ಬೆಂಗಳೂರು: ಮೈಸೂರಿನ(Mysore) ಶ್ರೀ ಚಾಮರಾಜೇಂದ್ರ ಮೃಗಾಲಯದ(Sree Chamarajendra Zoo) ಅತ್ಯಂತ ಜನಪ್ರಿಯ ಯೋಜನೆಯಾದ “ಪ್ರಾಣಿಗಳ ದತ್ತು ಸ್ವೀಕಾರ ಯೋಜನೆ” ಅಡಿಯಲ್ಲಿ, ಬೆಂಗಳೂರಿನ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸದಸ್ಯರಾದ ಕು.ವೈಶಾಲಿ ವಿನಯ್ ಕುಲಕರ್ಣಿ (Kum.Vaishali Vinay) ಅವರು ಮೈಸೂರು ಮೃಗಾಲಯದ ಭಾರತೀಯ ಆನೆಯನ್ನು (Asiatic Elephant) ನಿಗದಿಪಡಿಸಿದ ಶುಲ್ಕ ರೂ 3,00,000/- (ರೂ. ಮೂರು ಲಕ್ಷ ರೂಪಾಯಿಗಳು) ಗಳನ್ನು ಪಾವತಿಸಿ ಒಂದು ವರ್ಷದ ಅವಧಿಗೆ ದತ್ತು ಪಡೆದುಕೊಂಡಿದ್ದಾರೆ.
ಈ ಮಹತ್ವದ ಕೊಡುಗೆಯ ಮೂಲಕ ವನ್ಯಪ್ರಾಣಿ ಸಂರಕ್ಷಣೆ ಮತ್ತು ಪಾಲನೆಯ ಸತ್ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿರುವ ಕು. ವೈಶಾಲಿ ವಿನಯ್ ಕುಲಕರ್ಣಿ ಅವರ ಕಾಳಜಿ ಮತ್ತು ಕೊಡುಗೆಯನ್ನು ಮೈಸೂರು ಮೃಗಾಲಯವು ಶ್ಲಾಘಿಸಿ, ಹೃತ್ಪೂರ್ವಕವಾಗಿ ಅಭಿನಂದಿಸಿದೆ ಎಂದು ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

