ಜಲವರ್ಣದಲ್ಲಿ ಸೃಷ್ಟಿಗೊಂಡ ವಸಂತಕುಮಾರ್ ಅವರ ಪ್ರಕೃತಿ ಚಿತ್ರಣಗಳು

ಹಾಸನ ನಗರ (Hassan) ಹಾಸನಾಂಬ ಕಲಾಕ್ಷೇತ್ರದ (kalakshetra) ಹೊರಾಂಗಣದಲ್ಲಿ ಚಿತ್ರಕಲಾ ಶಿಕ್ಷಕರು ಕಲಾವಿದರು ವಸಂತಕುಮಾರ್ (Vasanthkumar) ಅವರು ತಮ್ಮ ಹೊಸ ರಚನೆಯ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಏರ್ಪಡಿಸಿದ್ದರು. ಕಳೆದ ಹತ್ತು ವರ್ಷಗಳಿಂದ ಸರ್ಕಾರದ ಆರ್ಥಿಕ ನೆರವಿಲ್ಲದೇ ಅವರು ಕಲಾಪ್ರದರ್ಶನ ಮಾಡುತ್ತಲೇ ಶಾಲಾ ಮಕ್ಕಳಿಗೆ ಚಿತ್ರಕಲೆ ಸ್ಫರ್ಧೆ ಏರ್ಪಡಿಸಿ ಬಹುಮಾನ ನೀಡುತ್ತಾ ಬಂದಿದ್ದಾರೆ. ಈ ಮೊದಲು ಹಾಸನದ ಶಾಂತಲಾ ಚಿತ್ರಕಲಾ ವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿ ಈಗ ಆಲೂರಿನ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಕಲಾಸೇವೆ ಗುರುತಿಸಿ ಹಾಸನ ಜಿಲ್ಲಾಡಳಿತ ಐದಾರಯ ವರ್ಷಗಳ ಹಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. ವಸಂತ್ ಅವರು ಪ್ರತಿವರ್ಷ ವಿಶ್ವ ಪರಿಸರ ದಿನ ಪ್ರಯುಕ್ತ ಮಕ್ಕಳಿಗೆ ಚಿತ್ರಕಲಾ ಸ್ಫರ್ಧೆ ಏರ್ಪಡಿಸುವುದು ಮಕ್ಕಳಿಗೆ ಸ್ಫರ್ಧೆ ಏರ್ಪಡಿಸಿ ಪ್ರಶಸ್ತಿ ಪತ್ರ ಮತ್ತು ಬಹುಮಾನ ನೀಡುವುದು ರೂಢಿಸಿಕೊಂಡಿದ್ದಾರೆ. ಇದು ಹತ್ತು ವರ್ಷಗಳಿಂದ ನಿರಂತರ ನಡೆದು ಬಂದಿದೆ.

ಈ ವರ್ಷ ಇವರ 35 ಸೃಜನಾತ್ಮಕ ಕಲಾಕೃತಿಗಳು ವೀಕ್ಷಕರ ಮನ ಸೆಳೆದವು. ಇವರ ಪರಿಸರ ಕಾಳಜಿಯ ಪ್ರಕೃತಿ ಚಿತ್ರಗಳು ಆಕರ್ಷಣೀಯವಾಗಿವೆ. ಅರಸೀಕೆರೆ ಹುಳಿಯಾರ್ ಮಾರ್ಗದಲ್ಲಿ ಸಿಗುವ ಮರಗಳು ರಸ್ತೆಯ ಪ್ರಕೃತಿ ಚಿತ್ರವು ಜಲವರ್ಣದಲ್ಲಿ ಹ್ಯಾಂಡ್ ಮೇಡ್ ಶೀಟ್‌ನಲ್ಲಿ ಅದ್ಭುತವಾಗಿ ಮರುಸೃಷ್ಟಿಗೊಂಡಿದೆ. ಬರ್ಡ್ ಸೀರಿಸ್‌ನ 15 ಪಕ್ಷಿ ಚಿತ್ರಗಳು ತೈಲವರ್ಣದಲ್ಲಿ ರೂಪು ತೆಳೆದು ಹಾರಾಡಿವೆ. ಐದು ವರ್ಷಗಳ ಹಿಂದೆ ಸಕಲೇಶಪುರ ಪರಿಸರದಲ್ಲಿ ಪೋಟೋಗ್ರಫಿ ಮಾಡಿದ್ದ ರಮ್ಯ ದೃಶ್ಯಾವಳಿಗಳು, 15ವರ್ಷಗಳ ಹಿಂದೆ ಪ್ರವಾಸ ಮಾಡಿದ್ದ ಎರ್ನಾಕುಲಂನ ಪ್ರಕೃತಿ ದೃಶ್ಯಗಳು ಜಲವರ್ಣದಲ್ಲಿ ಹ್ಯಾಂಡ್ ಮೇಡ್ ಶೀಟ್ ನಲ್ಲಿ ಮರುಸೃಷ್ಟಿಯಾಗಿ ಜೀವಂತಿಕೆ ತಾಳಿವೆ.

ಬಹುಶ: ಈಗ ಆ ಸೀನ್ಸ್ ಕಣ್ಮರೆಯಾಗಿರಬಹುದು. ಆದರೆ ವಸಂತಕುಮಾರ್ ಅವರ ಕಣ್ಣುಗಳಿಂದ ಮರೆಯಾಗಿಲ್ಲ. ತಮ್ಮ ಪೋಟೋಗಪ್ರಿಯಲ್ಲಿ ಸೆರೆ ಹಿಡಿದು ಈಗ ಸೃಷ್ಟಿಸಿರುವುದು ವಿಶೇಷವಾಗಿದೆ. ನಾವು ಕತೆಗಾರರು ಅಷ್ಟೇ ಬಾಲ್ಯದ ಘಟನೆಗಳನ್ನು, ಪ್ರವಾಸಿ ಅನುಭವಗಳನ್ನು ನೆನಪಿಸಿಕೊಂಡು ಬರೆದಂತೆ ವಸಂತಕುಮಾರ್ ಚಿತ್ರ ಜೀವಂತಿಕೆ ನೀಡಿದ್ದಾರೆ.

ಬಾಗೇಶಪುರದ ಲೋಕೇಶನ್, ಹಾರುತ್ತಿರುವ ಗಿಡುಗ, ನೆಗೆಯುತ್ತಿರುವ ಕುದುರೆ ಎಲ್ಲವೂ ಕ್ರಿಯಾಶೀಲತೆ ಸಾಕ್ಷೀಕರಿಸಿವೆ. ದೇಶದ ಮಾಜಿ ಪ್ರಧಾನಿಗಳ ಬಾವಚಿತ್ರವು ಚಾರ್ಕೋಲ್ ಪೆನ್ಸಿಲ್ ವರ್ಕ್ನಲ್ಲಿ ಅವರಿಗೆ ಸಲ್ಲಿಸದ ಗೌರವವಾಗಿದೆ. ಮಾನ್ಯ ಜಿಲ್ಲಾಧಿಕಾರಿಗಳು ಚಿತ್ರಗಳನ್ನು ವೀಕ್ಷಿಸಿ ಭೇಷ್ ಎಂದಿರುವುದು ವಸಂತಕುಮಾರ್ ಅವರಿಗೆ ಖುಷಿ ನೀಡಿದೆ. ಅನಂತರಾಜ್ ಸಾರ್, ಮೇಡಂ ಅವರ ಒಂದು ಭಾವಚಿತ್ರ ಚಿತ್ರಿಸಿ ಅವರಿಗೆ ಪ್ರಜೆಂಟ್ ಮಾಡಬೇಕೆಂದು ಅಂದುಕೊAಡಿದ್ದೇನೆ ಎಂದರು. ಬಹುಶ: ಕಲಾವಿದರಿಗೆ ಇಂತಹ ಮೆಚ್ಚುಗೆಯ ಮಾತೇ ಸ್ಫೂರ್ತಿ ತಾನೇ..!

-ಗೊರೂರು ಅನಂತರಾಜು, ಹಾಸನ.
ಮೊ: 9449462879.

 

Hot this week

ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ಜುಲೈ 1 ರಂದು ಪತ್ರಿಕಾ ದಿನಾಚರಣೆ ಹಾಗೂ ವಿಚಾರ ಸಂಕಿರಣ

ಬೆಂಗಳೂರು, ಜೂನ್ 29 (ಕರ್ನಾಟಕ ವಾರ್ತೆ) :ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ...

ಶ್ರೀ ಕೃಷ್ಣ ರುಕ್ಷ್ಮಿಣಿ ಕಾನೂನು ಮಹಾವಿದ್ಯಾಲಯದಲ್ಲಿ ಮೌಲ್ಯೋತ್ಸವ

ಬೆಂಗಳೂರು: ಚಿಕ್ಕಜಾಲದ ಚೊಕ್ಕನಹಳ್ಳಿಯಲ್ಲಿರುವ ಶ್ರೀ ರೇವಣ ಸಿದ್ದೇಶ್ವರ ಎಜುಕೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ...

ಸಂಗೀತಾಸಕ್ತರನ್ನು ರಂಜಿಸಿದ “ನಾದ ನಮನ” ಸಂಗೀತ ಸಂಜೆ

ಬೆಂಗಳೂರು, ಜೂ.27: ಸಾಕಿ ಚಾರಿಟೇಬಲ್ ಟ್ರಸ್ಟ್(Saki Charitable Trust) ನಿಂದ ನಗರದ...

ಎಪಿಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿ ಸಿ.ಎ ಡಾ. ವಿಷ್ಣು ಭರತ್ ಆಲಂಪಳ್ಳಿ ಪುನರಾಯ್ಕೆ

ಬೆಂಗಳೂರು,ಜೂ.29: ನಗರದ 91 ವರ್ಷಗಳ ಹಳೆಯ ಎಪಿಎಸ್ ಶಿಕ್ಷಣ ಸಂಸ್ಥೆಗಳಿಗೆ ನೂತನ...

Topics

ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ಜುಲೈ 1 ರಂದು ಪತ್ರಿಕಾ ದಿನಾಚರಣೆ ಹಾಗೂ ವಿಚಾರ ಸಂಕಿರಣ

ಬೆಂಗಳೂರು, ಜೂನ್ 29 (ಕರ್ನಾಟಕ ವಾರ್ತೆ) :ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ...

ಶ್ರೀ ಕೃಷ್ಣ ರುಕ್ಷ್ಮಿಣಿ ಕಾನೂನು ಮಹಾವಿದ್ಯಾಲಯದಲ್ಲಿ ಮೌಲ್ಯೋತ್ಸವ

ಬೆಂಗಳೂರು: ಚಿಕ್ಕಜಾಲದ ಚೊಕ್ಕನಹಳ್ಳಿಯಲ್ಲಿರುವ ಶ್ರೀ ರೇವಣ ಸಿದ್ದೇಶ್ವರ ಎಜುಕೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ...

ಸಂಗೀತಾಸಕ್ತರನ್ನು ರಂಜಿಸಿದ “ನಾದ ನಮನ” ಸಂಗೀತ ಸಂಜೆ

ಬೆಂಗಳೂರು, ಜೂ.27: ಸಾಕಿ ಚಾರಿಟೇಬಲ್ ಟ್ರಸ್ಟ್(Saki Charitable Trust) ನಿಂದ ನಗರದ...

ಎಪಿಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿ ಸಿ.ಎ ಡಾ. ವಿಷ್ಣು ಭರತ್ ಆಲಂಪಳ್ಳಿ ಪುನರಾಯ್ಕೆ

ಬೆಂಗಳೂರು,ಜೂ.29: ನಗರದ 91 ವರ್ಷಗಳ ಹಳೆಯ ಎಪಿಎಸ್ ಶಿಕ್ಷಣ ಸಂಸ್ಥೆಗಳಿಗೆ ನೂತನ...

ಶ್ರೀರಾಮ ಮಂದಿರದ ಹುಂಡಿ ಹಣ ದುರುಪಯೋಗ; ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಿ !

ಅಯೋಧ್ಯೆಯ ಶ್ರೀರಾಮ ಮಂದಿರವು ಕೇವಲ ಒಂದು ಧಾರ್ಮಿಕ ಸ್ಥಳವಲ್ಲ, ಅದು ಜಗತ್ತಿನಾದ್ಯಂತ...

ರೋಟರಿ ಜಿಲ್ಲೆ 3191ರ ಜಿಲ್ಲಾ ಗವರ್ನರ್ ಆಗಿ ಡಾ. ಅನಿಲ್ ಗುಪ್ತ ಪದಗ್ರಹಣ (Dr. Anil Gupta sworn in as District Governor of Rotary District 3191)

ಬೆಂಗಳೂರು, ಜೂ29: ಉದ್ಯಮಿ ಹಾಗೂ ದೀರ್ಘಕಾಲದ ರೋಟೇರಿಯನ್ ಡಾ. ಅನಿಲ್ ಗುಪ್ತ...

ಶ್ರೀರಾಮಮಂದಿರದ ಹುಂಡಿ ಹಣ ದುರುಪಯೋಗ; ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಿ !

ಅಯೋಧ್ಯೆಯ ಶ್ರೀರಾಮ ಮಂದಿರವು(Ayodhya Sree Ram Temple) ಕೇವಲ ಒಂದು ಧಾರ್ಮಿಕ...

Related Articles