*ಸ್ಯಾಂಕಿ ಕೆರೆಗೆ ಲೋಕಾಯುಕ್ತ ತಂಡ ಭೇಟಿ: ಮಾಲೀನ್ಯ ಕುರಿತು ಸಮಗ್ರ ವರದಿ ಸಲ್ಲಿಸಲು ತೀರ್ಮಾನ*

ಬೆಂಗಳೂರು: “ಸೇವ್ ಸ್ಯಾಂಕಿ ಟ್ಯಾಂಕ್ ಇನಿಶಿಯೇಟಿವ್” (“Save Sankey Tank Initiative”) ಕಾರ್ಯಕ್ರಮದಡಿ ವಾಯ್ಸ್ ಆಫ್ ಸದಾಶಿವನಗರ(Sadashivanagara) ಸಂಘಟನೆಯಿಂದ ಸ್ಯಾಂಕಿಕೆರೆ ಉಳಿಸಿ ಅಭಿಯಾನ ಕೈಗೊಂಡು ಕೆರೆ ಮಾಲೀನ್ಯ ನಿಯಂತ್ರಣಕ್ಕಾಗಿ ನಿರಂತರ ಹೋರಾಟ ಮಾಡಿದ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದ ಲೋಕಾಯುಕ್ತ ಅಧಿಕಾರಿಗಳ ತಂಡ ಇಂದು ಕೆರೆ ಆವರಣಕ್ಕೆ ಭೇಟಿ ನೀಡಿ ಪರಿಶೀಲಿಸಿತು.

ಲೋಕಾಯುಕ್ತ ಎಸ್.ಪಿ, ಮಹಾಂತೇಶ್ವರ ಎಸ್ ಜಿದ್ದಿ, ಮುಖ್ಯ ಅಭಿಂತರರಾದ ಬಿ.ವಿ. ರಮೇಶ್ ನೇತೃತ್ವದ ಮಾಲೀನ್ಯಕ್ಕೆ ಕಾರಣಗಳು, ಅಧಿಕಾರಿಗಳ ನಿರ್ಲಕ್ಷ್ಯ, ಕೆರೆ ಅಭಿವೃದ್ಧಿ ಪ್ರಾಧಿಕಾರದ ಪಾತ್ರ ಮತ್ತಿತರೆ ವಿಷಯಗಳನ್ನು ಲೋಕಾಯುಕ್ತ ಅಧಿಕಾರಿಗಳು ಕಲೆ ಹಾಕಿದರು.

ಬಳಿಕ ಮಾತನಾಡಿದ ಮುಖ್ಯ ಅಭಿಯಂತರರಾದ ಬಿ.ವಿ. ರಮೇಶ್‌, ಕೆರೆ ಮಾಲೀನ್ಯ ಸಮಸ್ಯೆ ಕುರಿತು ಖುದ್ದಾಗಿ ಪರಿಶೀಲಿಸಲಾಗಿದೆ. ಈ ಬಗ್ಗೆ ಸಮಗ್ರ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.

ವಾಯ್ಸ್ ಆಫ್ ಸದಾಶಿವನಗರ ಸಂಘದ ಸದಸ್ಯರಾದ ಶಿಲ್ಪಾ ಜತ್ತಿ ಮಾತನಾಡಿ, ಕೆರೆ ಒಳಚರಂಡಿ ನೀರು ಹರಿಯುವುದನ್ನು ತಡೆಗಟ್ಟಲು ಬೆಂಗಳೂರು ಜಲಮಂಡಳಿ ಸೂಕ್ತ ರೀತಿಯಲ್ಲಿ ಪ್ರಯತ್ನ ಕೈಗೊಂಡಿದ್ದು, ಇದು ಮತ್ತೆ ಪುನರಾರ್ತನೆಯಾಗಬಾರದು. ಕೆರೆ ಸಂಪೂರ್ಣವಾಗಿ ಕಾಂಕ್ರೀಟೀಕರಣಗೊಳಿಸಿದ್ದು, ಇಲ್ಲಿ ನೀರು ಇಂಗಲು ಸಾಧ್ಯವಾಗದ ಪರಿಸ್ಥಿತಿ ಇದೆ. ಕೆರೆ ಅಭಿವೃದ್ಧಿ ಕುರಿತ ತಜ್ಞರ ತಂಡದ ಅಭಿಪ್ರಾಯ ಪಡೆದು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಕೆರೆ ಪುನಶ್ಚೇತನಕ್ಕೆ ನೂರಾರು ಕೋಟಿ ರೂ ವೆಚ್ಚ ಮಾಡಿದ್ದು, ಕಾಂಕ್ರಿಟೀಕರಣ ಬಿಟ್ಟರೆ ಬೇರೆ ಅಭಿವೃದ್ಧಿಯಾಗಿಲ್ಲ. ಈ ಕಾಮಗಾರಿಯನ್ನು ಯಾರಿಗೆ ವಹಿಸಿದ್ದರೂ ಸಹ ಕಾಮಗಾರಿ ಹಣ ಪಾವತಿ ಮಾಡಬಾರದು. ತನಿಖೆ ನಂತರವೇ ಮುಂದಿನ ಕ್ರಮ ಕೈಗೊಳ್ಳಬೇಕು ಎಂದರು.

ಕಾಡು ಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಬಿ.ಕೆ. ಶಿವರಾಂ ಮಾತನಾಡಿ, ಸ್ಯಾಂಕಿ ಕೆರೆ ಮಲ್ಲೇಶ್ವರಂ, ಯಶವಂತಪುರ, ಹೆಬ್ಬಾಳ ಭಾಗದ ಪ್ರಮುಖ ಜಲ ಮೂಲವಾಗಿದ್ದು, ಕೆರೆ ಉಳಿಸಿದರೆ ಜಲ ಮೂಲ ಉಳಿಸಲು ಸಾಧ್ಯ. ಅವೈಜ್ಞಾನಿಕ ಕಾಮಗಾರಿಯಿಂದ ಮಳೆ ನೀರು ಕೆರೆ ಸೇರುತ್ತಿಲ್ಲ. ಎಲ್ಲಾ ಕಾಲುವೆಗಳು ಮುಚ್ಚಿದ್ದು, ಹೂಳು ತೆಗೆದಿಲ್ಲ. ಹೀಗಾಗಿ ಕೆರೆ ನೀರು ನಿಂತಲ್ಲೇ ಕೊಳೆಯುತ್ತಿದ್ದು, ಈ ಬಗ್ಗೆ ಕೆರೆ ಪ್ರಾಧಿಕಾರದವರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಅಭಿಯಾನದ ಸ್ವಯಂ ಸೇವಕ ಡಾ. ಮನು ಮತ್ತಿತರರು ಪಾಲ್ಗೊಂಡಿದ್ದರು.

Hot this week

ದೇವಸ್ಥಾನ, ವಿಭೂತಿ, ನಾಮದಲ್ಲೇ ನೂರು ದಿನ: ಆರ್. ಅಶೋಕ್ ವ್ಯಂಗ್ಯ

ರಿಯಲ್ ಎಸ್ಟೇಟ್ ಏಜೆಂಟ್ ಸಿಎಂ ಡಿಕೆಶಿ, ಯೂ ಟರ್ನ್ ಸರ್ಕಾರ ಬೆಂಗಳೂರು: ಆಧುನಿಕ...

ಪರವಾನಗಿ ಇಲ್ಲದ ಬಂದೂಕು ಶಸ್ತ್ರಾಸ್ತ್ರಗಳನ್ನು ನ. 01 ರೊಳಗೆ ಸರ್ಕಾರಕ್ಕೆ ಒಪ್ಪಿಸಿ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಬೆಂಗಳೂರು: ರಾಜ್ಯದ ಜನತೆ ಪರವಾನಗಿ ಇಲ್ಲದೆ ತಮ್ಮಲ್ಲಿ ಅಕ್ರಮವಾಗಿಟ್ಟುಕೊಂಡಿರುವ ಬಂದೂಕು ಶಸ್ತ್ರಾಸ್ತ್ರಗಳನ್ನು(Firearms...

ಯಕ್ಷಗಾನ ಪರಂಪರೆಯ ಸಂರಕ್ಷಣೆಗೆ ಡಿಜಿಟಲ್‌ ಆರ್ಕೈವ್ಸ್‌ ಸ್ಥಾಪಿಸಿ: ಬಿಳಿಮಲೆ ಒತ್ತಾಯ

ಕರಾವಳಿ (Karavali) ಕರ್ನಾಟಕದ ಸಾಂಸ್ಕೃತಿಕ (Cultural) ಅಸ್ಮಿತೆಯ ಪತ್ರೀಕವಾಗಿರುವ ಯಕ್ಷಗಾನ (Yakshagana)...

Topics

ಹಿರಿಯ ನಾಗರಿಕರು, ವಿಕಲಚೇತನರು, ಅನಿವಾಸಿ ಮತದಾರರ ನೋಟೀಸ್ ವಿಲೇವಾರಿಗೆ ಅವಕಾಶ: ಚುನಾವಣಾ ಆಯೋಗ

ಬೆಂಗಳೂರು: ಹಿರಿಯ ನಾಗರಿಕರು, ವಿಕಲಚೇತನರು (PWD), ಅನಾರೋಗ್ಯ ಪೀಡಿತರು ಹಾಗೂ ಅನಿವಾಸಿ...

ಸೆ.15 ರಂದು ‘ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ’

ಬೆಂಗಳೂರು: ಕರ್ನಾಟಕ ಸರ್ಕಾರದ(Karnataka Government) ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಬೆಂಗಳೂರಿನ...

15 ವಾರಗಳ ಜೂ ಕ್ಲಬ್ ಆಯೋಜನೆ

ಬೆಂಗಳೂರು: ಬನ್ನೇರುಘಟ್ಟ(Bannerghatta) ಜೈವಿಕ ಉದ್ಯಾನವನದಲ್ಲಿ ಪ್ರಕೃತಿ, ವನ್ಯಜೀವಿಗಳೊಂದಿಗೆ ಸಂಪರ್ಕ ಸಾಧಿಸಲು ಮತ್ತು...

Related Articles