ಬೆಂಗಳೂರು: ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆಯು(Finance Department, Government of Karnataka) 8 ವರ್ಷಗಳ ಅವಧಿಯ ಒಟ್ಟು ರೂ.2,000 ಕೋಟಿ ಮೌಲ್ಯದ ಸರ್ಕಾರಿ ಭದ್ರತಾ ಪತ್ರಗಳ (Bonds) ಮಾರಾಟಕ್ಕೆ ಚಂದಾದಾರಿಕೆಯನ್ನು ಆಹ್ವಾನಿಸಿದೆ.
ಈ ಭದ್ರತಾ ಪತ್ರಗಳ ಹಂಚಿಕೆಯು ಮುಂಬೈನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಪಿಡಿಒ) ಮುಖಾಂತರ ಹರಾಜು ಮೂಲಕ ನಡೆಯಲಿದ್ದು, ನವೆಂಬರ್ 17, 2026 ರಂದು ಹರಾಜು ಪ್ರಕ್ರಿಯೆ ಜರುಗಲಿದೆ.
ಚಿಲ್ಲರೆ ಹೂಡಿಕೆದಾರರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ವತಿಯಿಂದ ‘ಸ್ಪರ್ಧಾತ್ಮಕವಲ್ಲದ ಹರಾಜು ಸೌಲಭ್ಯ’ವನ್ನು (Non-competitive bidding facility) ಪರಿಚಯಿಸಲಾಗಿದೆ. ಈ ಯೋಜನೆಯಡಿ ಮಾರಾಟಕ್ಕೆ ಅಧಿಸೂಚಿಸಲಾದ ಒಟ್ಟು ಮೊತ್ತದ ಗರಿಷ್ಠ ಶೇ. 10 ರವರೆಗಿನ ಸರ್ಕಾರಿ ಭದ್ರತಾ ಪತ್ರಗಳನ್ನು ಅರ್ಹ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗುವುದು.
ಆಸಕ್ತರು ಅಧಿಸೂಚನೆಯ ಪ್ರತಿಗಳು ಹಾಗೂ ಅರ್ಜಿ ನಮೂನೆಗಳನ್ನು ಬೆಂಗಳೂರಿನ ರಿಸರ್ವ್ ಬ್ಯಾಂಕ್ (ಪಿಡಿಒ) ಕಛೇರಿಯಿಂದ ಪಡೆಯಬಹುದಾಗಿದೆ.
ಮಾದರಿ ಟೆಂಡರ್ ನಮೂನೆಗಳು ಮತ್ತು ಸ್ಪರ್ಧಾತ್ಮಕವಲ್ಲದ ಹರಾಜು ಸೌಲಭ್ಯದ ಪರಿಷ್ಕೃತ ಯೋಜನೆಯ ಸಂಪೂರ್ಣ ವಿವರಗಳು ಭಾರತೀಯ ರಿಸರ್ವ್ ಬ್ಯಾಂಕ್‌ನ ಅಧಿಕೃತ ಜಾಲತಾಣವಾದ www.rbi.org.in ನಲ್ಲಿ ಲಭ್ಯವಿದೆ ಎಂದು ಆರ್ಥಿಕ ಇಲಾಖೆಯ (ಆಯವ್ಯಯ ಮತ್ತು ಸಂಪನ್ಮೂಲ) ಸರ್ಕಾರದ ಕಾರ್ಯದರ್ಶಿ ಡಾ. ಎಂ.ಟಿ. ರೇಜು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Hot this week

ಬೆಂಗಳೂರು: ಚಿತ್ರರಂಗಾಸಕ್ತ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಯ...

ಬೆಂಗಳೂರು: ಸಂವಿಧಾನದ ಆಶಯದಂತೆ ಸರ್ಕಾರ ಆಡಳಿತ ನಡೆಸಬೇಕು ಹಾಗೂ ಇಡೀ ಸಮಾಜ...

ಕಂಟೋನ್ಮೆಂಟ್ ಪಶು ವೈದ್ಯಕೀಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸಚಿವರಾದ ಪುಟ್ಟರಂಗಶೆಟ್ಟಿ ಭೇಟಿ, ಪರಿಶೀಲನೆ

ಬೆಂಗಳೂರು: ಬೆಂಗಳೂರಿನ(Bangalore) ಕಂಟೋನ್ಮೆಂಟ್‌ನಲ್ಲಿರುವ ಪಶು ವೈದ್ಯಕೀಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ  ಪಶುಸಂಗೋಪನೆ...

ಮೆಟ್ರೋ ಯೋಜನೆಗಳ ವೆಚ್ಚದಲ್ಲಿ ಕೇಂದ್ರ-ರಾಜ್ಯಗಳ ನಡುವೆ ಸಮಾನ ಹೊಣೆಗಾರಿಕೆ ಅಗತ್ಯ: ಪ್ರಧಾನಿ ಮೋದಿಗೆ ಸಿಎಂ ಡಿ.ಕೆ. ಶಿವಕುಮಾರ್ ಮನವಿ

ಬೆಂಗಳೂರು: ಮೆಟ್ರೋ ರೈಲು ಯೋಜನೆಗಳ ಅನುಷ್ಠಾನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ...

Topics

ಬೆಂಗಳೂರು: ಚಿತ್ರರಂಗಾಸಕ್ತ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಯ...

ಬೆಂಗಳೂರು: ಸಂವಿಧಾನದ ಆಶಯದಂತೆ ಸರ್ಕಾರ ಆಡಳಿತ ನಡೆಸಬೇಕು ಹಾಗೂ ಇಡೀ ಸಮಾಜ...

ಕಂಟೋನ್ಮೆಂಟ್ ಪಶು ವೈದ್ಯಕೀಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸಚಿವರಾದ ಪುಟ್ಟರಂಗಶೆಟ್ಟಿ ಭೇಟಿ, ಪರಿಶೀಲನೆ

ಬೆಂಗಳೂರು: ಬೆಂಗಳೂರಿನ(Bangalore) ಕಂಟೋನ್ಮೆಂಟ್‌ನಲ್ಲಿರುವ ಪಶು ವೈದ್ಯಕೀಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ  ಪಶುಸಂಗೋಪನೆ...

ಬೆಂಗಳೂರಿಗೆ ಆಗಮಿಸಿದ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ

ಬೆಂಗಳೂರು: ಬೆಂಗಳೂರು(Bangalore) ಮತ್ತು ಮೈಸೂರಿನ(Mysore) ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಗಿ ಭಾರತದ ಗೌರವಾನ್ವಿತ...

ಗಮನ ಸೆಳೆದ ‘ಮೋದಿ ಕಹಿ ನಹೀ ಜಾಯೇಗಾ’ ಫಲಕಗಳು

ಬೆಂಗಳೂರು: ರಾಜ್ಯಕ್ಕೆ ಇಂದು ಭೇಟಿ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರನ್ನು...

ಪಿಂಕ್ ಲೈನ್‌ಗೆ ಪ್ರಧಾನಿ ಮೋದಿ ಚಾಲನೆ, ಸಿಎಂ ಡಿ.ಕೆ. ಶಿ. ಜೊತೆ ಮೆಟ್ರೋ ಪ್ರಯಾಣ

ಬೆಂಗಳೂರು: ಸಿಲಿಕಾನ್ ಸಿಟಿ (Silicon City Benglauru)_ ಬೆಂಗಳೂರಿನ ಸಾರ್ವಜನಿಕ ಸಾರಿಗೆ...

Related Articles