2026ನೇ ಸಾಲಿನ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರ, (“Sri Prasanna Veeranjaneya Yoga”. ಎಸ್‌ಪಿವಿ ಸೇವಾ ಟ್ರಸ್ಟ್ ಆಶ್ರಯದಲ್ಲಿ, ಜುಲೈ 10, 2026ರ ಶುಕ್ರವಾರ ಸಂಜೆ 6.00 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ, (Ravindra Kalakshetra) ಜೆ.ಸಿ. ರಸ್ತೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದೆ.
1. ಸಭಾಧ್ಯಕ್ಷರ ವಿಶೇಷ ಉಪನ್ಯಾಸ – ನ್ಯಾಯಮೂರ್ತಿ ಡಾ. ವಿ. ಶ್ರೀಶಾನಂದ, ಗೌರವಾನ್ವಿತ ನ್ಯಾಯಾಧೀಶರು, ಕರ್ನಾಟಕ ಹೈಕೋರ್ಟ್, ಖ್ಯಾತ ನ್ಯಾಯಶಾಸ್ತ್ರಜ್ಞರು ಹಾಗೂ ವಾಗ್ಮಿಗಳು ಅವರಿಂದ ವಿಶೇಷ ಭಾಷಣ.
2. ವಿಶಿಷ್ಟ ಸಾಧಕರ ಸನ್ಮಾನ
Ø ಶ್ರೀ ಅರುಣ್ ಯೋಗಿರಾಜ್ – ನಾಡಿನ ಹೆಸರಾಂತ ಶಿಲ್ಪಿ ಹಾಗೂ ಅಯೋಧ್ಯೆಯ ಶ್ರೀ ರಾಮಲಲ್ಲಾ ಮೂರ್ತಿಯ ಶಿಲ್ಪ ನಿರ್ಮಾತೃ.
Ø ಡಾ. ಶುಭ ವೆಂಕಟೇಶ ಅಯ್ಯಂಗಾರ್ – ಯಾಂತ್ರಿಕ ವಿಜ್ಞಾನ ಕ್ಷೇತ್ರದಲ್ಲಿ ಅಪೂರ್ವ ಸಾಧನೆಗೈದ ಪದ್ಮಶ್ರೀ ಪುರಸ್ಕೃತ ವಿಜ್ಞಾನಿ.
3. ಸಮಾಜ ಸೇವಾನಿರುತ ಅನುಭವಿ ಯೋಗ ಸಾಧಕರಿಗೆ ಗೌರವ ಸನ್ಮಾನ
4. ಸಾಂಸ್ಕೃತಿಕ ಮತ್ತು ಯೋಗ ಪ್ರದರ್ಶನಗಳು
Ø ಗುಂಪು ಯೋಗ ರಚನೆಗಳು
Ø ವೈಯಕ್ತಿಕ ಯೋಗ ಪ್ರದರ್ಶನಗಳು
ಈ ಕಾರ್ಯಕ್ರಮದಲ್ಲಿ ಸುಮಾರು 500ಕ್ಕೂ ಹೆಚ್ಚು ಯೋಗಾಸಕ್ತ ಪ್ರೇಕ್ಷಕರು ಭಾಗವಹಿಸುವ ನಿರೀಕ್ಷೆಯಿದ್ದು, ಕಾರ್ಯಕ್ರಮವು ರಾತ್ರಿ 8.00 ಗಂಟೆಗೆ ಸಮಾರೋಪಗೊಂಡ ನಂತರ ಭೋಜನ ವ್ಯವಸ್ಥೆ ಇರುತ್ತದೆ.
ನಮ್ಮ ಸಂಸ್ಥೆಯ ಕುರಿತು
ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರ, ಎಸ್‌ಪಿವಿ ಸೇವಾ ಟ್ರಸ್ಟ್‌ನ ಪ್ರತಿಷ್ಠಿತ ಘಟಕವಾಗಿದ್ದು, ಬೆಂಗಳೂರಿನ ಮಹಾಲಕ್ಷ್ಮಿಪುರಂನಲ್ಲಿರುವ ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ಮೂರು ದಶಕಗಳಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದು ಬೆಂಗಳೂರಿನ ಅತ್ಯಂತ ಹಳೆಯ ಹಾಗೂ ಹೆಸರಾಂತ ಯೋಗ ಶಿಕ್ಷಣ ಕೇಂದ್ರಗಳಲ್ಲಿ ಒಂದಾಗಿದ್ದು, ಸಾವಿರಾರು ವಿದ್ಯಾರ್ಥಿಗಳಿಗೆ ಯೋಗದ ವಿವಿಧ ಆಯಾಮಗಳಲ್ಲಿ ತರಬೇತಿ ಹಾಗೂ ಮಾರ್ಗದರ್ಶನ ನೀಡಿದೆ. ನಮ್ಮ ಚಟುವಟಿಕೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿ: www.nammaspvyoga.org

