ಭಾರ್ಗವ್ ನಿರ್ದೇಶನ ಮತ್ತು ನಟನೆಯ ಸಿನಿಮಾ (Bhargav) – Kannada Cinema

ಆಕರ್ಷಕ ಶೀರ್ಷಿಕೆಯಲ್ಲೆ ಗಮನ ಸೆಳೆದಿರುವ ’ಕೊನೆಯಪತ್ರ’ (Koneya Patra) ಚಿತ್ರದ ಎರಡು ರೀತಿಯ ಮೋಷನ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಶ್ರೀ ರೇಣುಕಾಂಬ ಸ್ಟುಡಿಯೋ(Sri Renukamba Studio) ದಲ್ಲಿ ಅದ್ದೂರಿಯಾಗಿ ನಡೆಯಿತು. ಇದೇ ಸಂದರ್ಭದಲ್ಲಿ ಮಮತಾದೇವರಾಜು, (Mamatha Devaraju) ಡಾಗ್ ಸತೀಶ್ (Dog Satish) ಹಾಗೂ ಸಿನಿಪಂಡಿತರು ಹಾಜರಿದ್ದು ತಂಡಕ್ಕೆ ಶುಭ ಹಾರೈಸಿದರು. ಕೋಸಲ ಕ್ರಿಯೇಟೀವ್ ವರ್ಕ್ಸ್ ಪ್ರೈವೆಟ್ ಲಿಮಿಟಿಡ್ ಬ್ಯಾನರ್ ಅಡಿಯಲ್ಲಿ ಅನಂತಪುರ ಮೂಲದ ರಾಜಕೀಯ ಮುಖಂಡ ಬಿ.ನಾಗರಾಜು ನಿರ್ಮಾಣ ಮಾಡುತ್ತಿರುವುದು ನೂತನ ಅನುಭವ. ಚಂದನವನದಲ್ಲಿ ಹತ್ತು ವರ್ಷಗಳ ಕಾಲ ಏಳು ಚಿತ್ರಗಳಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದ ಸ್ಪುರದ್ರೂಪಿ ಭಾರ್ಗವ್.ಬಿ.ವಿ ಹೊಸ ಪ್ರಯೋಗ ಎನ್ನುವಂತೆ ಸಿನಿಮಾಕ್ಕೆ ಕಥೆ,ಚಿತ್ರಕಥೆ ಬರೆದು ನಿರ್ದೇಶನ ಮಾಡುವ ಜತೆಗೆ ನಾಯಕನಾಗಿ ನಟಿಸುತ್ತಿದ್ದಾರೆ.

ಐರಾ ಮೆನನ್, ಶಬೀನ ನಾಯಕಿಯರು. ನಿರ್ಮಾಪಕರ ಪುತ್ರ ಸಾಯಿ ಕಿಶೋರ್ ನಾಯಕನ ಗೆಳಯನಾಗಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಇವರೊಂದಿಗೆ ವೇದಶ್ರೀ, ಬಲರಾಜವಾಡಿ, ಕಿಲ್ಲಿ ಕ್ರಾಂತಿ, ಚತ್ರಪತಿ ಶೇಖರ್, ಪ್ರೇಮ್ ಸಾಗರ್, ಜಬರ್ ದಸ್ತ್ ನವೀನ್, ಶೃತಿ, ತಗುಬಾತು ಶ್ರೀನು, ಟೆಸ್ಟಿ ತೇಜ ಮುಂತಾದವರು ಅಭಿನಯಿಸುತ್ತಿದ್ದಾರೆ.

ನಾಲ್ಕು ಹಾಡುಗಳಿಗೆ ಪೆದ್ದಪಲ್ಲಿ ರೋಹಿತ್ (ಪಿಆರ್) ಸಂಗೀತ, ಛಾಯಾಗ್ರಹಣ ಆರ್ಯ ಸಾಯಿಕೃಷ್ಣ, ಸಾಹಸ ಶ್ರೀರಾಮ್, ಸಾಹಿತ್ಯ ವಿಷ್ಣುವರ್ಧನ್-ಡಾ.ವೆನಿಗಲ್ಲ ರಾಂಬಾಬು ಅವರದಾಗಿದೆ.

ನಿರ್ದೇಶಕರು ಮಾತನಾಡಿ, ’ಕೊನೆಯಪತ್ರ’ ಎಂದಾಕ್ಷಣ ಕ್ಲಾಸಿಕಲ್ ಟಚ್ ಅನ್ನಿಸಬಹುದು. ಆದರೆ ಇದೊಂದು ಔಟ್ ಅಂಡ್ ಔಟ್ ಮಾಸ್ ಕಂಟೆಂಟ್ ಹೊಂದಿದ್ದು, ಬಹಳಷ್ಟು ವಿಚಾರಗಳನ್ನು ಒಳಗೊಂಡಿದೆ. ಹಳ್ಳಿಯಲ್ಲಿರುವ ನರಸಾಪುರದ ನರಸಿಂಹ ಹೆಸರಿನಲ್ಲಿ ರಗಡ್ ಆಗಿರುವ ಆತನಿಗೆ ಒಂದು ಪತ್ರ ಬರುತ್ತದೆ. ಸದರಿ ಪತ್ರವು ಹೇಗೆ ಅವನನ್ನು ಬದಲಾಯಿಸುತ್ತದೆ. ಮುಂದೆ ಹೇಗೆಲ್ಲಾ ಬದಲಾವಣೆಗೊಳ್ಳುತ್ತಾನೆ ಎಂಬುದು ಸಿನಿಮಾದ ಸಾರಾಂಶ ಇರಲಿದೆ. ಚಿತ್ರವು ಎರಡು ಭಾಗದಲ್ಲಿ ಮೂಡಿ ಬರಲಿದೆ. ಹೈದರಬಾದ್, ಮಂಗಳೂರು, ಉಡುಪಿ, ಕನಕಪುರ ಕಡೆಗಳಲ್ಲಿ ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಲಾಗಿದೆ ಎಂಬುದಾಗಿ ಮಾಹಿತಿ ತೆರೆದಿಟ್ಟರು.

ನಿರ್ಮಾಪಕರು ಹೇಳುವಂತೆ ಸಿನಿಮಾವನ್ನು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಪ್ರತ್ಯೇಕವಾಗಿ ಶೂಟ್ ಮಾಡಲಾಗುವುದು. ಭಾರ್ಗವ್ ಹೇಳಿದ ಒನ್ ಲೈನ್ ಸ್ಟೋರಿ ಇಷ್ಟವಾಗಿ ಹಣ ಹೂಡುತ್ತಿದ್ದೇನೆ. ಮುಂದೆ ಕನ್ನಡದಲ್ಲಿ ’ಕಾಟೇರಮ್ಮ’ ಸಿನಿಮಾ ಮಾಡುವುದಾಗಿ, ನಂತರ ಇವರೊಂದಿಗೆ ಮೂರು ಚಿತ್ರ ಮಾಡುವ ಗುರಿ ಹೊಂದಿದ್ದೇನೆ. ಡಿಸೆಂಬರ್ ಹೊತ್ತಿಗೆ ಜನರಿಗೆ ತೋರಿಸಲಾಗವುದು. ಮಾಧ್ಯಮದ ಸಹಕಾರಬೇಕೆಂದು ನಾಗರಾಜು.ಬಿ ಕೋರಿಕೊಂಡರು.

Hot this week

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ: ಪರಿಷ್ಕೃತ NCERT...

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ; MCC...

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ: ವಿದೇಶಿ ಹೂಡಿಕೆದಾರರ ಮಾರಾಟದ ಒತ್ತಡ

ಭಾರತೀಯ ಷೇರು ಮಾರುಕಟ್ಟೆಗಳು(Share Market) ಸತತ ಕುಸಿತದ ಒತ್ತಡಕ್ಕೆ ಸಿಲುಕಿದ್ದು, ಕಳೆದ...

ಹೆಜ್ಜೆಯಲ್ಲಿ ಶಾಸ್ತ್ರ, ಭಾವದಲ್ಲಿ ಭಕ್ತಿ: ‘ಸಮರ್ಪಣ್’ನಲ್ಲಿ ಶೀತಲ್ ಹೇಮಂತ್ ನೃತ್ಯ

ಅ. 3ರಂದು ವಿದುಷಿ ಶೀತಲ್ ಹೇಮಂತ್ ಅವರಿಂದ ವಿಶೇಷ ಭರತನಾಟ್ಯ ನೃತ್ಯ...

“ಚರಕ ಕಾರ್ಯಾಗಾರ”

157ನೇ ಗಾಂಧಿ ಜಯಂತಿ(157th Gandhi Jayanthi) ಅಂಗವಾಗಿ ಆರ್ಟ್ ಕಲ್ಚರಲ್ ಎಜುಕೇಶನಲ್ ...

Topics

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ: ಪರಿಷ್ಕೃತ NCERT...

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ; MCC...

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ: ವಿದೇಶಿ ಹೂಡಿಕೆದಾರರ ಮಾರಾಟದ ಒತ್ತಡ

ಭಾರತೀಯ ಷೇರು ಮಾರುಕಟ್ಟೆಗಳು(Share Market) ಸತತ ಕುಸಿತದ ಒತ್ತಡಕ್ಕೆ ಸಿಲುಕಿದ್ದು, ಕಳೆದ...

“ಚರಕ ಕಾರ್ಯಾಗಾರ”

157ನೇ ಗಾಂಧಿ ಜಯಂತಿ(157th Gandhi Jayanthi) ಅಂಗವಾಗಿ ಆರ್ಟ್ ಕಲ್ಚರಲ್ ಎಜುಕೇಶನಲ್ ...

ರಾಮರಸದಲ್ಲಿ ಆದಾಶರ್ಮಾ ದುರ್ಗಿ ರೋಲ್

ಗುರುದೇಶಪಾಂಡೆ ಒಡೆತನದ ’ಜಿ ಅಕಾಡೆಮಿ’ಯಲ್ಲಿ(Zee Academy) ನಟನೆ ಕಲಿತಿರುವ ಪ್ರತಿಭೆಗಳಿಗೆ ಅವಕಾಶ...

ಅಭಿನಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಸದಾ ಬ್ಯುಸಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Ex.CM.Siddaramayya) ಈಗ ನಟನೆಯಲ್ಲಿ(Acting) ತೊಡಗಿಕೊಂಡಿದ್ದಾರೆ. ಪತ್ರಕರ್ತರಾಗಿ...

ವಿ.ಕುಮಾರ್ ನಿರ್ದೇಶನದ ಹದಿನೆಂಟು ಎಕರೆ ಸಿನಿಮಾ ಲಕ್ಕಪ್ಪ

ಈ ಹಿಂದೆ ಗಾಯಿತ್ರಿ, ಪ್ರೀತಿಯ ಹುಚ್ಚ ಚಿತ್ರಗಳನ್ನು ನಿರ್ದೇಶಿಸಿದ್ದ ವಿ.ಕುಮಾರ್ (ರಾಘವ...

Related Articles