ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ದೇಶದ ವಿವಿಧ ಬ್ಯಾಂಕಿಂಗ್(Banking), ಎಸ್ಎಸ್ಸಿ(SSLC) ಹಾಗೂ ಆರ್ಆರ್ಬಿ(RRB) ಹುದ್ದೆಗಳ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 45 ದಿನಗಳ ಕಾಲ ಉಚಿತ/ವಿಶೇಷ ತರಬೇತಿಯನ್ನು(Training) ನೀಡಲು ನಿರ್ಧರಿಸಿದೆ.
ಆಸಕ್ತರು 2026 ರ ಅಕ್ಟೊಬರ್ 19 ರ ಒಳಗಾಗಿ ದೂರವಾಣಿ ಸಂಖ್ಯೆ: 0821-2515944 ಮೂಲಕ ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 4:00 ಗಂಟೆಯವರೆಗೆ ನೋಂದಾಯಿಸಿಕೊಳ್ಳಬಹುದು.
ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಕರಾಮುವಿ ಕುಲಸಚಿವ ಪ್ರೊ. ಎಂ.ಪಿ. ಸದಾಶಿವ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

