ಬೆಂಗಳೂರು: 2026ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು(Valmiki Jayanthi) ಈ ಮೊದಲು 2026ರ ಅಕ್ಟೋಬರ್ 25ರ ಭಾನುವಾರದಂದು ಘೋಷಿಸಲಾಗಿತ್ತು. ಆದರೆ, ಪ್ರಸ್ತುತ ಸೀಗಿ ಹುಣ್ಣಿಮೆ ದಿನವಾದ 2026ರ ಅಕ್ಟೋಬರ್ 26, ಸೋಮವಾರದಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲು ನಿರ್ಧರಿಸಲಾಗಿದ್ದು, ಅಂದು ಸಾರ್ವತ್ರಿಕ ರಜೆಯನ್ನಾಗಿ(Public Holiday) ಸರ್ಕಾರ ಆದೇಶ ಹೊರಡಿಸಿದೆ.
ಈ ರಜೆಯನ್ನು ‘ನೆಗೋಷಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್, 1881’ರ (1881ರ ಅಧಿನಿಯಮ ಸಂಖ್ಯೆ: 26) ಸೆಕ್ಷನ್ 25ರ ಅಡಿಯಲ್ಲೂ ಸಾರ್ವತ್ರಿಕ ರಜೆಯನ್ನಾಗಿ ಘೋಷಿಸಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ರಾಜ್ಯ ಶಿಷ್ಟಾಚಾರ) ಸರ್ಕಾರದ ಆಧೀನ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

