ಎ ಐ  ನಿಂದ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯಿಂದ ಜಗತ್ತು ವೇಗವಾಗಿ  ಬದಲಾಗುತ್ತಿದೆ – ಸಿ.ಎ ಡಾ. ವಿಷ್ಣು ಭರತ್

ಎಪಿಎಸ್ ವಿಜ್ಞಾನ ಮತ್ತು ವಾಣಿಜ್ಯ ವಸ್ತುಪ್ರದರ್ಶನದಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶನ
 
ವಿದ್ಯಾರ್ಥಿಗಳ ವಸ್ತುಪ್ರದರ್ಶನದಿಂದ ಆವಿಷ್ಕಾರ, ಸೃಜನಶೀಲತೆ ಮತ್ತು ಉದ್ಯಮಶೀಲತೆಗೆ ಪ್ರೋತ್ಸಾಹ – ಸಿಎ ಡಾ. ವಿಷ್ಣು ಭರತ್
ಬೆಂಗಳೂರು: ಎಪಿಎಸ್, ಪಿಯು ಮತ್ತು ಪದವಿ ಕಾಲೇಜಿನ ವತಿಯಿಂದ ಅನಂತ ಜ್ಞಾನ ಗಂಗೋತ್ರಿ ಕ್ಯಾಂಪಸ್‌ನಲ್ಲಿ(Anantha Jnana Gangothri Campus) ವಿಜ್ಞಾನ ಮತ್ತು ವಾಣಿಜ್ಯ ವಸ್ತು ಪ್ರದರ್ಶನ(Science and Commerce Exhibition) ನಡೆಯಿತು.
 ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಸೃಜನಶೀಲತೆ, ನಾವೀನ್ಯತೆ ಹಾಗೂ ಉದ್ಯಮಶೀಲತೆಯನ್ನು ಬೆಳೆಸುವ ಉದ್ದೇಶದಿಂದ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಎಪಿಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸಿ.ಎ ಡಾ. ವಿಷ್ಣು ಭರತ್ ಆಲಂಪಲ್ಲಿ  ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಜ್ಞಾನವೆಂದರೆ ಕೇವಲ ಪ್ರಯೋಗಾಲಯಕ್ಕೆ ಸೀಮಿತವಾದ ವಿಷಯವಲ್ಲ; ಅದು ನಮ್ಮ ದೈನಂದಿನ ಜೀವನದ ಪ್ರತಿಯೊಂದು ಹಂತದಲ್ಲೂ ಹಾಸುಹೊಕ್ಕಾಗಿದೆ. ಮೊಬೈಲ್ ಫೋನ್‌ನಿಂದ ಉಪಗ್ರಹದವರೆಗೆ, ಸಣ್ಣ ಯಂತ್ರಗಳಿಂದ ಹಿಡಿದು ಕೃತಕ ಬುದ್ಧಿಮತ್ತೆಯವರೆಗೆ ಎಲ್ಲವೂ ವಿಜ್ಞಾನದ ಕೊಡುಗೆಗಳೇ ಎಂದು ತಿಳಿಸಿದರು.
ಇಂದಿನ ಜಗತ್ತು ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯಿಂದ ವೇಗವಾಗಿ ಬದಲಾಗುತ್ತಿದೆ. ಎ ಐ  ಅನೇಕ ಕೆಲಸಗಳನ್ನು ಮಾಡಬಹುದಾದರೂ, ಮಾನವೀಯತೆ, ಮೌಲ್ಯಗಳು, ಕಲ್ಪನಾಶಕ್ತಿ ಮತ್ತು ನಾಯಕತ್ವದ ಗುಣಗಳು ಮನುಷ್ಯನ ವಿಶಿಷ್ಟ ಶಕ್ತಿಗಳಾಗಿ ಉಳಿಯಲಿವೆ ಎಂದು ತಿಳಿಸಿದರು.
ಅದೇ ರೀತಿ, ವಾಣಿಜ್ಯವೆಂದರೆ ಕೇವಲ ಲೆಕ್ಕಪತ್ರ ಮತ್ತು ಹಣಕಾಸಿನ ವ್ಯವಹಾರವಲ್ಲ. ಅದು ಉದ್ಯಮಶೀಲತೆ, ಆರ್ಥಿಕ ಜ್ಞಾನ, ನಿರ್ವಹಣಾ ಕೌಶಲ್ಯ ಹಾಗೂ ದೇಶದ ಅಭಿವೃದ್ಧಿಗೆ ಭದ್ರ ಬುನಾದಿಯಾಗಿದೆ ಎಂದು ವಿವರಿಸಿದರು.
ವಿಜ್ಞಾನ ಹೊಸ ಆವಿಷ್ಕಾರಗಳಿಗೆ ದಾರಿ ಮಾಡಿಕೊಟ್ಟರೆ, ವಾಣಿಜ್ಯ ಆ ಆವಿಷ್ಕಾರಗಳನ್ನು ಸಮಾಜಕ್ಕೆ ತಲುಪಿಸುವ ಶಕ್ತಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಕುತೂಹಲ ಸೃಜನಶೀಲತೆ ಆತ್ಮವಿಶ್ವಾಸ ಈ  ಮೂರು ಪ್ರಮುಖ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ವಿದ್ಯಾರ್ಥಿಗಳು ದೊಡ್ಡ ಕನಸುಗಳನ್ನು ಕಾಣಬೇಕು, ಪ್ರಶ್ನೆಗಳನ್ನು ಕೇಳಬೇಕು, ಪ್ರಯೋಗಗಳನ್ನು ಮಾಡಬೇಕು, ತಪ್ಪುಗಳಿಂದ ಪಾಠ ಕಲಿಯಬೇಕು ಮತ್ತು ಹೊಸ ಆವಿಷ್ಕಾರಗಳಿಗೆ ಮುಂದಾಗಬೇಕು ಎಂದು ಪ್ರೇರೇಪಿಸಿದರು.
ವಿದ್ಯಾರ್ಥಿಗಳು ಕೇವಲ ಉದ್ಯೋಗ ಹುಡುಕುವವರಾಗದೆ, ಉದ್ಯೋಗ ಸೃಷ್ಟಿಸುವವರಾಗಬೇಕು. ಕೇವಲ ಜ್ಞಾನ ಪಡೆಯುವವರಾಗದೆ, ಹೊಸ ಜ್ಞಾನವನ್ನು ಸೃಷ್ಟಿಸುವವರಾಗಬೇಕು ಎಂದು ಕರೆ ನೀಡಿದರು.
ಪ್ರದರ್ಶನದಲ್ಲಿ ಬಹುಮಾನ ಗೆದ್ದವರನ್ನು ಮಾತ್ರವಲ್ಲದೆ, ಆಸಕ್ತಿಯಿಂದ ಭಾಗವಹಿಸಿ ಪ್ರಯತ್ನಿಸಿದ ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ಪ್ರೋತ್ಸಾಹಿಸಬೇಕು. ಏಕೆಂದರೆ ಪ್ರತಿಯೊಂದು ದೊಡ್ಡ ಸಾಧನೆಯ ಹಿಂದೆ ಅನೇಕ ಸಣ್ಣ ಪ್ರಯತ್ನಗಳಿರುತ್ತವೆ ಎಂದು ಹೇಳಿದರು.
 ಎಪಿಎಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ  ಎ. ಪ್ರಕಾಶ್, ಖಜಾಂಚಿ  ಎಸ್. ಅಖಿಲೇಶ್ ಬಾಬು, ಉಪಾಧ್ಯಕ್ಷ  ವಿಜಯ ಭಾಸ್ಕರ್, ಜಂಟಿ ಕಾರ್ಯದರ್ಶಿ  ಎ. ರಾಮಪ್ರಸಾದ್ ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷ  ಎ. ಮುರಳಿ ಉಪಸ್ಥಿತರಿದ್ದರು.

Hot this week

ಸಾರ್ವಜನಿಕ ಸೇವೆಯಲ್ಲಿ ಜನಸಾಮಾನ್ಯರ ಸಮಸ್ಯೆಗಳಿಗೆ ಮೊದಲ ಆದ್ಯತೆ ನೀಡಿ

ಸಾರ್ವಜನಿಕ ಸೇವೆಯಲ್ಲಿ ಜನಸಾಮಾನ್ಯರ ಸಮಸ್ಯೆಗಳಿಗೆ ಮೊದಲ ಆದ್ಯತೆ ನೀಡಿ: ನೂತನ ಐಪಿಎಸ್...

ಸೊಲ್ಲಾಪುರ ನಗರದ 52 ನಗರಗಳಲ್ಲಿ ನಕಲಿ ಆಧಾರ್ ಕಾರ್ಡ್, ನಕಲಿ ನೋಟರಿ

ಸೊಲ್ಲಾಪುರದಲ್ಲಿ ‘ಡಾಕ್ಯುಮೆಂಟ್ ಜಿಹಾದ್’ ಮೂಲಕ 1,500 ಕ್ಕೂ ಹೆಚ್ಚು ನಿವೇಶನಗಳನ್ನು (ಪ್ಲಾಟ್)...

ನ.27ಕ್ಕೆ ಮಿತ್ರರಕ್ಷಕ ಚಿತ್ರ ರಾಜ್ಯಾದ್ಯಂತ  ಬಿಡುಗಡೆಯಾಗುತ್ತಿದೆ

ನೀತು ಫಿಲಂ(Neetu Film) ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗಿರುವ  ಮಿತ್ರರಕ್ಷಕ(Mitrarakshaka) ನವೆಂಬರ್ 27ಕ್ಕೆ...

ಪುಸ್ತಕದ ಪರಿಚಯ – ಕನ್ನಡ ಕಿಟ್

ಕನ್ನಡ ಕಿಟ್ (Kannada Kit) ಪೋಷಕರು ಮತ್ತು ಕನ್ನಡ ಶಿಕ್ಷಕರಿಗಾಗಿ ಇರುವ...

Topics

ಸಾರ್ವಜನಿಕ ಸೇವೆಯಲ್ಲಿ ಜನಸಾಮಾನ್ಯರ ಸಮಸ್ಯೆಗಳಿಗೆ ಮೊದಲ ಆದ್ಯತೆ ನೀಡಿ

ಸಾರ್ವಜನಿಕ ಸೇವೆಯಲ್ಲಿ ಜನಸಾಮಾನ್ಯರ ಸಮಸ್ಯೆಗಳಿಗೆ ಮೊದಲ ಆದ್ಯತೆ ನೀಡಿ: ನೂತನ ಐಪಿಎಸ್...

ಸೊಲ್ಲಾಪುರ ನಗರದ 52 ನಗರಗಳಲ್ಲಿ ನಕಲಿ ಆಧಾರ್ ಕಾರ್ಡ್, ನಕಲಿ ನೋಟರಿ

ಸೊಲ್ಲಾಪುರದಲ್ಲಿ ‘ಡಾಕ್ಯುಮೆಂಟ್ ಜಿಹಾದ್’ ಮೂಲಕ 1,500 ಕ್ಕೂ ಹೆಚ್ಚು ನಿವೇಶನಗಳನ್ನು (ಪ್ಲಾಟ್)...

ನ.27ಕ್ಕೆ ಮಿತ್ರರಕ್ಷಕ ಚಿತ್ರ ರಾಜ್ಯಾದ್ಯಂತ  ಬಿಡುಗಡೆಯಾಗುತ್ತಿದೆ

ನೀತು ಫಿಲಂ(Neetu Film) ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗಿರುವ  ಮಿತ್ರರಕ್ಷಕ(Mitrarakshaka) ನವೆಂಬರ್ 27ಕ್ಕೆ...

ಪುಸ್ತಕದ ಪರಿಚಯ – ಕನ್ನಡ ಕಿಟ್

ಕನ್ನಡ ಕಿಟ್ (Kannada Kit) ಪೋಷಕರು ಮತ್ತು ಕನ್ನಡ ಶಿಕ್ಷಕರಿಗಾಗಿ ಇರುವ...

ಅಂಕಣಕಾರ್ತಿ, ಲೇಖಕಿ ಮಾಧುರಿ ದೇಶಪಾಂಡೆ ಅವರಿಗೆ ‘ಸಾಹಿತ್ಯ ರತ್ನ’ ಪ್ರಶಸ್ತಿ ಪ್ರದಾನ

ಬೆಂಗಳೂರು: ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ(Sree Krishna Raja)...

ಶಿಕ್ಷಣ ತಜ್ಞೆ ಪದ್ಮಾವತಿ ಕೆ.ವಿ. ಅವರಿಗೆ ‘ಟೀಚರ್ಸ್ ಟ್ರೋವ್–2026’ ಪ್ರಶಸ್ತಿ

ಬೆಂಗಳೂರು: ಕಾಡುಗೋಡಿಯ ಜನನಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಪದ್ಮಾವತಿ...

ವೈಭವ್ ಸೂರ್ಯವಂಶಿ ಅಬ್ಬರಕ್ಕೆ ಕ್ರಿಕೆಟ್ ದಾಖಲೆಗಳೇ ಪುಡಿಪುಡಿ: ಕೇವಲ 28 ಎಸೆತಗಳಲ್ಲಿ ಶತಕ, 53 ಎಸೆತಗಳಲ್ಲಿ 204 ರನ್!

ದೋಹಾ: ಭಾರತೀಯ ಕ್ರಿಕೆಟ್‌ನ ಯುವ ಪ್ರತಿಭೆ ವೈಭವ್ ಸೂರ್ಯವಂಶಿ(Vaibhav Suryavamsi) ಮತ್ತೊಮ್ಮೆ...

Related Articles