ಸ್ವಾಮಿ ವಿವೇಕಾನಂದರು ಪ್ರಾತಃಸ್ಮರಣೀಯರು ಮಾತ್ರವಲ್ಲ ಅನುಗಾಲ ಸ್ಮರಣೀಯರು.
ಅವರ ಬಾಲ್ಯ, ವಿದ್ಯಾಭ್ಯಾಸ, ಗುರು ರಾಮಕೃಷ್ಣರ ಭೇಟಿ, ಆಧ್ಯಾತ್ಮಿಕ ಅಧ್ಯಯನ, ಚಿಕಾಗೋ ಉಪನ್ಯಾಸ, ಜಗತ್ತಿನಾದ್ಯಂತ ನೀಡಿದ ಸನಾತನಧರ್ಮ ಪ್ರಸಾರ, ಅವರ ಬರಹ, ಸಮಾಜದ ಬಗ್ಗೆ ಇದ್ದ ಕಳಕಳಿ, ದೀನ, ದಲಿತರ ಉದ್ಧಾರಕ್ಕೋಸ್ಕರವಾಗಿ ಮಿಡಿತ ಅವರ ಹೃದಯ ಹಾಗೂ ಅವರ ರಾಷ್ಟçಪ್ರೇಮ ಮತ್ತು ಸಮಾಜ ಸೇವೆಗಳು ಇಂದಿಗೆ ಮಾತ್ರವಲ್ಲ ಮುಂದೆಯೂ ಅನುಕರಣೀಯವಾಗಿದೆ ಎಂದು(Swami Veereshananda of Sri Ramakrishna math, alon with other dignitaries, paid floral tributes to Swami vivekanada.) ಶ್ರೀ ರಾಮಕೃಷ್ಣ ಮಠದ ಸ್ವಾಮೀ ವೀರೇಶಾನಂದರು, ಇತರ ಗಣ್ಯರೊಂದಿಗೆ “ಸ್ವಾಮಿ ವಿವೇಕಾನಂದರಿಗೆ’’ ಪುಷ್ಪ ನಮನ ಸಲ್ಲಿಸಿದರು
ಬೇರೆಬೇರೆ ಕಾರಣಕ್ಕೆ ಮನಸ್ಸು ವಿಚಲಿತವಾದಾಗ ಅವರ ಒಂದೊAದು ನುಡಿಗಳು ನಮಗೆ ಪ್ರೇರಣದಾಯಕವಾಗಿದೆ. ಅವರ ಎಲ್ಲ ಆಲೋಚನೆಗಳು ಧನಾತ್ಮಕ ಹಾಗೂ ಸೃಜನಾತ್ಮಕವಾದುವು. ಸುಭದ್ರ ರಾಷ್ಟç ನಿರ್ಮಾಣಕ್ಕೆ ಬೇಕಾದ ಸದೃಢ ಯುವ ಸಮುದಾಯಕ್ಕೆ ಅವರು ಆದರ್ಶಪ್ರಾಯರಾಗಿ ಪ್ರೇರೇಪಕರಾಗಿದ್ದಾರೆ. ದೇಶಕ್ಕೆ, ಸಮಾಜಕ್ಕೆ ಏನನ್ನಾದರೂ ಅಲ್ಪ ಸೇವೆಯನ್ನು ಸಲ್ಲಿಸುವ ಮನಸ್ಸಿದ್ದರೆ ಅವರ ಸಂದೇಶಗಳನ್ನು ಅಧ್ಯಯನ ಮಾಡಿ, ಚಾಚು ತಪ್ಪದೇ ಅನುಸರಿಸಿದರೆ ಅದೇ ಭಗವಂತನ ಸೇವೆ, ಅದರಿಂದಲೇ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂಬುದು ಶ್ರೀ ರಾಮಕೃಷ್ಣ ಮಠದ ಸ್ವಾಮೀ ವೀರೇಶಾನಂದರು ಮಕ್ಕಳು ಹಾಗೂ ಯುವಕರನ್ನು ಉದ್ದೇಶಿಸಿ ನೀಡಿದ ಸ್ಮರಣೀಯ ನುಡಿಗಳು.
“ಯಾರು ಉಳಿದವರಿಗಾಗಿ ಶ್ರಮಿಸುತ್ತಾರೆಯೋ ಅವರದ್ದು ಮಾತ್ರ ಸಾರ್ಥಕ ಬದುಕು’’ ಎಂಬ ವಿವೇಕಾನಂದರ ನುಡಿಯಿಂದ ಪ್ರೇರೇಪಿತರಾಗಿ, ಅವಕಾಶ ವಂಚಿತ ಮಕ್ಕಳ ಹಾಗೂ ಯುವಜನತೆಯ ಸುಪ್ತ ಪ್ರತಿಭೆಯ ಪ್ರಕಾಶನಕ್ಕೆ ಅವಕಾಶಗಳನ್ನು ಕಲ್ಪಿಸಿಕೊಟ್ಟು, ಸಮಾಜಮುಖಿಯರನ್ನಾಗಿ ಮಾಡಿ ಅವರಲ್ಲಿ ಶ್ರೀ ವಿವೇಕಾನಂದ ಕಲಾಕೇಂದ್ರದ ಮೂಲಕ ಸಾಂಸ್ಕೃತಿಕ ಜಾಗೃತಿ ಹಾಗೂ ರಾಷ್ಟçಜಾಗೃತಿಯನ್ನು ಮೂಡಿಸುತ್ತಿರುವುದು ಅನುಕರಣೀಯ. ಈ ದಿಶೆಯಲ್ಲಿ ಕಳೆದ ೫೪ ವರ್ಷಗಳಿಂದ ಅಹರ್ನಿಶಿ ಶ್ರಮಿಸುತ್ತಿರುವ ಡಾ. ವಿ. ನಾಗರಾಜ್, ಡಾ. ಮುರಳೀಧರನ್, ಡಾ. ಶ್ವೇತಾ ಮತ್ತು ಯುವ ದೈವಿಕ್ ಅವರ ಪ್ರಯತ್ನ ಸಾರ್ಥಕವಾಗಿದೆ.
ಸುಂಕೇನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಸುಮಾರು ೩೫ ರಿಂದ ೪೦ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಅಭಿನಯ ಕರ‍್ಯಾಗಾರವನ್ನು ಆಯೋಜಿಸಿ, ಸಿದ್ಧಪಡಿಸಿದ “ವಿಶ್ವವಂದ್ಯ ವಿವೇಕಾನಂದ’’ ರಂಗರೂಪ ಒಂದು ಸಾರ್ಥಕ ಪ್ರಯತ್ನ. ಇದರ ಜೊತೆಗೆ “ಏಳಿ, ಎದ್ದೇಳಿ’’ ವರ್ಣಚಿತ್ರ ಪ್ರದರ್ಶನವು, ವಿವೇಕಾನಂದರ ಸಮಗ್ರ ಜೀವನವನ್ನು ಪ್ರತಿಬಿಂಬಿಸುವ ಸಂಕ್ಷಿಪ್ತ ರೂಪ, ನೋಡುಗರ ಮನಸೂರೆಗೊಳ್ಳುವ ಪ್ರದರ್ಶನ ಇದಾಗಿದೆ ಎಂದೂ ಇದನ್ನೇ ಮುಂದುವರಿಸಿಕೊAಡು ಹೋಗಿ ಎಂಬ ಆಶಯ ನುಡಿಗಳಿಂದ ಕಲಾಕೇಂದ್ರದ ಎಲ್ಲರನ್ನು ಅಭಿನಂದಿಸಿದರು.
ಪ್ರದರ್ಶನವನ್ನು ವೀಕ್ಷಿಸಿದ ವಿಶೇಷ ಆಹ್ವಾನಿತರಾದ ಸಮ್ಯಕ್ ಕಣ್ಣಿನ ಆಸ್ಪತ್ರೆಯ ಸಂಸ್ಥಾಪಕರಾದ ಡಾ. ಶ್ವೇತಾ, ಆದರ್ಶ ಪದವಿ ಕಾಲೇಜಿನ ಪ್ರಾಂಶುಪಾಲರಾದ, ಡಾ. ಪ್ರಶಾಂತ್ ಮತ್ತು ಸುಂಕೇನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಡಾ. ಭವ್ಯ ಎಲ್. ಮತ್ತು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀನಾರಾಯಣ್ ಅವರೆಲ್ಲರನ್ನು ಕಲಾಕೇಂದ್ರದ ಕಾರ್ಯದರ್ಶಿಗಳಾದ ಡಾ. ವಿ. ನಾಗರಾಜ್ ಅವರು ಅಭಿವಂದಿಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಸಂಸ್ಕೃತಿ ಸಚಿವಾಲಯ, ಭಾರತ ಸರ್ಕಾರ ನೀಡುತ್ತಿರುವ ಪ್ರೋತ್ಸಾಹಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.

