅತ್ಯಂತ ಅವಶ್ಯಕವಾಗಿದೆ,” ಎಂದರು.

ಅಷ್ಟ ಮಠಾಧೀಶರ ಉಪಸ್ಥಿತಿ ಮತ್ತು ಭವ್ಯ ಸಿದ್ಧತೆಗಳು

ಆಯೋಜನಾ ಸಮಿತಿಯ ಸಂಯೋಜಕರಾದ ಶ್ರೀ. ಗುರುಪ್ರಸಾದ್ ಗೌಡ ಹಾಗೂ ಸ್ವಾಗತ ಸಮಿತಿಯ ಸಂಘಟನಾ ಕಾರ್ಯದರ್ಶಿ ಶ್ರೀ. ವಿಜಯ್ ಕೊಡವೂರು ಅವರು ಮಾತನಾಡಿ, ಉಡುಪಿಯ ಶಾಸಕರಾದ ಶ್ರೀ. ಯಶಪಾಲ್ ಸುವರ್ಣ ಅವರ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿದರು. ಈ ಯಾಗಕ್ಕಾಗಿ ಉಡುಪಿಯ ಅಷ್ಟ ಮಠಾಧೀಶರು ಸೇರಿದಂತೆ ವಿವಿಧ ಮಠಗಳ ಪೂಜ್ಯ ಸ್ವಾಮೀಜಿಗಳು, ಸಂಸದರು, ಶಾಸಕರು ಹಾಗೂ ಗಣ್ಯ ವ್ಯಕ್ತಿಗಳನ್ನು ಆಹ್ವಾನಿಸಲಾಗಿದೆ. ಎಂ.ಜಿ.ಎಂ. ಮೈದಾನದಲ್ಲಿ ಬೃಹತ್ ಜರ್ಮನ್ ಹ್ಯಾಂಗರ್ ಪೆಂಡಾಲ್, ಯಾಗ ಮಂಟಪ, ಧರ್ಮಗ್ರಂಥ ಹಾಗೂ ಸಾತ್ತ್ವಿಕ ಉತ್ಪನ್ನಗಳ ಪ್ರದರ್ಶನ ಮಳಿಗೆಗಳ ಸಿದ್ಧತೆಗಳು ನವೆಂಬರ್ 26, 2026 ರೊಳಗೆ ಪೂರ್ಣಗೊಳ್ಳಲಿವೆ. ಶಾಸಕರಾದ ಶ್ರೀ. ಯಶಪಾಲ್ ಸುವರ್ಣ ಅವರು ಈ ಯಾಗಕ್ಕೆ ಸಂಪೂರ್ಣ ಸಹಕಾರವನ್ನು ಘೋಷಿಸಿದ್ದಾರೆ. ಪತ್ರಿಕಾಗೋಷ್ಠಿಗಳಲ್ಲಿ ಪೂಜ್ಯ ರಮಾನಂದ ಗೌಡ, ಶಾಸಕ ಶ್ರೀ. ಯಶಪಾಲ್ ಸುವರ್ಣ, ಶ್ರೀ. ಗುರುಪ್ರಸಾದ್ ಗೌಡ, ಶ್ರೀ. ವಿಜಯ್ ಕೊಡವೂರು, ಶ್ರೀ. ರಮೇಶ್ ಶಿಂದೆ, ಶ್ರೀ. ನಂದನ್ ಮಲ್ಯ, ಶ್ರೀಮತಿ ಲಕ್ಷ್ಮೀ ಪೈ ಹಾಗೂ ಶ್ರೀ. ಎಂ.ಜೆ. ಶೆಟ್ಟಿ ಉಪಸ್ಥಿತರಿದ್ದರು.

ಪ್ರವೇಶ ಉಚಿತ (ನೋಂದಣಿ ಕಡ್ಡಾಯ) –
https://www.sanatanrashtrashankhnad.in/events/shri-dhanvantari-mahayaag?lang=kn

 ಈ ಯಾಗವನ್ನು @KannadaSanatan ಈ ಯುಟ್ಯೂಬ್ ಚಾನೆಲ್ ಮೂಲಕ 44 ಕ್ಕೂ ಅಧಿಕ ದೇಶಗಳಿಂದ ವೀಕ್ಷಕರು ನೇರಪ್ರಸಾರ ವೀಕ್ಷಿಸಲಿದ್ದಾರೆ.

Hot this week

ಪುಸ್ತಕದ ಪರಿಚಯ – ಕನ್ನಡ ಕಿಟ್

ಕನ್ನಡ ಕಿಟ್ (Kannada Kit) ಪೋಷಕರು ಮತ್ತು ಕನ್ನಡ ಶಿಕ್ಷಕರಿಗಾಗಿ ಇರುವ...

ಅಂಕಣಕಾರ್ತಿ, ಲೇಖಕಿ ಮಾಧುರಿ ದೇಶಪಾಂಡೆ ಅವರಿಗೆ ‘ಸಾಹಿತ್ಯ ರತ್ನ’ ಪ್ರಶಸ್ತಿ ಪ್ರದಾನ

ಬೆಂಗಳೂರು: ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ(Sree Krishna Raja)...

ಶಿಕ್ಷಣ ತಜ್ಞೆ ಪದ್ಮಾವತಿ ಕೆ.ವಿ. ಅವರಿಗೆ ‘ಟೀಚರ್ಸ್ ಟ್ರೋವ್–2026’ ಪ್ರಶಸ್ತಿ

ಬೆಂಗಳೂರು: ಕಾಡುಗೋಡಿಯ ಜನನಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಪದ್ಮಾವತಿ...

ವೈಭವ್ ಸೂರ್ಯವಂಶಿ ಅಬ್ಬರಕ್ಕೆ ಕ್ರಿಕೆಟ್ ದಾಖಲೆಗಳೇ ಪುಡಿಪುಡಿ: ಕೇವಲ 28 ಎಸೆತಗಳಲ್ಲಿ ಶತಕ, 53 ಎಸೆತಗಳಲ್ಲಿ 204 ರನ್!

ದೋಹಾ: ಭಾರತೀಯ ಕ್ರಿಕೆಟ್‌ನ ಯುವ ಪ್ರತಿಭೆ ವೈಭವ್ ಸೂರ್ಯವಂಶಿ(Vaibhav Suryavamsi) ಮತ್ತೊಮ್ಮೆ...

Topics

ಪುಸ್ತಕದ ಪರಿಚಯ – ಕನ್ನಡ ಕಿಟ್

ಕನ್ನಡ ಕಿಟ್ (Kannada Kit) ಪೋಷಕರು ಮತ್ತು ಕನ್ನಡ ಶಿಕ್ಷಕರಿಗಾಗಿ ಇರುವ...

ಅಂಕಣಕಾರ್ತಿ, ಲೇಖಕಿ ಮಾಧುರಿ ದೇಶಪಾಂಡೆ ಅವರಿಗೆ ‘ಸಾಹಿತ್ಯ ರತ್ನ’ ಪ್ರಶಸ್ತಿ ಪ್ರದಾನ

ಬೆಂಗಳೂರು: ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ(Sree Krishna Raja)...

ಶಿಕ್ಷಣ ತಜ್ಞೆ ಪದ್ಮಾವತಿ ಕೆ.ವಿ. ಅವರಿಗೆ ‘ಟೀಚರ್ಸ್ ಟ್ರೋವ್–2026’ ಪ್ರಶಸ್ತಿ

ಬೆಂಗಳೂರು: ಕಾಡುಗೋಡಿಯ ಜನನಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಪದ್ಮಾವತಿ...

ವೈಭವ್ ಸೂರ್ಯವಂಶಿ ಅಬ್ಬರಕ್ಕೆ ಕ್ರಿಕೆಟ್ ದಾಖಲೆಗಳೇ ಪುಡಿಪುಡಿ: ಕೇವಲ 28 ಎಸೆತಗಳಲ್ಲಿ ಶತಕ, 53 ಎಸೆತಗಳಲ್ಲಿ 204 ರನ್!

ದೋಹಾ: ಭಾರತೀಯ ಕ್ರಿಕೆಟ್‌ನ ಯುವ ಪ್ರತಿಭೆ ವೈಭವ್ ಸೂರ್ಯವಂಶಿ(Vaibhav Suryavamsi) ಮತ್ತೊಮ್ಮೆ...

ಬೆಂಗಳೂರಿನಲ್ಲಿ ದಿಲ್ಜಿತ್ ದೋಸಾಂಜ್ ಸಂಗೀತ ಕಾರ್ಯಕ್ರಮಕ್ಕೆ ಬಾಂಬ್ ಬೆದರಿಕೆ

ಬೆಂಗಳೂರು: ಪಂಜಾಬಿ ಖ್ಯಾತ ಗಾಯಕ ದಿಲ್ಜಿತ್ ದೋಸಾಂಜ್ (Diljit Dosanjh's) ಅವರ...

Related Articles