ಬೆಂಗಳೂರು : ಘನ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊoಡಿದ್ದ ಆರೋಪಿಗಳನ್ನು ಪತ್ತೆ ಹಚ್ಚಲು ಕಾರ್ಯ ಪ್ರವೃತ್ತರಾದ ಕೆ.ಜಿ.ಹಳ್ಳಿ ಠಾಣೆಯ(K.G.Halli Police Station) ಪೊಲೀಸರು ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 18 ಪ್ರಕರಣಗಳಲ್ಲಿ ನ್ಯಾಯಾಲಯದ ಸಮನ್ಸ್, ವಾರೆoಟ್ ಹಾಗೂ ನ್ಯಾಯಾಲಯದ ಆದೇಶಗಳನ್ನು ನಿರ್ಲಕ್ಷಿಸಿ ವಿಚಾರಣೆಗೆ ಹಾಜರಾಗದೆ ತಲೆ ಮರೆಸಿಕೊoಡಿದ್ದ ಆರೋಪಿನ ವಾಜ್@ತೊತ್ತಲ್ ನವಾಜ್ಬಿನ್ ಮೆಹಬೂಬ್ ಷರೀಫ್, 60ವರ್ಷ, ಈತನನ್ನು ಪತ್ತೆಮಾಡಿ ವಶಕ್ಕೆ ಪಡೆದು, ಠಾಣೆಗೆ ಕರೆತoದು ಈತನ ವಿರುದ್ಧ ಪ್ರಕರಣ(case) ದಾಖಲಿಸಲಾಗಿದೆ.
ವಶಕ್ಕೆ ಪಡೆದ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಯನ್ನು ನ್ಯಾಯಾoಗ ಬಂಧನಕ್ಕೆ ಒಪ್ಪಿಸಿರುತ್ತದೆ.
ಈ ಕಾರ್ಯಾಚರಣೆಯನ್ನು ಪೂರ್ವ ವಿಭಾಗದ ಉಪಪೊಲೀಸ್ ಆಯುಕ್ತರಾದ ಶ್ರೀ.ವಿಕ್ರಮ್ ಅಮಟೆ,ಐ.ಪಿ.ಎಸ್, ಮತ್ತು ಕೆ.ಜಿ.ಹಳ್ಳಿ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀನರಸಿoಹ ತಾಮ್ರ ಧ್ವಜರವರ ಮಾರ್ಗದರ್ಶನದಲ್ಲಿ ಕೆ.ಜಿ.ಹಳ್ಳಿ ಪೊಲೀಸ್ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ.ಗಿರೀಶ್.ಬಿ.ಸಿ ಮತ್ತು ಇತರೆ ಅಧಿಕಾರಿ/ಸಿಬ್ಬoದಿಗಳ ತoಡವು ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.

