ಇಂಜಿನಿಯರ್‌ಗಳ ಗೌರವಾರ್ಥ “Er” ಶೀರ್ಷಿಕೆ ಬಳಕೆಗೆ ಕರ್ನಾಟಕ ಸರ್ಕಾರ ಅಧಿಕೃತ ಆದೇಶ: ಸೆ.15 “ಇಂಜಿನಿಯರ್ಸ್ ದಿನ” ಆಚರಣೆಗೆ ಅಧಿಕೃತ ಆದೇಶ

ಬೆಂಗಳೂರು: ರಾಜ್ಯದ ಅಭಿವೃದ್ಧಿ(State Development) ಹಾಗೂ ತಾಂತ್ರಿಕ ಪ್ರಗತಿಯಲ್ಲಿ(Technological Progress) ಅಭಿಯಂತರರ (ಇಂಜಿನಿಯರ್‌ಗಳು) ನಿಸ್ವಾರ್ಥ ಕೊಡುಗೆಯನ್ನು ಗೌರವಿಸುವ ಸಲುವಾಗಿ, ಕರ್ನಾಟಕ ಸರ್ಕಾರವು ಒಂದು ಐತಿಹಾಸಿಕ ತೀರ್ಮಾನವನ್ನು ಕೈಗೊಂಡಿದ್ದು, ಇನ್ಮುಂದೆ ರಾಜ್ಯದ ಇಂಜಿನಿಯರ್‌ಗಳು(Engineer) ತಮ್ಮ ಹೆಸರಿನ ಮುಂದೆ ಗೌರವ ಸೂಚಕವಾಗಿ “Er” (Engineer – ಅಭಿಯಂತರರು) ಎಂಬ ಶೀರ್ಷಿಕೆಯನ್ನು (Title) ಬಳಸಲು ಅಧಿಕೃತ ಅನುಮತಿ ನೀಡಿದೆ.
ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನವರ ಅಪ್ರತಿಮ ಸೇವೆ ಮತ್ತು ದೇಶಕ್ಕೆ ಅವರು ನೀಡಿರುವ ಕೊಡುಗೆಗಳನ್ನು ಸ್ಮರಿಸುವ ನಿಟ್ಟಿನಲ್ಲಿ, ಅವರ ಜನ್ಮದಿನವಾದ ಸೆಪ್ಟೆಂಬರ್ 15 ರಂದು ಪ್ರತಿವರ್ಷ ಅಧಿಕೃತವಾಗಿ “ಇಂಜಿನಿಯರ್ಸ್ ದಿನ”ವನ್ನಾಗಿ ಆಚರಿಸಲು ಹಾಗೂ ಇಂಜಿನಿಯರ್‌ಗಳ ಸೇವೆಯನ್ನು ಗುರುತಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು (ಸಿಆಸುಇ 144 ಎಸ್‌ಸಿಇ 2026, ದಿನಾಂಕ: 15.09.2026) ಸರ್ಕಾರಿ ಆದೇಶವನ್ನು ಹೊರಡಿಸಿದೆ.
 
ಸರ್ ಎಂ. ವಿಶ್ವೇಶ್ವರಯ್ಯನವರ ಅವಿಸ್ಮರಣೀಯ ಕೊಡುಗೆ:
ಮೈಸೂರು ರಾಜ್ಯದ 19ನೇ ದಿವಾನರಾಗಿ (1912-1918) ಸೇವೆ ಸಲ್ಲಿಸಿದ ಸರ್ ಎಂ. ವಿಶ್ವೇಶ್ವರಯ್ಯನವರು “ಕೈಗಾರಿಕೀಕರಣ ಇಲ್ಲವೇ ವಿನಾಶ” (Industrialize or Perish) ಎಂಬ ತತ್ವದ ಮೇಲೆ ನಾಡಿನ ಪ್ರಗತಿಗೆ ಭದ್ರ ಬುನಾದಿ ಹಾಕಿದ್ದರು. ನೀರಾವರಿ ಮತ್ತು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಕೃಷ್ಣರಾಜಸಾಗರ (KRS) ಅಣೆಕಟ್ಟು ನಿರ್ಮಾಣ, ಪ್ರವಾಹ ನಿಯಂತ್ರಣಕ್ಕೆ ಸ್ವಯಂಚಾಲಿತ ಫ್ಲಡ್ ಗೇಟ್‌ಗಳ ಅಳವಡಿಕೆ; ಕೈಗಾರಿಕಾ ಕ್ಷೇತ್ರದಲ್ಲಿ ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಮೈಸೂರು ಶ್ರೀಗಂಧದ ತೈಲ ಹಾಗೂ ಸಾಬೂನು ಕಾರ್ಖಾನೆ ಸ್ಥಾಪನೆ; ಶಿಕ್ಷಣ ಮತ್ತು ಹಣಕಾಸು ಕ್ಷೇತ್ರದಲ್ಲಿ ಮೈಸೂರು ವಿಶ್ವವಿದ್ಯಾನಿಲಯ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಯಂತಹ ಅಪಾರ ಕೊಡುಗೆಗಳನ್ನು ನೀಡಿದ್ದಾರೆ.
 
‘Er’ ಶೀರ್ಷಿಕೆಯ ಮಹತ್ವ:
ಸಮಾಜದ ಪ್ರಗತಿಯಲ್ಲಿ ಇಂಜಿನಿಯರ್‌ಗಳು ಕೇವಲ ಯಂತ್ರ ವಿನ್ಯಾಸಕರಷ್ಟೇ ಅಲ್ಲದೆ, ಮಾನವೀಯ ಸವಾಲುಗಳಿಗೆ ತಾಂತ್ರಿಕ ಪರಿಹಾರ ಕಂಡುಕೊಳ್ಳುವ ಮೂಲಕ ಭವಿಷ್ಯವನ್ನು ರೂಪಿಸುವ ಶಿಲ್ಪಿಗಳಾಗಿದ್ದಾರೆ. ಆದ್ದರಿಂದ, ವೈದ್ಯರಿಗೆ (Dr.) ಮತ್ತು ವಕೀಲರಿಗೆ (Adv.) ಇರುವಂತೆ, ಇಂಜಿನಿಯರ್‌ಗಳ ಜೀವಿತಾವಧಿಯ ಸೇವೆಯನ್ನು ಪ್ರತಿನಿಧಿಸಲು ಹಾಗೂ ಗೌರವಿಸಲು ಅವರ ಹೆಸರುಗಳ ಪೂರ್ವದಲ್ಲಿ “Er” ಎಂಬ ಶೀರ್ಷಿಕೆಯನ್ನು ಬಳಸಲು ಅವಕಾಶ ನೀಡಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿದೆ.

Hot this week

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ: ಪರಿಷ್ಕೃತ NCERT...

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ; MCC...

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ: ವಿದೇಶಿ ಹೂಡಿಕೆದಾರರ ಮಾರಾಟದ ಒತ್ತಡ

ಭಾರತೀಯ ಷೇರು ಮಾರುಕಟ್ಟೆಗಳು(Share Market) ಸತತ ಕುಸಿತದ ಒತ್ತಡಕ್ಕೆ ಸಿಲುಕಿದ್ದು, ಕಳೆದ...

ಹೆಜ್ಜೆಯಲ್ಲಿ ಶಾಸ್ತ್ರ, ಭಾವದಲ್ಲಿ ಭಕ್ತಿ: ‘ಸಮರ್ಪಣ್’ನಲ್ಲಿ ಶೀತಲ್ ಹೇಮಂತ್ ನೃತ್ಯ

ಅ. 3ರಂದು ವಿದುಷಿ ಶೀತಲ್ ಹೇಮಂತ್ ಅವರಿಂದ ವಿಶೇಷ ಭರತನಾಟ್ಯ ನೃತ್ಯ...

“ಚರಕ ಕಾರ್ಯಾಗಾರ”

157ನೇ ಗಾಂಧಿ ಜಯಂತಿ(157th Gandhi Jayanthi) ಅಂಗವಾಗಿ ಆರ್ಟ್ ಕಲ್ಚರಲ್ ಎಜುಕೇಶನಲ್ ...

Topics

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ: ಪರಿಷ್ಕೃತ NCERT...

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ; MCC...

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ: ವಿದೇಶಿ ಹೂಡಿಕೆದಾರರ ಮಾರಾಟದ ಒತ್ತಡ

ಭಾರತೀಯ ಷೇರು ಮಾರುಕಟ್ಟೆಗಳು(Share Market) ಸತತ ಕುಸಿತದ ಒತ್ತಡಕ್ಕೆ ಸಿಲುಕಿದ್ದು, ಕಳೆದ...

“ಚರಕ ಕಾರ್ಯಾಗಾರ”

157ನೇ ಗಾಂಧಿ ಜಯಂತಿ(157th Gandhi Jayanthi) ಅಂಗವಾಗಿ ಆರ್ಟ್ ಕಲ್ಚರಲ್ ಎಜುಕೇಶನಲ್ ...

ರಾಮರಸದಲ್ಲಿ ಆದಾಶರ್ಮಾ ದುರ್ಗಿ ರೋಲ್

ಗುರುದೇಶಪಾಂಡೆ ಒಡೆತನದ ’ಜಿ ಅಕಾಡೆಮಿ’ಯಲ್ಲಿ(Zee Academy) ನಟನೆ ಕಲಿತಿರುವ ಪ್ರತಿಭೆಗಳಿಗೆ ಅವಕಾಶ...

ಅಭಿನಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಸದಾ ಬ್ಯುಸಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Ex.CM.Siddaramayya) ಈಗ ನಟನೆಯಲ್ಲಿ(Acting) ತೊಡಗಿಕೊಂಡಿದ್ದಾರೆ. ಪತ್ರಕರ್ತರಾಗಿ...

ವಿ.ಕುಮಾರ್ ನಿರ್ದೇಶನದ ಹದಿನೆಂಟು ಎಕರೆ ಸಿನಿಮಾ ಲಕ್ಕಪ್ಪ

ಈ ಹಿಂದೆ ಗಾಯಿತ್ರಿ, ಪ್ರೀತಿಯ ಹುಚ್ಚ ಚಿತ್ರಗಳನ್ನು ನಿರ್ದೇಶಿಸಿದ್ದ ವಿ.ಕುಮಾರ್ (ರಾಘವ...

Related Articles