ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕರ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ “ಬೆಂಗಳೂರು-ಮೈಸೂರು” ಪ್ಯಾಕೇಜ್ ಟೂರ್(Bangalore-Mysore Package Tour) ಅನ್ನು ಅಶ್ವಮೇಧ ಕ್ಲಾಸಿಕ್(Ashwamede Classic) ಸಾರಿಗೆಯೊಂದಿಗೆ ಪ್ರಾರಂಭಿಸಲಾಗಿದೆ.
ದಿನಾಂಕ 13-10-2026 ರಿಂದ 28-10-2026 ರವರೆಗೆ (ಅಕ್ಟೋಬರ್ 20 ಮತ್ತು 21 ರಂದು ಹೊರತುಪಡಿಸಿ) ಈ ಪ್ಯಾಕೇಜ್ ಲಭ್ಯವಿರುತ್ತದೆ.
ಪ್ರಯಾಣದ ದರ ವಯಸ್ಕರಿಗೆ ರೂ. 950-00, ಮಕ್ಕಳಿಗಾಗಿ (6 ರಿಂದ 12 ವರ್ಷ): ರೂ. 750-00 ನಿಗದಿಪಡಿಸಲಾಗಿದೆ.
ಪ್ರವಾಸದ ವೇಳಾಪಟ್ಟಿ:
ಬೆಳಗ್ಗೆ 06:00 – 08:00: ಬೆಂಗಳೂರಿನಿಂದ ಹೊರಟು ಎಕ್ಸ್ಪ್ರೆಸ್ ಹೈವೇ ಮೂಲಕ ಪ್ರಯಾಣ. ಬೆಳಗ್ಗೆ 08:00 – 09:00: ಉಪಾಹಾರ ಹಾಗೂ ನಿಮಿμÁಂಬ ದೇವಸ್ಥಾನ ವೀಕ್ಷಣೆ. ಬೆಳಗ್ಗೆ 09:00 – 11:00: ಶ್ರೀರಂಗಪಟ್ಟಣ (ರಂಗನಾಥ ಸ್ವಾಮಿ ದೇವಸ್ಥಾನ, ದರಿಯಾ ದೌಲತ್, ಗುಂಬಜ್, ಸಂಗಮ್ ವೀಕ್ಷಣೆ). ಬೆಳಗ್ಗೆ 11:30 – ಮಧ್ಯಾಹ್ನ 12:00: ಸೆಂಟ್ ಫಿಲೋಮಿನಾ ಚರ್ಚ್. ಮಧ್ಯಾಹ್ನ 12:00 – 01:00: ಊಟದ ವಿರಾಮ. ಮಧ್ಯಾಹ್ನ 01:00 – 02:00: ಕಾವೇರಿ ಆರ್ಟ್ ಗ್ಯಾಲರಿ & ಕ್ರಾಫ್ಟ್ ಎಂಪೋರಿಯಂ. ಮಧ್ಯಾಹ್ನ 02:00 – ಸಂಜೆ 04:00: ಮೈಸೂರು ಅರಮನೆ. ಸಂಜೆ 04:00 – 05:30: ಮೃಗಾಲಯ. ಸಂಜೆ 05:30 – ರಾತ್ರಿ 08:00: ಚಾಮುಂಡಿಬೆಟ್ಟ. ರಾತ್ರಿ 08:00 – 10:00: ಎಕ್ಸ್ಪ್ರೆಸ್ ಹೈವೇ ಮೂಲಕ ಬೆಂಗಳೂರಿಗೆ ವಾಪಸ್ಸಾಗಲಿದೆ.
ಟಿಕೆಟ್ ಬುಕಿಂಗ್ ಮತ್ತು ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ವಿಳಾಸ: www.ksrtc.in ಅಥವಾ www.ksrtc.karnataka.gov.in ಸಹಾಯವಾಣಿ ಸಂಖ್ಯೆಗಳು: 080-26252625 / 7760990100 / 7760990560 / 7760990287 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

