ಬೆಂಗಳೂರು ನಗರ (Bengaluru North) ಉತ್ತರ ವಿಭಾಗದ 13 ಪೊಲೀಸ್ (Police Limits) ಠಾಣಾ ಸರಹದ್ದುಗಳಲ್ಲಿ ದಿನಾಂಕ:30.06.2026 ರಂದು ರಾತ್ರಿ ವೇಳೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಎಲ್ಲಾ ವರ್ಗದ ಅಧಿಕಾರಿ/ಸಿಬ್ಬಂದಿಗಳು ಗಸ್ತಿನಲ್ಲಿದ್ದು(on patrol), ನಾಕಾ ಪಾಯಿಂಟ್‌ಗಳನ್ನು ನಿಯೋಜಿಸಿಕೊಂಡು(Assigned) ಕರ್ತವ್ಯ ನಿರ್ವಹಿಸುವ ವೇಳೆಯಲ್ಲಿ ದ್ವಿ-ಚಕ್ರವಾಹನಗಳಲ್ಲಿ ವ್ಹಿಲೀಂಗ್, ತ್ರಿಬಲ್ ರೆಡಿಂಗ್ ಮಾಡುತ್ತಿದ್ದ ಮತ್ತು ಅನುಮಾನಾಸ್ಪದ ವಾಹನಗಳನ್ನು ಪರಿಶೀಲನೆ ಮಾಡಿ, 11 ದ್ವಿ-ಚಕ್ರವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಈ ಕಾರ್ಯಾಚರಣೆಯನ್ನು ಮಾನ್ಯ ಪೊಲೀಸ್ ಆಯುಕ್ತರು, ಬೆಂಗಳೂರು ನಗರ, ಮಾನ್ಯ ಜಂಟಿ ಪೊಲೀಸ್ ಆಯುಕ್ತರು, ಪಶ್ಚಿಮ, ಬೆಂಗಳೂರು ನಗರ ಪೊಲೀಸ್ ಕಮಿಷನರ್ ರವರುಗಳ ಮಾರ್ಗದರ್ಶನದಲ್ಲಿ ಶ್ರೀ.ಬಿ.ಎಸ್. ನೇಮಗೌಡ, ಐ.ಪಿ.ಎಸ್. ಉಪ ಪೊಲೀಸ್ ಆಯುಕ್ತರು, ಉತ್ತರ ವಿಭಾಗ ರವರ ನೇತೃತ್ವದಲ್ಲಿ ಮೂರು ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರುಗಳು, 13 ಪೊಲೀಸ್ ಠಾಣೆಗಳ ಪೊಲೀಸ್ ಇನ್ಸ್ಪೆಕ್ಟರ್ ರವರುಗಳು, ಪಿ.ಎಸ್.ಐ, ಮತ್ತು ಸಿಬ್ಬಂದಿಗಳು ಈ ವಿಶೇಷ ಕಾರ್ಯಾಚರಣೆಯನ್ನು ಕೈಗೊಂಡಿರುತ್ತಾರೆ.
