ಪರಿಸರ ಸ್ನೇಹಿ ವಿದ್ಯುತ್ ಪ್ರಸರಣ ವ್ಯವಸ್ಥೆಯತ್ತ ಕೆಪಿಟಿಸಿಎಲ್ ಹೆಜ್ಜೆ

ಬೆಂಗಳೂರು: ಪರಿಸರ ಸಂರಕ್ಷಣೆ ಮತ್ತು ವಿದ್ಯುತ್ ಜಾಲದ ಆಧುನೀಕರಣದತ್ತ ಮಹತ್ವದ ಹೆಜ್ಜೆಯನ್ನಿಟ್ಟಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್), (KPTCL) ತನ್ನ ಹೈ- ವೋಲ್ಟೇಜ್ ಟ್ರಾನ್ಸ್‌ಫಾರ್ಮರ್‌ಗಳ ಜಾಲದಲ್ಲಿ ಬಳಕೆಯಲ್ಲಿದ್ದ ಸಾಂಪ್ರದಾಯಿಕ ಮತ್ತು ಹಾನಿಕಾರಕ ಮಿನರಲ್ ಆಯಿಲ್ (ಖನಿಜ ತೈಲ) (Mineral Oil) ಗೆ ಪರ್ಯಾಯವಾಗಿ ಪರಿಸರ ಸ್ನೇಹಿ ಹಾಗೂ ಬಯೋಡಿಗ್ರೇಡಬಲ್‌ ನ್ಯಾಚುರಲ್ ಎಸ್ಟರ್ ಆಯಿಲ್ ಗೆ (Biodegradable Natural Estor Oil) ಬದಲಾಯಿಡುವ ಕಾರ್ಯಕ್ಕೆ ಮುನ್ನಡಿ ಬರೆದಿದೆ.

ರಾಜ್ಯದಾದ್ಯಂತ ಲಕ್ಷಾಂತರ ಗ್ರಾಹಕರಿಗೆ ಸುರಕ್ಷಿತ ಮತ್ತು ಪರಿಸರ ಸ್ನೇಹಿ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳವ ನಿಟ್ಟಿನಲ್ಲಿ, ಕೆಪಿಟಿಸಿಎಲ್‌ ಕೈಗೊಂಡಿರುವ ಈ ಪರಿಸರ ಸ್ನೇಹಿ ಉಪಕ್ರಮವು, ಮೂಲಸೌಕರ್ಯ ನಿರ್ವಹಣೆಯಲ್ಲಿ ಒಂದು ನಿರ್ಣಾಯಕ ಮೈಲಿಗಲ್ಲಾಗಿದೆ.

ರಾಜ್ಯದಾದ್ಯಂತ ವಿದ್ಯುತ್ ಜಾಲದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 3,754 ಟ್ರಾನ್ಸ್‌ಫಾರ್ಮರ್‌ಗಳ ಪೈಕಿ, ಕೆಪಿಟಿಸಿಎಲ್(KPTCL)  ಕಾರ್ಯತಂತ್ರದ ಭಾಗವಾಗಿ 45 ಹೈ-ಕೆಪಾಸಿಟಿ ಟ್ರಾನ್ಸ್‌ಫಾರ್ಮರ್‌ಗಳನ್ನು ಸಸ್ಯ ಆಧಾರಿತ ನ್ಯಾಚುರಲ್ ಎಸ್ಟರ್ ಆಯಿಲ್ ನೊಂದಿಗೆ ಬದಲಾಯಿಸಲಾಗಿದೆ. ಹೊಸ ಟ್ರಾನ್ಸ್‌ಫಾರ್ಮರ್‌ಗಳನ್ನು ಅಳವಡಿಸುವ ಆರ್ಥಿಕ ಹೊರೆಯ ಬದಲಿಗೆ, 15 ವರ್ಷಗಳಿಗಿಂತಲೂ ಹಳೆಯ ಟ್ರಾನ್ಸ್‌ಫಾರ್ಮರ್‌ಗಳನ್ನು ಗುರುತಿಸಿ, ಅವುಗಳ ಜೀವಿತಾವಧಿ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ. ಈ ವಿಧಾನವು ಹಳೆಯ ಗ್ರಿಡ್ ಸ್ವತ್ತುಗಳ ಉಷ್ಣ ದಕ್ಷತೆಯನ್ನು (Thermal Efficiency) ಹೆಚ್ಚಿಸುವುದಲ್ಲದೆ, ಸಾಂಪ್ರದಾಯಿಕ ಪೆಟ್ರೋಲಿಯಂ ಆಧಾರಿತ ತೈಲಗಳ ಬಳಕೆಯಿಂದ ಉಂಟಾಗುವ ಪರಿಸರ ಮಾಲಿನ್ಯದ ಅಪಾಯಗಳನ್ನು ತಡೆಯುತ್ತದೆ.

ಸಾಮಾನ್ಯ ಮಿನರಲ್ ಆಯಿಲ್ ಗಳಿಗೆ ಹೋಲಿಸಿದರೆ, ಸಸ್ಯ ಆಧಾರಿತ ಎಸ್ಟರ್ ತೈಲಗಳು ಬಯೋಡಿಗ್ರೇಡಬಲ್‌ ಆಗಿವೆ ಹಾಗೂ ಹೆಚ್ಚಿನ ಉಷ್ಣ ಸಹಿಷ್ಣುತೆಯನ್ನು ಹೊಂದಿವೆ. ಇದರಿಂದಾಗಿ ಹೆಚ್ಚು ಜನನಿಬಿಡ ನಗರ ಪ್ರದೇಶಗಳು ಹಾಗೂ ದೂರದ ಉಪಕೇಂದ್ರಗಳಲ್ಲಿ ಕಾರ್ಯಾಚರಣೆಯ ಸುರಕ್ಷತೆ ಹೆಚ್ಚಾಗಲಿದೆ.

ಈಗಾಗಲೇ ಕೆಪಿಟಿಸಿಎಲ್‌ ವತಿಯಿಂದ ಪ್ರಾಯೋಗಿಕವಾಗಿ 45 ಟ್ರಾನ್ಸ್‌ಫಾರ್ಮರ್‌ಗಳಲ್ಲಿ ನ್ಯಾಚುರಲ್‌ ಎಸ್ಟರ್‌ ಆಯಿಲ್‌ (Natural Ester oil in Transformer.)ಅಳವಡಿಸಲಾಗಿದ್ದು, ಸುಮಾರು 1500 ಲೀಟರ್‌ಗಳಷ್ಟು ಮಿನರಲ್‌ ಆಯಿಲ್‌ ಬಳಕೆಯನ್ನು ತಪ್ಪಿಸಲಾಗಿದೆ. ಹಂತಹಂತವಾಗಿ ಈ ಯೋಜನೆಯನ್ನು ವಿಸ್ತರಿಸುವ ಮೂಲಕ ಕೆಪಿಟಿಸಿಎಲ್‌ ತನ್ನ ವ್ಯಾಪ್ತಿಯಲ್ಲಿನ ಟ್ರಾನ್ಸ್‌ಫಾರ್ಮ್‌ರ್‌ಗಳಲ್ಲಿ ಪರಿಸರ ಸ್ನೇಹೀ ಆಯಿಲ್‌ ಅಳವಡಿಸಿಕೊಳ್ಳಲಿದೆ.

ಇಂಧನ ಹಾಗೂ ಪ್ರವಾಸೋದ್ಯಮ ಸಚಿವರಾದ ಕೆ.ಜೆ. ಜಾರ್ಜ್ ರವರು .“ಮೂಲಸೌಕರ್ಯಗಳ ಆಧುನೀಕರಣದ ಜೊತೆಗೆ ಪರಿಸರ ಸಂರಕ್ಷಣೆಗೂ ಸಮಾನ ಒತ್ತು ನೀಡುವ  ಸುಸ್ಥಿರ ನೀತಿಗಳನ್ನು ಅಳವಡಿಸಿಕೊಳ್ಳುವಲ್ಲಿ ಕರ್ನಾಟಕ ಸದಾ ಮುಂಚೂಣಿಯಲ್ಲಿದೆ. ನಮ್ಮ ಪ್ರಸರಣ ಜಾಲದಲ್ಲಿ ಬಯೋಡಿಗ್ರೇಡಬಲ್‌ ನ್ಯಾಚುರಲ್ ಎಸ್ಟರ್ ಆಯಿಲ್ ಅನ್ನು ಅಳವಡಿಸಿಕೊಳ್ಳುವ ಮೂಲಕ, ಕೆಪಿಟಿಸಿಎಲ್ ನಮ್ಮ ಪರಿಸರವನ್ನುವಿಷಕಾರಿ ರಾಸಾಯನಿಕಗಳಿಂದ ರಕ್ಷಿಸುವುದರೊಂದಿಗೆ, ಪ್ರಮುಖ ವಿದ್ಯುತ್ ಕೇಂದ್ರಗಳಲ್ಲಿ ಬೆಂಕಿ ಅವಘಡಗಳ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡಲು ಮುಂದಾಗಿದೆ ಎಂದು  ಹೇಳಿದರು.

ಕೆಪಿಟಿಸಿಎಲ್ ನ ವ್ಯವಸ್ಥಾಪಕ ನಿರ್ದೇಶಕರಾದ  ಡಾ. ವಿ. ರಾಮ್ ಪ್ರಸಾತ್ ಮನೋಹರ್ ( V. Ram Prasath Manohar, )ಅವರು, ಬೆಳೆಯುತ್ತಿರುವ ಕೈಗಾರಿಕಾ ಮತ್ತು ನಗರ ಪ್ರದೇಶದ ವಿದ್ಯುತ್ ಬೇಡಿಕೆಯನ್ನು ಪೂರೈಸಲು ನಾವು ನಮ್ಮ ಪ್ರಸರಣ ಜಾಲವನ್ನು ವೇಗವಾಗಿ ವಿಸ್ತರಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಕಾರ್ಯಾಚರಣೆಯ ಸುಸ್ಥಿರತೆಯು ನಮ್ಮ ಪ್ರಮುಖ ಆದ್ಯತೆಯಾಗಿದೆ. 15 ವರ್ಷ ಮೇಲ್ಪಟ್ಟ ಹಳೆಯ ಟ್ರಾನ್ಸ್‌ಫಾರ್ಮರ್‌ಗಳಿಗೆ ನ್ಯಾಚುರಲ್ ಎಸ್ಟರ್ ಆಯಿಲ್ ಅಳವಡಿಸಲು ಆದ್ಯತೆ ನೀಡುವುದರಿಂದ, ಅತಿ ಕಡಿಮೆ ವೆಚ್ಚದಲ್ಲಿ ಪ್ರಮುಖ ಗ್ರಿಡ್ ಸ್ವತ್ತುಗಳ ಜೀವಿತಾವಧಿಯನ್ನು ಹೆಚ್ಚಿಸಲು ಸಾಧ್ಯವಾಗುತ್ತಿದೆ. ಕೆಪಿಟಿಸಿಎಲ್ ನ ಎಂಜಿನಿಯರಿಂಗ್ ಕಾರ್ಯವೈಖರಿಯಲ್ಲಿ ಪರಿಸರ ಕಾಳಜಿಯು ಹಾಸುಹೊಕ್ಕಾಗಿರುವುದನ್ನು ಖಚಿತಪಡಿಸಿಕೊಳ್ಳಲು ನಾವು ಸಾಂಪ್ರದಾಯಿಕ ವಿಧಾನಗಳಿಂದ ವ್ಯವಸ್ಥಿತವಾಗಿ ಬದಲಾಗುತ್ತಿದ್ದೇವೆ ಎಂದು ತಿಳಿಸಿದರು.

Hot this week

ಹಾಸನ ಮಹಾರಾಜ ಪಾರ್ಕಿನಲ್ಲಿ ಪ್ರೇಕ್ಷಕರನ್ನು ರಂಜಿಸಿದ ಗಾಯನೋತ್ಸವ

ಹಾಸನ: ನಗರದ ಮಹಾರಾಜ ಪಾರ್ಕಿನಲ್ಲಿ (Hassan - Maharaj Park) ಭಾನುವಾರ...

ಸ್ವಾನಂದಾಶ್ರಮದಲ್ಲಿ ಶ್ರೀ ಏಕಾಕ್ಷರ ಮಹಾಗಣಪತಿ ಪ್ರತಿಷ್ಠಾಪನಾ ಮಹೋತ್ಸವ

ಬೆಂಗಳೂರು ನಗರದ ದಕ್ಷಿಣ ಅಂಚಿನ ಕನಕಪುರ ರಸ್ತೆಯ (Agara) ಅಗರ(K–ತಾತಗುಣಿಯಲ್ಲಿ ನೆಲೆಗೊಂಡಿರುವ...

ಪ್ರೊ. ಕೆ.ಟಿ. ಪಾಂಡುರಂಗಿ ಹಾಗೂ ಪಂಡಿತ ಗುರುರಾಜಾಚಾರ್ಯ ಪಾಂಡುರಂಗಿ ಅವರ ಶತಮಾನೋತ್ಸವ ಸಂಭ್ರಮ

ಬೆಂಗಳೂರಿನಲ್ಲಿ ಎರಡು ದಿನಗಳ ವೈಭವದ ಜ್ಞಾನ-ಭಕ್ತಿ ಮಹೋತ್ಸವ ಭಾರತೀಯ ತತ್ತ್ವಶಾಸ್ತ್ರ, ದ್ವೈತ ವೇದಾಂತ...

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಜಯ ನಿವೃತ್ತ ಶಿಕ್ಷಕರ ಸಂಘದ ವತಿಯಿಂದ ಸನ್ಮಾನ

ಬೆಂಗಳೂರು: ಪ್ರತಿಭೆ, ಪರಿಶ್ರಮ ಹಾಗೂ ಶೈಕ್ಷಣಿಕ ಸಾಧನೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವಿಜಯ...

ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಬಿಜೆಪಿ ವತಿಯಿಂದ ಸ್ವಚ್ಛತಾ ಕಾರ್ಯ

ಬೆಂಗಳೂರು: ನಗರದ ಮೈಸೂರು ಬ್ಯಾಂಕ್ ವೃತ್ತದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ...

Topics

ಹಾಸನ ಮಹಾರಾಜ ಪಾರ್ಕಿನಲ್ಲಿ ಪ್ರೇಕ್ಷಕರನ್ನು ರಂಜಿಸಿದ ಗಾಯನೋತ್ಸವ

ಹಾಸನ: ನಗರದ ಮಹಾರಾಜ ಪಾರ್ಕಿನಲ್ಲಿ (Hassan - Maharaj Park) ಭಾನುವಾರ...

ಸ್ವಾನಂದಾಶ್ರಮದಲ್ಲಿ ಶ್ರೀ ಏಕಾಕ್ಷರ ಮಹಾಗಣಪತಿ ಪ್ರತಿಷ್ಠಾಪನಾ ಮಹೋತ್ಸವ

ಬೆಂಗಳೂರು ನಗರದ ದಕ್ಷಿಣ ಅಂಚಿನ ಕನಕಪುರ ರಸ್ತೆಯ (Agara) ಅಗರ(K–ತಾತಗುಣಿಯಲ್ಲಿ ನೆಲೆಗೊಂಡಿರುವ...

ಪ್ರೊ. ಕೆ.ಟಿ. ಪಾಂಡುರಂಗಿ ಹಾಗೂ ಪಂಡಿತ ಗುರುರಾಜಾಚಾರ್ಯ ಪಾಂಡುರಂಗಿ ಅವರ ಶತಮಾನೋತ್ಸವ ಸಂಭ್ರಮ

ಬೆಂಗಳೂರಿನಲ್ಲಿ ಎರಡು ದಿನಗಳ ವೈಭವದ ಜ್ಞಾನ-ಭಕ್ತಿ ಮಹೋತ್ಸವ ಭಾರತೀಯ ತತ್ತ್ವಶಾಸ್ತ್ರ, ದ್ವೈತ ವೇದಾಂತ...

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಜಯ ನಿವೃತ್ತ ಶಿಕ್ಷಕರ ಸಂಘದ ವತಿಯಿಂದ ಸನ್ಮಾನ

ಬೆಂಗಳೂರು: ಪ್ರತಿಭೆ, ಪರಿಶ್ರಮ ಹಾಗೂ ಶೈಕ್ಷಣಿಕ ಸಾಧನೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವಿಜಯ...

ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಬಿಜೆಪಿ ವತಿಯಿಂದ ಸ್ವಚ್ಛತಾ ಕಾರ್ಯ

ಬೆಂಗಳೂರು: ನಗರದ ಮೈಸೂರು ಬ್ಯಾಂಕ್ ವೃತ್ತದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ...

ವಿಕಸಿತ ಭಾರತ ಸಂಕಲ್ಪ ಸಮಾವೇಶ – ನಿರ್ಮಲಾ ಸೀತಾರಾಮನ್

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಯವರ ಸರ್ಕಾರವು 12...

ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಮಹತ್ವ ಹೆಚ್ಚುತ್ತಿದೆ: ರಾಜ್ಯಪಾಲ ಗೆಹ್ಲೋಟ್

ದಾವಣಗೆರೆ / Davanagere: ಜೀವನಶೈಲಿ ಸಂಬಂಧಿತ ರೋಗಗಳು, ಮಾನಸಿಕ ಒತ್ತಡ ಮತ್ತು...

ಸಂಪುಟ ಸೇರಲು ಮ್ಯಾನೇಜ್ ಮೆಂಟ್ ಕೋಟ -ಪೇಮೆಂಟ್ ಕೋಟ: BY ವಿಜಯೇಂದ್ರ

ಗ್ಯಾರಂಟಿ ಫಲಾನುಭವಿಗಳ ಸಂಖ್ಯೆ ಇಳಿಸುವ ದುಸ್ಸಾಹಸಕ್ಕೆ ಮುಂದಾದ ಕಾಂಗ್ರೆಸ್ ಸರಕಾರ: ವಿಜಯೇಂದ್ರ...

Related Articles