ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM) ವ್ಯಾಪ್ತಿಯ ಎಲ್ಲಾ ಕಾರ್ಯ ಮತ್ತು ಪಾಲನಾ (O&M) ಉಪವಿಭಾಗಗಳಲ್ಲಿ 2026 ನೇ ಅಕ್ಟೋಬರ್ 17 ರಂದು ‘ಗ್ರಾಹಕ ಸಂವಾದ ಸಭೆ’ಯನ್ನು( Customer Interaction Meeting) ಆಯೋಜಿಸಿದೆ.
ಸಾರ್ವಜನಿಕರಿಗೆ ಸೂಕ್ತ ವಿದ್ಯುತ್ ಸೇವೆ ಒದಗಿಸುವ ಹಾಗೂ ಗ್ರಾಹಕರ ದೂರುಗಳು/ಸಮಸ್ಯೆಗಳನ್ನು ನಿವಾರಿಸುವ ಉದ್ದೇಶದಿಂದ ಬೆಸ್ಕಾಂ ಪ್ರತಿ ತಿಂಗಳ ಮೂರನೇ ಶನಿವಾರದಂದು ಈ ಸಂವಾದ ಸಭೆಗಳನ್ನು ನಡೆಸುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ 2026 ನೇ ಅಕ್ಟೋಬರ್ 17 ರ ಶನಿವಾರ ಮಧ್ಯಾಹ್ನ 3:00 ರಿಂದ ಸಾಯಂಕಾಲ 5:30 ರವರೆಗೆ ಎಲ್ಲಾ ಉಪವಿಭಾಗೀಯ ಕಚೇರಿಗಳಲ್ಲಿ ಸಭೆ ನಡೆಯಲಿದೆ.
ವಿದ್ಯುತ್ ಪೂರೈಕೆ, ಬಿಲ್ಲಿಂಗ್, ನೂತನ ಸಂಪರ್ಕ ಹಾಗೂ ಇತರೆ ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿರುವ ಗ್ರಾಹಕರು ಈ ಸಭೆಯಲ್ಲಿ ನೇರವಾಗಿ ಪಾಲ್ಗೊಂಡು ಬೆಸ್ಕಾಂ ಅಧಿಕಾರಿಗಳೊಂದಿಗೆ ಮುಖಾಮುಖಿ ಚರ್ಚಿಸಿ, ತಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬಹುದಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕ ಬಾಂಧವರು ಈ ಅವಕಾಶವನ್ನು ಬಳಸಿಕೊಳ್ಳಬೇಕಾಗಿ ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

