ಕುಮಾರಿ ಅಂಜಲಿ ಅಂಬಿಗೇರ ಕೊಲೆ ಆರೋಪಿ ಗಿರೀಶ್‌ ಸಾವಂತ್‌ನಿಗೆ ಘನ ನ್ಯಾಯಾಲಯವು ಶಿಕ್ಷೆ ವಿಧಿಸಿರುತ್ತದೆ
ಸಿಐಡಿ ಘಟಕದಲ್ಲಿ ತನಿಖೆಗೆ ಒಳಪಟ್ಟ ಹುಬ್ಬಳ್ಳಿ, ಬೆಂಡಿಗೇರಿ ಪೊಲೀಸ್ ಠಾಣೆ ಮೊ.ನಂ: 47/2024ರಲ್ಲಿ ಕುಮಾರಿ ಅಂಜಲಿ ಅಂಬಿಗೇರ ರವರ ಕೊಲೆ ಹಂತಕ ಗಿರೀಶ್ ಸಾವಂತನಿಗೆ ಘನ ನ್ಯಾಲಯದಿಂದ ಶಿಕ್ಷೆ ವಿಧಿಸಿರುತ್ತದೆ.
 ಬೆಂಗಳೂರು: ದಿನಾಂಕ:15/05/2024ರಂದು ಬೆಳಿಗ್ಗೆ ಸುಮಾರು 4:30 ಗಂಟೆಗೆ ಆರೋಪಿತನು ಹುಬ್ಬಳ್ಳಿ ಗೋಕುಲ್ ರಸ್ತೆ ಬಸ್ ನಿಲ್ದಾಣದಿಂದ(Gokul Road Bus Station) ಆಟೋ ನಂ. ಕೆಎ-63-1013 ರಲ್ಲಿ ವೀರಾಪುರ ಓಣಿಗೆ ಪ್ರಯಾಣಿಸಿ, ಬೆಳಗಿನ ಜಾವ 5:10 ಗಂಟೆ ಸುಮಾರಿಗೆ ಅಂಜಲಿ ಅಂಬಿಗೇರ (ಮೃತೆ) ರವರ ಮನೆಯ ಬಳಿ ಹೋಗಿ ಬಾಗಿಲನ್ನು ತಟ್ಟಿರುತ್ತಾನೆ. ಆ ಸಮಯದಲ್ಲಿ ಮೃತೆಯ ತಂಗಿ ಕು. ಯಶೋಧ ರವರು ಬಾಗಿಲನ್ನು ತೆರೆದಾಗ ಒಮ್ಮೆಲೆ ಮನೆಯ ಒಳಗೆ ನುಗ್ಗಿದ ಆರೋಪಿತನು ತಾನು ಅಂಜಲಿಯನ್ನು ಪ್ರೀತಿಸುತ್ತಿದ್ದು, ಆಕೆಯನ್ನು ಮದುವೆ ಮಾಡಿಕೊಡಿ ಎಂದು ಗಂಗಮ್ಮ ಎಂ ಅಂಬಿಗೇರ್ (ಅಂಜಲಿ ಅಂಬಿಗೇರ ರವರ ಅಜ್ಜಿ) ರವರಿಗೆ ಕೇಳಿದ್ದು, ಆ ಸಮಯದಲ್ಲಿ ನಿದ್ದೆಯಿಂದ ಎಚ್ಚರಗೊಂಡ ಕು. ಅಂಜಲಿ ಅಂಬಿಗೇರ ಈಕೆಯು ಆರೋಪಿತನನ್ನು ತಾನು ಮದುವೆಯಾಗುವುದಿಲ್ಲವೆಂದು ನಿರಾಕರಿಸಿರುತ್ತಾಳೆ. ಇದರಿಂದ ರೊಚ್ಚಿಗೆದ್ದ ಆರೋಪಿ ಅಂಜಲಿಯೊಂದಿಗೆ ಜಗಳ ಮಾಡಿದ್ದು, ಮದುವೆಯಾಗೋಣ ಬಾ ಎಂದು ಮತ್ತೆ ಕರೆದರೆ ಅದಕ್ಕೆ ಅಂಜಲಿಯು ಪುನಃ ಆರೋಪಿತನನ್ನು ಮದುವೆಯಾಗಲು ನಿರಾಕರಿಸಿದ್ದು, ಆ ಸಮಯದಲ್ಲಿ ಇಬ್ಬರಿಗೂ ಮಾತಿನ ಚಕಮಕಿ ನಡೆದು, ಆರೋಪಿ ಗಿರೀಶ್ ಸಾವಂತ್ @ ವಿಶ್ವ ಈತನು ಈ ಮೊದಲೇ ನಿರ್ಧರಿಸಿದಂತೆ, ತನ್ನ ಪ್ಯಾಂಟಿನ ಹಿಂಬಂದಿಯಲ್ಲಿ ಸಿಕ್ಕಿಸಿಕೊಂಡಿದ್ದ ಚಾಕುವನ್ನು ತೆಗೆದುಕೊಂಡು, ಪ್ರತ್ಯಕ್ಷ ಸಾಕ್ಷಿದಾರರಾದ ಕು. ಯಶೋಧ (ಅಂಜಲಿ ತಂಗಿ), ಪೂಜಾ (ತಂಗಿ), ಗಂಗಮ್ಮ (ಅಜ್ಜಿ) ಮತ್ತು ಸೈಯದಬಿ (ನೆರೆಹೊರೆಯವರು) ರವರ ಸಮ್ಮುಖದಲ್ಲಿ ಅಂಜಲಿಯ ಕುತ್ತಿಗೆ, ಪಕ್ಕೆ, ಹೊಟ್ಟೆ ಹಾಗೂ ದೇಹದ ಇತರೆ ಭಾಗಗಳಿಗೆ ಚುಚ್ಚಿ ಕೊಲೆ ಮಾಡಿ, ಓಡಿ ಹೋಗಿರುತ್ತಾನೆ.
ಮೃತ ಅಂಜಲಿ ಅಂಬಿಗೇರ ಈಕೆಯನ್ನು ಕೊಲೆ ಮಾಡಿದ ಆರೋಪಿ ಗಿರೀಶ್ ಸಾವಂತ್ @ ವಿಶ್ವ ಈತನ ವಿರುದ್ಧ ಕಲಂ: 451, 302, 201 ಭಾ.ದಂ.ಸಂ. ರೀತ್ಯಾ ಸ್ಥಳೀಯ ಹುಬ್ಬಳ್ಳಿ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಹುಬ್ಬಳ್ಳಿ ನಗರದ ವೀರಾಪುರ ಓಣಿ ಜನನಿಬಿಡ ಪ್ರದೇಶವಾಗಿದ್ದು, ಅತೀ ಜನಸಂದಣಿ ಸೇರುವ ಓಣಿಯಾಗಿದ್ದು, ಆಡು ಹಗಲೇ ನೇರವಾಗಿ ಮನೆಗೆ ಬಂದು ಅಂಜಲಿ ಅಂಬಿಗೇರಳ ಕೊಲೆ ಮಾಡಿರುವುದರ ಪ್ರಕರಣವನ್ನು ಸರ್ಕಾರವು ಗಂಭೀರ ಪ್ರಕರಣವೆಂದು ಪ್ರಕರಣದ ಸೂಕ್ಷ್ಮತೆಯನ್ನು ಅರಿತು ಹೆಚ್ಚಿನ ತನಿಖೆಗಾಗಿ ಸಿಐಡಿಗೆ ವರ್ಗಾವಣೆ ಮಾಡಿರುತ್ತದೆ.
ಸದರಿ ಪ್ರಕರಣವನ್ನು ದಿನಾಂಕ:21/05/2024ರಂದು ಸಿ.ಐ.ಡಿ. ಘಟಕಕ್ಕೆ ವರ್ಗಾಯಿಸಿದ್ದು, ಸಿಐಡಿಯ ಹೆಚ್ &ಬಿ ವಿಭಾಗ ಎಸ್.ಪಿ., ಶ್ರೀ ಎನ್. ವೆಂಕಟೇಶ್, ಐ.ಜಿ.ಪಿ., ಶ್ರೀ ವೈ.ಎಸ್. ರವಿಕುಮಾರ್ ಐ.ಪಿ.ಎಸ್. ಹಾಗೂ ಎ.ಡಿ.ಜಿ.ಪಿ., ಶ್ರೀ ಬಿಜಯ್ ಕುಮಾರ್ ಸಿಂಹ, ಐ.ಪಿ.ಎಸ್. ರವರ ಮಾರ್ಗದರ್ಶನದಲ್ಲಿ ಶ್ರೀ ಉಮೇಶ್, ಡಿವೈ.ಎಸ್.ಪಿ ರವರು ಈ ಪ್ರಕರಣದ ಸಮಗ್ರ ತನಿಖೆಯನ್ನು ಕೈಗೊಂಡು, ಆರೋಪಿ ಗಿರೀಶ್ ಸಾವಂತ್ @ ವಿಶ್ವ ಈತನ ವಿರುದ್ದ ಘನ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ದಿನಾಂಕ:21/08/2024ರಂದು ಸಲ್ಲಿಸಿರುತ್ತಾರೆ. ಸದರಿ ಪ್ರಕರಣವು ಘನ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹುಬ್ಬಳ್ಳಿ ಇಲ್ಲಿ ಎಸ್.ಸಿ.ನಂ: 5080/2024ರಲ್ಲಿ ವಿಚಾರಣೆ ನಡೆದಿರುತ್ತದೆ.
ಈ ಪ್ರಕರಣದಲ್ಲಿ ಸಿಐಡಿ ಘಟಕದ ಕಾನೂನು ಸಲೆಹೆಗಾರರಾದ ಶ್ರೀ ಆರ್.ಕೆ.ಕಾಳೆರವರು ಸರ್ಕಾರದ ಪರವಾಗಿ ಅಭಿಯೋಜಕರಾಗಿ ಘನ ನ್ಯಾಲಯಯದಲ್ಲಿ ವಾದವನ್ನು ಮಂಡಿಸಿರುತ್ತಾರೆ. ಈ ಪ್ರಕರಣದ ಪ್ರತೀ ವಿಚಾರಣೆಯ ದಿನಾಂಕಗಳಂದು ಸಾಕ್ಷೀದಾರರ ಹಾಜರಾತಿ ಹಾಗೂ ಸಾಕ್ಷಿ ನುಡಿಯುವುದರ ಬಗ್ಗೆ ಗಮನಹರಿಸಲು ಸದರಿರವರನ್ನು ವಿಶೇಷ ಅಭಿಯೋಜನಾ ಅಧಿಕಾರಿಯನ್ನಾಗಿ ಸಿಐಡಿಯಲ್ಲಿ ನೇಮಿಸಲಾಗಿತ್ತು.
ದಿನಾಂಕ:21.11.2026ರಂದು ಘನ ನ್ಯಾಯಾಲಯವು ನಡೆದ ವಾದ ಮತ್ತ ಪ್ರತಿವಾದವನ್ನು ಪರಿಗಣಿಸಿ, ಆರೋಪಿತನಾದ ಗಿರೀಶ್ ಸಾವಂತ್ @ ವಿಶ್ವ ಈತನನ್ನು ನಡೆದ ಕೃತ್ಯಕ್ಕೆ ಅಪರಾಧಿ ಎಂದು ತಿರ್ಮಾನಿಸಿ, ದಿನಾಂಕ: 25.11.2026 ರಂದು ಶಿಕ್ಷೆಯನ್ನು ಪ್ರಕಟಿಸಲಾಗುತ್ತದೆ.
ಆರೋಪಿ ವಿವರ:- ಗಿರೀಶ್ ಸಾವಂತ್ @ ವಿಶ್ವ ಬಿನ್ ಲೇಟ್ ಸುಭಾಷ್, 21 ವರ್ಷ, ವೀರಾಪುರ ಓಣಿ, ಹುಬ್ಬಳ್ಳಿ ನಗರ, ಹುಬ್ಬಳ್ಳಿ.
ಈತನು ಇನ್ನೊಂದು ಮಹಿಳೆಗೆ ಚಾಕು ಇರಿತದ ಪ್ರಕರಣದಲ್ಲಿ ಆರೋಪಿಯಾಗಿದ್ದು, ಪ್ರಕರಣವು ದಾವಣಗೆರೆ ಜಿಲ್ಲೆ, ರೈಲ್ವೆ ಪೊಲೀಸ್ ಠಾಣೆ ಮೊ.ನಂ 15/2024 ಕಲಂ: 354(ಸಿ), 307 ಐಪಿಸಿ ರಲ್ಲಿ ಪ್ರಕರಣ ದಾಖಲಾಗಿದ್ದು, ಹಾಲಿ ಘನ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತದೆ.
ಪ್ರಸ್ತುತ ಈ ಆರೋಪಿತನು ಹುಬ್ಬಳ್ಳಿ ಧಾರವಾಡ ಜಿಲ್ಲೆ ಹುಬ್ಬಳ್ಳಿ ಉಪ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುತ್ತಾನೆ ಎಂದು ಡಾ. ಪ್ರಣವ ಮಹಾಂತಿ, ಐಪಿಎಸ್, ಪೊಲೀಸ್ ಮಹಾನಿರ್ದೇಶಕರು, ಸಿ.ಐ.ಡಿ., ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧಗಳು, ಬೆಂಗಳೂರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Hot this week

ಬೆಂಗಳೂರು: ರಾಜಾಜಿನಗರದಲ್ಲಿರುವ ಬೆಂಗಳೂರು ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ (GTTC)...

ಬೆಂಗಳೂರು: ದಿನಾಂಕ 18-11-2026 ರಂದು ರಾತ್ರಿ 9.00 ಗಂಟೆಗೆ ಪಬ್ಲಿಕ್ ಟಿವಿ...

ಬೆಂಗಳೂರು: ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ 'ಅಟಲ್ ವಯೋ...

ಮುಂಬೈ ಪೊಲೀಸರ ಕಾರ್ಯಾಚರಣೆ: ಕುರ್ಳಾ ದಾಳಿ ಪ್ರಕರಣ: 7 ಬಾಂಗ್ಲಾದೇಶಿ ಪ್ರಜೆಗಳ ಬಂಧನ

ಮುಂಬೈ: ಮಹಾರಾಷ್ಟ್ರದ ಮುಂಬೈ (Mumbai) ನಗರದಲ್ಲಿ ಇತ್ತೀಚೆಗೆ ನಡೆದ ಹಲವು ಅಪರಾಧ...

Topics

ಬೆಂಗಳೂರು: ರಾಜಾಜಿನಗರದಲ್ಲಿರುವ ಬೆಂಗಳೂರು ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ (GTTC)...

ಬೆಂಗಳೂರು: ದಿನಾಂಕ 18-11-2026 ರಂದು ರಾತ್ರಿ 9.00 ಗಂಟೆಗೆ ಪಬ್ಲಿಕ್ ಟಿವಿ...

ಬೆಂಗಳೂರು: ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ 'ಅಟಲ್ ವಯೋ...

ಮುಂಬೈ ಪೊಲೀಸರ ಕಾರ್ಯಾಚರಣೆ: ಕುರ್ಳಾ ದಾಳಿ ಪ್ರಕರಣ: 7 ಬಾಂಗ್ಲಾದೇಶಿ ಪ್ರಜೆಗಳ ಬಂಧನ

ಮುಂಬೈ: ಮಹಾರಾಷ್ಟ್ರದ ಮುಂಬೈ (Mumbai) ನಗರದಲ್ಲಿ ಇತ್ತೀಚೆಗೆ ನಡೆದ ಹಲವು ಅಪರಾಧ...

BIG NEWS : ಅಪ್ರಾಪ್ತರನ್ನು ವಶಕ್ಕೆ ಪಡೆದ ಮುಂಬೈ ಪೊಲೀಸರು!

ಮುಂಬೈನಲ್ಲಿ (Mumbai) ಸಾರ್ವಜನಿಕ ಉದ್ಯಾನವನದಲ್ಲಿ ಯುವ ಜೋಡಿಗೆ ಕಿರುಕುಳ, ಹಲ್ಲೆ ಆರೋಪ;...

ರಾಯಚೂರಿನಲ್ಲಿ ಪತ್ರಕರ್ತರ 41ನೇ ರಾಜ್ಯಮಟ್ಟದ ಸಮ್ಮೇಳನ ಯಶಸ್ವಿಯಾಗಿ ನಡೆಸೋಣ: ಸಚಿವ ಡಾ. ಅಜಯ್ ಸಿಂಗ್

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ವತಿಯಿಂದ ರಾಯಚೂರಿನಲ್ಲಿ ನಡೆಯಲಿರುವ...

Related Articles