ಗ್ರಾಮೀಣ ಪತ್ರಕರ್ತರ ಬಸ್‌ಪಾಸ್ ನಿಯಮ ಸರಳೀಕರಣಕ್ಕೆ KUWJ ಆಗ್ರಹ

ಬೆಂಗಳೂರು: ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ಪಾಸ್ ಸೌಲಭ್ಯ ಕಲ್ಪಿಸಿರುವ ಹಿನ್ನೆಲೆಯಲ್ಲಿ, ಬಸ್‌ಪಾಸ್ ಪಡೆಯಲು ಇರುವ ನಿಯಮಗಳನ್ನು ಮತ್ತಷ್ಟು ಸರಳೀಕರಣಗೊಳಿಸುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ಸರ್ಕಾರವನ್ನು ಆಗ್ರಹಿಸಿದೆ.

ಗ್ರಾಮೀಣ ಪತ್ರಕರ್ತರು ತಮ್ಮ ವೃತ್ತಿ ಕರ್ತವ್ಯ ನಿರ್ವಹಿಸಲು ಅನುಕೂಲವಾಗುವ ಉದ್ದೇಶದಿಂದ ಉಚಿತ ಬಸ್‌ಪಾಸ್ ಸೌಲಭ್ಯ ಕಲ್ಪಿಸಿರುವುದು ಸ್ವಾಗತಾರ್ಹ. ಆದರೆ ಪ್ರಸ್ತುತ ಇರುವ ಕೆಲವು ನಿಯಮಗಳು ಬಸ್‌ಪಾಸ್‌ಗೆ ಅರ್ಜಿ ಸಲ್ಲಿಸಲು ಹಾಗೂ ಸೌಲಭ್ಯ ಪಡೆಯಲು ತೊಡಕಾಗಿವೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರು ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ
ಮನವಿಯಲ್ಲಿ ತಿಳಿಸಿದ್ದಾರೆ.

ವಿಶೇಷವಾಗಿ ಜಿಲ್ಲಾ ಮಟ್ಟದಲ್ಲಿ ಪ್ರಕಟವಾಗುವ ಪತ್ರಿಕೆಗಳು ಹಾಗೂ ಪ್ರಾದೇಶಿಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುವ ತಾಲೂಕು ಮತ್ತು ಹೋಬಳಿ ಮಟ್ಟದ ವರದಿಗಾರರಿಗೆ ಬಸ್‌ಪಾಸ್ ಸೌಲಭ್ಯ ದೊರೆಯುವಂತೆ ನಿಯಮಗಳನ್ನು ಸರಳೀಕರಿಸಬೇಕು ಎಂದು ಕೆಯುಡಬ್ಲ್ಯುಜೆ ಒತ್ತಾಯಿಸಿದೆ.

ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುವ ಅರ್ಹ ಪತ್ರಕರ್ತರಿಗೆ ಯಾವುದೇ ಅನಗತ್ಯ ನಿಯಮಗಳಿಂದ ಸೌಲಭ್ಯ ವಂಚಿತವಾಗದಂತೆ, ಬಸ್‌ಪಾಸ್ ನಿಯಮಾವಳಿಗಳನ್ನು ಮರುಪರಿಶೀಲಿಸಿ ಅಗತ್ಯ ತಿದ್ದುಪಡಿ ಮಾಡುವಂತೆ ಸಂಘ ಮನವಿ ಮಾಡಿದೆ.

ಗ್ರಾಮೀಣ ಪತ್ರಕರ್ತರ ಹಿತದೃಷ್ಟಿಯಿಂದ ಮನವಿಯನ್ನು ಆದ್ಯತೆಯಿಂದ ಪರಿಗಣಿಸಿ, ನಿಯಮಗಳ ಸರಳೀಕರಣಕ್ಕೆ ಕ್ರಮ ಕೈಗೊಳ್ಳುವಂತೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮನವಿ ಮಾಡಿದ್ದಾರೆ.

Hot this week

ಕರ್ನಾಟಕದ ಸರ್ಕಾರಿ ಸೇವೆಗಳಿಗೆ ಬಹುಭಾಷಾ ಮತ್ತು ಧ್ವನಿ ಆಧಾರಿತ ಪ್ರವೇಶದ ಯೋಜನೆ

ಕರ್ನಾಟಕ ಸರ್ಕಾರವು ಸಾರ್ವಜನಿಕ ಸೇವೆಗಳನ್ನು ಜನರಿಗೆ ಅವರ ಆಯ್ಕೆಯ ಭಾಷೆಯಲ್ಲಿ ಸುಲಭವಾಗಿ...

ಕೆನಡಾದ ಲೇಖಕಿ ಆನ್ ಕಾರ್ಸನ್‌ಗೆ ಸಾಹಿತ್ಯ ನೊಬೆಲ್ ಪ್ರಶಸ್ತಿ

ಕೆನಡಾದ ಕವಯಿತ್ರಿ, ಪ್ರಬಂಧಕಾರ್ತಿ ಮತ್ತು ಅನುವಾದಕಿ ಆನ್ ಕಾರ್ಸನ್ ಅವರಿಗೆ ಸಾಹಿತ್ಯ...

ಕರ್ನಾಟಕದಲ್ಲಿ ಬರ ಪರಿಹಾರದ ವೆಚ್ಚ ಹೆಚ್ಚಳ: ಸರ್ಕಾರದ ಹಣಕಾಸಿಗೆ ಒತ್ತಡ

ಕರ್ನಾಟಕದಲ್ಲಿ ಬರ ಪರಿಹಾರದ ವೆಚ್ಚ ಹೆಚ್ಚಳ: ಸರ್ಕಾರದ ಹಣಕಾಸಿಗೆ ಒತ್ತಡ ಕರ್ನಾಟಕದಲ್ಲಿ ಬರ...

ಆಂಧ್ರಪ್ರದೇಶದಲ್ಲಿ ತೀವ್ರ ಬರ: 21 ಜಿಲ್ಲೆಗಳ 388 ಮಂಡಲಗಳು ಬಾಧಿತ

ಆಂಧ್ರಪ್ರದೇಶ ಸರ್ಕಾರವು 21 ಜಿಲ್ಲೆಗಳ 388 ಮಂಡಲಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿದೆ...

ಹಿರಿಯ ನಟ ನಾನಾ ಪಾಟೇಕರ್ ನಿಧನ: ಚಿತ್ರರಂಗದಲ್ಲಿ ಶೋಕ

ಮುಂಬೈ: ಭಾರತೀಯ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಹಾಗೂ ಸಾಂಸ್ಕೃತಿಕ ಐಕಾನ್...

Topics

ಜಿಎಸ್‌ಟಿ ಅಧಿಕಾರಿಗಳ ಬಂಧನಾಧಿಕಾರ ರದ್ದು; ಪ್ರಾಸಿಕ್ಯೂಷನ್ ಮಿತಿ ₹1 ಕೋಟಿಯಿಂದ ₹5 ಕೋಟಿಗೆ ಏರಿಕೆ!

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (GST) ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳಿಗೆ...

ನಿತ್ಯ ಪಂಚಾಂಗ 09.10.2026 FRIDAY.ಶುಕ್ರವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 09.10.2026 FRIDAY.ಶುಕ್ರವಾರ ಸಂವತ್ಸರ: ಪರಾಭವ SAMVATSARA : PARABHAVA.. ಆಯಣ: ದಕ್ಷಿಣಾಯನ AYANA:...

ಬೆಂಗಳೂರು: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ (KSTA) ವತಿಯಿಂದ "ಆಹಾರ ಮತ್ತು...

Related Articles