ಬೆಂಗಳೂರು: ವಿಧಾನ ಪರಿಷತ್ ನೂತನ ಸದಸ್ಯೆ ಶ್ರೀಮತಿ ಎ.ವಿ. ಗಾಯತ್ರಿ(Smt. A.V.Gayathri) ಶಾಂತೇಗೌಡ ಅವರು ವಿಧಾನಸೌಧದ ಸಭಾಪತಿ ಬಸವರಾಜ ಹೊರಟ್ಟಿ ಅವರ ಕಚೇರಿಯಲ್ಲಿಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (CM.D.K.Shivakumar) ಅವರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಸಚಿವ ನರೇಂದ್ರಸ್ವಾಮಿ, ವಿಧಾನ ಪರಿಷತ್ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹಮದ್, ಶಾಸಕ ಪ್ರಕಾಶ್ ಕೋಳಿವಾಡ್, ವಿಧಾನ ಪರಿಷತ್ ಸದಸ್ಯರಾದ ಎಸ್ ರವಿ, ಐವನ್ ಡಿ’ಸೋಜಾ, ಹೆಚ್.ಪಿ. ಸುಧಾಮದಾಸ್ ಮತ್ತಿತರರು ಉಪಸ್ಥಿತರಿದ್ದರು.



