ಇಂಜಿನಿಯರ್ ಎಂದರೆ ಕಟ್ಟಡ ಕಟ್ಟುವವರಲ್ಲ, ಭವಿಷ್ಯ ರೂಪಿಸುವ ಶಿಲ್ಪಿಗಳು: ಸಚಿವ ಚಲುವರಾಯಸ್ವಾಮಿ

ತಂತ್ರಜ್ಞಾನ ಸ್ಮಾರ್ಟ್ ಆಗಿರದೆ, ಸುಸ್ಥಿರವಾಗಿರಬೇಕು: ಸರ್ ಎಂ.ವಿ. ಅವರನ್ನು ಇಂದಿಗೂ ಮೀರಿಸಲು ಸಾಧ್ಯವಿಲ್ಲ: ಆಧುನಿಕ ತಂತ್ರಜ್ಞಾನ ಬಳಸಿ ಕ್ರಾಂತಿ ಮಾಡಿ
 
ಸಮಾಜದ ಒಳಿತಿಗೆ ತಂತ್ರಜ್ಞಾನ ಬಳಕೆಯಾಗಲಿ; ನವೀನತೆಯ ಮೂಲಕ ಸುಸ್ಥಿರ ಕರ್ನಾಟಕ ನಿರ್ಮಿಸಲು: ಸಚಿವರ ಕರೆ
ಮೈಸೂರು:  ಇಂಜಿನಿಯರ್(Engineer) ಎಂದರೆ ಕೇವಲ ಕಟ್ಟಡ ಕಟ್ಟುವ ವ್ಯಕ್ತಿಯಲ್ಲ, ಇಂಜಿನಿಯರ್ ಎಂದರೆ ದೇಶದ ಭವಿಷ್ಯ ಕಟ್ಟುವ ಶಿಲ್ಪಿ. ಸುಭದ್ರ ಭವಿಷ್ಯ ನಿರ್ಮಾಣದಲ್ಲಿ( In Building a secure future)
ಇಂಜಿನಿಯರ್‌ಗಳ ಸಮರ್ಪಣಾ ಮನೋಭಾವ ಅತ್ಯಂತ ಮಹತ್ವದ್ದು ಎಂದು ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ(N.Chaluvarayaswamy) ಅಭಿಪ್ರಾಯಪಟ್ಟರು.
ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ (ಇಂಡಿಯಾ) ವತಿಯಿಂದ ನಗರದ ಜೆ.ಎಲ್.ಬಿ.ರಸ್ತೆಯಲ್ಲಿರುವ ಸರ್ ಎಂ.ವಿ.ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ 41ನೇ ‘ನ್ಯಾಷನಲ್ ಕನ್ವೆನ್ಷನ್ ಆಫ್ ಸಿವಿಲ್ ಇಂಜಿನಿಯರಿಂಗ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಜ್ಞಾನವನ್ನು ಗಳಿಸುವುದು ಎಷ್ಟು ಮುಖ್ಯವೋ, ಅದನ್ನು ಸಮಾಜದ ಹಿತಕ್ಕಾಗಿ ಸದ್ಬಳಕೆ ಮಾಡಿಕೊಳ್ಳುವುದು ಅಷ್ಟೇ ಪ್ರಮುಖ. ನಾವು ನಿತ್ಯವೂ ಸಂಚರಿಸುವ ರಸ್ತೆ, ಸೇತುವೆ, ಮನೆ ಬಾಗಿಲಿಗೆ ಬರುವ ನೀರು, ವಿದ್ಯುತ್ ಹಾಗೂ ಅಂಗೈಯಲ್ಲಿರುವ ಮೊಬೈಲ್ ಪ್ರಪಂಚ—ಇವೆಲ್ಲವೂ ನಿತ್ಯಜೀವನದ ಸಹಜ ಭಾಗವೆನಿಸಬಹುದು. ಆದರೆ, ಈ ಪ್ರತಿಯೊಂದು ಸೌಲಭ್ಯದ ಹಿಂದೆಯೂ ಸಾವಿರಾರು ಇಂಜಿನಿಯರ್‌ಗಳ ಜ್ಞಾನ, ಕಠಿಣ ಪರಿಶ್ರಮ, ಯೋಜನೆ ಹಾಗೂ ಹೊಣೆಗಾರಿಕೆ ಅಡಗಿದೆ” ಎಂದರು.
ಜಗತ್ತು ಇಂದು ತೀವ್ರ ಗತಿಯಲ್ಲಿ ಬದಲಾಗುತ್ತಿದ್ದು, ಕೃತಕ ಬುದ್ಧಿಮತ್ತೆ (AI), ರೊಬೊಟಿಕ್ಸ್, ಸೆಮಿಕಂಡಕ್ಟರ್, ಹಸಿರು ಇಂಧನ, ಎಲೆಕ್ಟ್ರಿಕ್ ವಾಹನಗಳು ಹಾಗೂ ಬಾಹ್ಯಾಕಾಶ ತಂತ್ರಜ್ಞಾನಗಳು ನಮ್ಮ ಬದುಕಿನ ದಿಕ್ಕನ್ನೇ ಬದಲಿಸುತ್ತಿವೆ. ಈ ನೂತನ ತಾಂತ್ರಿಕ ಯುಗದಲ್ಲಿ ಕರ್ನಾಟಕದ ಪಾತ್ರ ಅಗ್ರಗಣ್ಯವಾಗಿದೆ. ರಾಜ್ಯದ ಪ್ರತಿಯೊಂದು ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮಗಳಲ್ಲಿ ಅಪಾರ ಪ್ರತಿಭೆ, ಹೊಸ ಆಲೋಚನೆ ಹಾಗೂ ಕನಸುಗಳಿವೆ. ಅವುಗಳಿಗೆ ಆಧುನಿಕ ತಂತ್ರಜ್ಞಾನದ ಬಲ ತುಂಬುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಪ್ರತಿಪಾದಿಸಿದರು.
ಅಭಿವೃದ್ಧಿ ಎಂದರೆ ಕೇವಲ ಬೃಹತ್ ಯೋಜನೆಗಳಷ್ಟೇ ಅಲ್ಲ, ರೈತನ ಜಮೀನಿಗೆ ಸಕಾಲದಲ್ಲಿ ನೀರು ಒದಗಿಸುವುದು, ವಿದ್ಯಾರ್ಥಿಗೆ ಗುಣಮಟ್ಟದ ಡಿಜಿಟಲ್ ಶಿಕ್ಷಣ ನೀಡುವುದು, ಗ್ರಾಮಕ್ಕೆ ಸುಸಜ್ಜಿತ ರಸ್ತೆ ಸಂಪರ್ಕ ಕಲ್ಪಿಸುವುದು ಹಾಗೂ ಯುವಜನತೆಗೆ ಕೌಶಲ ಆಧಾರಿತ ಉದ್ಯೋಗಾವಕಾಶ ಕಲ್ಪಿಸುವುದೇ ನೈಜ ಪ್ರಗತಿ. ಇಂತಹ ಪ್ರತಿಯೊಂದು ಜನಪರ ಅಭಿವೃದ್ಧಿಯ ಹೆಜ್ಜೆಯಲ್ಲೂ ಇಂಜಿನಿಯರ್‌ಗಳ ಕೊಡುಗೆ ಅನನ್ಯವಾಗಿದೆ ಎಂದರು.
“ನಮ್ಮ ತಂತ್ರಜ್ಞಾನವು ಕೇವಲ ‘ಸ್ಮಾರ್ಟ್’ ಆಗಿರದೆ ‘ಸುಸ್ಥಿರ’ವಾಗಿರಬೇಕು. ಯುವಜನರು ಕೇವಲ ಉದ್ಯೋಗ ಅರಸದೆ ಉದ್ಯೋಗ ಸೃಷ್ಟಿಕರ್ತರಾಗಬೇಕು, ಸಮಸ್ಯೆಗಳ ಬಗ್ಗೆ ಮಾತನಾಡುವುದಕ್ಕಿಂತ ಪರಿಹಾರ ಕಂಡುಕೊಳ್ಳುವತ್ತ ಚಿಂತನೆ ನಡೆಸಬೇಕು” ಎಂದು ಸಲಹೆ ನೀಡಿದರು.
“ಸರ್ ಎಂ.ವಿಶ್ವೇಶ್ವರಯ್ಯ ಅವರ ದೂರದೃಷ್ಟಿ ಮತ್ತು ಕಾರ್ಯಕ್ಷಮತೆ ಸದಾ ಆದರ್ಶಪ್ರಾಯ. ತಂತ್ರಜ್ಞಾನವೇ ಇಲ್ಲದ ಆ ಕಾಲದಲ್ಲೇ ಅವರು ನಿರ್ಮಿಸಿದ ಅದ್ಭುತ ಯೋಜನೆಗಳನ್ನು ಇಂದಿಗೂ ಯಾರೂ ಮೀರಿಸಲು ಸಾಧ್ಯವಾಗಿಲ್ಲ. ಪ್ರಸ್ತುತ ಲಭ್ಯವಿರುವ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಇನ್ನಷ್ಟು ಕ್ರಾಂತಿಕಾರಿ ಕಾರ್ಯಗಳು ಸಾಕಾರಗೊಳ್ಳಬೇಕಿದೆ. ಜ್ಞಾನ, ತಂತ್ರಜ್ಞಾನ ಮತ್ತು ನವೀನತೆಯ ಮೂಲಕ ಜನಸೇವೆ ಮಾಡುತ್ತಾ ಬಲಿಷ್ಠ, ಆಧುನಿಕ ಹಾಗೂ ಸುಸ್ಥಿರ ಕರ್ನಾಟಕವನ್ನು ಒಟ್ಟಾಗಿ ಕಟ್ಟೋಣ” ಎಂದು ಕರೆ ನೀಡಿದರು.
ಈ ವೇಳೆ ದೇಶಕ್ಕೆ ಕೊಡುಗೆ ನೀಡಿದ ಹಿರಿಯ ಇಂಜಿನಿಯರ್‌ಗಳಿಗೆ ಸಚಿವರು ಸನ್ಮಾನಿಸಿ, ಅಭಿನಂದಿಸಿದರು. ಜೊತೆಗೆ, ಇಂಜಿನಿಯರ್ ಮನೀಶ್ ಪಾಂಡೆ ಅವರಿಗೆ “ಯಂಗ್ ಇಂಜಿನಿಯರ್” ಅವಾರ್ಡ್ ನೀಡಿ ಸನ್ಮಾನಿಸಿದರು.
ವೇದಿಕೆ ಕಾರ್ಯಕ್ರಮದ ಬಳಿಕ “ಸುಸ್ಥಿರ ಭಾರತ ನಿರ್ಮಾಣಕ್ಕೆ ಸಿವಿಲ್ ಇಂಜಿನಿಯರ್‌ಗಳ ಕೊಡುಗೆ – 2047” ವಿಷಯ ಕುರಿತು ಇಂಜಿನಿಯರ್‌ಗಳೊಂದಿಗೆ ಸಚಿವರು ಸಂವಾದ ನಡೆಸಿದರು.
ಕಾರ್ಯಕ್ರಮದಲ್ಲಿ ಸಿವಿಡಿಬಿ ಚೇರ್ಮನ್ ಪಿ.ಸೂರ್ಯಪ್ರಕಾಶ್, ಸಂಸ್ಥೆಯ ಪದಾಧಿಕಾರಿಗಳಾದ ಸೀತಾರಾಮ್, ನಾಗರಾಜ್, ಎಚ್.ಎಸ್.ಸುರೇಶ್ ಬಾಬು, ನಂಜಯ್ಯ, ನಿವೃತ್ತ ಮುಖ್ಯ ಇಂಜಿನಿಯರ್ ಮಹದೇವ್, ಅಖಿಲ ಭಾರತ ಇಂಜಿನಿಯರ್ ಸಂಸ್ಥೆಯ ಮಾಜಿ ಅಧ್ಯಕ್ಷ ವಿ.ಬಿ.ಸಿಂಗ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Hot this week

ಸರಕಾರಕ್ಕೆ ಬಿಸಿ ಮುಟ್ಟಿಸಲು ಕಾರ್ಯತಂತ್ರ: ಬಿ.ವೈ.ವಿಜಯೇಂದ್ರ

 ಬೆಂಗಳೂರು: ಮುಂದಿನ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸುವಂತಹ ಕೆಲಸವನ್ನು(Hot Work)...

ಪ್ರಜಾಸತ್ತಾತ್ಮಕ ವ್ಯವಸ್ಥೆ ದಮನ ಮಾಡುವ ಕೆಲಸ: ಎನ್.ರವಿಕುಮಾರ್

 ಬೆಂಗಳೂರು: ಗೋರಕ್ಷಣೆ, ಸಂಸ್ಕøತಿ ರಕ್ಷಿಸುವವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಾರೆ ಎಂದು...

ಇಂದು ದೇಶಾದ್ಯಂತ ಸಂವಿಧಾನ ದಿನಾಚರಣೆ: ನವೆಂಬರ್ 30ರಿಂದ ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಕೇಂದ್ರ ಸರ್ಕಾರ ಸಿದ್ಧತೆ

ನವದೆಹಲಿ: ಭಾರತದ ಸಂವಿಧಾನ ಅಂಗೀಕಾರಗೊಂಡ ಐತಿಹಾಸಿಕ ದಿನದ ಸ್ಮರಣಾರ್ಥ ಇಂದು (ನವೆಂಬರ್...

ಜಿಕೆವಿಕೆಯಲ್ಲಿ ನವೆಂಬರ್ 28ರಂದು “ರೈತ ಸಂತೆ”: ತಾಜಾ ಕೃಷಿ ಉತ್ಪನ್ನಗಳು, ಸಿರಿಧಾನ್ಯ ಹಾಗೂ ಸಾವಯವ ವಸ್ತುಗಳ ಮಾರಾಟ

ಬೆಂಗಳೂರು: ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ (GKVK) ಆವರಣದಲ್ಲಿನ ಗಣಪತಿ ದೇವಸ್ಥಾನದ ಹತ್ತಿರ...

ಹೊಸದಾಗಿ ಕಾಣಿಸಿಕೊಳ್ಳುತ್ತಿರುವ ಬೆಳೆ ರೋಗಗಳ ಆರಂಭಿಕ ಪತ್ತೆ ಮತ್ತು ನಿಯಂತ್ರಣಕ್ಕೆ ಆಧುನಿಕ...

Topics

ಸರಕಾರಕ್ಕೆ ಬಿಸಿ ಮುಟ್ಟಿಸಲು ಕಾರ್ಯತಂತ್ರ: ಬಿ.ವೈ.ವಿಜಯೇಂದ್ರ

 ಬೆಂಗಳೂರು: ಮುಂದಿನ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸುವಂತಹ ಕೆಲಸವನ್ನು(Hot Work)...

ಪ್ರಜಾಸತ್ತಾತ್ಮಕ ವ್ಯವಸ್ಥೆ ದಮನ ಮಾಡುವ ಕೆಲಸ: ಎನ್.ರವಿಕುಮಾರ್

 ಬೆಂಗಳೂರು: ಗೋರಕ್ಷಣೆ, ಸಂಸ್ಕøತಿ ರಕ್ಷಿಸುವವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಾರೆ ಎಂದು...

ಜಿಕೆವಿಕೆಯಲ್ಲಿ ನವೆಂಬರ್ 28ರಂದು “ರೈತ ಸಂತೆ”: ತಾಜಾ ಕೃಷಿ ಉತ್ಪನ್ನಗಳು, ಸಿರಿಧಾನ್ಯ ಹಾಗೂ ಸಾವಯವ ವಸ್ತುಗಳ ಮಾರಾಟ

ಬೆಂಗಳೂರು: ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ (GKVK) ಆವರಣದಲ್ಲಿನ ಗಣಪತಿ ದೇವಸ್ಥಾನದ ಹತ್ತಿರ...

ಹೊಸದಾಗಿ ಕಾಣಿಸಿಕೊಳ್ಳುತ್ತಿರುವ ಬೆಳೆ ರೋಗಗಳ ಆರಂಭಿಕ ಪತ್ತೆ ಮತ್ತು ನಿಯಂತ್ರಣಕ್ಕೆ ಆಧುನಿಕ...

ಬೆಂಗಳೂರು: ಮದ್ಯಪಾನ ಮತ್ತು ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ...

ಬೆಂಗಳೂರು: ಕರ್ನಾಟಕ ವಿಧಾನಸಭೆ ಸಚಿವಾಲಯದಿಂದ ನಾಡಿನ ಜನತೆಗೆ ಅತೀ ಅಮೂಲ್ಯವಾದ ಪುಸ್ತಕಗಳನ್ನು...

ಎಂ.ಎಸ್. ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ

  ಬೆಂಗಳೂರು: ಬೆಂಗಳೂರಿನ ಎಂ.ಎಸ್. ಎಂಜಿನಿಯರಿಂಗ್(M.S.Engineering) ಕಾಲೇಜಿನಲ್ಲಿ ಇಂದು ಸಂವಿಧಾನ ದಿನವನ್ನು ಅತ್ಯಂತ...

Related Articles