ಲೇಪಾಕ್ಷಿ (Lepakshi) ವೀರಭದ್ರ ದೇವಸ್ಥಾನದಲ್ಲಿ (Temple) ಒಂದು ರೋಚಕ ಐತಿಹಾಸಿಕ ಕತೆಯಿದೆ. ವಿಜಯನಗರದ ಸಾಮ್ರಾಜ್ಯವು ಮಹಾರಾಜ ಶ್ರೀಕೃಷ್ಣ ದೇವರಾಯರ ನಂತರ ಅವರ ತಮ್ಮ ರಾಜ ಅಚ್ಯುತ ದೇವರಾಯರ (Achuta Devaraya) ಆಡಳಿತದಲ್ಲಿತ್ತು. ಇವರ ಅಡಿಯಲ್ಲಿ ಉನ್ನತ ಅಧಿಕಾರಿಯಾಗಿ ವಿರೂಪಣ್ಣ ನಿಷ್ಠಾವಂತರಾಗಿ ಸೇವೆ ಸಲ್ಲಿಸುತಿದ್ದರು.
ವಿರೂಪಣ್ಣನು ಭವ್ಯವಾದ ಕಲ್ಯಾಣ ಮಂಟಪ ನಿರ್ಮಿಸುವ ಉಸ್ತುವಾರಿ ವಹಿಸಿಕೊಂಡಿದ್ದರು. ಆದರೆ ಹಣವನ್ನು ದುರುಪಯೋಗಪಡಿಸಿಕೊಳ್ಳ ಲಾಗುತ್ತಿದೆ ಎಂದು ಯಾರೋ ಹೇಳಿದ್ದನ್ನು ನಂಬಿದ ರಾಜ ಅಚ್ಯುತ ದೇವರಾಯನಿಗೆ ಕೋಪ ಬಂತು. ಅರಸನು ಅವನ ಕಣ್ಣು ಕೀಳಿಸುವ ಶಿಕ್ಷೆ ವಿಧಿಸಲು ವಿರೂಪಣ್ಣನನ್ನು ಕರೆತರುವಂತೆ ಭಟರನ್ನು ಅಟ್ಟಿದನು.
ವಿಷಯವರಿತ ಸ್ವಾಭಿಮಾನಿ ವಿರೂಪಣ್ಣನು ಅವರೊಟ್ಟಿಗೆ ಹೋಗಲೊಪ್ಪದೆ ರಾಜ ಅಚ್ಯುತ ದೇವರಾಯನಿಗೆ ಬೇಕಾಗಿದ್ದ ತನ್ನ ಎರಡೂ ಕಣ್ಣುಗಳನ್ನು ತಾನೇ ಕಿತ್ತು ರೋಷದಿಂದ ಬಿಸಾಡಿದನು. ಅವನು ಬಿಸಾಡಿದ ರಭಸಕ್ಕೆ ಅದು ದೇವಾಲಯದ ಗೋಡೆಗೆ ತಾಗಿ ಅಲ್ಲಿ ಎರಡು ರಂದ್ರಗಳಾಗಿ ಅದರಿಂದ ರಕ್ತ ಹರಿಯಿತು.ಆ ರಂದ್ರಗಳು ಹಾಗೂ ಹರಿದ ರಕ್ತದ ಕಲೆಗಳು ಗೋಡೆಯ ಮೇಲೆ ಇನ್ನೂ ಇವೆ.ಇದೇ ಮುಂದೆ ಶಾಪವಾಗಿ ಪರಿಣಮಿಸಿ ವಿಜಯನಗರದ ಪತನಕ್ಕೆ ಕಾರಣವಾಯಿತು ಎಂದು ಕೂಡ ಹೇಳುತ್ತಾರೆ. ಗೋಡೆಗೆ ಇರುವ ಎರಡು ರಂದ್ರಗಳು ಹಾಗೂ ರಕ್ತದ ಕಲೆಗಳಂತೂ ಮೂಕ ಸಾಕ್ಷಿಗಳಾಗಿ ಶತ ಶತಮಾನಗಳಿಂದ ಗೋಡೆಯ ಮೇಲೆ ಇನ್ನೂ ಶಾಶ್ವತವಾಗಿ ನಿಂತುಕೊಂಡಿವೆ.
ಭಾರತಕ್ಕೆ ಬ್ರಿಟಿಷರು ಬಂದಮೇಲೆ ಇದನ್ನು ನಂಬದೆ ಇದರ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ರಕ್ತದ ಕಲೆಯನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿದಾಗ ಪುರಾತತ್ತ್ವಜ್ಞರು ಪರೀಕ್ಷೆಯ ನಂತರ ಇದನ್ನು ನೈಜವಾದ ರಕ್ತದ ಕಲೆ ಎಂದು ದೃಢಪಡಿಸಿದ್ದಾರೆ.
ಸ್ಫೂರ್ತಿ :: ಶ್ರೀಧರ ಭಟ್ಟರು, ಶಿರಸಿ ಮತ್ತು Muralidhar Kulakarni.

