Home Blog Page 61

ಖಾಲಿ ನಿವೇಶನದಲ್ಲಿ ಕಸ ಎಸೆಯುವವರ ವಿರುದ್ಧ ಕ್ರಮ: BBMP

ಬೆಂಗಳೂರು: ನಗರದ ಖಾಲಿ ನಿವೇಶನದಲ್ಲಿ ಕಸ ಎಸೆಯುವುದನ್ನು ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವ‌ ರಾವ್ ಅವರು ಮಂಗಳವಾರ ಸೂಚನೆ ನೀಡಿದರು.  ಮಂಗಳವಾರ ಸಪ್ತಗಿರಿ ವೈದ್ಯಕೀಯ ಕಾಲೇಜು ಬಳಿಯ ಹೆಸರಘಟ್ಟ ಮುಖ್ಯ ರಸ್ತೆಯಲ್ಲಿ ಪರಿಶೀಲನೆ ನಡೆಸಿದ ಅವರು, ರಸ್ತೆ ಬದಿ ಮತ್ತು ಖಾಲಿ ಜಾಗಗಳಲ್ಲಿ ಕಸ ಸುರಿಯುವುದರಿಂದ ಬ್ಲಾಕ್ ಸ್ಪಾಟ್‌ಗಳು ನಿರ್ಮಾಣವಾಗುತ್ತಿದೆ. ಇದನ್ನು ತಡೆಯಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಂಗಳವಾರ ಸಪ್ತಗಿರಿ ವೈದ್ಯಕೀಯ ಕಾಲೇಜು ಬಳಿಯ ಹೆಸರಘಟ್ಟ ಮುಖ್ಯ ರಸ್ತೆಯಲ್ಲಿ ಪರಿಶೀಲನೆ ನಡೆಸಿದ ಅವರು, ರಸ್ತೆ ಬದಿ ಮತ್ತು ಖಾಲಿ ಜಾಗಗಳಲ್ಲಿ ಕಸ ಸುರಿಯುವುದರಿಂದ ಬ್ಲಾಕ್ ಸ್ಪಾಟ್‌ಗಳು ನಿರ್ಮಾಣವಾಗುತ್ತಿದೆ. ಇದನ್ನು ತಡೆಯಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಸ್ತೆ ಬದಿ, ಖಾಲಿ ನಿವೇಶನದಲ್ಲಿ ಕಸ ಬಿಸಾಡಿದ ಬ್ಲಾಕ್ ಸ್ಪಾಟ್‌ಗಳು ನಿರ್ಮಾಣ ವಾಗುತ್ತಿರುವ ಬಗ್ಗೆ ಕ್ರಮ ಕೈಗೊಳ್ಳಿ. ರಸ್ತೆ ಬದಿಯಲ್ಲಿ ಬಿಸಾಡಿರುವ ಸೋಫಾ, ಕುರ್ಚಿ, ಪೀಠೋಪಕರಣ, ಬಟ್ಟೆ, ದಿಂಬು, ಹಾಸಿಗೆ ಸೇರಿ ಇನ್ನಿತರೆ ವಸ್ತುಗಳನ್ನು ಒಣತ್ಯಾಜ್ಯ ಸಂಗ್ರಹಣಾ ಘಟಕದಲ್ಲಿ ಪುನರ್‌ಬಳಸಲು ವ್ಯವಸ್ಥೆ ಮಾಡಲು ಸೂಚಿಸಿದರು.

ಈ ಸಂದರ್ಭಧಲ್ಲಿ ವಲಯ ಆಯುಕ್ತ ನವೀನ್ ಕುಮಾರ್‌ರಾಜು, ಮುಖ್ಯ ಅಭಿಯಂತರ ಬಸವರಾಜ್ ಕಬಾಡೆ ಕಾರ್ಯನಿರ್ವಾಹಕ ಎಂಜಿನಿಯರ್ ಮತ್ತು ಇತರ ಅಧಿಕಾರಿಗಳು ಹಾಜರಿದ್ದರು

ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದರೆ ತಾಳ್ಮೆ ಬಹಳ ಮುಖ್ಯ: ಹಿರಿಯ ಸಾಹಿತಿ ಶ್ರೀ ಕಾ.ತ.ಚಿಕ್ಕಣ್ಣ

ಬೆಂಗಳೂರು : ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದರೆ ತಾಳ್ಮೆ ಬಹಳ ಮುಖ್ಯ ಎಂದು ಹಿರಿಯ ಸಾಹಿತಿ ಶ್ರೀ ಕಾ.ತ.ಚಿಕ್ಕಣ್ಣ ನವರು ಹೇಳಿದರು.  ಇತ್ತೀಚೆಗೆ ನಯನ ಸಭಾಂಗಣದಲ್ಲಿ ಸಂಭ್ರಮ ಸಂಸ್ಥೆಯು ಆಯೋಜಿಸಿದ್ದ ನೃತ್ಯ ಗುರು ಉಷಾಬಸಪ್ಪ ರವರಿಗೆ ನೃತ್ಯಾಭಿನಂದನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು ಶ್ರೀಯುತರು ಪ್ರತಿಯೊಬ್ಬ ಕಲಾವಿದನು ಮತ್ತೊಬ್ಬ ಕಲಾವಿದನಿಗೆ ಆಸರೆಯಾದರೆ, ನಮ್ಮ ಎಲ್ಲರ ಕಲಾ ಬದುಕು ಹಸನಾಗುತ್ತದೆ ಎಂದರು.  ಕಳೆದ 25 ವರ್ಷಗಳಿಂದ ಕಲೆಯನ್ನು ಉಸಿರಾಗಿಸಿಕೊಂಡು ಜನಪದದ ಕಲೆಯನ್ನು ಬೆಳೆಸಿ ಅದರ ಜೊತೆಗೆ ಮತ್ತಷ್ಟು ಕಲಾವಿದರ ಬದುಕನ್ನು ಬೆಳಕಿನತ್ತ ಕೊಂಡ್ಯೊಯ್ಯುವ ಕೆಲಸವನ್ನು ಸಂಭ್ರಮ ಸಂಸ್ಥೆಯು ಮಾಡಿಕೊಂಡು ಬರುತ್ತಿದೆ.
ಕೆಲವು ಹಳ್ಳಿಗಳ ಕೆರೆಗಳ  ಹೂಳೆತ್ತುವ ಕೆಲಸ  ಸಸಿಗಳನ್ನು ನೆಟ್ಟು ಅದರ ಪೋಷಣೆ, ಉತ್ತಮವಾದ ಮರಗಳಿಂದ ನಮ್ಮ ಬದುಕು ಸುಂದರ, ಅಷ್ಟೇ ಅಲ್ಲದೇ ಅನೇಕ ಸಾಮಾಜಿಕ ಕಳಕಳಿಯ ಸೇವೆಯನ್ನು ಮಾಡುತ್ತಿರುವ ಈ ಸಂಭ್ರಮಕ್ಕೆ ಈಗ ಬೆಳ್ಳಿ ಹಬ್ಬದ ಸಂಭ್ರಮ.
ಖ್ಯಾತ ನೃತ್ಯ ಗುರು ವಿದುಷಿ ಉಷಾಬಸಪ್ಪ ನವರು ನೃತ್ಯ, ಸಂಗೀತ, ಜನಪದ ಕ್ಷೇತ್ರದ ಕಲಾಸೇವೆ ಮತ್ತು ಬೆಳವಣಿಗೆಯನ್ನು ಮೈಗೂಡಿಸಿಕೊಂಡು ಈ ಸಾಲಿನ 2025ರ “ಕಿತ್ತೂರು ರಾಣಿ ಚೆನ್ನಮ್ಮ” ಪ್ರಶಸ್ತಿಗೆ ಭಾಜನರಾದ ಈ ಸಂದರ್ಭದಲ್ಲಿ ಅವರು ಮಾಡಿದ ಅಮೋಘ ಸೇವೆಯನ್ನು ಗುರುತಿಸಿ ಸಂಭ್ರಮ ಸಂಸ್ಥೆಯು ಅವರಿಗೆ ನೃತ್ಯಾಭಿನಂದನೆಯನ್ನು ಸಲ್ಲಿಸಿತು.
ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಅನೇಕ ಪ್ರತಿಷ್ಟಿತ ನೃತ್ಯ ಸಂಸ್ಥೆಯ ಕಲಾವಿದರು ನೃತ್ಯವನ್ನು ಪ್ರದರ್ಶಿಸಿದರು, ನಂತರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿದುಷಿ ಶುಭ ಧನಂಜಯ, ಅಧ್ಯಕ್ಷರು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ವಿದುಷಿ ಕೆ.ಎಂ.ಕುಸುಮ, ಖ್ಯಾತ ಹಿನ್ನೆಲೆ ಗಾಯಕಿ, ವಿದ್ವಾನ್ ಎಸ್.ವಿ.ಗಿರಿಧರ್, ಖ್ಯಾತ ಮೃದಂಗ ವಿದ್ವಾಂಸರುಗಳು ಕಲಾವಿದೆ ಉಷಾಬಸಪ್ಪ ರವರಿಗೆ ನೃತ್ಯಾಭಿನಂದನೆಯನ್ನು ಸಲ್ಲಿಸಿದರು, ಸಂಭ್ರಮದ ಕಾರ್ಯದರ್ಶಿ ಡಾ.ಜೋಗಿಲ ಸಿದ್ದರಾಜು ರವರು ಸಾಹಿತಿ ಶ್ರೀ ಅವಿರತ ಹರೀಶ್,  ಕಲಾ ನಿರ್ದೇಶಕ ಶ್ರೀ ಓ.ವೆಂಕಟೇಶ್ ರವರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಬಹಳ ವ್ಯವಸ್ಥಿತವಾಗಿ ಆಯೋಜಿಸಲಾಗಿತ್ತು.  ನೃತ್ಯ ಪ್ರದರ್ಶನಗಳು ಮನಸೂರೆಗೊಂಡವು.  ನಯನ ಸಭಾಂಗಣವು ಕಲಾರಸಿಕರಿಂದ ತುಂಬಿ ತುಳುಕುತ್ತಿತ್ತು.  ಒಂದು ಉತ್ತಮವಾದ ಕಾರ್ಯಕ್ರಮವನ್ನು ಆಯೋಜಿಸಿದರೆ ರಸಿಕ ಪ್ರಭುಗಳು ಬರುತ್ತಾರೆ ಎಂಬ ಭಾವನೆ ಮನೆಮಾಡಿತ್ತು.  ಇದೇ ಸಂದರ್ಭದಲ್ಲಿ ಉಷಾಬಸಪ್ಪ ರವರ ಬಗ್ಗೆ ಒಂದು ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.
ಅತಿಥಿಗಳ ಮಾತುಗಳು ಪ್ರೇರಣದಾಯಕವಾಗಿತ್ತು, ನಂತರ ವಿದುಷಿ ಉಷಾಬಸಪ್ಪ ರವರು ಅವರ ಮನದಾಳದ ಮಾತನಾಡಿದರು.  ಈ ಸಾಧನೆಗೆ ಪ್ರೇರಣೆ ನನ್ನ ತಂದೆ, ತಾಯಿ, ನೃತ್ಯ ಗುರುಗಳಾದ ದಿವಂಗತ ಪದ್ಮಿನಿರಾವ್, ವಿದುಷಿ ಕೆ.ಎಂ.ಕುಸುಮ, ವಿದ್ವಾನ್ ಎಸ್. ವಿ.ಗಿರಿಧರ್, ಹಾಗೂ ಡಾ.ಜೋಗಿಲ ಸಿದ್ದರಾಜು, ರವರ ಸ್ನೇಹ ಮತ್ತು ಮಾರ್ಗದರ್ಶನ ನನ್ನ ಸಾಧನೆಗೆ ಸ್ಪೂರ್ತಿ ಎಂದರು.  ಈ ಸಂದರ್ಭ ನನ್ನ ಅನೇಕ ವರ್ಷದ ಗೆಳೆಯರು, ಸ್ನೇಹಿತರು, ಹಿತೈಷಿಗಳನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಿಕೊಟ್ಟ ಸಂಭ್ರಮ ಸಂಸ್ಥೆಗೆ ಎಂದೆಂದೂ ಅಭಾರಿಯಾಗಿದ್ದೇನೆ ಎಂದರು.
ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ವಿನೂತನ ಕಾರ್ಯಕ್ರಮದ ಜೊತೆಗೆ ಇಂತಹ ಸಂಗೀತ ಮತ್ತು ನೃತ್ಯ ಕ್ಷೇತ್ರದ ಸಾಧಕರನ್ನು ಗೌರವಿಸುವ ಕಾಯಕದಲ್ಲಿ ನಾವು ನಿರತರಾಗುತ್ತೇವೆ ಎಂದು ಡಾ.ಜೋಗಿಲ ಸಿದ್ದರಾಜು ರವರು ತಿಳಿಸಿದರು.  ರಸಿಕರ ಒತ್ತಾಯದ ಮೇರೆಗೆ ಗಾಯಕಿ ವಿದುಷಿ ಕೆ.ಎಂ.ಕುಸುಮ ರವರು ಭಕ್ತಿಸಾರದಲ್ಲಿ ತೇಲಿಸುವ ಒಂದು ಗೀತೆಗೆ ಧ್ವನಿಯಾದರು ಕೇಳುಗರು ಚಪ್ಪಾಳೆಯ ಮಳೆಸುರಿಸಿದರು.  ವಿದುಷಿ ದೀಪಾ ಸುಧೀಂದ್ರ ರವರ ನಿರೂಪಣೆ ಬಹಳ ಚೆಂದವಾಗಿ ಮೂಡಿಬಂದಿತು.
ಒಟ್ಟಿನಲ್ಲಿ ಒಂದು ವಿಶೇಷ ಕಾರ್ಯಕ್ರಮಕ್ಕೆ ನಾವೆಲ್ಲಾ ಸಾಕ್ಷಿಯಾಗಿದ್ದು ಖುಷಿತಂದಿತ್ತು.
                 –ಎಸ್. ನಂಜುಂಡರಾವ್ ವಿಮರ್ಶಕರು.

ರಾಜ್ಯದಲ್ಲಿ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆಯಿಲ್ಲ: ಸುರ್ಜೇವಾಲ

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಯಾವುದೇ ಚರ್ಚೆ ನಡೆಯುತ್ತಿಲ್ಲ. ಶಾಸಕರ ಜತೆಗಿನ ಮುಖಾಮುಖಿ ಸಭೆಯಲ್ಲೂ ಈ ವಿಚಾರ ಚರ್ಚೆಯಾಗುತ್ತಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಸ್ಪಷ್ಟಪಡಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಸಕರೊಂದಿಗಿನ ಸಭೆಯಲ್ಲಿ ಪಕ್ಷದ ಸಂಘಟನೆ ಮತ್ತು ಆಡಳಿತ ಕುರಿತ ವೈಯಕ್ತಿಕ ಅಭಿಪ್ರಾಯವನ್ನಷ್ಟೇ ಪಡೆಯಲಾಗುತ್ತಿದೆ ಎಂದು ತಿಳಿಸಿದ್ದಾರೆ. ಕಳೆದೆರಡು ದಿನಗಳಲ್ಲಿ ಮೈಸೂರು ಮತ್ತು ಬೆಂಗಳೂರು ವಿಭಾಗದ ಶಾಸಕರ ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಮುಂದಿನ ಸೋಮವಾರದಿಂದ ಇತರ ಭಾಗದ ಶಾಸಕರನ್ನು ಕರೆದು ಮಾತನಾಡುತ್ತೇನೆ. ನಂತರದಲ್ಲಿ ಸಂಸದರು, ಮಾಜಿ ಸಂಸದರನ್ನು ಭೇಟಿ ಮಾಡಲಾಗುವುದು. ಈ ಸಭೆಗಳಲ್ಲಿ ಕಳೆದೆರಡು ವರ್ಷಗಳಲ್ಲಿ ಕ್ಷೇತ್ರದಲ್ಲಿ ಮಾಡಿದ ಕೆಲಸ ಕಾರ್ಯಗಳ ಬಗ್ಗೆ ಶಾಸಕರಿಂದ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ಜಿಲ್ಲಾ ಮತ್ತು ಬ್ಲಾಕ್‌ ಕಾಂಗ್ರೆಸ್‌ ಸೇರಿ ಇತರ ವಿಭಾಗಗಳ ಚಟುವಟಿಕೆ ಕುರಿತು ಮಾಹಿತಿ ಪಡೆಯಲಾಗುವುದು ಎಂದರು.

ಬಹಿರಂಗ ಹೇಳಿಕೆ ಸರಿಯಲ್ಲ

ಸರ್ಕಾರದ ಕುರಿತು ಶಾಸಕರ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿ, ಯಾರೇ ಆಗಲಿ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬೇಕು. ಎಷ್ಟೇ ಅಸಮಾಧಾನವಿದ್ದರೂ ಅದನ್ನು ಬಹಿರಂಗಪಡಿಸಲು ವೇದಿಕೆಯಿದೆ. ಬಹಿರಂಗವಾಗಿ ಮಾತನಾಡಲು ಅವಕಾಶವಿಲ್ಲ. ನನ್ನೊಂದಿಗೆ ಶಾಸಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ ಎಂದರು. ಮುಖಾಮುಖಿ ಸಭೆಯಲ್ಲಿ ಶಾಸಕರ ರಿಪೋರ್ಟ್‌ ಕಾರ್ಡ್‌ ಪಡೆಯುತ್ತಿದ್ದೇನೆ. ಶಾಸಕರ ಆಕಾಂಕ್ಷೆಗಳು, ಬೇಡಿಕೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ. ಅದನ್ನು ರಾಜ್ಯ ಸರ್ಕಾರದ ಗಮನಕ್ಕೂ ತರುತ್ತೇನೆ. ಪಂಚ ಗ್ಯಾರಂಟಿಗಳ ಅನುಷ್ಠಾನದ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಇನ್ನೂ ಐದಾರು ದಿನ ಇಲ್ಲೇ ಇರುತ್ತೇನೆ. ಎಲ್ಲ ಶಾಸಕರು, ಸಂಸದರನ್ನು ಭೇಟಿ ಮಾಡಿ ಮಾತನಾಡುತ್ತೇನೆ ಎಂದು ಹೇಳಿದರು.

ಪತ್ರಿಕೋದ್ಯಮ ಜನಪರವಾಗಿರಬೇಕು-ಸಿಎಂ

ಬೆಂಗಳೂರು: ಪ್ರಜಾಪ್ರಭುತ್ವದ 4 ನೇ ಅಂಗ ಎಂದು ಪರಿಗಣಿಸಲಾಗುವ ಪತ್ರಿಕೋದ್ಯಮವು ಯಾವುದೇ ಪಕ್ಷ ಪರ ನಿಲುವು ತಾಳದೇ ಜನಪರವಾಗಿರಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು,
ವಾರ್ತಾಸೌಧದಲ್ಲಿಂದು ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಇಲಾಖೆ, ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ಪತ್ರಿಕಾ ದಿನಾಚರಣೆ 2025 ಹಾಗೂ ನಿಜ ಸುದ್ದಿಯಾಗಿ ಸಮರ ಸಂವಾದವನ್ನು ಉದ್ಘಾಟಿಸಿ ಪತ್ರಕರ್ತರು ಉಚಿತ ಬಸ್ ಪಾಸ್ ಮತ್ತು ಪತ್ರಕರ್ತರ ಆರೋಗ್ಯ ಸಂಜೀವಿನಿ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸ್ವಾತಂತ್ರ್ಯ ಪೂರ್ವದ ಪತ್ರಿಕೋದ್ಯಮ ಮತ್ತು ಇಂದಿನ ಪತ್ರಿಕೋದ್ಯಮದ ಸುದ್ದಿ ಪ್ರಸಾರದಲ್ಲಿ ಸಾಕಷ್ಟು ಬದಲಾವಣೆಯಾಗಿದೆ, ಸ್ವಾತಂತ್ರ್ಯಪೂರ್ವದಲ್ಲಿ ಜನರನ್ನು ಎಚ್ಚಿರಿಸುವ, ಸ್ವಾತಂತ್ರ್ಯ ಹೋರಾಟದ ಪರವಾಗಿ ಪತ್ರಿಕೆಗಳು ಕೆಲಸ ಮಾಡಿದ್ದವು, ಸಂವಿಧಾನದ ಮೌಲ್ಯಗಳು ಮತ್ತು ಸತ್ಯವನ್ನು ಮರೆಮಾಚುವ ಕೆಲಸ ಆಗಬಾರದು,
ಪತ್ರಕರ್ತರು ನಿರ್ಭೀತಿಯಿಂದ ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸಬೇಕು, ಸುಳ್ಳು ಸುದ್ದಿ ಹರಡಿ ಮತ್ತೆ ಬದಲಾಯಿಸುವುದು ಇದ್ಯಾವ ರೀತಿಯ ಪತ್ರಿಕೋದ್ಯಮ ಎಂದು ಸಿಎಂ ಪ್ರಶ್ನಿಸಿದರು, ಯಾವುದೇ ಊಹಾಪೋಹಗಳಿಗೆ ಮಾಧ್ಯಮಗಳು ಆದ್ಯತೆ ನೀಡಬಾರದು, ಸುಳ್ಳು ಸುದ್ದಿ ಹರಡವುದು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ, ತನಿಖೆ ಮಾಡಿ ಸುದ್ದಿ ಮಾಡಿ ಎಂದು ಕಿವಿಮಾತು ಹೇಳಿದ ಸಿಎಂ ಸುಳ್ಳು ಮತ್ತು ದ್ವೇಷದ ಸುದ್ದಿ ಹರಡುವವರ ವಿರುದ್ಧ ಕಾನೂನು ತರಲು ಮುಂದಾಗಿದ್ದೇವೆ ಎಂದು ಸಿಎಂ ಇದೇ ವೇಳೆ ತಿಳಿಸಿದರು,
ದ್ವೇಷ ಹರಡುವ ಪ್ರಯತ್ನಕ್ಕೆ ಯಾವುದೇ ಸಹಾಯ ಮಾಡಬಾರದು, ದೇಶದ ಆಡಳಿತ ಹಿಡಿದಿರುವವರ ಬಗ್ಗೆಯಾಗಲಿ ನನ್ನ ಪರವಾಗಿಯೂ ಮಾತನಾಡಬಾರುದ, ಸತ್ಯವನ್ನೇ ಪತ್ರಕರ್ತರು ಜನರ ಮುಂದಿಡಬೇಕು,ಎಲ್ಲರಿಗೂ ಸಮಾನವಾದ ಅವಕಾಶ ಇರುವಂತಹ ಸಮಾಜ ನಿರ್ಮಾನವಾಗಬೇಕು, ಮಾನವೀಯ ಸಮಾಜಬೇಕು, ಪರಸ್ಪರ ಪ್ರೀತಿಸುವಂತಹ ಸಮಾಜಬೇಕು ಎಂದು ಸಿಎಂ ಪ್ರತಿಪಾದಿಸಿದರು,
ನಿಜ ಸುದ್ದಿಗಾಗಿ ಹೋರಾಟ ನಡೆಸುವ ಸಂದರ್ಭ ಬಂದಿದೆ, ಸುಳ್ಳು ಸುದ್ದಿಗಳು ಹೆಚ್ಚಾಗಿವೆ ಅಂಥ ತಾನೇ ಅರ್ಥ ಊಹಾ ಪತ್ರಿಕೋದ್ಯಮ ಪ್ರತಿಕೋದ್ಯಮಕ್ಕೆ ಮತ್ತು ಸಮಾಜಕ್ಕೂ ಅಪಾಯ ತಂದೊಡುತ್ತವೆ, ಮಾಧ್ಯಮ ಸ್ವತಂತ್ರವಾಗಿ ನಿರ್ಭೀತಿಯಿಂದ ಸುದ್ದಿ ಮಾಡಬೇಕು ಎನ್ನುವುದರಲ್ಲಿ ನಂಬಿಕೆ ಇಟ್ಟುಕೊಂಡಿರುವವನು ನಾನು ಎಂದು ಸಿಎಂ ಹೇಳಿದರು,

ಗೃಹ ಸಚಿವ ಪರಂ ಮನೆ ಪಕ್ಕದಲ್ಲೇ ಗನ್ ಹಿಡಿದು ನಿವೃತ್ತ ಅಧಿಕಾರಿಯ ರಂಪಾಟ!

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ನಡುರಸ್ತೆಯಲ್ಲಿ ಗನ್ ಹಿಡಿದು ಪೊಲೀಸ್ ಅಧಿಕಾರಿ ರಂಪಾಟ ಮಾಡಿದ್ದಾರೆ, ಆಸಾಮಿಯ ಹುಚ್ಚಾಟಕ್ಕೆ ಬೆಚ್ಚಿಬಿದ್ದಿದ್ದಾರೆ,
ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರ ನಿವಾಸದ ಪಕ್ಕದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಜಯಪ್ರಕಾಶ್ ಕೈಯಲ್ಲಿ ಗನ್ ಹಿಡಿದು ರಂಪಾಟ ನಡೆಸಿದ್ದಾರೆ,
ಸಚಿವರ ಮನೆಯ ಬಳಿ ಅಪಾಟ್ರ್ಮೆಂಟ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ, ಕಾಮಗಾರಿ ಹಿನ್ನೆಲೆಯಲ್ಲಿ ಲಾರಿಯೊಂದು ಗ್ರಾನೈಟ್ ಗಳನ್ನು ಹೊತ್ತು ತಂದಿದೆ, ಈ ವೇಳೆ ಮನೆ ಮುಂದೆ ಕಾರುಗಳು ಸಾಲಾಗಿ ನಿಂತಿದ್ದಕ್ಕೆ ಕೋಪಗೊಂಡು ಏಕಾಏಕಿ ಮನೆಯಿಂದ ಹೊರಗಡೆ ಬಂದ ಜಯಪ್ರಕಾಶ್ ಕೈಯಲ್ಲಿ ಗನ್ ಹಿಡಿದು ಅವಾಜ್ ಹಾಕಿದ್ದಾರೆ,
ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿದ್ದಾರೆ, ಗ್ರಾನೈಟ್ ಅನ್ಲೋಡ್ ಮಾಡಬೇಕು ಸರ್ ಎಂದು ಕಟ್ಟಡ ಕಾರ್ಮಿಕರು ತಿಳಿಸಿದ್ದಾರೆ, ಅವರಿಗೂ ಸಹ ಜಯಪ್ರಕಾಶ್ ಗನ್ ತೋರಿಸಿ ಬೆದರಿಸಿದ್ದಾರೆ,

ಲುಲುವಿನ ಸೀಸನ್ ಅಂತ್ಯದ ಮಾರಾಟ – ಫ್ಲಾಟ್ 50% ರಿಯಾಯಿತಿ

ಲುಲುವಿನ ಸೀಸನ್ ಅಂತ್ಯದ ಮಾರಾಟ – ಬೆಂಗಳೂರಿನ ಅತಿದೊಡ್ಡ ಶಾಪಿಂಗ್ ಬೊನಾನ್ಜಾ: ಜುಲೈ 3 ರಿಂದ 6 ರವರೆಗೆ ಫ್ಲಾಟ್ 50% ರಿಯಾಯಿತಿ

ಬೆಂಗಳೂರು, ಜೂನ್ 27: ಬಹುನಿರೀಕ್ಷಿತ ಎಂಡ್ ಆಫ್ ಸೀಸನ್ ಸೇಲ್ (EOSS) ಬೆಂಗಳೂರಿನ ಲುಲು ಸ್ಟೋರ್‌ಗಳಲ್ಲಿ ಆಗಮಿಸುತ್ತಿದ್ದು, ವರ್ಷದ ಅತಿದೊಡ್ಡ ರಿಯಾಯಿತಿಗಳನ್ನು ತರುತ್ತಿದೆ, ಜುಲೈ 3, 4, 5 ಮತ್ತು 6 ರಂದು ನಡೆಯಲಿದ್ದು, ದಿನಸಿ, ಎಲೆಕ್ಟ್ರಾನಿಕ್ಸ್, ಫ್ಯಾಷನ್ ಮತ್ತು ಇನ್ನೂ ಹೆಚ್ಚಿನವುಗಳನ್ನು ಒಳಗೊಂಡಂತೆ ಬಹು ವಿಭಾಗಗಳಲ್ಲಿ ವ್ಯಾಪಕ ಶ್ರೇಣಿಯ ಉತ್ಪನ್ನಗಳ ಮೇಲೆ ಫ್ಲಾಟ್ 50% ರಿಯಾಯಿತಿಯನ್ನು ಖರೀದಿದಾರರು ಆನಂದಿಸಬಹುದು. 300+ ಬ್ರ್ಯಾಂಡ್‌ಗಳು ಭಾಗವಹಿಸುವುದರಿಂದ, ಬೆಂಗಳೂರಿನ ಎಲ್ಲಾ ಖರೀದಿದಾರರಿಗೆ ಇದು ಅಂತಿಮ ಶಾಪಿಂಗ್ ಕಾರ್ಯಕ್ರಮವಾಗಿರುತ್ತದೆ.
ಈ ಮಾರಾಟವು ಲುಲು ಮಾಲ್, ರಾಜಾಜಿ ನಗರ ಲುಲು ಹೈಪರ್‌ಮಾರ್ಕೆಟ್, ವಿಆರ್ ಮಾಲ್ ವೈಟ್‌ಫೀಲ್ಡ್‌ನಲ್ಲಿ ಲುಲು ಡೈಲಿ, ಲುಲು ಕನೆಕ್ಟ್ ಮತ್ತು REO, ಫೋರಂ ಮಾಲ್ ಫಾಲ್ಕನ್ ಸಿಟಿಯಲ್ಲಿ ಲುಲು ಡೈಲಿ ಮತ್ತು M5 ಇಸಿಟಿ ಮಾಲ್ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಲುಲು ಡೈಲಿಯಲ್ಲಿ ವ್ಯಾಪಿಸಿದೆ, ಖರೀದಿದಾರರು ತಮ್ಮ ನೆಚ್ಚಿನ ವಸ್ತುಗಳನ್ನು ಅರ್ಧ ಬೆಲೆಯಲ್ಲಿ ಪಡೆಯುವ ಅವಕಾಶವನ್ನು ನೀಡುತ್ತದೆ. ನೀವು ಪ್ರೀಮಿಯಂ ಫ್ಯಾಷನ್, ಗ್ಯಾಜೆಟ್‌ಗಳು, ಗೃಹೋಪಯೋಗಿ ವಸ್ತುಗಳು ಅಥವಾ ಈವೆಂಟ್‌ನ ತಾಜಾ ದಿನಸಿ ವಸ್ತುಗಳನ್ನು ಹುಡುಕುತ್ತಿರಲಿ, ಲುಲು ಎಲ್ಲರಿಗೂ ಅಜೇಯ ಬೆಲೆಯಲ್ಲಿ ಏನನ್ನಾದರೂ ಹೊಂದಿದೆ.

ನಂದಿನಿ ಮಿಲ್ಕ್‌ ಪಾರ್ಲರ್‌ನಲ್ಲಿ ಹಾಲಿನ ಜತೆ ಆಲ್ಕೋಹಾಲ್‌ ಮಾರಾಟ!

ಮೈಸೂರು: ಜಿಲ್ಲೆಯ ನಂದಿನಿ ಪಾರ್ಲಲ್‌ನಲ್ಲಿ  ಹಾಲಿನ ಜತೆ ಆಲ್ಕೋಹಾಲ್ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಮದ್ಯ ಮಾರಾಟದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಇದಕ್ಕೆ ಭಾರಿ ಟೀಕೆ ವ್ಯಕ್ತವಾಗಿದೆ. ನಂಜನಗೂಡು ತಾಲೂಕಿನ ಹೆಡಿಯಾಲ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹೆಡಿಯಾಲ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿರುವ ನಂದಿನಿ ಹಾಲಿನ ಮಳಿಗೆಯಲ್ಲಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಆರೋಪ ಕೇಳಿಬಂದಿದೆ.

ರೂಟ್ ನಂಬರ್ 126 ಏಜೆನ್ಸಿ ಸಂಖ್ಯೆ 507ರ ನಂದಿನಿ ಪಾರ್ಲರ್‌ನಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ರಹಸ್ಯವಾಗಿ ಹಾಲಿನ ಪ್ಯಾಕೆಟ್ ನಡುವೆ ಮದ್ಯದ ಪ್ಯಾಕೆಟ್‌ಗಳನ್ನು ಗ್ರಾಹಕರಿಗೆ ನೀಡುವ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಮತ್ತು ಸಂಜೆ 7 ರಿಂದ ರಾತ್ರಿ 10 ಗಂಟೆವರೆಗೆ ಮದ್ಯ ಮಾರಾಟವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಗ್ರಾಮ ಪಂಚಾಯಿತಿ ಮುಂಭಾಗವೇ ಅಕ್ರಮ ನಡೆಯುತ್ತಿದ್ದರೂ ಅಧಿಕಾರಿಗಳ ಗಮನಕ್ಕೆ ಬಾರದಿರುವುದು ವಿಪರ್ಯಾಸ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಕಾಲ್ತುಳಿತ ಪ್ರಕರಣ-ಐಪಿಎಸ್ ಅಧಿಕಾರಿಗಳ ಅಮಾನತು ರದ್ದು

ಬೆಂಗಳೂರು: ಬೆಂಗಳೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಕಾರಣ ನೀಡಿ ಅಮಾನತು ಮಾಡಿದ್ದ ವಿಕಾಸ್ ಕುಮಾರ್ ಅವರ ಅಮಾನತು ಆದೇಶವನ್ನು ಕೇಂದ್ರ ಆಡಳಿತಾತ್ಮಕ ನ್ಯಾಯ ಮಂಡಳಿಯಿಂದ ರದ್ದು ಮಾಡಿದೆ,
ಆರ್ ಸಿಬಿ ಕಾಲ್ತುಳಿತ ವೇಳೆ ಉಂಟಾದ ಕಾಲ್ತುಳಿತದಲ್ಲಿ 11 ಜನ ಸಾವನ್ನಪ್ಪಿದ್ದರು, ಇದು ಕರ್ತವ್ಯ ಲೋಪದಿಂದಲೇ ಆಗಿರೋದು ಎಂದು ರಾಜ್ಯ ಸರ್ಕಾರವು ದಯಾನಂದ್, ವಿಕಾಸ್ ಕುಮಾರ್ ಮತ್ತು ಶೇಖರ್ ಎಂಬ ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಅಮಾನತು ಮಾಡಿತು,
ಇದಾಗಿ ಕೆಲ ದಿನಗಳ ಬಳಿಕ ರಾಜ್ಯ ಸರ್ಕಾರಕ್ಕೆ ಕೇಂದ್ರವು ಘಟನೆಯ ಸಮಗ್ರ ರಿಪೋರ್ಟ್ ನೀಡುವಂತೆ ಕೇಳಿತ್ತು,
ಅದರಂತೆ ಕಾಲ್ತುಳಿತ ದುರಂತಕ್ಕೆ ಪೊಲೀಸ್ ಭದ್ರತಾ ವೈಫಲ್ಯ ಹಾಗೂ ಸಂವಹನ ಕೊರತೆ ಪ್ರಮುಖ ಕಾರಣಗಳು, ಈ ಅಂಶಗಳನ್ನಾಧರಿಸಿಯೇ ಐಪಿಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ರಿಪೋರ್ಟ್ ಸಲ್ಲಿಸಲಾಗಿತ್ತು,
ಇದೀಗ ಈ ಬಗ್ಗೆ ಪರಿಶೀಲನೆ ನಡೆಸಿದ ಕೇಂದ್ರ ಆಡಳಿತಾತ್ಮಕ ನ್ಯಾಯ ಮಂಡಳಿಯು ವಿಕಾಸ್ ಕುಮಾರ್ ಅವರ ಅಮಾನತು ಆದೇಶವನ್ನು ಹಿಂಪಡೆಯಲಾಗಿದೆ ಎಂದು ತಿಳಿಸಿದೆ,

22 ದಿನಗಳಲ್ಲಿ ಬರೋಬ್ಬರಿ 10 ಮಿಲಿಯನ್ ವೀಕ್ಷಣೆ ಕಂಡಿರುವ ಹಾಡು ಬ್ಯಾಂಗಲ್ ಬಂಗಾರಿ

 

ಎಕ್ಕ ಸಿನಿಮಾದ ಬ್ಯಾಂಗಲ್ ಬಂಗಾರಿ ಹಾಡಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಈ ಗೀತೆ ಎಲ್ಲೆಡೆ ವೈರಲ್ ಆಗಿದ್ದು, ಅನೇಕ ಸೆಲೆಬ್ರಿಟಿಗಳು ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ನಾಯಕ ಯುವರಾಜ್ ಕುಮಾರ್ ಹಾಗೂ ನಾಯಕಿ ಸಂಜನಾ ಆನಂದ್ ಬ್ಯಾಂಗಲ್ ಬಂಗಾರಿ ಅಂತಾ ಕುಣಿದು ಕುಪ್ಪಳಿಸಿದ್ದರು.

ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದ ಹಾಡಿಗೆ ಆಂತೋನಿ ದಾಸ್ ಕಂಠ ಕುಣಿಸಿದ್ದರು. ಚರಣ್ ರಾಜ್ ಸಂಗೀತ, ಯುವ-ಸಂಜನಾ ಕುಣಿದ ಬಂಗಾಲ್ ಬಂಗಾರಿ ಗೀತೆ ಸಖತ್ ಹಿಟ್ ಕಂಡಿದೆ. ಕೇವಲ 22 ದಿನಗಳಲ್ಲಿ ಬರೋಬ್ಬರಿ 10 ಮಿಲಿಯನ್ ವೀಕ್ಷಣೆ ಕಂಡಿರುವ ಹಾಡು, ಟಾಪ್ ಮ್ಯೂಸಿಕ್ ವಿಡಿಯೋ ಕೆಟಗರಿಯಲ್ಲಿ 29ನೇ ಸ್ಥಾನ ಪಡೆದಿದೆ. ಅತಿ ಕಡಿಮೆ ಸಮಯದಲ್ಲಿ ಬ್ಯಾಂಗಲ್ ಬಂಗಾರಿ ದಾಖಲೆ ಬರೆದಿದ್ದು, ಚಿತ್ರತಂಡದ ಖುಷಿಗೆ ಕಾರಣವಾಗಿದೆ.

ನಾಯಕಿ ಸಂಜನಾ ಆನಂದ್ ಇಲ್ಲಿ ಬ್ಯಾಂಗಲ್ ಬಂಗಾರಿ ಆಗಿದ್ದಾರೆ. ಯವರಾಜ್ ಕುಮಾರ್ ಲೈಫ್ ಅಲ್ಲಿ ಬರೋ ಈ ಬಂಗಾರಿಗೆ ಬ್ಯಾಂಗಲ್ ತೊಡಿಸಿದಾಗ ಶುರು ಆಗೋ ಹಾಡು ಇದಾಗಿದೆ. ಸಂಭ್ರಮಾಚರಣೆಯ ಕ್ಷಣದ ಈ ಗೀತೆಗೆ ಮುರಳಿ ಮಾಸ್ಟರ್ ಒಳ್ಳೆ ಸ್ಟೆಪ್‌ಗಳನ್ನೆ ಕಂಪೋಸ್ ಮಾಡಿದ್ದಾರೆ

ಮುಗಿಯದ ಗೊಂದಲ- ರಾಜ್ಯಾಧ್ಯಕ್ಷರ ನೇಮಕ ವಿಳಂಬ?

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಗೆ ಭಿನ್ನಮತೀಯರ ಗುಂಪು ಪಟ್ಟು ಹಿಡಿದಿರುವ ಭಾರೀ ಗೊಂದಲ ಸೃಷ್ಟಿಯಾಗಿದೆ, ಹೈಕಮಾಂಡ್ ಗೂ ಸಹ ಮಣಿಯದ ನಾಯಕರು ಬಿ.ವೈ.ವಿಜಯೇಂದ್ರ ಪದಜ್ಯುತಿಗೆ ಒತ್ತಾಯಿಸಿದ್ದಾರೆನ್ನಲಾಗಿದ್ದು, ರಾಜ್ಯಾಧ್ಯಕ್ಷರ ಘೋಷಣೆ ವಿಳಂಬವಾಗುವ ಸಾಧ್ಯತೆಯಿದೆ,
ಬಿಜೆಪಿಯ ಎಲ್ಲ ಬಣಗಳಿಗೆ ಸೇರಿದ ನಾಯಕರಿಂದಲೂ ಸಹ ಅಭಿಪ್ರಾಯ ಸಂಗ್ರಹಿಸಲಾಗಿದ್ದು, ರಮೇಶ್ ಜಾರಕಿಹೊಳ್ಳಿ, ಅರವಿಂದ್ ಲಿಂಬಾವಳಿ, ಅರವಿಂದ್ ಬೆಲ್ಲದ್, ಕುಮಾರ್ ಬಂಗಾರಪ್ಪ ಸೇರಿದಂತೆ ಹಲವರು ವಿಜಯೇಂದ್ರ ಸಾರಥ್ಯಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ,
ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಸೋತು 60 ಸ್ಧಾನಕ್ಕೆ ಇಳಿದಿರುವ ಬಿಜೆಪಿಯನ್ನು ರಾಜ್ಯದಲ್ಲಿ ಸಂಘಟಿಸಬೇಕಿರುವ ಸಮಯದಲ್ಲಿ ಪಕ್ಷದಲ್ಲೇ ನಡೆಯುತ್ತಿರುವ ಒಳಜಗಳಗಳು ಹೈಕಮ್ಯಾಂಡ್ ಗೂ ಕೂಡ ತಲೆನೋವಾಗಿ ಪರಿಣಮಿಸಿದೆ,