“ಯೋಗವೆಂದರೆ ಭೂಮಿಯಲ್ಲಿನ ಆರೋಗ್ಯ ಸಂಪತ್ತು”

” ಯೋಗ ವೆಂದರೆ ಭೂಮಿಯಲ್ಲಿನ ಆರೋಗ್ಯ ಸಂಪತ್ತು “.
“ಯೋಗ” ಎಂದರೆ ಸೇರಿಸು, ಒಂದಾಗಿಸು, ಒಂದುಗೂಡಿಸು, ಕೇಂದ್ರೀಕರಿಸು, ಜೋಡಿಸು ಎಂದರ್ಥ.
ಮನಸ್ಸು ದೇಹ ಮತ್ತು ಉಸಿರನ್ನು ಪ್ರಜ್ಞಾಪೂರ್ವಕವಾಗಿ ಒಂದುಗೂಡಿಸುವುದೇ “ಯೋಗ”
“ಯೋಗ” ಅತ್ಯಂತ ಪ್ರಾಚೀನವಾದ ಹಾಗೂ ಪವಿತ್ರವಾದ ಕಲೆ ಮತ್ತು ವಿಜ್ಞಾನ. ಯೋಗದ ಬಗ್ಗೆ ಪುರಾಣಗಳಲ್ಲಿ, ವೇದೋಪನಿಷತ್ತುಗಳಲ್ಲಿ , ಹಾಗೂ ಭಗವದ್ಗೀತೆಯಲ್ಲಿಯೂ ಕೂಡ ಉಲ್ಲೇಖವಿದೆ.

ಯೋಗದ ಮೂಲಪುರುಷ “ಶಿವ” ಎಂಬ ಉಲ್ಲೇಖ ಗ್ರಂಥಗಳಲ್ಲಿವೆ.
” ಶ್ರೀ ಕೃಷ್ಣ” ಭಗವದ್ಗೀತೆಯಲ್ಲಿ – ಸಿದ್ಧಿ ಮತ್ತು ಆಸಿದ್ಧಿ ಗಳನ್ನು ಸಮಾನ ಮನಸ್ಸಿನಿಂದ ನೋಡುವುದೇ “ಯೋಗ” ಎಂದು ತಿಳಿಸಿದ್ದಾರೆ.
” ಪತಾಂಜಲಿ” ಮಹರ್ಷಿಗಳು ತಮ್ಮ ಯೋಗ ಸೂತ್ರದಲ್ಲಿ – ಚಿತ್ತದ ವೃತ್ತಿಗಳನ್ನು ನಿರೋಧಿಸುವುದೇ ಯೋಗವೆಂದು ಹೇಳಿದ್ದಾರೆ.

ಹೀಗೆ ಯೋಗವನ್ನು ಋಷಿ ಮುನಿಗಳು ತಮ್ಮ ಜೀವನದಲ್ಲಿ ಅನುಸರಿಸಿ ಮತ್ತು ಮುಂದುವರಿಸಿಕೊಂಡು ಬಂದು ವಿಶ್ವಕ್ಕೆ ಪರಿಚಯಿಸಿದ್ದಾರೆ, ಇದು ನಮಗೆ ಇಂದಿನ ಕಾಲಘಟ್ಟದಲ್ಲಿ ಸರ್ವ ಶ್ರೇಷ್ಠ ಕೊಡುಗೆಯಾಗಿದೆ . ಯೋಗ ಯಾವುದೇ ಒಬ್ಬ ವ್ಯಕ್ತಿಗೆ, ಸಮಾಜಕ್ಕೆ, ಪಂಗಡಕ್ಕೆ, ಜಾತಿಗೆ, ಧರ್ಮಕ್ಕೆ ಅಥವಾ ರಾಷ್ಟ್ರಕ್ಕೆ ಸೀಮಿತವಾದದ್ದಲ್ಲ, ಇದು ಅನಂತ ಹಾಗೂ ಅಪರಿಮಿತವಾದದ್ದು.
” ಯೋಗ” ಎಂದರೆ ಸೇರಿಸುವ ಕುಡಿಸು ಜೋಡಿಸು ಒಂದಾಗಿಸು ಎಂಬ ಅರ್ಥಗಳಿವೆ, ಈ ಭೂಮಿ ಮೇಲೆ ವಾಸಿಸುವ ಪ್ರತಿಯೊಂದು ಜೀವಿಯು ತಮ್ಮ ಉಸಿರನ್ನು ಪ್ರಕೃತಿಯೊಡನೆ ಸೇರಿಸುತ್ತಾ, ಒಂದಾಗಿಸುತ್ತ, ಪ್ರಾಣ ಶಕ್ತಿಯಾದ ಉಸಿರನ್ನು ಪರಸ್ಪರ ಒಂದುಗೂಡಿಸುತ್ತಾ, ಸದಾ ಕಾಲ ಪ್ರಾಣವಾಯು ವನ್ನು ಪರಸ್ಪರ ವಿನಿಯೋಗ ಮಾಡುತ್ತಾ ಒಂದು ರೀತಿಯ ಸರ್ವಶ್ರೇಷ್ಠವಾದ ಯೋಗಾಭ್ಯಾಸವನ್ನು ತನಗರಿವಿಲ್ಲದಂತೆ ಹುಟ್ಟಿನಿಂದ ಸಾಯುವವರೆಗೂ ಪ್ರಾಣಾಯಾಮಭ್ಯಾಸವನ್ನು ಮಾಡುತ್ತಾ, ತನ್ನ ಪ್ರತಿಯೊಂದು ನಿಲುಮೆಯ ಬಂಗಿಗಳಿಂದ ಆಸನಗಳನ್ನು ಮಾಡುತ್ತಾ, ಪ್ರಕೃತಿಯನ್ನು ಸಂಪೂರ್ಣವಾಗಿ ಅವಲಂಬಿಸುತ್ತ ಬೆಳೆದು ಬಂದಿವೆ . ಅಂದರೆ ಜೀವಿಗಳ ಮೂಲಭೂತ ಅವಶ್ಯಕತೆಗಳಾದ ಗಾಳಿ, ನೀರು, ಬೆಳಕು, ಆಹಾರ ಮತ್ತು ಆಕಾಶ ಇತ್ಯಾದಿಗಳನ್ನು ಅನುಭವಿಸುತ್ತಾ, ಅನುಸರಿಸಿತ್ತ, ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅಸ್ತಿತ್ವದಲ್ಲಿವೆ.
ಸಹಸ್ರಾರು ವರ್ಷಗಳಿಂದ “ಯೋಗ” ಮನುಷ್ಯನ ಜೀವನದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಾ ಬಂದಿದೆ,
ಹಾಗೂ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಸಮತೋಲನವನ್ನು ಕಾಪಾಡುವಲ್ಲಿ ಕಾರಣಿಭೂತವಾಗಿದೆ. ಯೋಗ ತನ್ನದೇ ಆದ ಶಾಖೆಗಳನ್ನು ಒಳಗೊಂಡಿದೆ ಅವುಗಳಲ್ಲಿ ಪ್ರಮುಖವಾದಂದರೆ :- ಜ್ಞಾನ ಯೋಗ, ಕರ್ಮ ಯೋಗ, ಭಕ್ತಿ ಯೋಗ ಹಾಗೂ ರಾಜಯೋಗ ಇತ್ಯಾದಿಗಳು.
ಪತಂಜಲಿ ಮಹರ್ಷಿಯವರ ರಾಜಯೋಗದ ಪರಮ ಧ್ಯೇಯ :- ಅಷ್ಟ- ಅಂಗ-ಯೋಗ. ಇವರು ತಮ್ಮ ಯೋಗ ಸೂತ್ರಗಳಲ್ಲಿ, ಸಾಧನೆಯ 8 ಮೆಟ್ಟಿಲುಗಳಾದ ಯಮ, ನಿಯಮ, ಆಸನ, ಪ್ರಾಣಾಯಾಮ,ಪ್ರತ್ಯಹಾರ, ಧಾರಣ, ಧ್ಯಾನ ಮತ್ತು ಸಮಾಧಿ ಗಳ ಬಗ್ಗೆ ಸಂಪೂರ್ಣವಾಗಿ ವಿವರಿಸಿದ್ದಾರೆ.
ಅಷ್ಟಾಂಗ ಯೋಗ :-
ಸಂಪೂರ್ಣ ಜೀವನಕ್ಕೆ ಬೇಕಾದ ಯಮ:- ಅಂದರೆ ಸಾಮಾಜಿಕ ನೀತಿ ನಿರ್ಬಂಧಗಳು, ನಿಯಮ:- ಸ್ವಯಂ ನಿರ್ಬಂಧಗಳ ಆಚರಣೆಗಳು, ಆಸನ – ಪ್ರಾಣಾಯಾಮ- ಪ್ರತ್ಯಹಾರ :- ಇವು ದೇಹದ ಭಂಗಿ, ಉಸಿರಿನ ನಿಯಂತ್ರಣ, ಮನೋ ನಿಗ್ರಹದಿಂದ ಹೊರಪ್ರಪಂಚದ ಪ್ರಜ್ಞೆಗಳಿಂದ ಅಂತರ್ಮುಖಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ , ಧಾರಣ – ಧ್ಯಾನ ಮತ್ತು ಸಮಾಧಿ :- ಇಂದ್ರಿಯ ನಿಗ್ರಹ ಹೊಂದಿದ ಮನಸ್ಸು, ಅಂತರ್ಮುಖಿಯಾಗಿ ಏಕಾಗ್ರತೆಯಿಂದ ಪರಿಶುದ್ಧ ಪ್ರಜ್ಞೆಯೊಂದಿಗೆ ಅಷ್ಟಾಂಗ ಯೋಗದ ತುತ್ತ ತುದಿಯ ಸ್ಥಿತಿಯಾದ ಸಮಾಧಿ ಸ್ಥಿತಿಯನ್ನು ಅನುಭವಿಸುವುದು.
ಜೀವಾತ್ಮ ಮತ್ತು ಪರಮಾತ್ಮಗಳೆರಡು ಒಂದಾಗುವುದು…
ಹೀಗೆ ಯೋಗ ಭೂಮಿಯ ಮೇಲೆ ವಾಸಿಸುವ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಔಷಧಿಯಾಗಿದೆ.

ಅಂಬಿಕಾ ಸಿ
ಗಾಂಧಾರಿ ವಿದ್ಯೆ ಮತ್ತು ಯೋಗ ಶಿಕ್ಷಕಿ
( ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಮಾನ್ಯತೆ ಪಡೆದ ಯೋಗ ಶಿಕ್ಷಕಿ, ಚಿನ್ನದ ಪದಕ ವಿಜೇತರು, ಮತ್ತು 9 ತಿಂಗಳ ಗರ್ಭಾವಸ್ಥೆಯಲ್ಲಿ ಯೋಗ ಮಾಡುವುದರ ಮೂಲಕ ಪ್ರಪ್ರಥಮ ಬಾರಿಗೆ ಎರಡು ವಿಶ್ವ ದಾಖಲೆ ).

Hot this week

ಹಾಸನ ಮಹಾರಾಜ ಪಾರ್ಕಿನಲ್ಲಿ ಪ್ರೇಕ್ಷಕರನ್ನು ರಂಜಿಸಿದ ಗಾಯನೋತ್ಸವ

ಹಾಸನ: ನಗರದ ಮಹಾರಾಜ ಪಾರ್ಕಿನಲ್ಲಿ (Hassan - Maharaj Park) ಭಾನುವಾರ...

ಸ್ವಾನಂದಾಶ್ರಮದಲ್ಲಿ ಶ್ರೀ ಏಕಾಕ್ಷರ ಮಹಾಗಣಪತಿ ಪ್ರತಿಷ್ಠಾಪನಾ ಮಹೋತ್ಸವ

ಬೆಂಗಳೂರು ನಗರದ ದಕ್ಷಿಣ ಅಂಚಿನ ಕನಕಪುರ ರಸ್ತೆಯ (Agara) ಅಗರ(K–ತಾತಗುಣಿಯಲ್ಲಿ ನೆಲೆಗೊಂಡಿರುವ...

ಪ್ರೊ. ಕೆ.ಟಿ. ಪಾಂಡುರಂಗಿ ಹಾಗೂ ಪಂಡಿತ ಗುರುರಾಜಾಚಾರ್ಯ ಪಾಂಡುರಂಗಿ ಅವರ ಶತಮಾನೋತ್ಸವ ಸಂಭ್ರಮ

ಬೆಂಗಳೂರಿನಲ್ಲಿ ಎರಡು ದಿನಗಳ ವೈಭವದ ಜ್ಞಾನ-ಭಕ್ತಿ ಮಹೋತ್ಸವ ಭಾರತೀಯ ತತ್ತ್ವಶಾಸ್ತ್ರ, ದ್ವೈತ ವೇದಾಂತ...

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಜಯ ನಿವೃತ್ತ ಶಿಕ್ಷಕರ ಸಂಘದ ವತಿಯಿಂದ ಸನ್ಮಾನ

ಬೆಂಗಳೂರು: ಪ್ರತಿಭೆ, ಪರಿಶ್ರಮ ಹಾಗೂ ಶೈಕ್ಷಣಿಕ ಸಾಧನೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವಿಜಯ...

ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಬಿಜೆಪಿ ವತಿಯಿಂದ ಸ್ವಚ್ಛತಾ ಕಾರ್ಯ

ಬೆಂಗಳೂರು: ನಗರದ ಮೈಸೂರು ಬ್ಯಾಂಕ್ ವೃತ್ತದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ...

Topics

ವಿಕಸಿತ ಭಾರತ ಸಂಕಲ್ಪ ಸಮಾವೇಶ – ನಿರ್ಮಲಾ ಸೀತಾರಾಮನ್

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಯವರ ಸರ್ಕಾರವು 12...

ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಮಹತ್ವ ಹೆಚ್ಚುತ್ತಿದೆ: ರಾಜ್ಯಪಾಲ ಗೆಹ್ಲೋಟ್

ದಾವಣಗೆರೆ / Davanagere: ಜೀವನಶೈಲಿ ಸಂಬಂಧಿತ ರೋಗಗಳು, ಮಾನಸಿಕ ಒತ್ತಡ ಮತ್ತು...

ಸಂಪುಟ ಸೇರಲು ಮ್ಯಾನೇಜ್ ಮೆಂಟ್ ಕೋಟ -ಪೇಮೆಂಟ್ ಕೋಟ: BY ವಿಜಯೇಂದ್ರ

ಗ್ಯಾರಂಟಿ ಫಲಾನುಭವಿಗಳ ಸಂಖ್ಯೆ ಇಳಿಸುವ ದುಸ್ಸಾಹಸಕ್ಕೆ ಮುಂದಾದ ಕಾಂಗ್ರೆಸ್ ಸರಕಾರ: ವಿಜಯೇಂದ್ರ...

Related Articles