ಬೆಂಗಳೂರು, ಜುಲೈ 04 : ಬೆಂಗಳೂರಿನ ಕೆ.ಆರ್.ವೃತ್ತದಲ್ಲಿರುವ ಸರ್ಕಾರಿ ಶ್ರೀ ಕೃಷ್ಣರಾಜೇಂದ್ರ ಸಿಲ್ವರ್ ಜ್ಯುಬಿಲಿ(Government Sree Krishnarajendra Silver Jubilee) ತಾಂತ್ರಿಕ ಮಹಾವಿದ್ಯಾಲಯದ (KSSJT) ಆವರಣದಲ್ಲಿ ಸಂಸ್ಥೆಯ ಹಳೆಯ ಮತ್ತು ಅನುಪಯುಕ್ತ ವಸ್ತುಗಳ ಬಹಿರಂಗ ಹರಾಜು(Auction) ಪ್ರಕ್ರಿಯೆಯನ್ನು ಹಮ್ಮಿಕೊಳ್ಳಲಾಗಿದೆ.
ಸಂಸ್ಥೆಯಲ್ಲಿ ಬಳಕೆಯಲ್ಲಿಲ್ಲದ ಹಳೇ ಯಂತ್ರೋಪಕರಣಗಳು, ಪೀಠೋಪಕರಣಗಳು, ಗಣಕಯಂತ್ರಗಳು, ಬ್ಯಾಟರಿಗಳು ಹಾಗೂ ಇನ್ನಿತರೆ ಅನುಪಯುಕ್ತ ವಸ್ತುಗಳನ್ನು “ಯಾವ ಸ್ಥಿತಿಯಲ್ಲಿದೆಯೋ ಅದೇ ಸ್ಥಿತಿಯಲ್ಲಿರುವಂತೆ” (As is where is basis) ನಿಯಮಾನುಸಾರ ವಿಲೇವಾರಿ ಮಾಡಲು 2026ನೇ ಜುಲೈ 22 ರಂದು ಬೆಳಿಗ್ಗೆ 11.00 ಗಂಟೆಗೆ ಬಹಿರಂಗ ಹರಾಜು ನಡೆಯಲಿದೆ.
ಹರಾಜಿನಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಅರ್ಹ ಬಿಡ್‍ದಾರರು ತಮ್ಮ ಅರ್ಹತೆಯ ದಾಖಲೆಗಳನ್ನು 2026ನೇ ಜುಲೈ 20ರ ಮಧ್ಯಾಹ್ನ 02.00 ಗಂಟೆಯೊಳಗೆ ಕಾಲೇಜಿಗೆ ಅರ್ಜಿ ಸಲ್ಲಿಸಬೇಕಾಗಿರುತ್ತದೆ.
ಭಾಗವಹಿಸುವವರು ಮುಂಗಡ ಠೇವಣಿ ಹಣ (EMD) ರೂ. 10,000/- (ಹತ್ತು ಸಾವಿರ ರೂಪಾಯಿಗಳು ಮಾತ್ರ) ಗಳನ್ನು ಸಂಸ್ಥೆಯ ನಗದು ವಿಭಾಗದಲ್ಲಿ ಪಾವತಿಸಬೇಕಿರುತ್ತದೆ. ಹರಾಜಿನಲ್ಲಿ ಬಿಡ್ ಸಿಗದೇ ಇದ್ದಂತಹ ಬಿಡ್‍ದಾರರಿಗೆ ನಿಯಮಾನುಸಾರ ಮುಂಗಡ ಠೇವಣಿಯನ್ನು ಹಿಂದಿರುಗಿಸಲಾಗುವುದು.
ಅನುಪಯುಕ್ತ ಬ್ಯಾಟರಿಗಳಿಗೆ ಬಿಡ್ ಮಾಡುವ ಆಸಕ್ತರು ಕಡ್ಡಾಯವಾಗಿ ಭಾರತ ಸರ್ಕಾರದ ಮಾಲಿನ್ಯ ನಿಯಂತ್ರಣ ಮಂಡಳಿ (CPCB)ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಇವರಿಂದ ಮಾನ್ಯತೆ ಪಡೆದ ಅಧಿಕೃತ ಪ್ರಮಾಣ ಪತ್ರವನ್ನು ಹೊಂದಿರಬೇಕು.
ಹರಾಜಿನ ಕುರಿತಾದ ಹೆಚ್ಚಿನ ವಿವರವಾದ ಮಾಹಿತಿಯನ್ನು ಸಂಸ್ಥೆಯ ಅಧಿಕೃತ ಸೂಚನಾಫಲಕದಲ್ಲಿ (Notice Board) ವೀಕ್ಷಿಸಬಹುದಾಗಿದೆ ಎಂದು ಸರ್ಕಾರಿ ಎಸ್‍ಕೆಎಸ್‍ಜೆಟಿ ಮಹಾವಿದ್ಯಾಲಯದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
