ಬಸವನಗುಡಿಯ ಈದ್ ಮಿಲಾದ್ ಮೆರವಣಿಗೆಯಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ

ಬೆಂಗಳೂರು: ಬೆಂಗಳೂರಿನ ಬಸವನಗುಡಿಯ ಕೆ.ಆರ್. ರಸ್ತೆಯಲ್ಲಿ(K.R.Road) ಕಳೆದ ಆಗಸ್ಟ್ 26ರಂದು ನಡೆದ ಹಲ್ಲೆ ಮತ್ತು ಕಾನೂನುಬಾಹಿರ ಗುಂಪುಗೂಡುವಿಕೆ(Case of assault and unlawful assembly) ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯು ಇಂದು ಬೆಂಗಳೂರು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಿಗೆ (DCP) ಮನವಿ ಪತ್ರ ಸಲ್ಲಿಸಿದೆ. ಈ ಸಂದರ್ಭದಲ್ಲಿ ರಾಷ್ಟ್ರ ರಕ್ಷಣಾ ಪಡೆಯ ಅಧ್ಯಕ್ಷರಾದ  ಡಾ. ನಾಗೇಂದ್ರಪ್ಪ(Dr.Nagendrappa) ಹಾಗೂ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಶ್ರೀ. ಶರತ್ ಕುಮಾರ್, ಗೋರಕ್ಷಕ ಸಂತೋಷ ಕಡತಾಳ, ಹಿಂದೂ ಜಾಗರಣ ವೇದಿಕೆಯ ಶ್ರೀನಿವಾಸ  ಇತರ ಗಣ್ಯರು ಉಪಸ್ಥಿತರಿದ್ದರು.
ಘಟನೆಯ ಹಿನ್ನೆಲೆ: ದಿನಾಂಕ 26-08-2026 ರಂದು ಮಧ್ಯಾಹ್ನ ಸುಮಾರು 4:00 ಗಂಟೆಯ ವೇಳೆಗೆ, ಈದ್ ಮಿಲಾದ್ ಮೆರವಣಿಗೆಯ ಸಂದರ್ಭದಲ್ಲಿ ನೂರಾರು ಮುಸಲ್ಮಾನ ಯುವಕರು ಬಸವನಗುಡಿಯ ಕೆ.ಆರ್. ರಸ್ತೆಯ ಗರಡಿ ಅಪಾರ್ಟ್‌ಮೆಂಟ್ ಎದುರು ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಪುನೀತ್ ಕೆರೆಹಳ್ಳಿ ಅವರ ಕಚೇರಿಯ ಬಳಿ ಗುಂಪುಗೂಡಿ, ಅವರನ್ನು ಹಾಗೂ ಅವರ ತಂಡದ ಸದಸ್ಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದರು. ಈ ಗಲಭೆಯಲ್ಲಿ ಹಿಂದೂ ಕಾರ್ಯಕರ್ತ ಮುರಳಿ ಎಂಬ ಯುವಕನ ಮೇಲೆ ತೀವ್ರ ಹಲ್ಲೆ ನಡೆದಿದ್ದು, ಅವರು ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ, ಪುನೀತ್ ಕೆರೆಹಳ್ಳಿ ಅವರನ್ನು ಕರೆದೊಯ್ಯುತ್ತಿದ್ದ ಪೊಲೀಸ್ ವಾಹನದ ಮೇಲೂ ದಾಳಿ ನಡೆಸಲು ಯತ್ನಿಸಲಾಗಿದೆ ಎಂದು ಸಮಿತಿಯು ದೂರಿದೆ.
ಏಕಪಕ್ಷೀಯ ಕ್ರಮದ ಬಗ್ಗೆ ಆಕ್ಷೇಪ: ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ರಾಷ್ಟ್ರ ರಕ್ಷಣಾ ಪಡೆಯ ಸಂಸ್ಥಾಪಕ ಪುನೀತ್ ಕೆರೆಹಳ್ಳಿ ಸೇರಿದಂತೆ ಎಂಟು ಮಂದಿ ಹಿಂದೂ ಕಾರ್ಯಕರ್ತರನ್ನು ಬಂಧಿಸಿರುವುದು ಏಕಪಕ್ಷೀಯ ಕ್ರಮವಾಗಿದೆ ಎಂದು ಸಮಿತಿಯು ಆಕ್ಷೇಪ ವ್ಯಕ್ತಪಡಿಸಿದೆ. ಘಟನಾ ಸ್ಥಳದಲ್ಲಿದ್ದ ನೂರಾರು ಮುಸಲ್ಮಾನ ಯುವಕರ ಪೈಕಿ ಕೇವಲ ಕೆಲವರ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿರುವುದು ತನಿಖೆಯ ನಿಷ್ಪಕ್ಷಪಾತತೆಯನ್ನು ಪ್ರಶ್ನಿಸುವಂತೆ ಮಾಡಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸಮಿತಿಯ ಪ್ರಮುಖ ಬೇಡಿಕೆಗಳು:
1. ನಿಷ್ಪಕ್ಷಪಾತ ತನಿಖೆ: ಘಟನೆಯ ಬಗ್ಗೆ ಯಾವುದೇ ರಾಜಕೀಯ ಪ್ರಭಾವವಿಲ್ಲದೆ ಪಾರದರ್ಶಕ ತನಿಖೆ ನಡೆಸಬೇಕು.
2. ಡಿಜಿಟಲ್ ಸಾಕ್ಷ್ಯಗಳ ಪರಿಶೀಲನೆ: ಲಭ್ಯವಿರುವ ಸಿಸಿಟಿವಿ ದೃಶ್ಯಗಳು, ಮೊಬೈಲ್ ವಿಡಿಯೋಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿನ ದೃಶ್ಯಗಳನ್ನು ಆಧರಿಸಿ ಗಲಬೆಯಲ್ಲಿ ಭಾಗಿಯಾದ ಮತಾಂದ  ತಪ್ಪಿತಸ್ಥರನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕು.
3. ಸಮಾನ ಕಾನೂನು ಅನ್ವಯ: ತಪ್ಪಿತಸ್ಥರು ಯಾವುದೇ ಧರ್ಮ ಅಥವಾ ಸಂಘಟನೆಗೆ ಸೇರಿದ್ದರೂ ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು. ಹಲ್ಲೆ ಮತ್ತು ಪೊಲೀಸ್ ವಾಹನದ ಮೇಲೆ ದಾಳಿಗೆ ಯತ್ನಿಸಿದವರ ವಿರುದ್ಧ ಪ್ರತ್ಯೇಕ ತನಿಖೆ ನಡೆಸಬೇಕು.
4. ಪೊಲೀಸ್ ವೈಫಲ್ಯದ ತನಿಖೆ: ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿದರೂ ಸೂಕ್ತ ಬಂದೋಬಸ್ತ್ ಏಕಿರಲಿಲ್ಲ ಎಂಬ ಬಗ್ಗೆ ಆಂತರಿಕ ಪರಿಶೀಲನೆ ನಡೆಸಬೇಕು.
5. ಸುಳ್ಳು ದೂರಿನ ಬಗ್ಗೆ ತನಿಖೆ: ಅಬ್ದುಲ್ ರಜಾಕ್ ಎಂಬುವವರು ನೀಡಿರುವ ದೂರು ಸುಳ್ಳು ಅಥವಾ ದುರುದ್ದೇಶಪೂರಿತವಾಗಿದ್ದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು.
ಕಾನೂನು ಎಲ್ಲರಿಗೂ ಒಂದೇ ಎಂಬ ನಂಬಿಕೆಯನ್ನು ಪೊಲೀಸರು ಎತ್ತಿ ಹಿಡಿಯಬೇಕು ಮತ್ತು ಈ ಪ್ರಕರಣದಲ್ಲಿ ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಸಮಿತಿಯು ಆಗ್ರಹಿಸಿದೆ.

Hot this week

‘ಆಸ್ಟ್ರಲ್ ಪೇಜೆಂಟ್ಸ್’ 10ನೇ ಆವೃತ್ತಿ ಯಶಸ್ವಿ: ದಶಕದ ಸಂಭ್ರಮ

ಬೆಂಗಳೂರು : ಕಳೆದ ಒಂಬತ್ತು ವರ್ಷಗಳಿಂದ ವೈಶಿಷ್ಟ್ಯಪೂರ್ಣವಾಗಿ ಹಾಗೂ ಅದ್ಧೂರಿಯಾಗಿ ಆಯೋಜನೆಗೊಳ್ಳುತ್ತಾ...

“ಪ್ರೋಷ್ಟಪದಿ ಭಾಗವತ” ಧಾರ್ಮಿಕ ಪ್ರವಚನ

ಸುಧೀಂದ್ರನಗರ : ಶ್ರೀ ರಾಘವೇಂದ್ರ ಸೇವಾ ಸಮಿತಿಯ (Raghavendra Seva Samithi)...

ಶ್ರೀ ವರಸಿದ್ಧಿ ವಿನಾಯಕ ದೇವಾಲಯದಲ್ಲಿ ಗಣೇಶೋತ್ಸವ

ಬೆಂಗಳೂರು : ನಾಗರಬಾವಿ (Nagarabhavi) ಮುಖ್ಯರಸ್ತೆಯಲ್ಲಿರುವ ಕೆನರಾ ಬ್ಯಾಂಕ್ (Canara Bank...

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಿಷೇಧಿತ ಮೊಬೈಲ್ ಬಳಕೆ: 9 ಆರೋಪಿಗಳ ಬಂಧನ

ಪರಪ್ಪನ ಅಗ್ರಹಾರ (Parappana Agrahara) ಠಾಣೆಯಲ್ಲಿ (Station) 13/01/2026 ರಂದು ಬೆಂಗಳೂರು...

20 ಮಂದಿಗೆ ಉಚಿತ ಕಾಶಿ–ಪ್ರಯಾಗ್ ಯಾತ್ರೆ : ಉಚಿತ ವಿಮಾನ ಪ್ರಯಾಣದ ಸೌಭಾಗ್ಯ

ಬೆಂಗಳೂರು, ಸೆ. 10: ಮಹಾ ಶಿವರಾತ್ರಿ  (Shivarathri) ಅಂಗವಾಗಿ ವಿಜಯನಗರದಲ್ಲಿ ಆಯೋಜಿಸಲಾಗಿದ್ದ...

Topics

‘ಆಸ್ಟ್ರಲ್ ಪೇಜೆಂಟ್ಸ್’ 10ನೇ ಆವೃತ್ತಿ ಯಶಸ್ವಿ: ದಶಕದ ಸಂಭ್ರಮ

ಬೆಂಗಳೂರು : ಕಳೆದ ಒಂಬತ್ತು ವರ್ಷಗಳಿಂದ ವೈಶಿಷ್ಟ್ಯಪೂರ್ಣವಾಗಿ ಹಾಗೂ ಅದ್ಧೂರಿಯಾಗಿ ಆಯೋಜನೆಗೊಳ್ಳುತ್ತಾ...

“ಪ್ರೋಷ್ಟಪದಿ ಭಾಗವತ” ಧಾರ್ಮಿಕ ಪ್ರವಚನ

ಸುಧೀಂದ್ರನಗರ : ಶ್ರೀ ರಾಘವೇಂದ್ರ ಸೇವಾ ಸಮಿತಿಯ (Raghavendra Seva Samithi)...

ಶ್ರೀ ವರಸಿದ್ಧಿ ವಿನಾಯಕ ದೇವಾಲಯದಲ್ಲಿ ಗಣೇಶೋತ್ಸವ

ಬೆಂಗಳೂರು : ನಾಗರಬಾವಿ (Nagarabhavi) ಮುಖ್ಯರಸ್ತೆಯಲ್ಲಿರುವ ಕೆನರಾ ಬ್ಯಾಂಕ್ (Canara Bank...

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಿಷೇಧಿತ ಮೊಬೈಲ್ ಬಳಕೆ: 9 ಆರೋಪಿಗಳ ಬಂಧನ

ಪರಪ್ಪನ ಅಗ್ರಹಾರ (Parappana Agrahara) ಠಾಣೆಯಲ್ಲಿ (Station) 13/01/2026 ರಂದು ಬೆಂಗಳೂರು...

20 ಮಂದಿಗೆ ಉಚಿತ ಕಾಶಿ–ಪ್ರಯಾಗ್ ಯಾತ್ರೆ : ಉಚಿತ ವಿಮಾನ ಪ್ರಯಾಣದ ಸೌಭಾಗ್ಯ

ಬೆಂಗಳೂರು, ಸೆ. 10: ಮಹಾ ಶಿವರಾತ್ರಿ  (Shivarathri) ಅಂಗವಾಗಿ ವಿಜಯನಗರದಲ್ಲಿ ಆಯೋಜಿಸಲಾಗಿದ್ದ...

ನಿತ್ಯ ಪಂಚಾಂಗ 11.09.2026 FRIDAY.ಶುಕ್ರವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 11.09.2026 FRIDAY.ಶುಕ್ರವಾರ ಸಂವತ್ಸರ: ಪರಾಭವ SAMVATSARA : PARABHAVA. ಆಯಣ: ದಕ್ಷಿಣಾಯನ AYANA:...

ರಾಜಕೀಯ ರಂಗದಲ್ಲಿ ಆಧುನಿಕತೆ ಮತ್ತು ಹೋರಾಟಕ್ಕೆ ಇನ್ನೊಂದು ಹೆಸರೇ ಡಿ.ಕೆ.ಶಿವಕುಮಾರ್ : DCM ಜಿ. ಪರಮೇಶ್ವರ

ಬೆಂಗಳೂರು: ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್(CM D.K.Shivakumar) ಅವರ ನೇತೃತ್ವದ ರಾಜ್ಯ...

“ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸರ್ಕಾರ ಸರಿಯಾದ ಹಾದಿಯಲ್ಲಿ ನಡೆಯುತ್ತಿದೆ” : ಮಾಜಿ ಸಿ ಎಂ ಸಿದ್ದರಾಮಯ್ಯ ಪ್ರಶಂಸೆ.

ಬೆಂಗಳೂರು: ನಮ್ಮ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗುತ್ತಿರುವುದರ ಜೊತೆಗೆ,...

Related Articles