ಬೆಂಗಳೂರು : ಮಲ್ಲೇಶ್ವರದ(Malleswaram) ಭಾರತೀಯ ವಿಜ್ಞಾನ (IISc) ಸಂಸ್ಥೆಯ ಪಕ್ಕದಲ್ಲಿರುವ ಶ್ರೀ ಸರ್ಕಲ್ ಮಾರಮ್ಮ (Cricle Maramma Temple) ದೇವಸ್ಥಾನದಲ್ಲಿ ಅಕ್ಟೋಬರ್ 11 ರಿಂದ 21ರ ವರೆಗೆ ಶರನ್ನವ ರಾತ್ರೋತ್ಸವ (Sharannavaratri) ಕಾರ್ಯಕ್ರಮ ಏರ್ಪಡಿಸಲಾಗಿದೆ.
ಧಾರ್ಮಿಕ ಕಾರ್ಯಕ್ರಮಗಳು : ಸಮಾರಂಭದ ಎಲ್ಲಾ ದಿನಗಳಲ್ಲೂ ಶ್ರೀ ಅಮ್ಮನವರಿಗೆ ವಿಧ ವಿಧವಾದ ಅಲಂಕಾರಗಳು, ಮಧ್ಯಾಹ್ನ 1-00 ಗಂಟೆಗೆ ಸಾಮೂಹಿಕ ಲಲಿತ ಸಹಸ್ರನಾಮ ಪಾರಾಯಣ.
ಸಾಂಸ್ಕೃತಿಕ ಕಾರ್ಯಕ್ರಮಗಳು :
ಪ್ರತಿದಿನ ಸಂಜೆ 6-30ಕ್ಕೆ. ಅಕ್ಟೋಬರ್ 11-ಉದ್ಘಾಟನೆ,
ಅಕ್ಟೋಬರ್ 12-ಕು|| ನಿರೀಕ್ಷಾ ಮಂಜುನಾಥ್ ರಾವ್ ಮತ್ತು ಸಂಗಡಿಗರಿಂದ “ಹರಿನಾಮ ಸಂಕೀರ್ತನೆ”,
ಅಕ್ಟೋಬರ್ 13-ಆದಿಶಕ್ತಿ ಗಂಗಮ್ಮ ಭಕ್ತ ಮಂಡಲಿಯ ಸದಸ್ಯರಿಂದ “ಭಜನೆ”,
ಅಕ್ಟೋಬರ್ 14-ಶ್ರೀಮತಿ ರಂಜಿತಾ ಪ್ರಸಾದ್, ಶ್ರೀಮತಿ ಭಾವನಾ ಮೂರ್ತಿ ಮತ್ತು ಸಂಗಡಿಗರಿಂದ ಭಾವಗೀತೆ, ಭಕ್ತಿಗೀತೆ, ಜಾನಪದ ಗೀತೆಗಳ ಗಾಯನದ “ಮಿಶ್ರ ಮಾಧುರ್ಯ”,
ಅಕ್ಟೋಬರ್ 15-ಶಿವರಂಜನಿ ಮಹಿಳಾ ಸಾಂಸ್ಕೃತಿಕ ಸಂಘದ ಸದಸ್ಯರಿಂದ “ಭಜನೆ”,
ಅಕ್ಟೋಬರ್ 16-ಶ್ರೀಮತಿ ಶ್ರೀದೇವಿ ಮತ್ತು ಸಂಗಡಿಗರಿಂದ “ಸಂಗೀತ ಸಂಭ್ರಮ”,
ಅಕ್ಟೋಬರ್ 17-ಕು|| ಅಹಿಕಾ ನಾಗದೀಪ್ ಮತ್ತು ಸಂಗಡಿಗರಿಂದ “ವೀಣಾ ವಾದನ”,
ಅಕ್ಟೋಬರ್ 18-ಲಲಿತ ಕಲಾ ಕೇಂದ್ರದ ಮಕ್ಕಳಿಂದ “ಭರತನಾಟ್ಯ”,
ಅಕ್ಟೋಬರ್ 19-ಶ್ರೀಮತಿ ಗಿರಿಜಾ ಶ್ಯಾಮಣ್ಣ ಮತ್ತು ಸಂಗಡಿಗರಿಂದ “ದೇವರನಾಮಗಳು”,
ಅಕ್ಟೋಬರ್ 20-ಮಾಯಾ ಖರ ಭಕ್ತಿ ವೃಂದದವರಿಂದ “ಸಂಗೀತ”
ಅಕ್ಟೋಬರ್ 21ರಂದು ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಶ್ರೀ ಗಣಪತಿ ಮತ್ತು ಶ್ರೀ ಅಮ್ಮನವರ ಮೆರವಣಿಗೆಯ ಉತ್ಸವ ಜರುಗುತ್ತವೆ ಎಂದು ದೇವಸ್ಥಾನದ ಪದಾಧಿಕಾರಿಗಳು ತಿಳಿಸಿದ್ದಾರೆ.

