Home Blog Page 99

ವಕ್ಫ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮನ್ಸೂರ್ ಅಲಿ ಖಾನ್

ನವದೆಹಲಿ/ಬೆಂಗಳೂರು, ಏಪ್ರಿಲ್ 14,2025: ವಕ್ಫ್ (ತಿದ್ದುಪಡಿ) ಕಾಯ್ದೆ, 2025 ಅನ್ನು ಪ್ರಶ್ನಿಸಿ ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮುಸ್ಲಿಂ ಸಮುದಾಯದ ಪ್ರಮುಖ ಧ್ವನಿ ಮನ್ಸೂರ್ ಅಲಿ ಖಾನ್ ಸೋಮವಾರ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

 

ಕಾನೂನು ಸವಾಲಿನ ಹಿಂದಿನ ಕಾರಣಗಳನ್ನು ವಿವರಿಸಿದ ಖಾನ್, “ಈ ಕಾನೂನು ಸುಧಾರಣೆಯಲ್ಲ – ಇದು ನಮ್ಮ ಜನರ ತಲೆಮಾರುಗಳು ನಂಬಿಕೆ, ಪ್ರೀತಿ ಮತ್ತು ತ್ಯಾಗದಿಂದ ನಿರ್ಮಿಸಿದ್ದನ್ನು ನಿಯಂತ್ರಿಸುವ ಪ್ರಯತ್ನವಾಗಿದೆ. ಇದು ಕೇವಲ ಭೂಮಿ ಅಥವಾ ಆಸ್ತಿಗೆ ಸಂಬಂಧಿಸಿದ್ದಲ್ಲ ಇದು ಘನತೆ, ಸ್ವಾಯತ್ತತೆ ಮತ್ತು ನಮ್ಮ ಸಮುದಾಯಕ್ಕೆ ನಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುವ ಹಕ್ಕಿನ ಬಗ್ಗೆ ಎಂದು ಹೇಳಿದ್ದಾರೆ.

ಸಾಕಷ್ಟು ಸಮಾಲೋಚನೆಯಿಲ್ಲದೆ ಅಂಗೀಕರಿಸಲಾದ ಈ ತಿದ್ದುಪಡಿಯು ಶತಮಾನಗಳಷ್ಟು ಹಳೆಯದಾದ ಮಸೀದಿಗಳು, ದರ್ಗಾಗಳು ಮತ್ತು ಸಮುದಾಯ ಆಸ್ತಿಗಳನ್ನು ಏಕಪಕ್ಷೀಯವಾಗಿ “ವಕ್ಫ್ ಅಲ್ಲದ” ಎಂದು ಮರು ವರ್ಗೀಕರಿಸಲು ಸರ್ಕಾರ ನೇಮಿಸಿದ ಅಧಿಕಾರಿಗಳಿಗೆ ಅಧಿಕಾರ ನೀಡುತ್ತದೆ. ಇದು ನ್ಯಾಯಾಂಗದ ಮೇಲ್ವಿಚಾರಣೆಯನ್ನು ಬದಿಗಿಡುತ್ತದೆ, ಹೊಸ ಧಾರ್ಮಿಕ ದತ್ತಿಗಳನ್ನು ನಿರ್ಬಂಧಿಸುತ್ತದೆ ಮತ್ತು ವಕ್ಫ್ ಸ್ವತ್ತುಗಳನ್ನು ರಕ್ಷಿಸುವ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತದೆ. ನಮ್ಮ ಶಾಲೆಗಳು, ಆಸ್ಪತ್ರೆಗಳು ಮತ್ತು ಧಾರ್ಮಿಕ ಸ್ಥಳಗಳು ಯಾವಾಗಲೂ ಕಾಳಜಿ ಮತ್ತು ಸೇವೆಯ ಆಧಾರಸ್ತಂಭಗಳಾಗಿ ನಿಂತಿವೆ – ಮುಸ್ಲಿಮರಿಗೆ ಮಾತ್ರವಲ್ಲ, ಎಲ್ಲರಿಗೂ. ಈ ಕಾನೂನು ಅವರ ಅಸ್ತಿತ್ವಕ್ಕೆ ಅಪಾಯವನ್ನುಂಟುಮಾಡುತ್ತದೆ. ಒಮ್ಮೆ ಕಳೆದುಹೋದರೆ, ಈ ಸ್ಥಳಗಳನ್ನು ಮರಳಿ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಬದಲಾಯಿಸಲಾಗದ ಹಾನಿಯನ್ನು ತಡೆಗಟ್ಟಲು ತಕ್ಷಣದ ನ್ಯಾಯಾಂಗ ಮಧ್ಯಪ್ರವೇಶದ ಅಗತ್ಯವನ್ನು ಅರ್ಜಿ ಒತ್ತಿಹೇಳುತ್ತದೆ. ಏಪ್ರಿಲ್ 16, 2025 ರಂದು ಸುಪ್ರೀಂ ಕೋರ್ಟ್ ಮುಂದೆ ಈಗಾಗಲೇ ಪಟ್ಟಿ ಮಾಡಲಾದ ಇತರ ಸಂಬಂಧಿತ ವಿಷಯಗಳ ಜೊತೆಗೆ ತನ್ನ ಪ್ರಕರಣವನ್ನು ಆಲಿಸಬೇಕೆಂದು ಖಾನ್ ವಿನಂತಿಸಿದ್ದಾರೆ. ತಮ್ಮ ಮನವಿಯ ಹಿಂದಿನ ಸ್ಫೂರ್ತಿಯನ್ನು ಪುನರುಚ್ಚರಿಸಿದ ಖಾನ್, “ಇದು ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ. ಇದು ವಕ್ಫ್ ಸಂಸ್ಥೆಗಳು ಪ್ರತಿನಿಧಿಸುವ ಸೇವೆ ಮತ್ತು ಸ್ವಯಂ ಆಡಳಿತದ ಪರಂಪರೆಯನ್ನು ರಕ್ಷಿಸುವ ಬಗ್ಗೆ. ನಾವು ಬಯಸುವುದು ನ್ಯಾಯಸಮ್ಮತತೆ, ಸಂವಾದ ಮತ್ತು ನಮ್ಮ ಸಾಂವಿಧಾನಿಕ ಹಕ್ಕುಗಳ ಸಂರಕ್ಷಣೆಎಂದು ಹೇಳಿದ್ದಾರೆ.

ವಿಶಿಷ್ಣ ಆಧ್ಯಾತ್ಮಿಕ ಮತ್ತು ಧ್ಯಾನ ಕೇಂದ್ರ ಆರಂಭ

ನಗರದ ಕನಕಪುರ ಮುಖ್ಯರಸ್ತೆಯ ರಘುವನಹಳ್ಳಿ, ಉತ್ತರಹಳ್ಳಿ ಹೋಬಳಿಯಲ್ಲಿ ಶ್ರೀ ಸರ್ವ ದೇವ ಪರಮಜ್ಯೋತಿ ಧ್ಯಾನ ವಿಹಾರ ಎಂಬ ವಿಶಿಷ್ಣ ಆಧ್ಯಾತ್ಮಿಕ ಮತ್ತು ಧ್ಯಾನ ಕೇಂದ್ರದ ಅದ್ಧೂರಿ ಉದ್ಘಾಟನೆಯು ಮೂರು ಪವಿತ್ರ ದಿನಗಳ ಕಾಲ ಭಕ್ತಿಯಿಂದ, ಸಂಸ್ಕೃತಿಯ ಶ್ರೀಮಂತಿಕೆ ಮತ್ತು ದಿವ್ಯ ಶಕ್ತಿಯಿಂದ ಆಚರಿಸಲಾಯಿತು.
ಈ ಸಂಭ್ರಮದಲ್ಲಿ ಕುಂಭಾಭಿಷೇಕ, ಪವಿತ್ರ ಪೂಜೆಗಳು, ಹೋಮಗಳು ಮತ್ತು ಶ್ರೀ ಸರ್ವ ದೇವ ಪರಮಜ್ಯೋತಿಯ ಪ್ರತಿಷ್ಠಾಪನೆ ನೆರವೇರಿತು. ಇದು ಎಲ್ಲ ದೇವತೆಗಳನ್ನು ಪ್ರತಿನಿಧಿಸುವ ದಿವ್ಯ ಬೆಳಕಿನ ರೂಪವಾಗಿದ್ದು, ಧರ್ಮ, ಜಾತಿ ಮತ್ತು ಪಂಥಗಳೆಲ್ಲವನ್ನೂ ಮೀರಿ ಜಗತ್ತಿನ ಎಲ್ಲಾ ತತ್ವಗಳನ್ನು ಒಗ್ಗೂಡಿಸುತ್ತದೆ. ಈ ಉತ್ಸವದ ಅಂತ್ಯಭಾಗದಲ್ಲಿ ಶ್ರೀ ಸರ್ವದೇವ ಪರಮಜ್ಯೋತಿಯ ಅದ್ಭುತ ಶೋಭಾಯಾತ್ರೆ ನಡೆಯಿತು, ಇದನ್ನು ಸಾವಿರಾರು ಭಕ್ತರು ಸಾಕ್ಷಿಯಾಗಿಸಿ ಸಂಭ್ರಮಿಸಿದರು.

ಈ ಮಹೋತ್ಸವದಲ್ಲಿ ಭಾಗವಹಿಸಿದ ಗಣ್ಯರು:  
ಡಾ. ಸಿ.ಎನ್. ಮಂಜುನಾಥ್ – ಸಂಸದರು, ಶ್ರೀಮತಿ ರೇವತಿ ಕಾಮತ್ – ಸಮಾಜಸೇವಕಿ , ಆನಂದ ಸುರಾಣಾ – ಮೈಕ್ರೋ ಲ್ಯಾಬ್ಸ್  , ಎಸ್. ರವಿ – ವಿಧಾನ ಪರಿಷತ್ ಸದಸ್ಯ, ಮಂತರ ಗೌಡ – ವಿಧಾನ ಸಭಾ ಸದಸ್ಯ, ಎಂ. ಕೃಷ್ಣಪ್ಪ – ವಿಧಾನ ಸಭಾ ಸದಸ್ಯ, ರಮೇಶ್ ಭಟ್ – ನಟ ಮತ್ತು ನಿರ್ದೇಶಕ ,  ಚರಣ್ ರಾಜ್ – ಪ್ರಸಿದ್ಧ ಸಂಗೀತ ನಿರ್ದೇಶಕ , ಶ್ರೀಮತಿ ಚಂದನಾ ಅನಂತಕೃಷ್ಣ – ನಟಿ .  ಶ್ರೀ ಸರ್ವದೇವ ಪರಮಜ್ಯೋತಿ ಧ್ಯಾನ ವಿಹಾರವು ಶ್ರದ್ಧಾಳುಗಳಿಗಾಗಿ ಶಾಂತಿ, ಪ್ರೀತಿ ಮತ್ತು ಆಂತರಿಕ ಪರಿವರ್ತನೆಯ ದಿವ್ಯಕೇಂದ್ರವಾಗಿ ಬೆಳಗುತ್ತಿದೆ.

ಭಾರತೀಯರ ಕೆಲಸದ ವೀಸಾ ಸ್ಥಗಿತಗೊಳಿಸಿದ ಸೌದಿ ಅರೇಬಿಯಾ

ಸೌದಿ ಅರೇಬಿಯಾ ಜಾಗತಿಕ ಕಾರ್ಮಿಕ ಮಾರುಕಟ್ಟೆಯಲ್ಲಿ ಭಾರೀ ಅನಿಶ್ಚಿತತೆಯನ್ನು ಸೃಷ್ಟಿಸಿದೆ. ಭಾರತ, ಪಾಕ್, ಬಾಂಗ್ಲಾದೇಶ, ನೈಜೀರಿಯಾ ಸೇರಿದಂತೆ ೧೪ ದೇಶಗಳ ನಾಗರಿಕರಿಗೆ ಕೆಲಸದ ವೀಸಾ (ಬ್ಲಾಕ್ ವರ್ಕ್ ವೀಸಾ) ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಿದೆ. ೨೦೨೫ರ ಜೂನ್‌ವರೆಗೆ ಈ ನಿರ್ಧಾರವು ಜಾರಿಯಲ್ಲಿರಲಿದೆ ಎಂದು ವರದಿಗಳು ತಿಳಿಸಿದ್ದು, ಹೊರ ದೇಶದ ಕಾರ್ಮಿಕರಲ್ಲಿ ಗೊಂದಲ ಮತ್ತು ಆತಂಕವನ್ನು ಉಂಟುಮಾಡಿದೆ.


ಸೌದಿ ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯವು ಈ ನಿರ್ಧಾರವನ್ನು ಘೋಷಿಸಿರುವುದು. ಕಾರ್ಮಿಕ ನಿರ್ವಹಣಾ ವೇದಿಕೆಯಾದ `ಕಿವಾ’ದಿಂದ ಬ್ಲಾಕ್ ವೀಸಾ ಅರ್ಜಿ ಸೌಲಭ್ಯವನ್ನು ತೆಗೆದುಹಾಕಲಾಗಿದೆ. ಈ ವೀಸಾಗಳು ಕಂಪನಿಗಳಿಗೆ ಬೃಹತ್ ಪ್ರಮಾಣದಲ್ಲಿ ಉದ್ಯೋಗಿಗಳ ನೇಮಿಸಿಕೊಳ್ಳಲು ಸಹಾಯಕವಾಗಿದ್ದವು ಎನ್ನಲಾಗಿದೆ. ಆದರೆ, ಈಗ ೧೪ ದೇಶಗಳಿಂದ ಕಾರ್ಮಿಕರನ್ನು ತರಲು ಕಂಪನಿಗಳಿಗೆ ಸಾಧ್ಯವಾಗದಿರುವುದರಿಂದ, ವಿಶೇಷವಾಗಿ ನಿರ್ಮಾಣ, ಆತಿಥ್ಯ ಮತ್ತು ಸೇವಾ ಕ್ಷೇತ್ರಗಳು ಗಂಭೀರ ಸವಾಲುಗಳನ್ನು ಎದುರಿಸುವ ಸಾಧ್ಯತೆಯಿದೆ.
ವಿದೇಶಿ ಕಾರ್ಮಿಕರನ್ನು ಅವಲಂಬಿಸಿರುವ ಕಂಪನಿಗಳಿಗೆ ತಕ್ಕಮಟ್ಟಿನ ಸಮಸ್ಯೆಗಳು ಎದುರಾಗಿವೆ. ವಿಶೇಷವಾಗಿ, ಸೌದಿಯ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವಹಿಸುವ ನಿರ್ಮಾಣ ವಲಯಕ್ಕೆ ಈ ನಿರ್ಬಂಧವು ಕೂಡಾ ದೊಡ್ಡ ಹಿನ್ನಡೆಯಾಗಿದೆ ಎನ್ನಬಹುದು. ಈ ಕ್ರಮದ ಹಿಂದಿನ ನಿಖರ ಕಾರಣವನ್ನು ಸೌದಿ ಅರೇಬಿಯಾದ ಸ್ಪಷ್ಟವಾಗಿ ಬಹಿರಂಗಪಡಿಸಿಲ್ಲ. ಆದರೆ, ಇದು `ವಿಷನ್ ೨೦೩೦’ ಯೋಜನೆಯ ಭಾಗವಾಗಿ ಸ್ಥಳೀಯ ನಾಗರಿಕರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಕೈಗೊಂಡಿರಬಹುದು ಎಂದು ಕೆಲವರ ಅಭಿಪ್ರಾಯ. ಪ್ರವಾಸೋದ್ಯಮ, ಚಿಲ್ಲರೆ ವ್ಯಾಪಾರ, ಇತರ ಕ್ಷೇತ್ರಗಳಲ್ಲಿ ಸೌದಿ ನಾಗರಿಕರ ಭಾಗವಹಿಸುವಿಕೆ ಉತ್ತೇಜಿಸುವ ಗುರಿ ಈ ಯೋಜನೆ ಹೊಂದಿರಲಿದೆ. ಭಾರತೀಯ ಕಾರ್ಮಿಕರಿಗೆ ಇದೊಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಗಲ್ಫ್ ರಾಷ್ಟçಗಳಲ್ಲಿ ಉದ್ಯೋಗಕ್ಕಾಗಿ ಸೌದಿಯನ್ನೇ ಅವಲಂಬಿಸಿರುವ ಹಲವು ಭಾರತೀಯರಿಗೆ ಈ ನಿರ್ಬಂಧವು ಆರ್ಥಿಕ ಸಂಕಷ್ಟ ಉಂಟುಮಾಡಬಹುದು. ಭಾರತವು ಈ ನಿಟ್ಟಿನಲ್ಲಿ ಸೌದಿ ಅಧಿಕಾರಿಗಳೊಂದಿಗೆ ಸೂಕ್ತ ಚರ್ಚೆ ನಡೆಸಿ, ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ಪ್ರಯತ್ನ ನಡೆಯುತ್ತಿದೆ.

“ದಾಸ ವರ್ಷಿಣಿ” ಗಾಯನ ಕಾರ್ಯಕ್ರಮ

“ದಾಸ ವರ್ಷಿಣಿ” ಗಾಯನ ಕಾರ್ಯಕ್ರಮ


ಪವಮಾನಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ವಿಚಾರಣಾಕರ್ತರಾದ ಶ್ರೀ ಗಿರಿರಾಜಾಚಾರ್ಯರ ನೇತೃತ್ವದಲ್ಲಿ ಜೂನ್ 12, ಗುರುವಾರ ಸಂಜೆ 7-00 ಗಂಟೆಗೆ ಕು|| ನಿರೀಕ್ಷಾ ಮಂಜುನಾಥ್ ರವರಿಂದ “ದಾಸ ವರ್ಷಿಣಿ” ಗಾಯನ ಕಾರ್ಯಕ್ರಮ. ಕೀ-ಬೋರ್ಡ್ : ಶ್ರೀ ಅಮಿತ್ ಶರ್ಮಾ, ತಬಲಾ: ಶ್ರೀ ಸರ್ವೋತ್ತಮ. ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಪವಮಾನಪುರ, ಬನಶಂಕರಿ 6ನೇ ಹಂತ, ಬೆಂಗಳೂರು

ಶ್ರೀ ಚಾಮರಾಜೇಂದ್ರ ಕಬ್ಬನ್ ಉದ್ಯಾನವನದಲ್ಲಿ ಪಾಲಿಸಬೇಕಾದ ಅಗತ್ಯ ನಿಯಮಗಳ ಕುರಿತು ಸರ್ಕಾರದಿಂದ ಆದೇಶ

ಬೆಂಗಳೂರಿನ ಶ್ರೀ ಚಾಮರಾಜೇಂದ್ರ ಕಬ್ಬನ್ ಉದ್ಯಾನವನದಲ್ಲಿ ಸ್ವಚ್ಛತೆಯನ್ನು ಕಾಪಾಡಲು ಹಾಗೂ ಉದ್ಯಾನವನದ ಸಂರಕ್ಷಣಾ ಹಿತದೃಷ್ಟಿಯಿಂದ ಉದ್ಯಾನವನದ ಆವರಣದಲ್ಲಿ ಅನುಮತಿಸಬಹುದಾದ ಚಟುವಟಿಕೆಗಳು, ನಿಷಧಿಸಿದ ಚಟುವಟಿಕೆಗಳು ಹಾಗೂ ಪಾಲಿಸಬೇಕಾದ ಇತರೆ ಅವಶ್ಯಕ ನಿಯಮಗಳನ್ನು ಸರ್ಕಾರವು 2025ನೇ ಏಪ್ರಿಲ್ 23 ರಂದು ಜಾರಿ ಮಾಡಿ ಆದೇಶಿಸಿದೆ.

Photo of Band Stand

ಕಬ್ಬನ್ ಉದ್ಯಾನವನದ ಸಂರಕ್ಷಣಾ ಹಿತದೃಷ್ಟಿಯಿಂದ ರಚಿಸಲಾಗಿರುವ ನಿಯಮಗಳನ್ನು ಉಲ್ಲಂಘಿಸಿದ ಪ್ರತಿ ಒಬ್ಬರಿಗೆ ಗರಿಷ್ಠ ರೂ.500/- ಗಳವರೆಗೆ ದಂಡ ವಿಧಿಸಲು ಹಾಗೂ ಪದೇ ಪದೇ ಉಲ್ಲಂಘಿಸಿದಲ್ಲಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ತೋಟಗಾರಿಕೆ ನಿರ್ದೇಶಕರು, ಬೆಂಗಳೂರು ಇವರು ತೋಟಗಾರಿಕೆ ಉಪ ನಿರ್ದೇಶಕರು, ಶ್ರೀ ಚಾಮರಾಜೇಂದ್ರ (ಕಬ್ಬನ್) ಉದ್ಯಾನವನ, ಬೆಂಗಳೂರು ರವರಿಗೆ ಅಥವಾ ಸಂಬಂಧಿಸಿದ ಸೂಕ್ತ ಅಧಿಕಾರಿಗೆ ಅವಕಾಶ ಕಲ್ಪಿಸಿಕೊಡುವಂತೆ ಆದೇಶಿಸಿದೆ.

ಉಲ್ಲಂಘಿಸಿದ ದಂಡದ ಮೊತ್ತ ಹಾಗೂ ಷರತ್ತಿಗೊಳಪಟ್ಟು ಅನುಮತಿಸಲು ವಿಧಿಸಿರುವ ಮೊತ್ತವನ್ನು ಸುವರ್ಣ ಕರ್ನಾಟಕ ಉದ್ಯಾನವನ ಪ್ರತಿμÁ್ಠನದ ಖಾತೆಗೆ ಜಮೆ ಮಾಡುವುದು.  ಅನುಮತಿಸಬಹುದಾದ ಚಟುವಟಿಕೆಗಳು, ನಿಷಧಿಸಿದ ಚಟುವಟಿಕೆಗಳು ಹಾಗೂ ಪಾಲಿಸಬೇಕಾದ ಇತರೆ ಅವಶ್ಯಕ ನಿಯಮಗಳನ್ನು ವ್ಯಾಪಕ ಪ್ರಚಾರ ಪಡಿಸಲು ತೋಟಗಾರಿಕೆ ನಿರ್ದೇಶಕರು, ಬೆಂಗಳೂರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮವಹಿಸುವಂತೆ ಆದೇಶಿಸಿದೆ.

ಅನುಮತಿ ಸಬಹುದಾದ ಚಟುವಟಿಕೆಗಳು :

ತೋಟಗಾರಿಕೆ ಇಲಾಖೆಯ ಪೂರ್ವಾನುಮತಿ ಪಡೆದು ವಿವಿಧ ಸರ್ಕಾರಿ/ಖಾಸಗಿ ಸಂಸ್ಥೆಗಳು ಆಯೋಜಿಸುವ ವಾಕಾಥಾನ್ ಮತ್ತು ಮ್ಯಾರಾಥಾನ್ ಕಾರ್ಯಕ್ರಮಗಳು. ತೋಟಗಾರಿಕೆ ಇಲಾಖೆಯ ಪೂರ್ವಾನುಮತಿ ಪಡೆದು ಸರ್ಕಾರದ ವಿವಿಧ ಇಲಾಖೆಗಳು ಆಯೋಜಿಸುವ ಅರಿವು ಮೂಡಿಸುವ ಕಾರ್ಯಕ್ರಮಗಳು.

ವಾಯು ವಿಹಾರದ ಸಮಯ ಬೆಳಿಗ್ಗೆ 5.30 ಗಂಟೆಯಿಂದ ಬೆಳಿಗ್ಗೆ 9.00 ಗಂಟೆಯವರೆಗೆ ಹಾಗೂ ಸಂಜೆ 4.30 ಗಂಟೆಯಿಂದ ಸಂಜೆ 6.30 ಗಂಟೆಯವರೆಗೆ ನಿಗಧಿಪಡಿಸಿದೆ.

ಉದ್ಯಾನವನದ ಸ್ವಚ್ಛತೆಯನ್ನು ಕಾಪಾಡುವ ಷರತ್ತಿಗೊಳಪಟ್ಟು ತೋಟಗಾರಿಕೆ ಇಲಾಖೆಯ ಪೂರ್ವಾನುಮತಿ ಪಡೆದು ಬ್ಯಾಂಡ್ ಸ್ಟ್ಯಾಂಡ್ ಆವರಣದಲ್ಲಿ ಆಯೋಜಿಸುವ ಕಾರ್ಯಕ್ರಮಗಳು.

ತೋಟಗಾರಿಕೆ ಇಲಾಖೆಯ ಪೂರ್ವಾನುಮತಿ ಪಡೆದು ಕೈಗೊಳ್ಳುವ ಸಸ್ಯ/ವನ್ಯಜೀವಿ/ಪ್ರಾಕೃತಿಕ ಹವ್ಯಾಸಿ ಛಾಯಾಗ್ರಹಣಕ್ಕೆ ಅನುಮತಿಸಿದೆ.  ಯಾವುದೇ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶವಿಲ್ಲದ ಹಾಗೂ ಸ್ವಚ್ಛತೆಯನ್ನು ಕಾಪಾಡುವ ಷರತ್ತಿಗೊಳಪಟ್ಟು ತೋಟಗಾರಿಕೆ ಇಲಾಖೆಯ ಪೂರ್ವಾನುಮತಿ ಪಡೆದು ಯೋಗ/ಮೆಡಿಟೇಷನ್ ಹಾಗೂ ಪೂರಕ ಕಾರ್ಯಚಟುವಟಿಕೆಗಳು ಸಂಖ್ಯೆ ಗರಿಷ್ಠ 20 ಜನರಿರುವ ಪ್ರತಿತಂಡಕ್ಕೆ ಮಿತಿಗೊಳಿಸಿ ಆಯೋಜಿಸುವ ಕಾರ್ಯಚಟುವಟಿಕೆಗಳಿಗೆ ಅನುಮತಿಸಬಹುದು.

ತೋಟಗಾರಿಕೆ ಇಲಾಖೆಯ ಪೂರ್ವಾನುಮತಿ ಪಡೆದು ಗರಿಷ್ಠ 20 ಜನರಿರುವ ಹವ್ಯಾಸಿ ಓದುಗರು / ಬರವಣಿಗೆಗಾರರು ಆಸನಗಳನ್ನು ಬಳಸಿಕೊಳ್ಳವುದು. ಉದ್ಯಾನವನಕ್ಕೆ ಆಗಮಿಸುವ ಸಾರ್ವಜನಿಕರು, ಪ್ರವಾಸಿಗರು ಕ್ಯಾಮರಾಗಳನ್ನು ಬಳಸಬಹುದು ಆದರೆ Photo Shoot  (ಪ್ರೀ/POST ವೆಡ್ಡಿಂಗ್ ಶೂಟ್ಸ್, ಬೇಬಿ, ಮಾಡಲಿಂಗ್ ಶೂಟ್ಸ್) ವೀಡಿಯೋ ಚಲನಚಿತ್ರ ಚಿತ್ರೀಕರಣ ನಿಷಧಿಸಿದೆ. ಕಿರು ಚಿತ್ರಗಳು/ ರೀಲ್ಸ್/ವಿಡಿಯೋ ಚಲನಚಿತ್ರ ಚಿತ್ರೀಕರಣ ನಿಷಧಿಸಲಾಗಿದೆ.

ಸÀರ್ಕಾರಿ/ಅಧಿಕೃತ ನೋಂದಾಯಿತ ಚಾರಿಟಬಲ್ ಟ್ರಸ್ಟ್‍ಗಳ ವತಿಯಿಂದ ಮಾತ್ರ ಆಯೋಜಿಸಲ್ಪಡುವ ಆರೋಗ್ಯ ತಪಾಸಣಾ ಶಿಬಿರಗಳು. ಬೆಳಿಗ್ಗೆ 8.00 ಗಂಟೆಯ ನಂತರ ಸಂಜೆ 6.00 ಗಂಟೆಯವರೆಗೆ ಉದ್ಯಾನವನಕ್ಕೆ ಆಗಮಿಸುವ ಬೈಸಿಕಲ್ ಸವಾರರು, ಬೈಸಿಕಲ್ ಬಳಸಬಹುದು. ತರಬೇತಿದಾರರಿಗೆ ಅವಕಾಶವಿರುವುದಿಲ್ಲ.

ಸ್ವತಃ ಸ್ಕೇಟಿಂಗ್ ಮಾಡುವವರು / ಕುಟುಂಬದ ಸದಸ್ಯರೊಂದಿಗೆ ಸ್ಕೇಟಿಂಗ್ ಮಾಡುವವರು ವಾಹನ ಸಂಚಾರ ನಿಷಧಿಸಿರುವ ದಿನಗಳಂದು ಕಬ್ಬನ್ ಉದ್ಯಾನವನದ ಎನ್.ಜಿ.ಓ ಪ್ರವೇಶ ದ್ವಾರದಿಂದ ಇಂದಿರಾ ಪ್ರಿಯದರ್ಶಿನಿ ಮಕ್ಕಳ ಗ್ರಂಥಾಲಯದ ಎದುರಿಗಿರುವ ರಸ್ತೆಯನ್ನು ಸೈಟಿಂಗ್ ಗಾಗಿ ಬೆಳಗ್ಗೆ 6.00 ರಿಂದ ಸಂಜೆ 6.00 ಗಂಟೆಯವರೆಗೆ ಬಳಸಲು ಸೀಮಿತಗೊಳಿಸಿದೆ. ಸ್ಕೇಟಿಂಗ್ ತರಬೇತಿ, ಸ್ಟಂಟ್ ಇತ್ಯಾದಿಗಳನ್ನು ಕೈಗೊಳ್ಳಲು ಅವಕಾಶವಿರುವುದಿಲ್ಲ.

ಕಬ್ಬನ್ ಉದ್ಯಾನವನದ ಆವರಣದಲ್ಲಿ ನಡೆಯುವ ಮ್ಯಾರಾಥಾನ್, ವಾಕಾಥಾನ್ ಸಂಬಂಧ 2023ನೇ ಮೇ 17ರ ಎಸ್.ಕೆ.ಯು.ಪಿ.ಎಫ್ ಸಭೆಯ ನಿರ್ಣಯದಂತೆ ಕಾರ್ಯಕ್ರಮ ಒಂದಕ್ಕೆ ರೂ. 30,000/- ಗಳ ಶುಲ್ಕ ನಿಗಧಿಪಡಿಸಿದ್ದು ಹಾಗೂ ಕಾರ್ಯಕ್ರಮ ಸಂಬಂಧ ರೂ. 20,000/- ಗಳ ಮುಂಗಡ ಠೇವಣಿಯನ್ನು ಪಾವತಿ ಮಾಡಿದರೆ ಕೆ.ಎಸ್.ಎಲ್.ಟಿ.ಎ ಹಿಂಭಾಗದ ಜಾವಾಫಿಗ್ ಅವಿನ್ಯೂ ರಸ್ತೆಯಲ್ಲಿ ಕಾರ್ಯಕ್ರಮಕ್ಕೆ ಪೂರಕವಾಗಿ 1 ಅಡಿ ಎತ್ತರದ ವೇದಿಕೆ ನಿರ್ಮಾಣ ಮಾಡಲು, ಕಡಿಮೆ ಶಬ್ದವುಳ್ಳ ಧ್ವನಿವರ್ದಕ ಬಳಕೆ ಹಾಗೂ ಪ್ಯಾಕ್ ಮಾಡಿದ ಫುಡ್ ವಿತರಿಸಿ ಸ್ವಚ್ಛತೆಯನ್ನು ಕಾಪಾಡುವ ಷರತ್ತಿಗೊಳಪಟ್ಟು ಅನುಮತಿ ನೀಡುವುದು.

ತೋಟಗಾರಿಕೆ ಇಲಾಖೆಯ ಪೂರ್ವಾನುಮತಿ ಪಡೆದು ವೈಯಕ್ತಿಕವಾಗಿ ಕೈಗೊಳ್ಳುವ ಪರಿಸರ ಪೂರಕ ಚಿತ್ರಕಲೆ ಕೈಗೊಳ್ಳುವುದು (ಯಾವುದೇ ರೀತಿಯ ವಾಣಿಜ್ಯ ಚಿತ್ರಕಲೆ / ಮಾರಾಟವನ್ನು ನಿಷಧಿಸಿದೆ) ಕಬ್ಬನ್ ಉದ್ಯಾನವನದ ಬಿ.ಎಸ್.ಎನ್.ಎಲ್. ಪ್ರವೇಶ ದ್ವಾರದಿಂದ ಗಜಿಬೋ, ನಾಲಾ ಬದುವಿಗೆ ಹೊಂದಿಕೊಂಡಂತೆ. ನಾಲಾ ಬದುವಿನ ಸೇತುವೆಯಿಂದ ಹೈಕೋರ್ಟ್ ಗೆ ಹೊಂದಿಕೊಂಡಂತಿರುವ ವಾಹನ ನಿಲ್ಯಾಣದ ಸರಹದ್ಧಿನ ಬೇಲಿವರೆಗಿನ ಸುಮಾರು 15 ಎಕರೆ ವಿಸ್ತೀರ್ಣ ಪ್ರದೇಶವನ್ನು ವಾಣಿಜ್ಯ ಚಟುವಟಿಕೆಗಳು / ಪ್ರಾಯೋಜಕತ್ವ ಚಟುವಟಿಕೆಗಳನ್ನು ಹೊರತುಪಡಿಸಿ, ಪುಸ್ತಕ ಓದುವುದು, ಯೋಗ ಮಾಡುವುದು. ಧ್ಯಾನ ಮಾಡುವುದು, ಪೈಂಟಿಂಗ್, ಗೆಟ್ ಟುಗೇದರ್ ಚಟುವಟಿಕೆಗಳನ್ನು ಕೈಗೊಳ್ಳುವ ಸಲುವಾಗಿ ಮೀಸಲಿಡಬಹುದಾಗಿದ್ದು, ಮೇಲಿನ ಎಲ್ಲಾ ಚಟುವಟಿಕೆಗಳಿಗೆ 20 ಜನರಿಗಿಂತ ಹೆಚ್ಚಿಗೆ ಜನರು ಸೇರಿ ಆಯೋಜಿಸುವಂತ ಕಾರ್ಯಕ್ರಮಗಳಿಗೆ. ತೋಟಗಾರಿಕೆ ಉಪನಿರ್ದೇಶಕರು, ಕಬ್ಬನ್ ಉದ್ಯಾನವನ ರವರಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ.

ನಿಷಧಿಸಿದ ಚಟುವಟಿಕೆಗಳು:

ಉದ್ಯಾನವನದ ಒಳ ರಸ್ತೆಗಳಲ್ಲಿ ಭಾರಿ ವಾಹನಗಳಾದ ಬಸ್ಸು, ಲಾರಿ, ಗೂಡ್ಸ್ ವಾಹನ ಹಾಗೂ ಆಟೋ ಗಾಡಿಗಳನ್ನು ನಿಭರ್ಂಧಿಸಿದೆ. ಉದ್ಯಾನವನದ ಆವರಣದಲ್ಲಿ ಮಾರಾಟಗಾರರು / ತಿರುಗು ಮಾರಾಟಗಾರರನ್ನು ನಿಷಧಿಸಿದೆ.

ಉದ್ಯಾನವನದ ಆವರಣದಲ್ಲಿ ದೂಮಪಾನ, ಮದ್ಯಪಾನ ಮತ್ತು ಮಾದಕ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ನಿಷಧಿಸಿದೆ. ಉದ್ಯಾನವನದ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ವಸ್ತುಗಳು, ಬಾಟಲಿ, ಪ್ಲಾಸ್ಟಿಕ್ ಚೀಲ. ಪೂಜಾ ಸಾಮಗ್ರಿ ಹಾಗೂ ಇತರೆ ಯಾವುದೇ ತ್ಯಾಜ್ಯಗಳನ್ನು ಉದ್ಯಾನವನಕ್ಕೆ ತರುವುದು, ಎಲ್ಲೆಂದರಲ್ಲಿ ಹಾಕುವುದು/ ಎಸೆಯುವುದನ್ನು ನಿಷಧಿಸಿದೆ.

ಪಾರ್ಸೆಲ್ ಊಟ / ತಿಂಡಿ ಪದಾರ್ಥಗಳನ್ನು ಉದ್ಯಾನವನದ ಒಳಗಡೆ ಸೇವಿಸುವುದನ್ನು ನಿಷದಿಸಿದೆ. ಉದ್ಯಾನವನದ ನಿಗಧಿತ ವಾಹನ ನಿಲುಗಡೆ ಪ್ರದೇಶಗಳಲ್ಲಿ ಮಾತ್ರ ವಾಹನಗಳನ್ನು ನಿಲ್ಲಿಸುವುದು. ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವುದನ್ನು ನಿಷೇಧಿಸಿದೆ. ಉದ್ಯಾನವನದ ರಸ್ತೆಗಳಲ್ಲಿ ವಾಹನಗಳು ಹಾರ್ನ್ ಮಾಡುವುದನ್ನು ನಿಷಧಿಸಿದೆ. ಉದ್ಯಾನವನದ ಹುಲ್ಲುಹಾಸುಗಳ ಮೇಲೆ ಆಟ ಆಡುವುದುನ್ನು ನಿಷಧಿಸಿದೆ.

ಉದ್ಯಾನವನದಲ್ಲಿ ಮರಗಳನ್ನು ಹತ್ತುವುದು, ಮರದ ರೆಂಬೆ ಹಿಡಿದು ಜೋಕಾಲಿ ಆಡುವುದು, ಮರ/ಗಿಡಗಳಿಂದ ಎಲೆ/ಕಾಯಿ/ಹೂಗಳನ್ನು ಕೀಳುವುದನ್ನು ಮರಗಳ ತೊಗಟೆಯ ಮೇಲೆ ಕೆತ್ತನೆ ಮಾಡುವುದನ್ನು ನಿμÉೀಧಿಸಿದೆ. ಉದ್ಯಾನವನದ ಯಾವುದೇ ಸ್ವತ್ತುಗಳಿಗೆ ಬೆಂಕಿ ಹಚ್ಚುವಂತಿಲ್ಲ. ಬಲೂನು ಹಾಗೂ ಇತರೆ ಆಟದ ಸಾಮಾನುಗಳನ್ನು ಬಳಸುವುದು, ಗಾಳಿಪಟ ಹಾರಿಸುವುದು, ಬ್ರಿಸ್‍ಬಿ ಆಡುವುದನ್ನು ಹಾಗೂ ಇತರೆ ಆಟಗಳನ್ನು ಆಡುವುದನ್ನು ನಿμÉೀಧಿಸಿದೆ. ಕೆರೆ/ ಕಲ್ಯಾಣಿಗೆ ಇಳಿಯಬಾರದು, ಮರದ ಕಲಾಕೃತಿಗಳನ್ನು ಮುಟ್ಟಬಾರದು.

ಉದ್ಯಾನವನದ ಆವರಣದಲ್ಲಿ ಅಸಭ್ಯ ವರ್ತನೆ ನಿμÉೀಧಿಸಿದೆ. ಉದ್ಯಾನವನದಲ್ಲಿರುವ ಅಲಂಕಾರಿಕ ವಿನ್ಯಾಸ ಮತ್ತು ಪರ್ಗೋಲಗಳ ಮೇಲೆ ಹತ್ತುವುದನ್ನು ನಿμÉೀಧಿಸಿದೆ. ಸಾರ್ವಜನಿಕರು/ ಸಂಘಸಂಸ್ಥೆಗಳು ಉದ್ಯಾನವನದ ಒಳಗಡೆ ಯಾವುದೇ ಬ್ಯಾನರ್ /ಪೆÇೀಸ್ಟ್ ಗಳನ್ನು ಹಾಕುವಂತಿಲ್ಲ. ಉದ್ಯಾನವನದ ಒಳಗಡೆ ನಿರ್ದಿಷ್ಟವಾದ / ನಿಗಧಿತ ಶೌಚಾಲಯಗಳನ್ನು ಹೊರತುಪಡಿಸಿ, ಇನ್ನಿತರೆ ಸ್ಥಳಗಳಲ್ಲಿ ಮಲಮೂತ್ರ ವಿಸರ್ಜಿಸುವುದು ಹಾಗೂ ಉಗುಳುವುದನ್ನು ನಿμÉೀಧಿಸಿದೆ.

ಉದ್ಯಾನವನದ ಆವರಣಕ್ಕೆ ಮಾರಕಾಸ್ತ್ರ / ಸ್ಫೋಟಕ ವಸ್ತುಗಳು, ಇನ್ನಿತರೆ ಅಪಾಯಕಾರಿ ವಸ್ತುಗಳನ್ನು ತರುವುದು ನಿμÉೀಧಿಸಿದೆ. ಉದ್ಯಾನವನದ ಆವರಣದಲ್ಲಿ ಪಟಾಕಿ ಹಚ್ಚುವುದು. ಶಬ್ದಮಾಲಿನ್ಯ ವಾಯುಮಾಲಿನ್ಯ ಮತ್ತು ಜಲಮಾಲಿನ್ಯಕ್ಕೆ ಕಾರಣವಾಗುವ ಚಟುವಟಿಕೆಗಳನ್ನು ನಿμÉೀಧಿಸಿದೆ. ಉದ್ಯಾನವನದ ಆವರಣದಲ್ಲಿ ಭಿಕ್ಷಾಟನೆ ಮಾಡುವುದು, ಶಾಸ್ತ್ರ / ಭವಿಷ್ಯ ಹೇಳುವುದು, ಹಣ / ಚಂದಾ ವಸೂಲಿ ಮಾಡುವುದನ್ನು ನಿμÉೀಧಿಸಿದೆ.

ಸಭೆ ಸಮಾರಂಭ, ಸೌಹಾರ್ದ ಕಾರ್ಯಕ್ರಮ, ಸುದ್ದಿಗೋಷ್ಠಿ, ಹುಟ್ಟುಹಬ್ಬ ಹಾಗೂ ಇತರೆ ಯಾವುದೇ ಆಚರಣೆಗಳನ್ನು ಉದ್ಯಾನವನದ ಆವರಣದಲ್ಲಿ ನಿμÉೀಧಿಸಿದೆ. (ಕಬ್ಬನ್ ಉದ್ಯಾನವನಕ್ಕೆ ಸಂಬಂಧಿಸಿದಂತೆ ಹಾಗೂ ರಾಷ್ಟ್ರೀಯ ಹಬ್ಬಗಳು / ಸರ್ಕಾರಿ ಕಾರ್ಯಕ್ರಮಗಳನ್ನು ಹೊರತುಪಡಿಸಿ) ಉದ್ಯಾನವನದ ಸಸ್ಯ ಪ್ರಾಣಿ ಸಂಕುಲ, ಸಂಕುಲಗಳಿಗೆ ಉಂಟುಮಾಡುವ ಯಾವುದೇ ತರಹದ ಚಟುವಟಿಕೆಗಳನ್ನು ನಿಷಧಿಸಿದೆ.

ಪಾಲಿಸಬೇಕಾದ ಇತರೆ ಅವಶ್ಯ ನಿಯಮಗಳು :

ಮಳೆ, ಗಾಳಿಯ ಸಂದರ್ಭದಲ್ಲಿ ಮರದ ಕೆಳಗೆ ನಿಲ್ಲಬಾರದು. ಉದ್ಯಾನವನದ ಆವರಣದಲ್ಲಿರುವ ವಿದ್ಯುತ್ ಕಂಬ, ಪ್ಯಾನಲ್ ಬೋರ್ಡ್ ಹಾಗೂ ವಿದ್ಯತ್ ಜಂಕ್ಷನ್ ಬಾಕ್ಸ್ ಗಳಿಂದ ದೂರವಿರತಕ್ಕದ್ದು. ಉದ್ಯಾನವನದ ಮರದ ಪೆÇಟರೆ, ಬಿಲಗಳು, ಪೆÇದೆಗಳಲ್ಲಿ ಹಾಗೂ ಇತರೆ ಜಾಗಗಳಲ್ಲಿ ಹಾವುಗಳು ಇರುವ ಸಂಭವ ಇರುತ್ತದೆ ಎಚ್ಚರ ವಹಿಸುವುದು.

ಪೆÇೀಷಕರು ತಮ್ಮ ಮಕ್ಕಳ ಬಗ್ಗೆ ಸದಾ ಎಚ್ಚರವಹಿಸುವುದು, ಯಾವುದೇ ಕಾರಣಕ್ಕೂ ಮಕ್ಕಳನ್ನು ಆಟವಾಡಲು ಒಂಟಿಯಾಗಿ ಬಿಡಬಾರದು ಮತ್ತು ನಿಧಿತ ಪ್ರದೇಶಗಳಲ್ಲಿ ಓಡಾಡಲು ಬಿಡಬಾರದು. ಬೆಂಚುಗಳು, ವಿದ್ಯುತ್ ಕಂಬಗಳು ಇತ್ಯಾದಿ ಉದ್ಯಾನವನದ ಮೂಲಭೂತ ಸೌಕರ್ಯಗಳನ್ನು ಉಪಯೋಗಿಸಿಕೊಂಡು ಆಟವಾಡುವುದು / ವ್ಯಾಯಾಮ ಮಾಡುವುದನ್ನು ನಿಷಧಿಸಿದೆ. ಜೇನುನೊಣಗಳ ಬಗ್ಗೆ ಎಚ್ಚರವಹಿಸುವುದು. ಕಬ್ಬನ್ ಉದ್ಯಾನವನದ ಸೂಚನೆಗಳನ್ನು ಉಲ್ಲಂಘಿಸಿ ಸಂಭವಿಸಬಹುದಾದ ಅನಾಹುತಗಳಿಗೆ ಅವರೇ ಜವಾಬ್ದಾರರು ಎಂದು ತೋಟಗಾರಿಕಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2026ನೇ ಸಾಲಿನ ಪದ್ಮ ಶ್ರೇಣಿಯ ಪ್ರಶಸ್ತಿಗಳಿಗೆ ಹೆಸರುಗಳ ಶಿಫಾರಸ್ಸಿಗೆ ಆಹ್ವಾನ

ಸಮಾಜದ ಯಾವುದೇ ಕ್ಷೇತ್ರಗಳಲ್ಲಿ ಅಂದರೆ ಕಲೆ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಮಾಜ ಸೇವೆ, ವಿಜ್ಞಾನ ಮತ್ತು ಇಂಜಿನಿಯರಿಂಗ್, ಸಾರ್ವಜನಿಕ ವ್ಯವಹಾರಗಳು, ನಾಗರೀಕ ಸೇವೆ, ವ್ಯಾಪಾರ ಮತ್ತು ಕೈಗಾರಿಕೆ, ಇತ್ಯಾದಿಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೆ 2026ನೇ ಸಾಲಿನ ಪದ್ಮ ಶ್ರೇಣಿಯ ಪ್ರಶಸ್ತಿಗಳಾದ ‘ಪದ್ಮ ವಿಭೂಷಣ’, ‘ಪದ್ಮ ಭೂಷಣ’ ಮತ್ತು ‘ಪದ್ಮಶ್ರೀ ಪ್ರಶಸ್ತಿ’ಗಳಿಗೆ ಸಾಧಕರ ಹೆಸರುಗಳನ್ನು ಶಿಫಾರಸ್ಸು ಮಾಡಲು ಆಹ್ವಾನಿಸಲಾಗಿದೆ.
2026ನೇ ಸಾಲಿನ ಪದ್ಮ ಶ್ರೇಣಿಯ ಪ್ರಶಸ್ತಿಗಳಿಗೆ ಅನ್ವಯಿಸುವ ನಿಯಮಾವಳಿಗಳು https://padmaawards.gov.in  ರಲ್ಲಿ ಲಭ್ಯವಿದ್ದು, ಅರ್ಹ ಹೆಸರುಗಳನ್ನು ಶಿಫಾರಸ್ಸು ಮಾಡುವಾಗ ಕೇಂದ್ರ ಸರ್ಕಾರ ಸೂಚಿಸಿರುವ ಅಂಶಗಳನ್ನು ಪರಿಗಣಿಸುವುದು.
ಮೇಲೆ ಸೂಚಿಸಿದ ಕ್ಷೇತ್ರಗಳಲ್ಲಿ ನೀಡಬಹುದಾದ ಪದ್ಮಶ್ರೇಣಿ ಪ್ರಶಸ್ತಿಗಳಿಗೆ ಸಂಬಂಧಿಸಿದ ಶಿಫಾರಸ್ಸಿನ ಪ್ರಸ್ತಾವನೆಗಳನ್ನು ಸಲ್ಲಿಸುವ ಪ್ರಕ್ರಿಯೆಯು 2025 ನೇ ಜುಲೈ 31 ರಂದು ಮುಕ್ತಾಯಗೊಳ್ಳುತ್ತದೆ ಎಂದು ಕೇಂದ್ರ ಸರ್ಕಾರವು ತಿಳಿಸಿದೆ.
ರಾಜ್ಯ ಸರ್ಕಾರವು ಪ್ರಸ್ತಾವನೆಗಳು ಪರಿಶೀಲಿಸಿ 2025ನೇ ಜುಲೈ 31 ರೊಳಗಾಗಿ ಕೇಂದ್ರ ಸರ್ಕಾರಕ್ಕೆ ಆನ್‍ಲೈನ್ ಮೂಲಕ ಮಾತ್ರ ಕಳುಹಿಸಬೇಕಾಗಿರುವುದರಿಂದ ಪದ್ಮ ಪ್ರಶಸ್ತಿಗಳಿಗೆ ಶಿಫಾರಸು ಮಾಡುವ ಪ್ರಸ್ತಾವನೆಗಳನ್ನು ಸಂಬಂಧಿಸಿದ ಇಲಾಖೆಗಳು 2025ನೇ ಜುಲೈ 15 ರೊಳಗೆ ಸಲ್ಲಿಸುವುದು ಹಾಗೂ ಸಾಫ್ಟ್ ಪ್ರತಿಗಳನ್ನು     ಇ-ಮೇಲ್ ವಿಳಾಸ: uspolitical-dpar@kamataka.gov.in ಕ್ಕೆ ಕಳುಹಿಸುವುದು. 2025ನೇ ಜುಲೈ 15 ರ ನಂತರ ಬರುವ ಯಾವುದೇ ಪ್ರಸ್ತಾವನೆ /ಮನವಿಗಳನ್ನು ಪರಿಗಣಿಸಲು ಸಾಧ್ಯವಾಗುವುದಿಲ್ಲವೆಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕರ್ನಾಟಕ ನಾಟಕ ಅಕಾಡೆಮಿಯಿಂದ ಪುಸ್ತಕ ಬಹುಮಾನಕ್ಕೆ ಅರ್ಜಿ ಆಹ್ವಾನ

ಕರ್ನಾಟಕ ನಾಟಕ ಅಕಾಡೆಮಿಯು ರಂಗಭೂಮಿಗೆ ಸಂಬಂಧಿಸಿದಂತೆ ಪ್ರಕಟವಾಗಿರುವ ರಂಗಭೂಮಿಯ ಆಕರ ಗ್ರಂಥಗಳಿಗೆ ಬಹುಮಾನ ನೀಡಲು ತೀರ್ಮಾನಿಸಿದೆ. ಕನ್ನಡ ರಂಗಭೂಮಿಯ ಬೆಳವಣಿಗೆ, ವೈವಿದ್ಯತೆ ಹಾಗೂ ರಂಗಭೂಮಿಯ ಇತಿಹಾಸವನ್ನು ತಿಳಿಸುವಂತಹ ವಿಮರ್ಶಾತ್ಮಕ ಕೃತಿಗಳಿಗೆ 2024-25ನೇ ಸಾಲಿನಲ್ಲಿ ಪ್ರಕಟವಾದ ಕೃತಿಗಳನ್ನು ಬಹುಮಾನಕ್ಕಾಗಿ ಆಹ್ವಾನಿಸಲಾಗಿದೆ.

ಪ್ರತಿ ಸಾಲಿಗೆ ತಲಾ ಒಂದು ಪುಸ್ತಕ ಬಹುಮಾನವನ್ನು ನೀಡಲಾಗುವುದು. ಬಹುಮಾನದ ಮೊತ್ತ ರೂ. 25,000/-ಗಳಾಗಿರುತ್ತದೆ. ಕೃತಿಗಳನ್ನು ಲೇಖಕರೇ ನೇರವಾಗಿ ಅಕಾಡೆಮಿಗೆ ಕಳುಹಿಸಿಕೊಡುವುದು.

ಕೃತಿಗಳು ಜನವರಿ 2024ರಿಂದ ಡಿಸೆಂಬರ್ 2024ರೊಳಗೆ ಮುದ್ರಣವಾಗಿ ಪ್ರಕಟಣೆಯಾಗಿರಬೇಕು. ಅನುವಾದಿತ ಕೃತಿಗಳಿಗೆ ಅವಕಾಶವಿರುವುದಿಲ್ಲ. ಪುಸ್ತಕಗಳು ಯಾವುದೇ ಪದವಿಗಾಗಿ, ಪಿಹೆಚ್.ಡಿ. ಮತ್ತು ಪಠ್ಯ ಪುಸ್ತಕಕ್ಕೆ ಸಿದ್ದಪಡಿಸಲಾದ ವಿಷಯವಾಗಿರಬಾರದು. ಬಹುಮಾನಕ್ಕಾಗಿ ಕಳುಹಿಸಲ್ಪಡುವ ಕೃತಿಗಳು ನಾಟಕವಾಗಿರಬಾರದು, ರಂಗಸಂಬಂಧಿ ವಸ್ತುವುಳ್ಳದ್ದಾಗಿರಬೇಕು.
ಕೃತಿಯ ತಾಂತ್ರಿಕ ಪುಟದಲ್ಲಿ ಮುದ್ರಣ ವರ್ಷವನ್ನು ನಮೂದಿಸಿರಬೇಕು. ಮರು ಮುದ್ರಣ ಪುಸ್ತಕವಾಗಿರಬಾರದು. ಅಕಾಡೆಮಿಯ ಸದಸ್ಯರು ರಚಿಸಿರುವ ಕೃತಿಗಳಾಗಿರಬಾರದು ಹಾಗೂ ಸಂಪಾದಿತ ಕೃತಿಗಳು ಸಹ ಆಗಿರಬಾರದು.

ಕೃತಿಯು ಕನಿಷ್ಠ 60 ಪುಟಗಳನ್ನು ಹೊಂದಿರಬೇಕು. ಪುಸ್ತಕ ಬಹುಮಾನಕ್ಕೆ ಲೇಖಕರು ಮಾತ್ರ ಅರ್ಹರಾಗಿರುತ್ತಾರೆ. ಯಾವುದೇ ಕಾರಣಕ್ಕೂ ಬಹುಮಾನಕ್ಕಾಗಿ ಸಲ್ಲಿಸಲಾಗುವ ಕೃತಿಗಳನ್ನು ಹಿಂತಿರುಗಿಸಲಾಗುವುದಿಲ್ಲ. ಅಕಾಡೆಮಿಯ ತೀರ್ಮಾನವೇ ಅಂತಿಮವಾಗಿರುತ್ತದೆ.

ಆಸಕ್ತ ಲೇಖಕರು, ಹೆಸರು, ವಿಳಾಸ, ಪ್ರಕಟಣೆ ವರ್ಷದೊಂದಿಗೆ ನಾಲ್ಕು ಪ್ರತಿಗಳನ್ನು ರಿಜಿಸ್ಟ್ರಾರ್, ಕರ್ನಾಟಕ ನಾಟಕ ಅಕಾಡೆಮಿ, ನೆಲಮಹಡಿ, ಚಾಲುಕ್ಯ ವಿಭಾಗ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು – 560 002, ದೂರವಾಣಿ ಸಂ. 080-22244176 ಇಲ್ಲಿಗೆ 2025ನೇ ಜೂನ್ 25 ರೊಳಗಾಗಿ ಸಲ್ಲಿಸುವಂತೆ ಕರ್ನಾಟಕ ನಾಟಕ ಅಕಾಡೆಮಿಯ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜವಾಹರ ನವೋದಯ ವಿದ್ಯಾಲಯಗಳಲ್ಲಿ 6ನೇ ತರಗತಿಗೆ ಪ್ರವೇಶಕ್ಕೆ ಅರ್ಜಿ ಆಹ್ವಾನ

ಶಿಕ್ಷಣ ಸಚಿವಾಲಯದ ಅಧೀನ ಸ್ವಾಯತ್ತ ಸಂಸ್ಥೆ, ಕೇಂದ್ರ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ವಿಭಾಗದ ವತಿಯಿಂದ ಜವಾಹರ ನವೋದಯ ವಿದ್ಯಾಲಯಗಳಲ್ಲಿ 2026-27ನೇ ಸಾಲಿಗೆ ಆಯ್ಕೆ ಪರೀಕ್ಷೆಯ ಮೂಲಕ 6ನೇ ತರಗತಿಗೆ ಪ್ರವೇಶಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು 2025 ನೇ ಜುಲೈ 29 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸಬಯಸುವ ವಿದ್ಯಾರ್ಥಿಗಳು ಕಾರ್ಯನಿರ್ವಹಿಸುತ್ತಿರುವ ಸಂಬಂಧಿಸಿದ ಜವಾಹರ ನವೋದಯ ವಿದ್ಯಾಲಯಗಳ ಆಯಾ ಜಿಲ್ಲೆಯ ನಿವಾಸಿಗಳು ಆಗಿರಬೇಕು ಮತ್ತು 2025-26 ನೇ ಶೈಕ್ಷಣಿಕ ವರ್ಷದಲ್ಲಿ ಅದೇ ಜಿಲ್ಲೆಯ ಸರ್ಕಾರಿ/ ಸರ್ಕಾರದಿಂದ ಮಾನ್ಯತೆ ಪಡೆದಿರುವ ಶಾಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿರಬೇಕು.

ವಿದ್ಯಾರ್ಥಿಯು 3 ಮತ್ತು 4 ನೇ ತರಗತಿಯ ಪೂರ್ಣ ಶೈಕ್ಷಣಿಕ ವರ್ಷವನ್ನು ಸರ್ಕಾರಿ/ಸರ್ಕಾರದಿಂದ ಮಾನ್ಯತೆ ಪಡೆದಿರುವ ಶಾಲೆಯಲ್ಲಿ ಪೂರ್ಣಾವಧಿ ಶಾಲಾ ಶಿಕ್ಷಣ ಪಡೆದು ತೇರ್ಗಡ ಹೊಂದಿರಬೇಕು. ದಿನಾಂಕ:01-05-2014 ರಿಂದ ದಿನಾಂಕ: 31-07-2016 ಮಧ್ಯೆ ಜನಿಸಿದವರಾಗಿರಬೇಕು.

ಪ್ರತಿ ಜಿಲ್ಲೆಯಲ್ಲಿ ಸಹ ಶಿಕ್ಷಣ ವಸತಿ ಶಾಲೆಗಳು, ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ವಸತಿ ವ್ಯವಸ್ಥೆ, ಉಚಿತ ಶಿಕ್ಷಣ, ಆಹಾರ ಮತ್ತು ವಸತಿ ವ್ಯವಸ್ಥೆ, ವಲಸೆ ಯೋಜನೆಯ ಮೂಲಕ ವೈವಿಧ್ಯಮಯ ಸಾಂಸ್ಕøತಿಕ ವಿನಿಮಯ, ಕ್ರೀಡೆ ಮತ್ತು ಆಟೋಟಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಎನ್.ಸಿ.ಸಿ., ಸ್ಕೌಟ್ಸ್ ಮತ್ತು ಗೈಡ್ಸ್ ಎನ್.ಎಸ್.ಎಸ್. ತರಬೇತಿ ನೀಡಲಾಗುವುದು.

ಜಿಲ್ಲೆಯಲ್ಲಿ ಕನಿಷ್ಠ ಶೇ. 75% ರಷ್ಟು ಸ್ಥಾನಗಳು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಂದ ತುಂಬಲಾಗುವುದು.

ಸರ್ಕಾರದ ನಿಯಮದನ್ವಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಬಿಸಿ ಮತ್ತು ದಿವ್ಯಾಂಗ ವಿದ್ಯಾರ್ಥಿಗಳಿಗೆ  ಮೀಸಲಾತಿ ಇದೆ. ಕನಿಷ್ಠ 1/3 ರಷ್ಟು ಸ್ಥಾನಗಳು ಬಾಲಕಿಯರಿಗೆ ಮೀಸಲಾಗಿರುತ್ತವೆ.

ಆಯ್ಕೆ ಪರೀಕ್ಷೆ ದಿನಾಂಕ ಬೇಸಿಗೆಕಾಲ 2025 ನೇ ಡಿಸೆಂಬರ್ 13 ಹಾಗೂ ಚಳಿಗಾಲದಲ್ಲಿ 2026 ಏಪ್ರಿಲ್ 11 ರಂದು ಆಯ್ಕೆ ಪರೀಕ್ಷೆಗಳು ನಡೆಯುತ್ತವೆ ನೋಂದಣಿ ಮತ್ತು ವಿವರಗಳಿಗಾಗಿ ವೆಬ್‍ಸೈಟ್ https://navodava.gov.in ನ್ನು ಸಂಪರ್ಕಿಸಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಪ್ರಥಮ ವರ್ಷದ ಪದವಿ ಕೋರ್ಸುಗಳಿಗೆ ಅರ್ಜಿ ಆಹ್ವಾನ

ಕೊಪ್ಪಳ ವಿಶ್ವವಿದ್ಯಾಲಯದ ಅಧೀನದಲ್ಲಿ ಬರುವ ಎಲ್ಲಾ ಸಂಯೋಜಿತ ಸರ್ಕಾರಿ, ಖಾಸಗಿ ಅನುದಾನಿತ ಮತ್ತು ಅನುದಾನೇತರ ಮಹಾವಿದ್ಯಾಲಯಗಳಲ್ಲಿ 2025-26ನೇ ಶೈಕ್ಷಣಿಕ ಸಾಲಿನ ಬಿ.ಎ., ಬಿ.ಕಾಂ., ಬಿ.ಕಾಂ (ಎಇಡಿಪಿ), ಬಿ.ಎಸ್ಸಿ, ಬಿ.ಬಿ.ಎ. ಮತ್ತು ಬಿ.ಸಿ.ಎ. ಕೋರ್ಸುಗಳಿಗೆ ಪ್ರಥಮ ವರ್ಷದ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ಯುಯುಸಿಎಂಎಸ್  https://uucms.karnataka.gov.in/  ತಂತ್ರಾಂಶದ ಮುಖಾಂತರ 2025 ರ ಆಗಸ್ಟ್ 31 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಎಲ್ಲಾ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡೆಸಿಕೊಂಡು ನಿಗದಿತ ದಿನಾಂಕದ ಒಳಗೆ ಪ್ರವೇಶಾತಿಯನ್ನು ಪಡೆದುಕೊಳ್ಳಬೇಕು.

ಹೆಚ್ಚಿನ ವಿವರಗಳಿಗಾಗಿ ಕೊಪ್ಪಳ ವಿಶ್ವವಿದ್ಯಾಲಯದ ಜಾಲತಾಣ www.koppaluniversity.ac.in ಗೆ ಸಂಪರ್ಕಿಸಬಹುದು ಎಂದು ಕೊಪ್ಪಳ ವಿಶ್ವವಿದ್ಯಾಲಯದ ಆಡಳಿತ ವಿಭಾಗದ ಪ್ರಭಾರ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಪ್ರವೇಶ ಪತ್ರದೊಂದಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ

ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳ ಪರೀಕ್ಷೆ-03 ಬೇರೆ ಬೇರೆ ಕಾಲೇಜುಗಳಲ್ಲಿ ಇರುವುದರಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು 2025 ನೇ ಜೂನ್ 9 ರಿಂದ 20 ರವರೆಗೆ ಪರೀಕ್ಷೆಗಳು ನಡೆಯುವ ದಿನಾಂಕಗಳಂದು ಪರೀಕ್ಷೆಗೆ ಹಾಜರಾಗಲು ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದವರೆಗೆ ಹೋಗುವಾಗ ಮತ್ತು ಹಿಂದಿರುಗುವಾಗ ಸಂಸ್ಥೆಯ ಸಾಮಾನ್ಯ ಸೇವೆಗಳಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿ, ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

ದ್ವಿತೀಯ ಪಿ.ಯು.ಸಿ ಪರೀಕ್ಷಾ ದಿನಾಂಕಗಳಂದು ಪರೀಕ್ಷಾ ಕೇಂದ್ರಗಳ ಮಾರ್ಗಗಳಲ್ಲಿ ಕಡ್ಡಾಯವಾಗಿ ಎಲ್ಲಾ ಮಾರ್ಗಗಳನ್ನು, ಸುತ್ತುವಳಿಗಳನ್ನು ಕಾರ್ಯಾಚರಣೆಗೊಳಿಸಲಾಗುವುದು.

ಹೆಚ್ಚುವರಿ ಸುತ್ತುವಳಿಗಳ ಕಾರ್ಯಾಚರಣೆಯ ಅಗತ್ಯತೆ ಕಂಡುಬಂದಲ್ಲಿ ಕಾರ್ಯಾಚರಣೆ ಮಾಡಲಾಗುವುದು. ಪರೀಕ್ಷಾ ಕೇಂದ್ರಗಳ ಬಳಿ ವಿದ್ಯಾರ್ಥಿಗಳು/ಪೆÇೀಷಕರು ಕೋರಿಕೆ ನಿಲುಗಡೆ ಕೋರಿದಲ್ಲಿ, ಕೋರಿಕೆ ನಿಲುಗಡೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.