ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದ ಇಟಲಿಯ HL ಹೈಡ್ರೋನಿಕ್ ಸಂಸ್ಥೆಯ ಜಾಗತಿಕ ಪ್ರತಿನಿಧಿ ಫೆಡೆರಿಕೊ ಲಾಮಾ (Federico Lama) ಅವರ ವಿಶೇಷ ಆಹ್ವಾನದ ಮೇರೆಗೆ, ಕರ್ನಾಟಕ ಹೈಡ್ರಾಲಿಕ್ ಮತ್ತು ಎಲಿವೇಟರ್ ತಯಾರಕರ ಒಕ್ಕೂಟದ ಅಧ್ಯಕ್ಷರು ಹಾಗೂ ಕ್ರಿಯೇಟಿವ್ ಡಿವೈಸಸ್ ಸಂಸ್ಥೆಯ ಚೇರ್ಮನ್ ಆದ ಕೈಗಾರಿಕಾ ರತ್ನ ಡಾ.ಉಮೇಶ್ ಕುಮಾರ್ ಅವರು ಭೇಟಿ ಮಾಡಿ ಉಭಯ ದೇಶಗಳ ತಾಂತ್ರಿಕ ಪ್ರಗತಿಯ ಕುರಿತು ಸವಿಸ್ತಾರವಾಗಿ ಚರ್ಚಿಸಿದರು.
ಸುಮಾರು 10-12 ವರ್ಷಗಳ ಹಿಂದೆಯೇ ಇಟಲಿಯ ಅತ್ಯಾಧುನಿಕ ಹೈಡ್ರೋನಿಕ್ ತಂತ್ರಜ್ಞಾನವನ್ನು ಭಾರತಕ್ಕೆ ಮೊಟ್ಟಮೊದಲ ಬಾರಿಗೆ ಆಮದು ಮಾಡಿಕೊಂಡು ಪರಿಚಯಿಸಿದ ಕೀರ್ತಿ ‘ಎಲಿವೇಟರ್ ಟ್ರೇಡ್ ಸೆಂಟರ್’ (ETC) ಸಂಸ್ಥೆಗೆ ಸಲ್ಲುತ್ತದೆ. ಅಂದು ಅಳವಡಿಸಲಾದ ಮೊದಲ ಹೈಡ್ರಾಲಿಕ್ ಸಿಸ್ಟಮ್ಸ್ ಇಂದಿಗೂ ಯಾವುದೇ ತಾಂತ್ರಿಕ ದೋಷವಿಲ್ಲದೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಜಾಗತಿಕ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ ಎಂದು ಡಾ. ಉಮೇಶ್ ಕುಮಾರ್ ಈ ಸಂದರ್ಭದಲ್ಲಿ ತಿಳಿಸಿದರು. ಎಲಿವೇಟರ್ಗಳ ಸಾಮರ್ಥ್ಯ ಪರೀಕ್ಷಿಸಲು ಜಾಗತಿಕ ಮಟ್ಟದ ನೂತನ ಟೆಸ್ಟಿಂಗ್ ಟವರ್ (Testing Tower) ಸ್ಥಾಪನೆ. ಹೈಡ್ರಾಲಿಕ್ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ನೂತನ ಸಂಶೋಧನೆ, ಲಿಫ್ಟ್ ಬಳಕೆಯಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸುವ ಅತ್ಯಾಧುನಿಕ ಸುರಕ್ಷತಾ ತಂತ್ರಜ್ಞಾನಗಳ (Safety Technology) ಅಳವಡಿಕೆ ಬಗ್ಗೆ ವಿಸ್ತೃತ ವಾಗಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಮಾಂಟೆಫೆರೊ ಇಂಡಿಯಾ (Monteferro India) ಕಂಪನಿಯ ಭಾರತದ ನಿರ್ದೇಶಕ ಬಿ.ಎಸ್. ಕುಮಾರಸ್ವಾಮಿ, ಆಡಳಿತ ಮಂಡಳಿಯ ಪ್ರಮುಖರಾದ ಬಿ.ಜಿ.ಹರೀಶ್, ರಾಧಾಕೃಷ್ಣ ಮತ್ತು ಪ್ರಸನ್ನ ಅವರು ಡಾ.ಉಮೇಶ್ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಿದರು.
ಪ್ರತಿಯಾಗಿ ಡಾ.ಉಮೇಶ್ ಕುಮಾರ್ ಅವರು ಹೈಡ್ರಾನಿಕ್ ಸಂಸ್ಥೆಯ ಮುಖ್ಯ ಸ್ಥರಿಗೂ ಗೌರವ ಸನ್ಮಾನ ದ ಮೂಲಕ ಕೃತಜ್ಞತೆ ಸಲ್ಲಿಸಿದರು.

