ರಾಜ್ಯದಲ್ಲೇ ಪ್ರಥಮ: ಪಶ್ಚಿಮ ಘಟ್ಟದ 10 ಜಿಲ್ಲೆಗಳನ್ನು ಪ್ರತಿನಿಧಿಸುವ ವಿಶೇಷ ಪೋಸ್ಟ್ ಕಾರ್ಡ್ ಸರಣಿ ಬಿಡುಗಡೆ

ಬೆಂಗಳೂರು: ಕರ್ನಾಟಕ ರಾಜ್ಯ(Karnataka State) ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿಯ ವತಿಯಿಂದ, ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಪಶ್ಚಿಮ ಘಟ್ಟಗಳ ವ್ಯಾಪ್ತಿಗೆ ಒಳಪಡುವ 10 ಜಿಲ್ಲೆಗಳ ನೈಸರ್ಗಿಕ ಹಾಗೂ ಜೀವವೈವಿಧ್ಯದ ಹಿರಿಮೆಯನ್ನು ಬಿಂಬಿಸುವ(Depicting the greatness of nature and biodiversity) ವಿಶೇಷ ಪೋಸ್ಟ್ ಕಾರ್ಡ್‌ಗಳ ಸರಣಿಯನ್ನು ಬಿಡುಗಡೆ ಮಾಡಲಾಯಿತು.
ಅಕ್ಟೋಬರ್ 02ರಂದು ವಿಧಾನಸೌಧದ ಪೂರ್ವದ್ವಾರದ ಭವ್ಯ ಮೆಟ್ಟಿಲುಗಳ ಮೇಲೆ ಆಯೋಜಿಸಲಾಗಿದ್ದ  ಕಾರ್ಯಕ್ರಮದಲ್ಲಿ ಮಾನ್ಯ ಅರಣ್ಯ, ಪರಿಸರ ಮತ್ತು ಜೀವಪರಿಸ್ಥಿತಿ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ ಅವರು ಈ ಅಪರೂಪದ ಪೋಸ್ಟ್ ಕಾರ್ಡ್‌ಗಳನ್ನು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಪಶ್ಚಿಮ ಘಟ್ಟಗಳ ಸಂರಕ್ಷಣೆ ಮತ್ತು ಅಲ್ಲಿನ ಅಪರೂಪದ ಜೀವವೈವಿಧ್ಯದ ಕುರಿತು ಸಾರ್ವಜನಿಕರಲ್ಲಿ, ವಿಶೇಷವಾಗಿ ಯುವ ಪೀಳಿಗೆಯಲ್ಲಿ ಅರಿವು ಮೂಡಿಸಲು ಈ ಪೋಸ್ಟ್ ಕಾರ್ಡ್‌ಗಳು ಮಹತ್ವದ ಪಾತ್ರ ವಹಿಸಲಿವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿಯ ಅಧ್ಯಕ್ಷರು ಹಾಗೂ ರಾಜ್ಯ ಸಚಿವ ದರ್ಜೆಯ ಶ್ರೀ ಮೊಹಮ್ಮದ್ ತಬ್ರೇಜ್ ಆಲಂ ಶರೀಫ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಡಾ. ಮೀನಾಕ್ಷಿ ನೇಗಿ (ಅರಣ್ಯ ಪಡೆ ಮುಖ್ಯಸ್ಥರು) ಮತ್ತು ಶ್ರೀ ಕುಮಾರ್ ಪುಷ್ಕರ್ (ವನ್ಯಜೀವಿ ವಿಭಾಗ), ಇಂಡಿಯಾ ಪೋಸ್ಟ್‌ನ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಶ್ರೀಮತಿ ಸ್ವಾತಿ ಪಾಂಡೆ, ಹಾಗೂ ಡಬ್ಲ್ಯೂ.ಡಬ್ಲ್ಯೂ.ಎಫ್ (WWF) ಇಂಡಿಯಾದ ರಾಜ್ಯ ನಿರ್ದೇಶಕರು ಶ್ರೀ ರಾಹುಲ್ ಸುಂದರರಾಜನ್ ಉಪಸ್ಥಿತರಿದ್ದರು.

Hot this week

ಅರಾಧನಾ ಮಿಶ್ರಾ ‘ಮೋನಾ’ಗೆ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ಸ್ಥಾನ; ಅಜಯ್ ರೈ ಬದಲಾವಣೆ

ಲಖನೌ: ಕಾಂಗ್ರೆಸ್ ಪಕ್ಷವು ಉತ್ತರ ಪ್ರದೇಶ ಘಟಕದಲ್ಲಿ ಮಹತ್ವದ ಸಂಘಟನಾ ಬದಲಾವಣೆ...

ಉಕ್ರೇನ್‌ಗೆ ನಾಲ್ಕು ಕದನ ವಿರಾಮ ಪ್ರಸ್ತಾವನೆಗಳು: ಭಾರತದ ಪ್ರಸ್ತಾವನೆ ಅತ್ಯಂತ ವ್ಯಾಪಕ

ಕೀವ್: ರಷ್ಯಾ–ಉಕ್ರೇನ್(Rassia Ukrane) ಯುದ್ಧಕ್ಕೆ ಕದನ ವಿರಾಮದ ಸಾಧ್ಯತೆ ಕುರಿತು ಉಕ್ರೇನ್‌ಗೆ...

ಡೈವ್‌ಆಗರ್ ಕಡಲತೀರದಲ್ಲಿ 8 ವಿದ್ಯಾರ್ಥಿಗಳು ಮುಳುಗಿ ಸಾವು; ಪುಣೆಯ ಕೋಚಿಂಗ್ ಅಕಾಡೆಮಿ ಸೀಲ್

ಪುಣೆ: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಡೈವ್‌ಆಗರ್ ಕಡಲತೀರದಲ್ಲಿ(Daivagar Beach) ಪ್ರವಾಸಕ್ಕೆ ತೆರಳಿದ್ದ...

ಬಾಕ್ಸ್ ಆಫೀಸ್‌ನಲ್ಲಿ ‘ದೃಶ್ಯಂ 3’ ಅಬ್ಬರ: ₹95 ಕೋಟಿ ಗಡಿ ದಾಟಿದ ಅಜಯ್ ದೇವಗನ್ ಚಿತ್ರ

ಮುಂಬೈ: ಬಾಲಿವುಡ್ ನಟ ಅಜಯ್ ದೇವಗನ್(Actor Ajay Devagan) ಅಭಿನಯದ ಬಹುನಿರೀಕ್ಷಿತ...

ದೆಹಲಿ ಹೋಟೆಲ್‌ನಲ್ಲಿ ನೆಸ್ಲೆ ಇಂಡಿಯಾದ ಡೈರಿ ವೈಟನರ್ ಮಾರಾಟಕ್ಕೆ FSSAI ನಿಷೇಧ

ನವದೆಹಲಿ: ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಮಾನದಂಡಗಳನ್ನು ಉಲ್ಲಂಘಿಸಿರುವ ಆರೋಪದ ಹಿನ್ನೆಲೆಯಲ್ಲಿ,...

Topics

ಖಾರಿಫ್ ಬರ ಪರಿಸ್ಥಿತಿ ಅಧ್ಯಯನ: ರಾಜ್ಯಕ್ಕೆ ಕೇಂದ್ರದ ಅಧಿಕಾರಿಗಳ ತಂಡ ಭೇಟಿ

ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ಖಾರಿಫ್(Kaarif) ಬರದ ಪರಿಸ್ಥಿತಿಯನ್ನು ಪ್ರತ್ಯಕ್ಷವಾಗಿ ಪರಿಶೀಲಿಸಲು ಮತ್ತು...

ಶಾಸಕರ ಭವನದ ಮುಂಭಾಗದಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಬಳಿ ತಪೋವನ ಅಭಿವೃದ್ಧಿಗೆ ನಿರ್ಧಾರ

ಬೆಂಗಳೂರು: ವಿಧಾನಸೌಧದ(Vidhanasoudha) ಬಳಿ ಶಾಸಕರ ಭವನದ ಮುಂಭಾಗದಲ್ಲಿ ವಾಲ್ಮೀಕಿ ಪ್ರತಿಮೆ(Valmeeki Statue) ಇರುವ...

Related Articles