ಹಾಸನ ತಾ. ಅಂಕಪುರ ಗ್ರಾಮದ ರಂಗನಟರು ನಿವೃತ್ತ ಪ್ರಾಂಶುಪಾಲರು ಪ್ರೋ. ಎ. ಹೆಚ್. ಗಣೇಶ್(Prof. A.H. Ganesh) ಅಂಕಪುರ ಇವರ ಜೀವಿತಾವಧಿಯ ರಂಗಭೂಮಿ ಮತ್ತು ಕನ್ನಡ ನಾಡು ನುಡಿ ಸೇವೆಯನ್ನು ಗುರುತಿಸಿ ಬೆಂಗಳೂರಿನ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಶ್ರೀಯುತರನ್ನು ಕರ್ನಾಟಕ ಕಲಾ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದೆ. (Karnataka kala Ratna Award) ಕದಂಬ ಸೈನ್ಯ ಕನ್ನಡ ಸಂಘಟನೆ ಹಾಸನ ಜಿಲ್ಲಾಧ್ಯಕ್ಷರು, ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನಹಡಗಲಿ ಇದರ ರಂಗಗೀತೆ ಗಾಯನ ರಂಗ ಸಂಗೀತ ವಿಭಾಗ ಹಾಸನ ಜಿಲ್ಲಾ ಸಂಚಾಲಕರಾಗಿ ಕನ್ನಡ ನಾಡು ನುಡಿ ಸೇವೆ, ಸಾಹಿತ್ಯ ಸಾಂಸ್ಕೃತಿಕ ಸಂಘಟನೆ ಮತ್ತು ರಂಗ ಚಟುವಟಿಕೆಯಲ್ಲಿ ಬೋಧನಾ ವೃತ್ತಿಯಿಂದ ನಿವೃತ್ತಿಗೊಂಡ ನಂತರವೂ ಕ್ರಿಯಾಶೀಲರಾಗಿ ಸೇವೆ ಸಲ್ಲಿಸುತ್ತಾ ಗ್ರಾಮದ ಗ್ರಾಮದೇವತೆ ದೇವಸ್ಥಾನಗಳ ಅಭಿವೃದ್ಧಿ ಸಮಿತಿ ಕಾರ್ಯದರ್ಶಿಯಾಗಿ ಊರಿನ ಗ್ರಾಮ ದೇವತೆ ಜಾತ್ರೆ ಉತ್ಸವ ನಾಟಕ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸುವಲ್ಲಿ ಕ್ರಿಯಾಶೀಲರು, ಕನ್ನಡ ಪರ ಕಾಳಜಿಯ ಪ್ರೊ. ಎ. ಹೆಚ್. ಗಣೇಶ್ ಅಂಕಪುರ ಅವರಿಂದ ಇನ್ನೂ ಹೆಚ್ಚಿನ ಸೇವೆ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರಕ್ಕೆ ದೊರಕಲಿ ಎಂದು ಕದಂಬ ಸೈನ್ಯ ಹೊಳೆಸರಸಿಪುರ ತಾ. ಅಧ್ಯಕ್ಷರು ಕಲಾವಿದರು,ಪ್ರಗತಿ ಪರ ರೈತರು, ಸಮಾಜ ಸೇವಕರು ಪುಟ್ಟಸ್ವಾಮಿ ಗೌಡರು ರಾಮೇನಹಳ್ಳಿ ಕರ್ನಾಟಕ ರಾಜ್ಯ ಬರಹಗಾರರ ಸಂಘ ರಾಜ್ಯಾಧ್ಯಕ್ಷರು ಶ್ರೀ ಮಧು ನಾಯ್ಕ್ ಲಂಬಾಣಿ ಅವರು ಶುಭ ಹಾರೈಸಿದ್ದಾರೆ.
ಭಾರತದ ಪ್ರಧಾನಿಯಾಗಿ ದೀರ್ಘಕಾಲ ಆಡಳಿತ ನಡೆಸಿ ಪ್ರಧಾನಿ ಮೋದಿ ದಾಖಲೆ

