ಬೆಂಗಳೂರು: ಮಹಾ ಶಿವರಾತ್ರಿ(Mahaa Shivaraatri) ಅಂಗವಾಗಿ ವಿಜಯನಗರದಲ್ಲಿ ಆಯೋಜಿಸಲಾಗಿದ್ದ ಕ್ವಿಜ್ ಹಾಗು ಲಾಕಿ ಡಿಪ್ ನಲ್ಲಿ(Quiz & Dip) ವಿಜೇತರಾದ 20 ಮಂದಿಗೆ ನೀಡಿದ್ದ ಭರವಸೆಯಂತೆ ಪವಿತ್ರ ಕಾಶಿ–ಪ್ರಯಾಗಕ್ಕೆ ಉಚಿತ ವಿಮಾನಯಾತ್ರೆ ಕಲ್ಪಿಸಲಾಗಿದ್ದು, ವಿಜೇತ 20 ಮಂದಿಗೆ ವಿಮಾನ ಟಿಕೆಟ್‌ಗಳನ್ನು ವಿತರಿಸಿ, ಪವಿತ್ರ ಯಾತ್ರೆಗೆ ಶುಭ ಹಾರೈಸಿ ಬೀಳ್ಕೊಡಲಾಯಿತು. ಇದೇ ವರ್ಷದ ಫೆಬ್ರವರಿ 15ರಂದು ವಿಜಯನಗರದಲ್ಲಿ ಅಹೋರಾತ್ರಿ ನಡೆದ ಅದ್ಧೂರಿ ಮಹಾ ಶಿವರಾತ್ರಿ ಕಾರ್ಯಕ್ರಮದಲ್ಲಿ ವಿಜಯನಗರ(Vijayanagara) ಹಾಗೂ ಗೋವಿಂದರಾಜನಗರ(Govindarajanagara) ವಿಧಾನಸಭಾ ಕ್ಷೇತ್ರಗಳ ಸಾರ್ವಜನಿಕರಿಗಾಗಿ ವಿಶೇಷ ರಸಪ್ರೆಶ್ನೆ ಸ್ಪರ್ಧೆ ಆಯೋಜಿಸಲಾಗಿತ್ತು. ವಿಜೇತರಾದ 20 ಮಂದಿಗೆ ಕಾಶಿ–ಪ್ರಯಾಗ್ ನಂತಹ ಪವಿತ್ರ ಕ್ಷೇತ್ರಗಳಿಗೆ ಉಚಿತ ವಿಮಾನಯಾತ್ರೆ ಕಲ್ಪಿಸುವುದಾಗಿ ಭರವಸೆ ನೀಡಲಾಗಿತ್ತು.
ವಿಜಯನಗರ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ಅವರು ಇಂದು 20 ಮಂದಿ ರಸಪ್ರಶ್ನೆ ವಿಜೇತರಿಗೆ ವಿಮಾನ ಟಿಕೆಟ್‌ಗಳನ್ನು ವಿತರಿಸಿದರು. ವಿಜೇತರು ಕಾಶಿ–ಪ್ರಯಾಗಕ್ಕೆ ತೆರಳಿ ಪವಿತ್ರ ಕ್ಷೇತ್ರಗಳ ದರ್ಶನ ಪಡೆಯುವಂತೆ ಹಾರೈಸಿದರು. ವಿಶೇಷ ಯಾತ್ರೆಗೆ ವಿಜಯನಗರದ ಯುವ ನಾಯಕರಾದ ಪ್ರದೀಪ್ ಕೃಷ್ಣ ಅವರು ಸಂಪೂರ್ಣ ಮಾರ್ಗದರ್ಶನ ನೀಡುತ್ತಿದ್ದು, ಪ್ರಯಾಣದ ಆರಂಭದಿಂದ ಅಂತ್ಯದವರೆಗೆ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಉಚಿತವಾಗಿ ಕಲ್ಪಿಸಿದ್ದಾರೆ. ವಿಮಾನ ಟಿಕೆಟ್, ಪ್ರಯಾಣ, ವಸತಿ, ಊಟ ಸೇರಿದಂತೆ ಯಾತ್ರೆಗೆ ಸಂಬಂಧಿಸಿದ ಎಲ್ಲಾ ಖರ್ಚು, ವೆಚ್ಚವನ್ನು ಎಂ. ಕೃಷ್ಣಪ್ಪ ಅವರು ಭರಿಸುತ್ತಿದ್ದಾರೆ. ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ರಸಪ್ರಶ್ನೆ ವಿಜೇತರು ಸಂತಸ ವ್ಯಕ್ತಪಡಿಸಿ, ತಮಗೆ ನೀಡಿದ್ದ ಭರವಸೆಯನ್ನು ಈಡೇರಿಸಿದ ಶಾಸಕರಾದ ಎಂ. ಕೃಷ್ಣಪ್ಪ ಹಾಗೂ ಯಾತ್ರೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿರುವ ಪ್ರದೀಪ್ ಕೃಷ್ಣ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಗೋವಿಂದರಾಜನಗರ ಕ್ಷೇತ್ರದ ಶಾಸಕ ಪ್ರಿಯಕೃಷ್ಣ, ನೀಲಕಂಠಪ್ಪ, ಕಲಾವಿದರಾದ ಮಿಮಿಕ್ರಿ ಗೋಪಿ, ಮಿಮಿಕ್ರಿ ದಯಾನಂದ, ಹಾಸ್ಯ ಸಾಹಿತಿ ಎಂ.ಎಸ್. ನರಸಿಂಮಮೂರ್ತಿ, ಎಂ. ಉದಯ್ ಹಾಗೂ ಪ್ರಜಾವಲ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಬೆಂಗಳೂರು ಜಾಣಜಾಣೆಯರ ಸಂಸ್ಥೆಯಿಂದ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಎಂ. ಉದಯ್, “ನುಡಿದಂತೆ ನಡೆದು ಭರವಸೆಯನ್ನು ಈಡೇರಿಸಿರುವುದು ಸಂತಸದ ಸಂಗತಿ ಎಂದು ತಿಳಿಸಿದರು.

