ಇಂಜಿನಿಯರ್ ಎಂದರೆ ಕಟ್ಟಡ ಕಟ್ಟುವವರಲ್ಲ, ಭವಿಷ್ಯ ರೂಪಿಸುವ ಶಿಲ್ಪಿಗಳು: ಸಚಿವ ಚಲುವರಾಯಸ್ವಾಮಿ

ತಂತ್ರಜ್ಞಾನ ಸ್ಮಾರ್ಟ್ ಆಗಿರದೆ, ಸುಸ್ಥಿರವಾಗಿರಬೇಕು: ಸರ್ ಎಂ.ವಿ. ಅವರನ್ನು ಇಂದಿಗೂ ಮೀರಿಸಲು ಸಾಧ್ಯವಿಲ್ಲ: ಆಧುನಿಕ ತಂತ್ರಜ್ಞಾನ ಬಳಸಿ ಕ್ರಾಂತಿ ಮಾಡಿ
 
ಸಮಾಜದ ಒಳಿತಿಗೆ ತಂತ್ರಜ್ಞಾನ ಬಳಕೆಯಾಗಲಿ; ನವೀನತೆಯ ಮೂಲಕ ಸುಸ್ಥಿರ ಕರ್ನಾಟಕ ನಿರ್ಮಿಸಲು: ಸಚಿವರ ಕರೆ
ಮೈಸೂರು:  ಇಂಜಿನಿಯರ್(Engineer) ಎಂದರೆ ಕೇವಲ ಕಟ್ಟಡ ಕಟ್ಟುವ ವ್ಯಕ್ತಿಯಲ್ಲ, ಇಂಜಿನಿಯರ್ ಎಂದರೆ ದೇಶದ ಭವಿಷ್ಯ ಕಟ್ಟುವ ಶಿಲ್ಪಿ. ಸುಭದ್ರ ಭವಿಷ್ಯ ನಿರ್ಮಾಣದಲ್ಲಿ( In Building a secure future)
ಇಂಜಿನಿಯರ್‌ಗಳ ಸಮರ್ಪಣಾ ಮನೋಭಾವ ಅತ್ಯಂತ ಮಹತ್ವದ್ದು ಎಂದು ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ(N.Chaluvarayaswamy) ಅಭಿಪ್ರಾಯಪಟ್ಟರು.
ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ (ಇಂಡಿಯಾ) ವತಿಯಿಂದ ನಗರದ ಜೆ.ಎಲ್.ಬಿ.ರಸ್ತೆಯಲ್ಲಿರುವ ಸರ್ ಎಂ.ವಿ.ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ 41ನೇ ‘ನ್ಯಾಷನಲ್ ಕನ್ವೆನ್ಷನ್ ಆಫ್ ಸಿವಿಲ್ ಇಂಜಿನಿಯರಿಂಗ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಜ್ಞಾನವನ್ನು ಗಳಿಸುವುದು ಎಷ್ಟು ಮುಖ್ಯವೋ, ಅದನ್ನು ಸಮಾಜದ ಹಿತಕ್ಕಾಗಿ ಸದ್ಬಳಕೆ ಮಾಡಿಕೊಳ್ಳುವುದು ಅಷ್ಟೇ ಪ್ರಮುಖ. ನಾವು ನಿತ್ಯವೂ ಸಂಚರಿಸುವ ರಸ್ತೆ, ಸೇತುವೆ, ಮನೆ ಬಾಗಿಲಿಗೆ ಬರುವ ನೀರು, ವಿದ್ಯುತ್ ಹಾಗೂ ಅಂಗೈಯಲ್ಲಿರುವ ಮೊಬೈಲ್ ಪ್ರಪಂಚ—ಇವೆಲ್ಲವೂ ನಿತ್ಯಜೀವನದ ಸಹಜ ಭಾಗವೆನಿಸಬಹುದು. ಆದರೆ, ಈ ಪ್ರತಿಯೊಂದು ಸೌಲಭ್ಯದ ಹಿಂದೆಯೂ ಸಾವಿರಾರು ಇಂಜಿನಿಯರ್‌ಗಳ ಜ್ಞಾನ, ಕಠಿಣ ಪರಿಶ್ರಮ, ಯೋಜನೆ ಹಾಗೂ ಹೊಣೆಗಾರಿಕೆ ಅಡಗಿದೆ” ಎಂದರು.
ಜಗತ್ತು ಇಂದು ತೀವ್ರ ಗತಿಯಲ್ಲಿ ಬದಲಾಗುತ್ತಿದ್ದು, ಕೃತಕ ಬುದ್ಧಿಮತ್ತೆ (AI), ರೊಬೊಟಿಕ್ಸ್, ಸೆಮಿಕಂಡಕ್ಟರ್, ಹಸಿರು ಇಂಧನ, ಎಲೆಕ್ಟ್ರಿಕ್ ವಾಹನಗಳು ಹಾಗೂ ಬಾಹ್ಯಾಕಾಶ ತಂತ್ರಜ್ಞಾನಗಳು ನಮ್ಮ ಬದುಕಿನ ದಿಕ್ಕನ್ನೇ ಬದಲಿಸುತ್ತಿವೆ. ಈ ನೂತನ ತಾಂತ್ರಿಕ ಯುಗದಲ್ಲಿ ಕರ್ನಾಟಕದ ಪಾತ್ರ ಅಗ್ರಗಣ್ಯವಾಗಿದೆ. ರಾಜ್ಯದ ಪ್ರತಿಯೊಂದು ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮಗಳಲ್ಲಿ ಅಪಾರ ಪ್ರತಿಭೆ, ಹೊಸ ಆಲೋಚನೆ ಹಾಗೂ ಕನಸುಗಳಿವೆ. ಅವುಗಳಿಗೆ ಆಧುನಿಕ ತಂತ್ರಜ್ಞಾನದ ಬಲ ತುಂಬುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಪ್ರತಿಪಾದಿಸಿದರು.
ಅಭಿವೃದ್ಧಿ ಎಂದರೆ ಕೇವಲ ಬೃಹತ್ ಯೋಜನೆಗಳಷ್ಟೇ ಅಲ್ಲ, ರೈತನ ಜಮೀನಿಗೆ ಸಕಾಲದಲ್ಲಿ ನೀರು ಒದಗಿಸುವುದು, ವಿದ್ಯಾರ್ಥಿಗೆ ಗುಣಮಟ್ಟದ ಡಿಜಿಟಲ್ ಶಿಕ್ಷಣ ನೀಡುವುದು, ಗ್ರಾಮಕ್ಕೆ ಸುಸಜ್ಜಿತ ರಸ್ತೆ ಸಂಪರ್ಕ ಕಲ್ಪಿಸುವುದು ಹಾಗೂ ಯುವಜನತೆಗೆ ಕೌಶಲ ಆಧಾರಿತ ಉದ್ಯೋಗಾವಕಾಶ ಕಲ್ಪಿಸುವುದೇ ನೈಜ ಪ್ರಗತಿ. ಇಂತಹ ಪ್ರತಿಯೊಂದು ಜನಪರ ಅಭಿವೃದ್ಧಿಯ ಹೆಜ್ಜೆಯಲ್ಲೂ ಇಂಜಿನಿಯರ್‌ಗಳ ಕೊಡುಗೆ ಅನನ್ಯವಾಗಿದೆ ಎಂದರು.
“ನಮ್ಮ ತಂತ್ರಜ್ಞಾನವು ಕೇವಲ ‘ಸ್ಮಾರ್ಟ್’ ಆಗಿರದೆ ‘ಸುಸ್ಥಿರ’ವಾಗಿರಬೇಕು. ಯುವಜನರು ಕೇವಲ ಉದ್ಯೋಗ ಅರಸದೆ ಉದ್ಯೋಗ ಸೃಷ್ಟಿಕರ್ತರಾಗಬೇಕು, ಸಮಸ್ಯೆಗಳ ಬಗ್ಗೆ ಮಾತನಾಡುವುದಕ್ಕಿಂತ ಪರಿಹಾರ ಕಂಡುಕೊಳ್ಳುವತ್ತ ಚಿಂತನೆ ನಡೆಸಬೇಕು” ಎಂದು ಸಲಹೆ ನೀಡಿದರು.
“ಸರ್ ಎಂ.ವಿಶ್ವೇಶ್ವರಯ್ಯ ಅವರ ದೂರದೃಷ್ಟಿ ಮತ್ತು ಕಾರ್ಯಕ್ಷಮತೆ ಸದಾ ಆದರ್ಶಪ್ರಾಯ. ತಂತ್ರಜ್ಞಾನವೇ ಇಲ್ಲದ ಆ ಕಾಲದಲ್ಲೇ ಅವರು ನಿರ್ಮಿಸಿದ ಅದ್ಭುತ ಯೋಜನೆಗಳನ್ನು ಇಂದಿಗೂ ಯಾರೂ ಮೀರಿಸಲು ಸಾಧ್ಯವಾಗಿಲ್ಲ. ಪ್ರಸ್ತುತ ಲಭ್ಯವಿರುವ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಇನ್ನಷ್ಟು ಕ್ರಾಂತಿಕಾರಿ ಕಾರ್ಯಗಳು ಸಾಕಾರಗೊಳ್ಳಬೇಕಿದೆ. ಜ್ಞಾನ, ತಂತ್ರಜ್ಞಾನ ಮತ್ತು ನವೀನತೆಯ ಮೂಲಕ ಜನಸೇವೆ ಮಾಡುತ್ತಾ ಬಲಿಷ್ಠ, ಆಧುನಿಕ ಹಾಗೂ ಸುಸ್ಥಿರ ಕರ್ನಾಟಕವನ್ನು ಒಟ್ಟಾಗಿ ಕಟ್ಟೋಣ” ಎಂದು ಕರೆ ನೀಡಿದರು.
ಈ ವೇಳೆ ದೇಶಕ್ಕೆ ಕೊಡುಗೆ ನೀಡಿದ ಹಿರಿಯ ಇಂಜಿನಿಯರ್‌ಗಳಿಗೆ ಸಚಿವರು ಸನ್ಮಾನಿಸಿ, ಅಭಿನಂದಿಸಿದರು. ಜೊತೆಗೆ, ಇಂಜಿನಿಯರ್ ಮನೀಶ್ ಪಾಂಡೆ ಅವರಿಗೆ “ಯಂಗ್ ಇಂಜಿನಿಯರ್” ಅವಾರ್ಡ್ ನೀಡಿ ಸನ್ಮಾನಿಸಿದರು.
ವೇದಿಕೆ ಕಾರ್ಯಕ್ರಮದ ಬಳಿಕ “ಸುಸ್ಥಿರ ಭಾರತ ನಿರ್ಮಾಣಕ್ಕೆ ಸಿವಿಲ್ ಇಂಜಿನಿಯರ್‌ಗಳ ಕೊಡುಗೆ – 2047” ವಿಷಯ ಕುರಿತು ಇಂಜಿನಿಯರ್‌ಗಳೊಂದಿಗೆ ಸಚಿವರು ಸಂವಾದ ನಡೆಸಿದರು.
ಕಾರ್ಯಕ್ರಮದಲ್ಲಿ ಸಿವಿಡಿಬಿ ಚೇರ್ಮನ್ ಪಿ.ಸೂರ್ಯಪ್ರಕಾಶ್, ಸಂಸ್ಥೆಯ ಪದಾಧಿಕಾರಿಗಳಾದ ಸೀತಾರಾಮ್, ನಾಗರಾಜ್, ಎಚ್.ಎಸ್.ಸುರೇಶ್ ಬಾಬು, ನಂಜಯ್ಯ, ನಿವೃತ್ತ ಮುಖ್ಯ ಇಂಜಿನಿಯರ್ ಮಹದೇವ್, ಅಖಿಲ ಭಾರತ ಇಂಜಿನಿಯರ್ ಸಂಸ್ಥೆಯ ಮಾಜಿ ಅಧ್ಯಕ್ಷ ವಿ.ಬಿ.ಸಿಂಗ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Hot this week

ಅರಾಧನಾ ಮಿಶ್ರಾ ‘ಮೋನಾ’ಗೆ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ಸ್ಥಾನ; ಅಜಯ್ ರೈ ಬದಲಾವಣೆ

ಲಖನೌ: ಕಾಂಗ್ರೆಸ್ ಪಕ್ಷವು ಉತ್ತರ ಪ್ರದೇಶ ಘಟಕದಲ್ಲಿ ಮಹತ್ವದ ಸಂಘಟನಾ ಬದಲಾವಣೆ...

ಉಕ್ರೇನ್‌ಗೆ ನಾಲ್ಕು ಕದನ ವಿರಾಮ ಪ್ರಸ್ತಾವನೆಗಳು: ಭಾರತದ ಪ್ರಸ್ತಾವನೆ ಅತ್ಯಂತ ವ್ಯಾಪಕ

ಕೀವ್: ರಷ್ಯಾ–ಉಕ್ರೇನ್(Rassia Ukrane) ಯುದ್ಧಕ್ಕೆ ಕದನ ವಿರಾಮದ ಸಾಧ್ಯತೆ ಕುರಿತು ಉಕ್ರೇನ್‌ಗೆ...

ಡೈವ್‌ಆಗರ್ ಕಡಲತೀರದಲ್ಲಿ 8 ವಿದ್ಯಾರ್ಥಿಗಳು ಮುಳುಗಿ ಸಾವು; ಪುಣೆಯ ಕೋಚಿಂಗ್ ಅಕಾಡೆಮಿ ಸೀಲ್

ಪುಣೆ: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಡೈವ್‌ಆಗರ್ ಕಡಲತೀರದಲ್ಲಿ(Daivagar Beach) ಪ್ರವಾಸಕ್ಕೆ ತೆರಳಿದ್ದ...

ಬಾಕ್ಸ್ ಆಫೀಸ್‌ನಲ್ಲಿ ‘ದೃಶ್ಯಂ 3’ ಅಬ್ಬರ: ₹95 ಕೋಟಿ ಗಡಿ ದಾಟಿದ ಅಜಯ್ ದೇವಗನ್ ಚಿತ್ರ

ಮುಂಬೈ: ಬಾಲಿವುಡ್ ನಟ ಅಜಯ್ ದೇವಗನ್(Actor Ajay Devagan) ಅಭಿನಯದ ಬಹುನಿರೀಕ್ಷಿತ...

ದೆಹಲಿ ಹೋಟೆಲ್‌ನಲ್ಲಿ ನೆಸ್ಲೆ ಇಂಡಿಯಾದ ಡೈರಿ ವೈಟನರ್ ಮಾರಾಟಕ್ಕೆ FSSAI ನಿಷೇಧ

ನವದೆಹಲಿ: ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಮಾನದಂಡಗಳನ್ನು ಉಲ್ಲಂಘಿಸಿರುವ ಆರೋಪದ ಹಿನ್ನೆಲೆಯಲ್ಲಿ,...

Topics

ಖಾರಿಫ್ ಬರ ಪರಿಸ್ಥಿತಿ ಅಧ್ಯಯನ: ರಾಜ್ಯಕ್ಕೆ ಕೇಂದ್ರದ ಅಧಿಕಾರಿಗಳ ತಂಡ ಭೇಟಿ

ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ಖಾರಿಫ್(Kaarif) ಬರದ ಪರಿಸ್ಥಿತಿಯನ್ನು ಪ್ರತ್ಯಕ್ಷವಾಗಿ ಪರಿಶೀಲಿಸಲು ಮತ್ತು...

ಶಾಸಕರ ಭವನದ ಮುಂಭಾಗದಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಬಳಿ ತಪೋವನ ಅಭಿವೃದ್ಧಿಗೆ ನಿರ್ಧಾರ

ಬೆಂಗಳೂರು: ವಿಧಾನಸೌಧದ(Vidhanasoudha) ಬಳಿ ಶಾಸಕರ ಭವನದ ಮುಂಭಾಗದಲ್ಲಿ ವಾಲ್ಮೀಕಿ ಪ್ರತಿಮೆ(Valmeeki Statue) ಇರುವ...

Related Articles