ಬದುಕಿನ ಸಾರ್ಥಕತೆ ಸಾರುವ “ಆತ್ಮೋದ್ಧಾರಕ್ಕೆ ಅಮೃತ ಮಾರ್ಗ ಭಾಗವತ” ಕೃತಿ ಲೋಕಾರ್ಪಣೆ

Bengaluru : ಶ್ರೀಮದ್ಭಾಗವತದ ತತ್ತ್ವಗಳ ಮೂಲಕ ಭಕ್ತಿ, ಜ್ಞಾನ ಹಾಗೂ ಜೀವನಮೌಲ್ಯಗಳನ್ನು ಸರಳ ಕನ್ನಡದಲ್ಲಿ ಪರಿಚಯಿಸುವ ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ (Gururaj PoshettiHally) ಅವರ “ಆತ್ಮೋದ್ಧಾರಕ್ಕೆ ಅಮೃತ ಮಾರ್ಗ ಭಾಗವತ” ನೂತನ ಕೃತಿ (Souvenir) ಯನ್ನು ಎಂ. ಜೆ. ಚಂದ್ರಶೇಖರ್, ನಿವೃತ್ತ ದಾವಣಗೆರೆ ಕಾಟನ್ ಮಿಲ್ಸ್ ಮ್ಯಾನೇಜರ್ ಹಾಗೂ ಜಯಲಕ್ಷ್ಮಿ ಚಂದ್ರಶೇಖರ್, ಅಧ್ಯಕ್ಷರು, ರಾಜರಾಜೇಶ್ವರಿ ಸಂಘ, ದಾವಣಗೆರೆ ಅವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪರಾಭವ ಸಂವತ್ಸರದ ಅಧಿಕ ಜ್ಯೇಷ್ಠ – ಪುರುಷೋತ್ತಮ ಮಾಸದಲ್ಲಿ ಭಾಗವತದಂತಹ ಆಧ್ಯಾತ್ಮಿಕ ಗ್ರಂಥಗಳನ್ನು “ಗ್ರಂಥ ತಾಂಬೂಲ” ರೂಪದಲ್ಲಿ ವಿತರಿಸುವುದು ಪರಮ ಪುಣ್ಯಕರ ಕಾರ್ಯವೆಂದು ಪರಿಗಣಿಸಲ್ಪಟ್ಟಿದೆ ಎಂದು ಹೇಳಿದರು. “ಜ್ಞಾನ ದಾನವೇ ಶ್ರೇಷ್ಠ ದಾನ” ಎಂಬ ಶಾಶ್ವತ ಸಂದೇಶವನ್ನು ಈ ಕೃತಿ ಮತ್ತಷ್ಟು ಬಲಪಡಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾದ ಡಾ. ಎಂ. ಸಿ. ಶಶಿಕಾಂತ್, ಅಧ್ಯಕ್ಷರು, ತಾಲೂಕು ಬ್ರಾಹ್ಮಣ ಸಮಾಜ, ದಾವಣಗೆರೆ ಅವರು, ಭಾಗವತದ ತತ್ವಗಳು ಇಂದಿನ ಜೀವನಕ್ಕೆ ದಾರಿದೀಪವಾಗಿದ್ದು, ಆಧ್ಯಾತ್ಮಿಕ ಚಿಂತನೆಗೆ ಹೊಸ ಆಯಾಮ ನೀಡುತ್ತವೆ ಎಂದರು.
ಕೃತಿಗೆ ಬೆನ್ನುಡಿ ಬರೆದಿರುವ ಡಾ. ರೂಪ ಶ್ರೀ ಶಶಿಕಾಂತ್, ಕವಯತ್ರಿ ಹಾಗೂ ದಂತ ವೈದ್ಯರು, ಕೃತಿ ಪರಿಚಯ ಮಾಡಿ ಮಾತನಾಡುತ್ತ ಈ ಕೃತಿ ಭಕ್ತಿ, ಸಂಸ್ಕಾರ ಮತ್ತು ಜೀವನಮೌಲ್ಯಗಳನ್ನು ಮನಮುಟ್ಟುವ ಶೈಲಿಯಲ್ಲಿ ಪರಿಚಯಿಸುತ್ತಿದ್ದು, ಓದುಗರಲ್ಲಿ ಆಧ್ಯಾತ್ಮಿಕ ಚಿಂತನೆಗೆ ಪ್ರೇರಣೆ ನೀಡುತ್ತದೆ, ಶ್ರೀಮದ್ಭಾಗವತದ ಆಧ್ಯಾತ್ಮಿಕ ಸಾರವನ್ನು ಜೀವನಸ್ಪರ್ಶಿಯಾಗಿ ನಿರೂಪಿಸಿರುವ ಲೇಖಕರು, ಭಕ್ತಿ ಕೇವಲ ಆಚರಣೆಗಷ್ಟೇ ಸೀಮಿತವಲ್ಲ; ಅದು ಬದುಕನ್ನು ಪರಿವರ್ತಿಸುವ ಆಂತರಿಕ ಶಕ್ತಿಯಾಗಿದೆ ಎಂಬುದನ್ನು ವಿವಿಧ ಲೇಖನಗಳ ಮೂಲಕ ಪರಿಣಾಮಕಾರಿಯಾಗಿ ಮನದಟ್ಟುಗೊಳಿಸಿದ್ದಾರೆ ಎಂದು ತಿಳಿಸಿದರು.

Hot this week

ಬಾಲಕನ ಶ್ವಾಸಕೋಶದಿಂದ ಪಿನ್ ಹೊರ ತೆಗೆದು ಜೀವ ಉಳಿಸಿದ ವೈದ್ಯರು

ಬೆಂಗಳೂರು: ಭಾರತದಲ್ಲಿ ಅತಿಹೆಚ್ಚು ಆಸ್ತಮಾ ರೋಗಿಗಳು ಇರುವ ನಗರಗಳಲ್ಲಿ ಬೆಂಗಳೂರು ಕೂಡಾ...

ಅರ್ಥರ್ ಓಸ್ ಬರ್ನ್ ಅವರ ನಂಬಲಸಾಧ್ಯವಾದ ಸಾಯಿಬಾಬಾ

ಹಾಸನ:ಗೊರೂರು ಅನಂತ ರಾಜು(Gorur AnanthaRaju) ಯಾರೊಡನೆಯೂ ಮಾತನಾಡದೆ, ದಾಪುಗಾಲು ಹಾಕುತ್ತಾ ರಸ್ತೆಯಲ್ಲಿ...

ಶ್ರೀಲಂಕಾದ ಉಪ ಹೈಕಮಿಷನರ್-ರಾಜ್ಯಪಾಲರ ಸೌಹಾರ್ದಯುತ ಭೇಟಿ

ಶ್ರೀ ಡಾ. ಗಣೇಶನಾಥನ್ ಗೀತೀಶ್ವರನ್,(Shri Dr. Ganesanathan Geathiswaran) ಶ್ರೀಲಂಕಾದ ಉಪ...

ನಿಯೋ ಫ್ರೆಶ್ ಸೂಪರ್ ಮಾರ್ಕೆಟ್‌ಗೆ ನಂಜಾವಧೂತ ಮಹಾಸ್ವಾಮೀಜಿ ಚಾಲನೆ

ಬೆಂಗಳೂರು: ಗ್ರಾಹಕರಿಗೆ ಗುಣಮಟ್ಟದ ದಿನಸಿ ವಸ್ತುಗಳು, ತಾಜಾ ಹಣ್ಣು–ತರಕಾರಿಗಳು ಹಾಗೂ ದಿನಬಳಕೆ...

ನಿತ್ಯ ಪಂಚಾಂಗ 09.06.2026 TUESDAY.ಮಂಗಳವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 09.06.2026 TUESDAY.ಮಂಗಳವಾರ*ಸಂವತ್ಸರ:ಪರಾಭವ SAMVATSARA : PARABHAVA. ಆಯಣ: ಉತ್ತರಾಯಣ AYANA: UTTARAYANA. ಋತು:...

Topics

ಲಲಿತಕಲಾ ಅಕಾಡೆಮಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಚಿತ್ರಕಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯು...

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್: ಅರ್ಜಿ ಆಹ್ವಾನ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ (Information Dept.) ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ...

ನಿತ್ಯ ಪಂಚಾಂಗ 07.06.2026 SUNDAY.ಭಾನುವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 07.06.2026 SUNDAY.ಭಾನುವಾರ*ಸಂವತ್ಸರ: ಪರಾಭವ SAMVATSARA : PARABHAVA. ಆಯಣ: ಉತ್ತರಾಯಣ AYANA:...

Related Articles