Home Blog Page 79

ಅಮೂಲ್ಯವಾದ ಕನ್ನಡ ಮಹಿಳಾ ಹರಿದಾಸರ ಸಾಧನೆ ಸರ್ವರಿಗೂ ತಲುಪಬೇಕು – ವಿದ್ಯಾವಾಚಸ್ಪತಿ ಅರಳುಮಲ್ಲಿಗೆ ಪಾರ್ಥಸಾರಥಿ

  • “ಅಮೂಲ್ಯವಾದ ಕನ್ನಡ ಮಹಿಳಾ ಹರಿದಾಸರ ಸಾಧನೆ ಸರ್ವರಿಗೂ ತಲುಪಬೇಕು – ವಿದ್ಯಾವಾಚಸ್ಪತಿ ಅರಳುಮಲ್ಲಿಗೆ ಪಾರ್ಥಸಾರಥಿ”

ಬೆಂಗಳೂರು : ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್ (ರಿ) ನ ವತಿಯಿಂದ ಬೆಂಗಳೂರಿನ ಶ್ರೀ ಶ್ರೀಪಾದರಾಜ ಮಠದಲ್ಲಿ ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್ (ರಿ.) ಇವರು, ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆ, ಬೆಂಗಳೂರು ಹಾಗೂ ದಾಸವಾಣಿ ಕರ್ನಾಟಕ ಇವರ ಸಂಯುಕ್ತಾಶ್ರಯದಲ್ಲಿ, ಇತ್ತೀಚೆಗೆ ಆಯೋಜಿಸಿದ್ದ, ಮಹಿಳಾ ಹರಿದಾಸರ ಪರಿಚಯದ ಉಪನ್ಯಾಸ ಮಾಲಿಕೆಯಲ್ಲಿ “ಶ್ರೀಮತಿ ನಂಜನಗೂಡು ತಿರುಮಲಾಂಬಾ” ಇವರ ಪರಿಚಯದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ವಿದ್ಯಾವಾಚಸ್ಪತಿ ಡಾ.ಅರಳುಮಲ್ಲಿಗೆ ಪಾರ್ಥಸಾರಥಿಯವರು, ಅಮೂಲ್ಯವಾದ ಕನ್ನಡ ಮಹಿಳಾ ಹರಿದಾಸರ ಸಾಧನೆ ಸರ್ವರಿಗೂ ತಲುಪಬೇಕು, ಅದಕ್ಕೆ ಪೂರಕವಾಗಿ, ಮಹಿಳಾ ಹರಿದಾಸರ ಕೃತಿಗಳನ್ನು ಹೆಚ್ಚು ಹೆಚ್ಚು ಹಾಡುವುದರ ಮೂಲಕ, ಅವುಗಳ ಅರ್ಥ ಚಿಂತನೆ ಮಾಡುವುದರ ಮೂಲಕ ಹಿರಿಯ ಮಹಿಳಾ ಹರಿದಾಸರು ಜನಮಾನಸದಲ್ಲಿ ನೆಲೆ ನಿಲ್ಲುವಂತೆ ಮಾಡಲು ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್ (ರಿ) ನವರ ಕಾರ್ಯವನ್ನು ಶ್ಲಾಘಿಸಿದರು. ಕೇವಲ ಪ್ರಾಥಮಿಕ ಶಿಕ್ಷಣ ಪಡೆದ ವಿಧವಾ ಸ್ತ್ರೀಯೊಬ್ಬಳು ಅಂದಿನ ಪ್ರಧಾನ ಮಂತ್ರಿಯಾಗಿದ್ದ ಶ್ರೀಮತಿ ಇಂದಿರಾಗಾಂಧಿಯವರನ್ನು ಭೇಟಿಯಾಗಿ, ಸಮಾಜದಲ್ಲಿ ಪ್ರಕೃತಿ ಸ್ವರೂಪಿಣಿಯಾದ ಸ್ತ್ರೀಗೆ ದೊರೆಯಬೇಕಾದ ಗೌರವದ ಸ್ಥಾನಮಾನದ ಬಗ್ಗೆ “ಅಂದಿನ ದಿನಮಾನದಲ್ಲಿ, ಸಹೋದರಿಗೆ ಒಡನಾಟ, sisterhood ಬಗ್ಗೆ” ವಿವರಿಸಿದ ಧೈರ್ಯದ ಬಗ್ಗೆ ಶ್ಲಾಘಿಸಿ, sisterhood ಪರಿಕಲ್ಪನೆ ಇಂದಿನ ದಿನಗಳಲ್ಲೂ ತುಂಬ ಪ್ರಸ್ತುತವಾಗಿದೆ ಎಂದರು. ಹರಿದಾಸ ಸಾಹಿತ್ಯದ ಕೃತಿಗಳ ಪ್ರಕಟಣೆಯ ಬಗ್ಗೆ ಮೈಸೂರಿನ ಮಹಾರಾಜರಿಗೆ ವಿವರಿಸಿ, ಅವರಿಂದ ಧನಸಹಾಯ ಪಡೆದು, ಕನ್ನಡದ ಕೃತಿಗಳ ಪ್ರಕಾಶನ ಕಾರ್ಯ ನಿರ್ವಹಿಸಿದ ಗಟ್ಟಿಗಿತ್ತಿ ಎಂಬುದಾಗಿ ತಿಳಿಸಿದರು.
ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್ (ರಿ) ವತಿಯಿಂದ ಕನ್ನಡ ಮಹಿಳಾ ಹರಿದಾಸರ ಪರಿಚಯದ ಉಪನ್ಯಾಸ ಮಾಲಿಕೆಯಲ್ಲಿ ಡಾ. ವೃಂದಾ ಸಂಗಮ್ ಇವರು, “ಶ್ರೀಮತಿ ನಂಜನಗೂಡು ತಿರುಮಲಾಂಬಾ” ಇವರು ಕನ್ನಡ ಪುಸ್ತಕಗಳ ಲೇಖಕಿಯಾಗಿ, ಪ್ರಕಾಶಕಿಯಾಗಿ, ನಾಟಕಕಾರ್ತಿಯಾಗಿ ಕನ್ನಡ ಪತ್ರಿಕೆಯ ಸಂಪಾದಕಿಯಾಗಿ ಹೆಸರುವಾಸಿಯಾಗಿದ್ದಾರೆ. ಈ ಶತಮಾನದ ಪ್ರಥಮ ಕನ್ನಡ ಲೇಖಕಿ ಎಂದು ದಾಖಲಾಗಿದ್ದಾರೆ. ಬಾಲ ವಿಧವೆಯಾಗಿ, ಕೇವಲ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಪಡೆದು, ಗ್ರಂಥಾವಲೋಕನದಲ್ಲಿ ಆಸಕ್ತಿ ಹೊಂದಿದವರಾಗಿ, ಕನ್ನಡದಲ್ಲಿ ಸುಮಾರು ಹತ್ತು ಪುಸ್ತಕಗಳನ್ನು ಬರೆದಿದ್ದು, ಶೇಷಾದ್ರಿಶಯನ, ಶೇಷಗಿರಿವಾಸ ಮುಂತಾದ ಅಂಕಿತಗಳಿಂದ ಭದ್ರಗೀತಾವಲಿ, ಭಕ್ತಿಗೀತಾವಳಿ ಎಂಬ ಕೃತಿ ರಚನೆ ಮಾಡಿದ್ದಾರೆ. ಅವರ ಕೃತಿಗಳಲ್ಲಿನ ಸೂಕ್ತಿ ವಿಶೇಷ ಅಂಶಗಳು, ಕವಿತಾ ಚಾತುರ್ಯ ಮುಂತಾದವುಗಳೊಂದಿಗೆ ಅವರ ಜೀವನ ಹಾಗೂ ಕೃತಿಗಳ ಪರಿಚಯವನ್ನು ಮಾಡಿಕೊಟ್ಟರು.
ಕಾರ್ಯಕ್ರಮದಲ್ಲಿ ಶ್ರೀಮತಿ ಮಾನಸ ಜಯರಾಜ್ ಕುಲ್ಕರ್ಣಿ ‘ಶ್ರೀಮತಿ ನಂಜನಗೂಡು ತಿರುಮಲಾಂಬಾ’ ಇವರ ಕೃತಿಗಳಿಗೆ ರಾಗ ಸಂಯೋಜನೆ ಮಾಡಿ ಹಾಡಿದರು. ಡಾ. ಸುಧಾ ದೇಶಪಾಂಡೆ ‘ಶ್ರೀಮತಿ ನಂಜನಗೂಡು ತಿರುಮಲಾಂಬಾ” ಇವರ ಕೃತಿಗಳಿಗೆ ಅರ್ಥಾನುಸಂಧಾನ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆಯ ಶ್ರೀಯುತ ಲಕ್ಷ್ಮೀನಾರಾಯಣಾಚಾರ್ ವಹಿಸಿದ್ದರು. ಡಾ. ವಿದ್ಯಾಶ್ರೀ ಕುಲ್ಕರ್ಣಿ ಕಾರ್ಯಕ್ರಮವನ್ನು ನಿರೂಪಿಸಿದರು. ಮೈತ್ರೇಯಿ ಉಪಾಧ್ಯಕ್ಷರಾದ ಡಾ. ಶಾಂತಾ ರಘೋತ್ತಮ, ದಾಸವಾಣಿ ಕರ್ನಾಟಕದ ಶ್ರೀ ಜಯರಾಜ್ ಕುಲ್ಕರ್ಣಿ ಹಾಗೂ ಇನ್ನಿತರ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅಂಟಾಕ್ರ್ಟಿಕಾ ಧ್ರುವ ಪ್ರದೇಶದಲ್ಲಿ ನಿಗೂಢ ರೇಡಿಯೋ ತರಂಗಗಳು ಪತ್ತೆ..!

ಮನುಷ್ಯರು ಒಂದು ಕ್ಷಣವೂ ಇರಲಾಗದ ನಿರ್ಜನ ಪ್ರದೇಶವಾದ ಅಂಟಾಕ್ರ್ಟಿಕಾದ ಧ್ರುವ ಪ್ರದೇಶದಲ್ಲಿ ಮಂಜುಗಡ್ಡೆಯ ಮೇಲ್ಮೈಯಿಂದ ಹೊರಹೊಮ್ಮುತ್ತಿರುವ ನಿಗೂಢ ರೇಡಿಯೋ ತರಂಗಗಳನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ,
ಮಂಜುಗಡ್ಡೆಯ ಆಳದಿಂದ ರೇಡಿಯೋ ಸಂಕೇತಗಳು ಹೊರಸೂಸುತ್ತಿವೆ, ಈ ತರಂಗಗಳು ಸಾವಿರಾರು ಕಿಲೋಮೀಟರ್ ಬಂಡೆಗಳ ಮೂಲಕ ಹಾದು ಹೋಗೇಕಾಗಿತ್ತು ಅದರೆ ಇವು ಬಂಡೆಗಳಲ್ಲಿ ಹೀರಲ್ಪಡುತ್ತಿವೆ, ಇದು ಭೌತಶಾಸ್ತ್ರದ ನಿಯಮದ ವಿರುದ್ಧವಾಗಿದೆ, ಭೂವಿಯನ್ನು ತಲುಪುವ ಸಂಕೇತಗಳನ್ನು ವಿಶ್ಲೇಷಿಸುವ ಮೂಲಕ ಸಂಶೋಧಕರು ಈ ನಿಗೂಢ ರೇಡಿಯೋ ತರಂಗಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ,
ಸದ್ಯ ಈ ನಿಗೂಢ ರೇಡಿಯೋ ತರಂಗಗಳು ವಿಜ್ಞಾನದ ಎಲ್ಲಾ ಪ್ರಯೋಗಗಳಿಗೂ ವಿರುದ್ಧ ವಾಗಿರುವುದು ಸಂಶೋಧಕರಲ್ಲಿ ಕುತೂಹಲ ಹೆಚ್ಚಿಸಿದೆ, ಈ ಹಿನ್ನೆಲೆಯಲ್ಲಿ ಕೆಲ ಮಾದರಿಗಳನ್ನು ಸಂಗ್ರಹಿಸಿರುವ ಸಂಶೋಧಕರು ಈ ನಿಗೂಢತೆಯನ್ನು ಭೇದಿಸಲು ತಮ್ಮ ಪ್ರಯತ್ನಗಳನ್ನು ಆರಂಭಿಸಿದ್ದಾರೆ,

ವಿದ್ಯಾರ್ಥಿಗಳಿಗೆ ಹಾಗೂ ಇತರ ಬಡ ಮಕ್ಕಳಿಗೆ NOTE BOOK, GEOMETRY BOX ವಿತರಿಸುವ ಕಾರ್ಯಕ್ರಮ

ಅಷ್ಟ ಗ್ರಾಮ ಅಸೋಸಿಯೇಷನ್, ಮಾಗಡಿ ಮುಖ್ಯ ರಸ್ತೆ, ಬೆಂಗಳೂರು ಇವರ ಆಶ್ರಯದಲ್ಲಿ ಪ್ರತಿವರ್ಷ ಜನಾಂಗದ ಸದಸ್ಯರ ವಿದ್ಯಾರ್ಥಿಗಳಿಗೆ ಹಾಗೂ ಇತರ ಬಡ ಮಕ್ಕಳಿಗೆ ನೋಟ್ ಪುಸ್ತಕ ಜಾಮಿತ್ರಿ ಬಾಕ್ಸ್, ಪೆನ್ನು, ಪೆನ್ಸಿಲ್ ವಿತರಿಸುವ ಕಾರ್ಯಕ್ರಮವನ್ನು ಹೊಸಕೋಟೆ ಹಾಗೂ ಕೋಲಾರ ಜಿಲ್ಲೆಯ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿತ್ತು.

 

ವಿಶ್ವ ರಕ್ತದಾನಿಗಳ ದಿನಾಚರಣೆ

ಬೆಂಗಳೂರಿನ ಲಯನ್ಸ್ ರಕ್ತ ನಿಧಿ, ಜೈನ ಆಸ್ಪತ್ರೆ ಹಾಗೂ ಜೋಯ್ ಅಲ್ಲುಕಾಸ್ ಸಹಯೋಗದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.

ಸಂಸ್ಥೆಯ ಆಡಳಿತ ಅಧಿಕಾರಿ ಶ್ರೀ ಮೋನಿಷಾ ರವರು ಮಾತನಾಡುತ್ತಾ ದಾನಗಳಲ್ಲಿ ಶ್ರೇಷ್ಠದಾನ ರಕ್ತದಾನ, ಇದು ಎಲ್ಲರಿಗೂ ಅಗತ್ಯವಾದ ವಸ್ತು ದೇಶದಲ್ಲಿ ಅನೇಕ ಅಪಘಾತಗಳಾಗುತ್ತಿದ್ದು ಆ ಸಂದರ್ಭದಲ್ಲಿ ರೋಗಿಗಳಿಗೆ ರಕ್ತದ ಅವಶ್ಯಕತೆ ಇರುತ್ತದೆ ಆದ್ದರಿಂದ ಪ್ರತಿಯೊಬ್ಬರೂ ರಕ್ತಧಾನ ಮಾಡಬೇಕೆಂದು ಕರೆ ನೀಡಿದರು.

ಲಯನ್ ಬ್ಲಡ್ ಬ್ಯಾಂಕಿನ ಆಡಳಿತ ಅಧಿಕಾರಿ ದೀಪಕ್ ಸುಮನ್ ಮಾತನಾಡುತ್ತಾ ನಮ್ಮ ಲಯನ್ಸ್ ಬ್ಲಡ್ ಬ್ಯಾಂಕ್ ಪ್ರತಿದಿನ ರಕ್ತವನ್ನು ಶೇಖರಿಸುತ್ತಿದ್ದು ಅನೇಕ ಬಡವರಿಗೆ ಹಾಗೂ ಅಗತ್ಯವಿರುವ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ರಕ್ತ ನೀಡುತ್ತಿದ್ದೇವೆ, ಆದ್ದರಿಂದ ಪ್ರತಿಯೊಬ್ಬರೂ ಒಮ್ಮೆಯಾದರೂ ರಕ್ತವನ್ನು ದಾನ ಮಾಡಬೇಕೆಂದು ಕರೆ ನೀಡಿದರು,

ಈ ಸಂದರ್ಭದಲ್ಲಿ ರಕ್ತದಾನ ಮಾಡಿದ ನೂರಕ್ಕೂ ಹೆಚ್ಚು ದಾನಿಗಳಿಗೆ ಪ್ರಶಂಸ ಪತ್ರ ನೀಡಿ ಗೌರವಿಸಿದರು.

ಬಿಬಿಎಂಪಿಯಲ್ಲಿ ಆಡಳಿತದಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ, ಎಸ್.ಸಿ/ಎಸ್.ಟಿ ಅನುದಾನ ದುರ್ಬಳಕೆಗೆ ತಡೆ

ಒಂಟಿ ಮನೆ ಯೋಜನೆ ಅನುದಾನ ಬಿಡುಗಡೆ ಮಾಡಿ, 12692ಪೌರ ನೇಮಕಾತಿ ಸರಳೀಕರಣ ಮಾಡಿ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿ ಬೃಹತ್ ಪ್ರತಿಭಟನೆ,ತಮಟೆ ಚಳುವಳಿ. ಬಿಬಿಎಂಪಿ ಆಡಳಿತದಲ್ಲಿ ಭ್ರಷ್ಟಾಚಾರ ಮತ್ತು ಎಸ್.ಸಿ./ಎಸ್.ಟಿ. ಅನುದಾನ ದುರ್ಬಳಕೆ ಹಾಗೂ ಪೌರ ಕಾರ್ಮಿಕರ ನೇಮಕಾತಿ ಸರಳ ರೀತಿಯಲ್ಲಿ ನೇಮಕಾತಿ, ಒಂಟಿ ಮನೆಗಳಿಗೆ ಅನುದಾನ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ,ತಮಟೆ ಚಳುವಳಿ. ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷರಾದ ಚಳುವಳಿ ಅಯ್ಯಪ್ಪ ಕೆ ಮತ್ತು ಜಿಲ್ಲಾಧ್ಯಕ್ಷ ಎನ್.ಪ್ರಸಾದ್ ರವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಪ್ರತಿಭಟನೆ ಪಾಲ್ಗೊಂಡಿದ್ದರು.

ರಾಜ್ಯಾಧ್ಯಕ್ಷ ಚಳುವಳಿ ಅಯ್ಯಪ್ಪ ಕೆ ರವರು ಮಾತನಾಡಿ ಬೆಂಗಳೂರುನಗರ ಇಂದು ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದೆ ಎಲ್ಲರು ನಗರವನ್ನು ಇಷ್ಟಪಡುತ್ತಿದ್ದಾರೆ .ನಾಗರಿಕರ ವೇಗಕ್ಕೆ ಬೆಂಗಳೂರುನಗರ ಅಭಿವೃದ್ದಿಯಾಗುತ್ತಿಲ್ಲ. ಇದೆಕ್ಕಲ್ಲ ಕಾರಣ ಆಡಳಿತ ವೈಫಲ್ಯ ಮತ್ತು ಭ್ರಷ್ಟಾಚಾರ ಕಾರಣ.

ಎಸ್.ಸಿ/ಎಸ್.ಟಿ.ಮತ್ತು ಟಿ.ಎಸ್.ಪಿ.ದಲಿತ ಸಮುದಾಯಕ್ಕೆ ಅಭಿವೃದ್ದಿ ಇಟ್ಟ ಅನುದಾನವನ್ನು ದುರ್ಬಳಕೆ ಮಾಡಿಕೊಂಡು ಅನ್ಯ ಕಾಮಗಾರಿಗಳಿಗೆ ಬಳಕೆ ಮಾಡಿಕೊಂಡಿದ್ದಾರೆ. 12692ಪೌರ ಕಾರ್ಮಿಕರನ್ನು ನೇರ ನೇಮಕಾತಿಯಲ್ಲಿ ಕಠಿಣ ಷರತ್ತು ವಿಧಿಸದೇ ನೇಮಕಾತಿ ಮಾಡಿ. ಆರ್ಥಿಕವಾಗಿ ಹಿಂದುಳಿದ ವರ್ಗ ಮತ್ತು ಎಸ್.ಸಿ/ಎಸ್.ಟಿ. ಸಮುದಾಯಕ್ಕೆ ಕಳೆದ ನಾಲ್ಕು ವರ್ಷಗಳಿಂದ ಒಂಟಿ ಮನೆ ಯೋಜನೆ ಅನುದಾನ ನೀಡಿಲ್ಲ ಅನುದಾನ ಬಿಡುಗಡೆ ಮಾಡಿ.

ಭ್ರಷ್ಟಾಚಾರದಲ್ಲಿ ತೊಡಗಿರುವ ಮತ್ತು ಎಸ್.ಸಿ/ಎಸ್.ಟಿ.ಅನುದಾನ ದುರ್ಬಳಕೆ ಮಾಡಿಕೊಂಡಿರುವ ಅಧಿಕಾರಗಳ ಮೇಲೆ ಉಗ್ರ ಕ್ರಮವಾಗಬೇಕು, ನಿಷ್ಟಾವಂತ ಅಧಿಕಾರಿಗಳನ್ನು ನೇಮಕ ಮಾಡಿ ಬೆಂಗಳೂರುನಗರವನ್ನು ಉಳಿಸಬೇಕು ಎಂದು ಮುಖ್ಯಮಂತ್ರಿಗಳಿಗೆ, ಉಪಮುಖ್ಯಮಂತ್ರಿಗಳಿಗೆ, ಮುಖ್ಯ ಆಯುಕ್ತರು ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ಜಿಲ್ಲಾಧ್ಯಕ್ಷ ಪ್ರಸಾದ್ ಎನ್ ರವರು ಮಾತನಾಡಿ ಬಿಬಿಎಂಪಿಯಲ್ಲಿ ಭ್ರಷ್ಟಾಚಾರ ಕಡಿವಾಣ ಹಾಕಬೇಕು, ಭ್ರಷ್ಟಚಾರದಿಂದ ಬೆಂಗಳೂರುನಗರ ಅಭವೃದ್ದಿಗೆ ಮಾರಕವಾಗಿದೆ. ಎಸ್.ಸಿ/ಎಸ್.ಟಿ ಅನುದಾನ ದುರ್ಬಳಕೆ ಮಾಡಿಕೊಂಡ ಅಧಕಾರಿಗಳನ್ನು ವಜಾ ಮಾಡಬೇಕು ಮತ್ತು ಒಂಟಿ ಮನೆ ಯೋಜನೆಯ ಫಲಾನುಭವಿಗಳಿಗೆ ಕೊಡಲೆ ಹಣ ಬಿಡುಗಡೆ ಮಾಡಬೇಕು ಎಂದು ಹೇಳಿದರು.

20 ದಿನಗಳ ಬಂಜಾರ ಸಾಹಿತ್ಯ, ಕಾವ್ಯ ಹಾಗೂ ನಾಟಕ ರಚನಾ ಕಾರ್ಯಗಾರಕ್ಕೆ ಚಾಲನೆ

ವೈಜ್ಞಾನಿಕವಾಗಿ ಕಲೆ ಸಾಹಿತ್ಯವು ವಿದ್ಯಾರ್ಥಿಗಳಿಗೆ ರಾಂಕ್ ಬರಲು ಸಹಕಾರಿ:

ರಾಜ್ಯ ಸರ್ಕಾರದ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ವತಿಯಿಂದ ನಗರದ ಅಗರದಲ್ಲಿ  ಸಾಹಿತ್ಯ ಮತ್ತು ಸಂಸ್ಕೃತಿ ವೇದಿಕೆ ಮತ್ತು ಪ್ರಜಾಕೀಯ ಆಶ್ರಯದ ಆಶ್ರಯದಲ್ಲಿ ಯುವಕರಿಗೆ ಬಂಜಾರ ಸಾಹಿತ್ಯ, ಕಾವ್ಯ ಹಾಗೂ ನಾಟಕ ರಚನೆಯ 20 ದಿನಗಳ ತರಬೇತಿ ಕಾರ್ಯಗಾರಕ್ಕೆ ಬಂಜಾರ ಅಕಾಡೆಮಿ ಅಧ್ಯಕ್ಷರಾದ ಡಾ.ಎ.ಆರ್.‌ ಗೋವಿಂದಸ್ವಾಮಿ ಉದ್ಘಾಟಿಸಿದರು.

ಸಮಾರಂಭದಲ್ಲಿ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಕೆ. ಪ್ರಕಾಶ್‌, ಸಾಹಿತ್ಯ ಸಂಸ್ಕೃತಿ ವೇದಿಕೆ ಅಧ್ಯಕ್ಷ ಆರ್‌ ಸದಾಶಿವಯ್ಯ, ಶಿಬಿರದ ನಿರ್ದೇಶಕರಾದ ಛಾಯಾಭಾರ್ಗವಿ, ಪ್ರಜಾಕಿರಣ ಸೇವೆ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಡಾ. ರಾಹುಲ್ ಗಾಳಿ, ಅಕಾಡೆಮಿ ಸಹ ಸದಸ್ಯ ಗಿರೀಶ್‌ ನಾಯ್ಕ್‌, ಬಂಜಾರ ಸಮುದಾಯದ ಚಿಂತಕರು, ಮುಖಂಡರಾದ ಬಿ. ರವಿನಾಯಕ್‌, ಚಂದ್ರನಾಯಕ್‌, ಸೌಂದರ್ಯ, ಪ್ರೊ. ಶಿವಣ್ಣ ನಾಯ್ಕ್‌, ರಂಗಕರ್ಮಿ ಮೈಕೂ ಶಿವಶಂಕರ್‌, ಪರಮೇಶ್‌, ಮುಖ್ಯ ಮುಖ್ಯ ಉಪದ್ಯಾಯರು, ಸ್ಥಳೀಯ ಮುಖಂಡರು, ವಿದ್ಯಾರ್ಥಿಗಳು, ಆಶ್ರಮ ಮಕ್ಕಳು ಮುಂತಾದವರು ಭಾಗವಹಿಸಿದ್ದರು.

ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ, ಬಂಜಾರ ಅಕಾಡೆಮಿ ಅಧ್ಯಕ್ಷರಾದ ಡಾ.ಎ.ಆರ್.‌ ಗೋವಿಂದಸ್ವಾಮಿ ಅವರು ಬಂಜಾರರ ಸಾಹಿತ್ಯ, ಕಾವ್ಯ, ನಾಟಕ ರಚನೆ ಹಿಂದಿನ ಅನಿವರ್ಯವಾಗಿದೆ.  ಅಲೆಮಾರಿ ಬುಡಕಟ್ಟು ಹಿನ್ನಲೆಯ ಬಂಜಾರರು ಮುಖ್ಯವಾಹಿನಿಯ ಸಾಂಸ್ಕೃತಿಕ ಕ್ಷೇತ್ರಕ್ಕೆ ದೊಡ್ಡ ಪ್ರಮಾಣದಲ್ಲಿ ತರೆದುಕೊಳ್ಳುವ ಅಗತ್ಯವಿದೆ.  ವಿಶೇಷವಾಗಿ ಯುವಕರು, ಕಲೆ, ಸಾಹಿತ್ಯ, ನಾಟಕದಂತಹ ಸಾಂಸ್ಕೃತಿಕ ವಲಯಕ್ಕೆ ಗುರುತಿಸಿಕೊಳ್ಳುವುದರಿಂದ ಸಾಮಾಜಿಕ ಜಾಗೃತಿ, ಅರಿವು, ವ್ಯಕ್ತಿತ್ವ ವಿಕಾಸಕ್ಕೆ, ಸಜ್ಜನಿಕೆಗೆ ಜನಪರ ಕಾಳಜಿಗೆ, ಜೀವಪರ ಕಾಳಜಿಗೆ ಪರಿಸರ ಕಾಳಜಿಗೆ ಅತ್ಯಂತ ಅಗತ್ಯವಿದೆ. ಇಂದು ಸಾಹಿತ್ಯ ಸಾಹಿತಿಗಳು, ಕಲೆ-ಕಲಾವಿದರು ಸಾಮಾಜದ ಸ್ಪಾಸ್ಥತೆಗೆ ಕೆಲಸ ಮಾಡುವರಾಗಿದ್ದು, ಕಲೆ, ಸಾಹಿತ್ಯ ಕ್ಷೇತ್ರಕ್ಕೆ ಯುವ ಜನತೆಯ ಜೋತೆಗೆ ರಾಜಕಾರಣೀಗಳು, ಉಪನ್ಯಾಸಕರು ಹಾಗೂ ಇತರೆ ಕ್ಷೇತ್ರದ ಜನ ತೊಡಗುವುದರಿಂದ   ಪ್ರಾಮಾಣಿಕತೆ ಸಮಾಜದಲ್ಲಿ ಹೆಚ್ಚಾಗಲಿದೆ, ನಂಬಿಕೆ  ಹೆಚ್ಚಲಿದೆ. ಸಂಬಂಧಗಳು ಸುಗಮವಾಗಲಿದೆ. ಸೇವಾ ಮಾನೋಭವ ಹುಟ್ಟಲಿದೆ. ಇದು ನಾನು ಹೇಳುವ ವಿಷಯವಲ್ಲ ಸಂಶೋಧನೆ ಹೇಳುತ್ತದೆ. ಲಿಂಡಾ ವಿಲಿಯಮ್ಸ್‌ ದಂಪತಿಗಳು ಈ ಹಿಂದೆ ಆಮೇರಿಕದಲ್ಲಿ ನಡೆಸಿರುವ ಸಂಶೋಧನೆ ಕಲೆ, ಸಾಹಿತ್ಯ, ಚಿತ್ರಕಲೆ, ಸಂಗೀತ, ನಾಟಕ ಕ್ಷೇತ್ರದಲ್ಲಿ ಇರುವವರು ಅವರ ಪಠ್ಯೇತರವಾಗಿ ತೊಡಗುವ ಮಕ್ಕಳು ರಾಂಕ್‌ ಗಳಿಸಿ ವಿಶಾಲ ಮನೋಭಾವವುಳ್ಳವರಾಗಿರುತ್ತಾರೆ. ಎಂದು ಅಭಿಪ್ರಯ ಪಟ್ಟರು.

ಶಿಕ್ಷಣ ಇಲಾಖೆ ಉಪನಿರ್ದೇಶಕರಾಗಿದ ಕೆ. ಪ್ರಕಾಶ್‌ ಮಾತನಾಡಿ, ಬಂಜಾರ ಅಕಾಡೆಮಿಯ ಅಧ್ಯಕ್ಷರು ದಿನದಂದೆ ಈ ಕಾರ್ಯಗಾರ ಮಾಡಿ, ಸಮಾಜದ ಸಾಂಸ್ಕೃತಿಕ ಜವಾಬ್ದಾರಿ ನಿಭಾಯಿಸುತ್ತಿದ್ದು, ಈ ಹಿಂದೆ ಶಿಕ್ಷಣದಲ್ಲಿ ರಂಗಭೂಮಿ ಜಾರಿಗಾಗಿ ಹೋರಾಡಿ ನಾಟಕ ಉಪನ್ಯಾಸಕ ನೇಮಕಾತಿಗೆ ಶ್ರಮಿಸಿ ಪರಿಚಯವಾದವರು.

ಇಂದು ಬಂಜಾರ ಭಾಷೆ, ಸಾಹಿತ್ಯ, ಸಂಸ್ಕೃತಿ ಮುಖ್ಯವಾಹಿನಿಗೆ ಬರಲು ಅವಿದತ ಶ್ರಮಿಸುತ್ತಿದ್ದಾರೆ. ಅದರ ಭಾಗವಾಗಿಯೇ ಈ ಸಾಹಿತ್ಯ ರಚನಾ ತರಬೇತಿ ಕಾರ್ಯಾಗಾರ ಇವರು ಬಂಜಾರರ  ಜೋತೆಗೆ ಇತರರಿಗೂ ಸಮಾನ ಅವಕಾಶ ನೀಡಿರುವುದು ಶ್ಲಾಘನೀಯ ಎಂದರು.

ಇದೇ ಸಂದರ್ಭದಲ್ಲಿ ಆಶ್ರಮದ ಡಾ. ರಾಹುಲ್ ಗುಳಿ ಅವರು ಮಾತನಾಡಿ ನಮ್ಮ ಅಶ್ರಮದಲ್ಲಿರು ಬಡ ಬಂಜಾರ ಹಾಗೂ ಇತರೆ ಮಕ್ಕಳಿಗೂ ಬಂಜಾರ ಸಾಹಿತ್ಯ ರಚನೆಯ ತರಬೇತಿಗೆ ಅವಕಾಶ ಕಲ್ಪಿಸಿದ್ದು ನಮ್ಮ ಮಕ್ಕಳು ಸಾಂಸ್ಕೃತಿಕ ಕ್ಷೇತ್ರಕ್ಕೆ ತರೆದುಕೊಳ್ಳಲು ಉತ್ತಮ ಅವಕಾಶ ಕೊಟ್ಟಿದ್ದಾರೆ ಎಂದರು. ಸಾಹಿತ್ಯ ಸಂಸ್ಕೃತಿ ವೇದಿಕೆ ಅಧ್ಯಕ್ಷ ಆರ್‌. ಸದಾಶಿವಯ ಜರಗನಹಳ್ಳಿ ಮಾತನಾಡಿ, ನಮ್ಮ ವೇದಿಕೆಗೂ ಸಲಹೆಗಾರರಾದ ಡಾ.ಎ.ಆರ್.‌ ಗೋವಿಂದಸ್ವಾಮಿ ಅವರು ನಮ್ಮ 150ನೇ ಕಾರ್ಯಕ್ರಮವಾಗಿ ಈ ತರಬೇತಿ ಕಾರ್ಯಗಾರದ ಕೊಡುಗೆಯಿಂದ ಬಂಜಾರ ಭಾಷೆ, ಸಂಸ್ಕೃತಿಗೆ ನಾವು ಸೇವೆ ಮಾಡಲು ವೇದಿಕೆಯಾಗಿದೆ. ಯಾವುದೇ ಭಾಷೆಯ ಅಳಿವು ಉಳಿವು ಒಂದು ಸಮಾಜದ ಉಳಿತಾಗಿದೆ ಎಂದರು.

ಕಾರ್ಯಾಗಾರದ ನಿರ್ದೇಶಕ ಛಾಯಾ ಅವರು ಮಾತನಾಡಿ, ಮಕ್ಕಳಿಗೆ ಉತ್ತಮ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕೋಡಿಸುವ ಹಾಗೂ ಪ್ರದರ್ಶಿಸುವ ಕಾರ್ಯ ಪ್ರಾಮಾಣಿಕವಾಗಿ ಮಾಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು.

ಇಂದಿನಿಂದ ಮೂರು ದಿನಗಳ ಕಾಲ ನಂದಿಬೆಟ್ಟಕ್ಕೆ ಪ್ರವಾಸಿಗರಿಗೆ ನಿರ್ಬಂಧ

ಚಿಕ್ಕಬಳ್ಳಾಪುರ: ಜೂ.19ರಂದು ನಂದಿಗಿರಿಧಾಮದಲ್ಲಿ  ರಾಜ್ಯ ಸಚಿವ ಸಂಪುಟ  ಸಭೆ ನಡೆಯಲಿರುವ ಹಿನ್ನೆಲೆ ಇಂದಿನಿಂದ ಮೂರು ದಿನಗಳ ಕಾಲ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಈ ಕುರಿತು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಆದೇಶ ಹೊರಡಿಸಿದ್ದು, ಇಂದು ಸಂಜೆ 5 ಗಂಟೆಯಿಂದ ಜೂ.20ರ ಬೆಳಿಗ್ಗೆ 5 ಗಂಟೆಯವರೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಜೊತೆಗೆ ನಂದಿಗಿರಿಧಾಮದ ಮೇಲ್ಭಾಗದಲ್ಲಿರುವ ವಸತಿ ಕೊಠಡಿಗಳ ಬುಕಿಂಗ್‌ಗೂ ನಿಷೇಧ ವಿಧಿಸಿದ್ದಾರೆ.

ಇದೇ ಮೊದಲ ಬಾರಿಗೆ ನಂದಿಬೆಟ್ಟದಲ್ಲಿ ವಿಶೇಷ ಸಚಿವ ಸಂಪುಟ ನಡೆಯಲಿದ್ದು, ಸಭೆಗೆ ಬೇಕಾದ ಅಗತ್ಯ ಸಿದ್ಧತೆ ಸಲುವಾಗಿ ಮೂರು ದಿನಗಳ ಮೊದಲೇ ಪ್ರವಾಸಿಗರ ಪ್ರವೇಶ ಹಾಗೂ ವಾಹನಗಳ ಸಂಚಾರಕ್ಕೂ ಬ್ರೇಕ್ ಹಾಕಲಾಗಿದೆ.

ಸಚಿವ ಸಂಪುಟ ಸಭೆಗೆ ಸಿಎಂ, ಡಿಸಿಎಂ ಹಾಗೂ ಕರ್ನಾಟಕ ಸರ್ಕಾರದ ಸಚಿವ ಸಂಪುಟ ದರ್ಜೆಯ ಎಲ್ಲಾ ಮಂತ್ರಿಗಳು, ಶಾಸನ ಸಭಾ ಹಾಗೂ ವಿಧಾನಸಭಾ ಸದಸ್ಯರು, ಇಲಾಖಾ ಮುಖ್ಯಸ್ಥರು ಹಾಗೂ ಪತ್ರಕರ್ತರು ಆಗಮಿಸುತ್ತಿದ್ದಾರೆ. ಆದ್ದರಿಂದ ನಂದಿಗಿರಿಧಾಮಕ್ಕೆ ಹೋಗಲು ಮತ್ತು ಬರಲು ಒಂದೇ ರಸ್ತೆ ಇರುವುದರಿಂದ ವಾಹನ ದಟ್ಟಣೆ ಹೆಚ್ಚಾಗಿರುತ್ತದೆ. ಜೊತೆಗೆ ನಂದಿಬೆಟ್ಟದಲ್ಲಿ ಕಡಿದಾದ ತಿರುವುಗಳಿಂದ ಕೂಡಿದ ರಸ್ತೆಗಳಲ್ಲಿ ವಾಹನ ಮತ್ತು ಪ್ರವಾಸಿಗರನ್ನು ನಿಯಂತ್ರಿಸುವುದು ಅತಿ ಕಷ್ಟಕರವಾಗಿರುತ್ತದೆ. ಅಪಘಾತಗಳಾಗುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ನಮ್ಮ ಹೊಟ್ಟೆಯ ಮೇಲೆ ಹೊಡೆಯಬೇಡಿ ರಾಹುಲ್ ಗಾಂಧಿಗೆ ಅಸೋಸಿಯೇಷನ್ ಪತ್ರ!

ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ನಿಷೇಧಗೊಂಡಿದೆ, ಈ ಹಿನ್ನೆಲೆ ನಮ್ಮ ಬೈಕ್ ಟ್ಯಾಕ್ಸಿ ಅಸೋಸಿಯೇಷನ್ ಅಧ್ಯಕ್ಷ ಮೊಹಮ್ಮದ್ ಸಲೀಂ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದು ನಿಷೇಧ ಮಾಡಿದರುವಂತೆ ಮನವಿ ಮಾಡಿದ್ದಾರೆ,
ಲಕ್ಷಾಂತರ ಮಂದಿ ವಿದ್ಯಾರ್ಥಿಗಳು, ನಿರುದ್ಯೋಗಿಗಳು, ಪೋಷಕರು ಹಾಗೂ ದಿನಗೂಲಿ ಕಾರ್ಮಿಕರು ಬೈಕ್ ಟ್ಯಾಕ್ಸಿ ಸೇವೆಯಿಂದ ದಿನನಿತ್ಯ ಹೊಟ್ಟೆ ಹೊರೆದುಕೊಳ್ಳುತ್ತಿದ್ದಾರೆ, ಇವು ನಮ್ಮ ಬಿಡುವಿನ ವೇಳೆಯ ಕೆಲಸವಾಗಿರದೇ ಮೂಲ ಉದ್ಯೋಗವೇ ಆಗಿದೆ, ಈ ರೀತಿ ಏಕಾಏಕಿ ನಿಷೇಧ ಮಾಡುವುದರಿಂದ ನಮ್ಮ ಕುಟುಂಬಗಳು ಬೀದಿಗೆ ಬೀಳುತ್ತವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ,
ಸುರಕ್ಷತೆ, ವಿಮೆ ನಿಯಮ ಹಾಗೂ ತರಬೇತಿ ನಿಯಮಗಳನ್ನು ಜಾರಿಗೆ ತಂದು ನಮ್ಮನ್ನು ಅಧಿಕೃತ ಉದ್ಯೋಗಿಗಳನ್ನಾಗಿ ಮಾಡುವ ಬದಲು ನಿಷೇಧಗೊಳಿಸುವುದು ಎಷ್ಟು ಸರಿ ಎಂದು ಪತ್ರದಲ್ಲಿ ಪ್ರಶ್ನಿಸಲಾಗಿದ್ದು, ಗಿಗ್ ಕಾರ್ಮಿಕರಾದ ನಮಗೆ ನೀವು ಚುನಾವಣೆಯ ಮುನ್ನ ನೀಡಿದ್ದ ಭರವಸೆಯನ್ನು ಮರೆತಿದ್ದೀರಿ ಎಂದು ಹೇಳಲಾಗಿದೆ,

ನಕಲಿ ವೈದ್ಯನ ಚಿಕಿತ್ಸೆಯಿಂದ ಮಗು ಬಲಿ

ರಾಮನಗರ: ರಾಮನಗರದಲ್ಲಿ   ನಕಲಿ ವೈದ್ಯನ ಚಿಕಿತ್ಸೆಯಿಂದಾಗಿ  ಶಿವರಾಜ್ ಎಂಬವರ ಆರು ತಿಂಗಳ ಕಂದಮ್ಮ (child death) ಸಾವನ್ನಪ್ಪಿದೆ. 6 ತಿಂಗಳ ಮಗುವಿನ ಸಾವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಸೂಕ್ತ‌ ಕ್ರಮಕ್ಕೂ ಸೂಚನೆ ನೀಡಿದೆ. ಶಿವರಾಜ್ ಎಂಬವರ ಆರು ತಿಂಗಳ ಪ್ರಾಯದ ಮಗು ಶರಣ್ಯ ಮೃತಪಟ್ಟವಳು. ನಕಲಿ ವೈದ್ಯ   ಮಹಮ್ಮದ್ ಸೈಫುಲ್ಲ ಎಂಬಾತ ಎಂದು ಗುರುತಿಸಲಾಗಿದೆ. ಮಹಮ್ಮದ್ ಸೈಫುಲ್ಲ ಎಂಬವನು ವೈದ್ಯಕೀಯ ಕೋರ್ಸ್ ಮಾಡದೇ, ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯದೇ ಸಣ್ಣ ಕೋಣೆಯೊಂದರಲ್ಲಿ ಚಿಕಿತ್ಸೆ ನೀಡುತ್ತಿದ್ದ. ಈತನಿಂದಾಗಿ ಮಗು ಮರಳಿ ಬಾರದ ಲೋಕಕ್ಕೆ ತೆರಳಿದೆ. ಇದು ಜಿಲ್ಲೆಯ ಜನರನ್ನು ಸಾಕಷ್ಟು ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ರಾಮನಗರದಲ್ಲಿ ಸಾಕಷ್ಟು ನಕಲಿ ಕ್ಲಿನಿಕ್​ಗಳು ತಲೆ ಎತ್ತಿದ್ದು ಅವುಗಳ ವಿರುದ್ಧ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಬೆಂಗಳೂರು ದಕ್ಷಿಣ ‌ಜಿಲ್ಲೆಯಾದ್ಯಂತ ಒಟ್ಟು 193 ಕ್ಲಿನಿಕ್ ಹಾಗೂ ಆಸ್ಪತ್ರೆಗಳಿಗೆ ಮಾತ್ರ ಆರೋಗ್ಯ ಇಲಾಖೆಯಿಂದ ಅನುಮತಿ ಸಿಕ್ಕಿದೆ. ಆದರೆ ಕೆಲವರು ಹಣದಾಸೆಗೆ ನಕಲಿ ಕ್ಲಿನಿಕ್ ನಡೆಸುತ್ತಿದ್ದಾರೆ. ಆರೋಗ್ಯ ಇಲಾಖೆ ಕಳೆದ ನಾಲ್ಕು ತಿಂಗಳಲ್ಲಿ ಆರು ನಕಲಿ ವೈದ್ಯರನ್ನು ಪತ್ತೆ ಮಾಡಿದೆ. ಇಬ್ಬರ ವಿರುದ್ಧ ಕ್ರಮ ತೆಗೆದುಕೊಂಡಿದ್ದರೂ ಇನ್ನೂ ಕೆಲವರು ಹಣದಾಸೆಗೆ ನಕಲಿ‌ ಕ್ಲಿನಿಕ್ ನಡೆಸುತ್ತಿದ್ದಾರೆ. ನಕಲಿ ಕ್ಲಿನಿಕ್​ಗಳ ಬಗ್ಗೆ ಜನರು ಎಚ್ಚರಿದಿಂದ ಇರಬೇಕು. ಗಮನಕ್ಕೆ ಬಂದ ಕೂಡಲೇ ಅವುಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್ ಮನವಿ ಮಾಡಿದ್ದಾರೆ

ಮೆಟ್ರೋ ನಿಲ್ದಾಣಕ್ಕೆ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಹೆಸರು-ಡಿಸಿಎಂ ಡಿಕೆಶಿ

ಬೆಂಗಳೂರು: ಮೆಟ್ರೋ ನಿಲ್ದಾಣಕ್ಕೆ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹೆಸರಿಡುವ ಬಗ್ಗೆ ನಾನು ಹಾಗೂ ಮುಖ್ಯಮಂತ್ರಿಗಳು ಚರ್ಚೆ ಮಾಡಿ ತೀರ್ಮಾನಿಸುತ್ತೇವೆ, ಕಾರ್ಯಪ್ಪ ಹೆಸರಿಡುವುದು ನಮ್ಮ ಭಾಗ್ಯ ಎಂದು ಡಿಸಿಎಂ ಡಿಕೆ ಶಿಮಕುಮಾರ್ ಅವರು ಹೇಳಿದರು,
ರಾಜ್ಯ ಸರ್ಕಾರವು ಬೆಂಗಳೂರಿನಲ್ಲಿ ಏಳು ಎಕರೆ ಭೂಮಿ ಮಂಜೂರು ಮಾಡಿರುವ ಹಿನ್ನೆಲೆಯಲ್ಲಿ ಕೊಡವ ಸಮಾಜದವರು ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಉದ್ದೇಶಿಸಿ ಡಿಸಿಎಂ ಡಿಕೆಶಿ ಅವರು ಮಾತನಾಡಿದರು,
ಈ ವಿಚಾರವಾಗಿ ನಾವು ಮುಕ್ತ ಮನಸ್ಸು ಹೊಂದಿದ್ದೇವೆ, ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಹಾಗೂ ಈ ಡಿಕೆ ಶಿವಕುಮಾರ್ ಸೇರಿ ಕಾರ್ಯಪ್ಪ ಅವರ ಹೆಸರನ್ನು ಉಳಿಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು,
ಇಡೀ ದೇಶಕ್ಕೆ ಕೊಡಗು ಹಾಗೂ ಕೊಡವರು ಆಭರಣವಿದ್ದಂತೆ, ಇತಿಹಾಸ ನೋಡಿದಾಗ ನಿಮಗೆ ಯಾವುದೇ ಜವಾಬ್ದಾರಿ ಕೊಟ್ಟರೂ ಅದನ್ನು ಸಮರ್ಥವಾಗಿ ನಿಭಾಯಿಸಿದ್ದೀರಿ, ರಾಜಕೀಯ ಮಾತ್ರವಲ್ಲ ಕ್ರೀಡೆ, ಕಾನೂನು ವ್ಯವಸ್ಧೆ ಸೇನೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಕೊಡವರ ಕೊಡುಗೆ ಅಪಾರ, ದೇಶದ ಸ್ವಾತಂತ್ರ್ಯ ಹೋರಾಟಕ್ಕೂ ನಿಮ್ಮ ಕೊಡುಗೆ ಇದೆ, ಎಂದು ಬಣ್ಣೀಸಿದರು,