ಬೆಂಗಳೂರು: ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದಿರುವ ಶ್ರೀ ಅನಂತ್ ನಾಗ್(Sri Ananth Nag) ಅವರು ಕನ್ನಡ ಚಿತ್ರರಂಗದಲ್ಲಿ ಎರಡನೆಯವರಾಗಿದ್ದಾರೆ. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿರುವುದು ಹೆಮ್ಮೆಯ ವಿಷಯವಾಗಿದೆ. ಶ್ರೀ ಅನಂತ್ ನಾಗ್ ಅವರಿಗೆ ಸದನವು ಹೃತ್ಪೂರ್ವಕವಾಗಿ ಅಭಿನಂದನೆ ಸಲ್ಲಿಸುತ್ತದೆ ಎಂದು ಸಭಾಧ್ಯಕ್ಷ ಜಿ.ಎಸ್.ಪಾಟೀಲ್(G.S,Patil) ಅವರು ತಿಳಿಸಿದರು.
ಇಂದು ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ಅವರು ಕನ್ನಡ ಚಿತ್ರರಂಗದ ಹಿರಿಯ ನಟ ಶ್ರೀ ಅನಂತ್‍ನಾಗ್ ಅವರು “ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ” ಭಾಜನರಾಗಿರುವುದು ಹೆಮ್ಮೆಯ ವಿಷಯವಾಗಿದೆ. ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಗೆ ಭಾಜನರಾಗಿರುವ ಅನಂತ್‍ನಾಗ್ ಅವರಿಗೆ ಸದನದಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಶ್ರೀ ಅನಂತ್ ನಾಗ್ ಅವರು ಬಾಲ್ಯದಲ್ಲಿ ವಾಯುಸೇನೆ ಸೇರುವ ಕನಸನ್ನು ಹೊತ್ತಿದ್ದರು. ಸ್ಪುರದ್ರೂಪಿ ವ್ಯಕ್ತಿತ್ವ, ಕಲೆಯ ಬಗೆಗಿನ ಒಲವು ಅವರನ್ನು ರಂಗಭೂಮಿಯತ್ತ ಮುಖ ಮಾಡುವಂತೆ ಮಾಡಿತು. ಹಿಂದಿ, ಕನ್ನಡ, ಕೊಂಕಣಿ, ಮರಾಠಿ ಸೇರಿದಂತೆ ಹಲವು ಭಾμÉಗಳಲ್ಲಿ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸುಮಾರು 70ಕ್ಕೂ ಹೆಚ್ಚು ನಾಟಕಗಳಲ್ಲಿ ಹಾಗೂ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ತಮ್ಮ ಸಹಜ ಅಭಿನಯದ ಮೂಲಕ ಅಭಿಮಾನಿಗಳ ಮನಗೆದ್ದಿರುವ ಅವರು 1973ರಲ್ಲಿ “ಸಂಕಲ್ಪ” ಎಂಬ ಚಿತ್ರದಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
1995ನೇ ಸಾಲಿನಲ್ಲಿ ಕನ್ನಡದ ಮೇರು ನಟ ಡಾ: ರಾಜ್ ಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಮೊದಲಬಾರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಪಡೆದಿದ್ದರು ಎಂದು ಸ್ಮರಿಸಲಾಯಿತು.
ಚಿತ್ರರಂಗದಲ್ಲಿ ಹೊಸ ಅಲೆ ಮೂಡಿಸಿದ ಕಲಾವಿದ ಅನಂತನಾಗ್- ಉಪಮುಖ್ಯಮಂತ್ರಿ ಡಾ: ಜಿ.ಪರಮೇಶ್ವರ್

