ದಾಳಿಂಬೆ ಬೆಳೆಗಾರರ ಸವಾಲುಗಳಿಗೆ ತಾಂತ್ರಿಕ ಪರಿಹಾರ

ಬೆಂಗಳೂರು: ಕರ್ನಾಟಕದ ದಾಳಿಂಬೆ ಬೆಳೆಗಾರರು ಎದುರಿಸುತ್ತಿರುವ ವಿವಿಧ ರೋಗಗಳು, ಕೀಟಬಾಧೆ ಹಾಗೂ ಮಾರುಕಟ್ಟೆ ಸವಾಲುಗಳಿಗೆ ವೈಜ್ಞಾನಿಕ ಹಾಗೂ ತಾಂತ್ರಿಕ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಕ್ಟೋಬರ್ 3, 2026 ರಂದು ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ‘ಕೃಷಿ ತಂತ್ರಜ್ಞರ ಸಂಸ್ಥೆ’ (IAT) ಸಭಾಂಗಣದಲ್ಲಿ “ರಾಷ್ಟ್ರೀಯ ದಾಳಿಂಬೆ ತಾಂತ್ರಿಕ ಸಮಾವೇಶ 2026” (National Pomegranate Technical Conclave 2026) ಅನ್ನು ಆಯೋಜಿಸಲಾಗಿದೆ.
“ಸುಸ್ಥಿರ ಬೇಸಾಯದಿಂದ ಜಾಗತಿಕ ಮಾರುಕಟ್ಟೆಯವರೆಗೆ” ಎಂಬ ಮುಖ್ಯ ಉದ್ಧೇಶದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ. ಕೃಷಿ ತಂತ್ರಜ್ಞರ ಸಂಸ್ಥೆ (IAT), ಐಸಿಎಎಆರ್ – ಅಟಾರಿ (ICAR-ATARI) ಬೆಂಗಳೂರು, ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ (KSDH), ಕೆಎಪಿಪಿಇಸಿ (KAPPEC), ಅಪೆಡಾ (APEDA) ಹಾಗೂ ಜೈನ್ ಇರಿಗೇಷನ್ ಸಿಸ್ಟಮ್ಸ್ ಸಂಸ್ಥೆಗಳು ಜಂಟಿಯಾಗಿ ಈ ಸಮಾವೇಶವನ್ನು ಸಂಘಟಿಸಿವೆ.
ಸಮಾವೇಶದ ಪ್ರಮುಖ ಉದ್ದೇಶಗಳು ಹಾಗೂ ವಿಷಯಗಳು:
ರೋಗ ಮತ್ತು ಕೀಟ ನಿರ್ವಹಣೆ: ದಾಳಿಂಬೆ ಬೆಳೆಯನ್ನು ಕಾಡುತ್ತಿರುವ ಬ್ಯಾಕ್ಟೀರಿಯಲ್ ಬ್ಲೈಟ್ (ಮಚ್ಚೆ ರೋಗ), ಅಂಟ್ರಕ್ನೋಸ್, ಸೊರಗು ರೋಗ, ಕಾಯಿ ಕೊರೆಯುವ ಹುಳು ಹಾಗೂ ಹೀರು ಹುಳುಗಳ ನಿಯಂತ್ರಣಕ್ಕೆ ವೈಜ್ಞಾನಿಕ ಪರಿಹಾರ.
ಉತ್ಪಾದನಾ ವೆಚ್ಚ ಕಡಿತ: ರಾಸಾಯನಿಕ ಕ್ರಿಮಿನಾಶಕಗಳ ಅತಿಯಾದ ಬಳಕೆಯನ್ನು ತಡೆದು, ಜೈವಿಕ ಹಾಗೂ ಸಾವಯವ ನಿರ್ವಹಣೆಯ ಮೂಲಕ ವೆಚ್ಚ ತಗ್ಗಿಸುವುದು.
ರಫ್ತು ಹಾಗೂ ಮಾರುಕಟ್ಟೆ ಅವಕಾಶಗಳು: ಭಾರತವು ವಿಶ್ವದಲ್ಲೇ ಅತಿ ಹೆಚ್ಚು ದಾಳಿಂಬೆ ಉತ್ಪಾದಿಸುವ ದೇಶವಾಗಿದ್ದರೂ ರಫ್ತಿನಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಆದ್ದರಿಂದ ರೈತರನ್ನು ನೇರವಾಗಿ ದೇಶೀಯ ಹಾಗೂ ಅಂತಾರಾಷ್ಟ್ರೀಯ ರಫ್ತುದಾರರೊಂದಿಗೆ ಜೋಡಿಸುವುದು.
ಆಧುನಿಕ ತಂತ್ರಜ್ಞಾನ ಹಾಗೂ ಕೃಷಿ ಸಲಕರಣೆಗಳು: ಅಂಗಾಂಶ ಕೃಷಿ (Tissue Culture), ಹನಿ ನೀರಾವರಿ, ಮಣ್ಣಿನ ಆರೋಗ್ಯ ನಿರ್ವಹಣೆ ಮತ್ತು ಕೊಯ್ಲೋತ್ತರ ತಂತ್ರಜ್ಞಾನದ ಕುರಿತು ತಜ್ಞರಿಂದ ಮಾಹಿತಿ ಒದಗಿಸುವುದು.
 
ಕಾರ್ಯಕ್ರಮದ ವಿಶೇಷತೆಗಳು:
ರೈತರು-ತಜ್ಞರ ಮುಖಾಮುಖಿ: ಸಮಾವೇಶದಲ್ಲಿ ‘ರೈತರ ಪ್ರಶ್ನೆ – ತಜ್ಞರ ಉತ್ತರ’ ಸಂವಾದ ಗೋಷ್ಠಿ ನಡೆಯಲಿದ್ದು, ಐಸಿಎಆರ್, ರಾಷ್ಟ್ರೀಯ ದಾಳಿಂಬೆ ಸಂಶೋಧನಾ ಕೇಂದ್ರ (ಸೋಲಾಪುರ), ತೋಟಗಾರಿಕೆ ವಿಶ್ವವಿದ್ಯಾಲಯಗಳ ವಿಜ್ಞಾನಿಗಳು ರೈತರ ಸಂಶಯಗಳಿಗೆ ನೇರ ಪರಿಹಾರ ಸೂಚಿಸಲಿದ್ದಾರೆ.
ಪ್ರದರ್ಶನ ಮಳಿಗೆಗಳು: ಕೃಷಿ ಯಂತ್ರೋಪಕರಣಗಳು, ಜೈವಿಕ ಗೊಬ್ಬರಗಳು, ಡ್ರೋನ್ ತಂತ್ರಜ್ಞಾನ, ನೀರಾವರಿ ಹಾಗೂ ಪ್ಯಾಕಿಂಗ್ ಸಾಮಗ್ರಿಗಳ ಪ್ರದರ್ಶನ ಇರಲಿದೆ.
ಭಾಗವಹಿಸುವಿಕೆ ಮತ್ತು ನೋಂದಣಿ ವಿವರ:
ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರದುರ್ಗ, ಬಳ್ಳಾರಿ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ದಾಳಿಂಬೆ ಬೆಳೆಗಾರರು, ಕೃಷಿ ಉದ್ಯಮಿಗಳು ಹಾಗೂ ಎಫ್‌ಪಿಒ (FPO) ಪ್ರತಿನಿಧಿಗಳು ಈ ಸಮಾವೇಶದಲ್ಲಿ ಭಾಗವಹಿಸಬಹುದಾಗಿದೆ.
ನೋಂದಣಿ ಶುಲ್ಕ: ರೂ. 500/- ನೋಂದಣಿ ಕಿಟ್, ಕಿರುಹೊತ್ತಗೆ, ಉಪಹಾರ, ಊಟ ಮತ್ತು ಪ್ರಮಾಣಪತ್ರ ಒಳಗೊಂಡಿದೆ
ಹೆಚ್ಚಿನ ಮಾಹಿತಿಗಾಗಿ   ದೂರವಾಣಿ ಸಂಖ್ಯೆ: 080 2226 0173 ಅಥವಾ ಮೊಬೈಲ್ ದೂರವಾಣಿ ಸಂಖ್ಯೆ 7411696057 ಅಥವಾ ಇ-ಮೇಲ್ ವಿಳಾಸ iatbangalore@gmail.com ನ್ನು ಸಂಪರ್ಕಿಸಬಹುದು ಎಂದು
ಕೃಷಿ ತಂತ್ರಜ್ಞರ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

Hot this week

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ: ಪರಿಷ್ಕೃತ NCERT...

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ; MCC...

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ: ವಿದೇಶಿ ಹೂಡಿಕೆದಾರರ ಮಾರಾಟದ ಒತ್ತಡ

ಭಾರತೀಯ ಷೇರು ಮಾರುಕಟ್ಟೆಗಳು(Share Market) ಸತತ ಕುಸಿತದ ಒತ್ತಡಕ್ಕೆ ಸಿಲುಕಿದ್ದು, ಕಳೆದ...

ಹೆಜ್ಜೆಯಲ್ಲಿ ಶಾಸ್ತ್ರ, ಭಾವದಲ್ಲಿ ಭಕ್ತಿ: ‘ಸಮರ್ಪಣ್’ನಲ್ಲಿ ಶೀತಲ್ ಹೇಮಂತ್ ನೃತ್ಯ

ಅ. 3ರಂದು ವಿದುಷಿ ಶೀತಲ್ ಹೇಮಂತ್ ಅವರಿಂದ ವಿಶೇಷ ಭರತನಾಟ್ಯ ನೃತ್ಯ...

“ಚರಕ ಕಾರ್ಯಾಗಾರ”

157ನೇ ಗಾಂಧಿ ಜಯಂತಿ(157th Gandhi Jayanthi) ಅಂಗವಾಗಿ ಆರ್ಟ್ ಕಲ್ಚರಲ್ ಎಜುಕೇಶನಲ್ ...

Topics

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ: ಪರಿಷ್ಕೃತ NCERT...

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ; MCC...

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ: ವಿದೇಶಿ ಹೂಡಿಕೆದಾರರ ಮಾರಾಟದ ಒತ್ತಡ

ಭಾರತೀಯ ಷೇರು ಮಾರುಕಟ್ಟೆಗಳು(Share Market) ಸತತ ಕುಸಿತದ ಒತ್ತಡಕ್ಕೆ ಸಿಲುಕಿದ್ದು, ಕಳೆದ...

“ಚರಕ ಕಾರ್ಯಾಗಾರ”

157ನೇ ಗಾಂಧಿ ಜಯಂತಿ(157th Gandhi Jayanthi) ಅಂಗವಾಗಿ ಆರ್ಟ್ ಕಲ್ಚರಲ್ ಎಜುಕೇಶನಲ್ ...

ರಾಮರಸದಲ್ಲಿ ಆದಾಶರ್ಮಾ ದುರ್ಗಿ ರೋಲ್

ಗುರುದೇಶಪಾಂಡೆ ಒಡೆತನದ ’ಜಿ ಅಕಾಡೆಮಿ’ಯಲ್ಲಿ(Zee Academy) ನಟನೆ ಕಲಿತಿರುವ ಪ್ರತಿಭೆಗಳಿಗೆ ಅವಕಾಶ...

ಅಭಿನಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಸದಾ ಬ್ಯುಸಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Ex.CM.Siddaramayya) ಈಗ ನಟನೆಯಲ್ಲಿ(Acting) ತೊಡಗಿಕೊಂಡಿದ್ದಾರೆ. ಪತ್ರಕರ್ತರಾಗಿ...

ವಿ.ಕುಮಾರ್ ನಿರ್ದೇಶನದ ಹದಿನೆಂಟು ಎಕರೆ ಸಿನಿಮಾ ಲಕ್ಕಪ್ಪ

ಈ ಹಿಂದೆ ಗಾಯಿತ್ರಿ, ಪ್ರೀತಿಯ ಹುಚ್ಚ ಚಿತ್ರಗಳನ್ನು ನಿರ್ದೇಶಿಸಿದ್ದ ವಿ.ಕುಮಾರ್ (ರಾಘವ...

Related Articles