ಬಂಧುತ್ವ ಭಾರತ ಸೌಹಾರ್ದ ಸಂಕೇತದ ದೃಷ್ಟಿಯಲ್ಲಿ ಮಹರ್ಷಿ ವಾಲ್ಮೀಕಿ

ಮಹರ್ಷಿ ವಾಲ್ಮೀಕಿ(Maharshi Valmiki) ಅವರನ್ನು ನಾವು ಕೇವಲ ರಾಮಾಯಣದ ಆದಿಕವಿ ಎಂದು ನೋಡಿದರೆ ಅವರ ಲೋಕದೃಷ್ಟಿಯ ವಿಸ್ತಾರ ಅರ್ಥವಾಗುವುದಿಲ್ಲ. ವಾಲ್ಮೀಕಿ ಒಂದು ವ್ಯಕ್ತಿಯಲ್ಲ, ಅವರು ಒಂದು ವೈಚಾರಿಕ ಪರಂಪರೆ. ತಳ ಸಮುದಾಯದ ನೋವಿನಿಂದ ಹುಟ್ಟಿದ, ಮಾನವೀಯತೆಯ ಉತ್ತುಂಗಕ್ಕೇರಿದ ದಾರ್ಶನಿಕ ಪರಂಪರೆ.

ವಾಲ್ಮೀಕಿ ಕಂಡ ಮನುಷ್ಯ ಮತ್ತು ಪ್ರಕೃತಿ

ಕ್ರೌಂಚ ಪಕ್ಷಿಗಳ ಜೋಡಿಯಲ್ಲಿ ಒಂದನ್ನು ಬೇಡನೊಬ್ಬ ಹೊಡೆದು ಕೆಡವಿದಾಗ, ವಾಲ್ಮೀಕಿ ಹೃದಯದಿಂದ ಹೊರಬಂದ ಉದ್ಗಾರವೇ ಭಾರತದ ಮೊದಲ ಶ್ಲೋಕ – “ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ”. ಒಂದು ಹಕ್ಕಿಯ ನೋವಿಗೆ ಮಿಡಿದ ಹೃದಯವೇ ವಾಲ್ಮೀಕಿ ಲೋಕದೃಷ್ಟಿಯ ಮೂಲ. ಅಲ್ಲಿ ಎಲ್ಲಾ ಜೀವಿಗಳಿಗೂ ಬದುಕುವ ಹಕ್ಕಿದೆ ಎಂಬ ಸಂದೇಶವಿದೆ.

ಅವರು ಕಂಡ ರಾಮ ದೇವರಲ್ಲ, ಆದರ್ಶ ಮನುಷ್ಯ. ಆ ಮನುಷ್ಯ ಅರಮನೆಯನ್ನು ಬಿಟ್ಟು ಕಾಡಿಗೆ ಬಂದಾಗ, ಕಾಡಿನಲ್ಲಿದ್ದ ಬುಡಕಟ್ಟು ಜನಾಂಗ, ದೋಣಿ ನಡೆಸುವ ಗುಹ, ಬುಟ್ಟಿ ಹೆಣೆಯುವ ಶಬರಿ, ವಾನರ ಸಮುದಾಯದ ಹನುಮಂತ – ಇವರೆಲ್ಲರನ್ನು ತನ್ನವರೆಂದು ಅಪ್ಪಿಕೊಂಡ. ವಾಲ್ಮೀಕಿ ಅವರಿಗೆ ರಾಮಾಯಣದಲ್ಲಿ ಕೇಂದ್ರ ಸ್ಥಾನ ಕೊಟ್ಟರು. ಇದು ಮೇಲು-ಕೀಳು ಎಂಬ ಭಾವನೆಯನ್ನು ತಿರಸ್ಕರಿಸಿ, ಮನುಷ್ಯರನ್ನು ಮನುಷ್ಯರಾಗಿ ಕಾಣುವ ದೃಷ್ಟಿ.

ಆಶ್ರಮ – ಅಸಮಾನತೆ ಅಳಿಸುವ ಪ್ರಯೋಗಾಲಯ:

ವಾಲ್ಮೀಕಿ ಆಶ್ರಮ ಹೇಗಿತ್ತು ಎಂಬುದನ್ನು ನಾವು ಗಮನಿಸಬೇಕು. ಅರಮನೆಯಿಂದ ತಿರಸ್ಕೃತಳಾಗಿ ಬಂದ ಸೀತೆಗೆ ಅಲ್ಲಿ ಆಶ್ರಯ ಸಿಕ್ಕಿತು. ಒಬ್ಬ ಒಂಟಿ ಮಹಿಳೆ, ಗರ್ಭಿಣಿಗೆ ಸಮಾಜ ಬಾಗಿಲು ಮುಚ್ಚಿದಾಗ, ವಾಲ್ಮೀಕಿ ಆಶ್ರಮ ಬಾಗಿಲು ತೆರೆಯಿತು. ಅಲ್ಲಿ ಲವ-ಕುಶ ಹುಟ್ಟಿ ಬೆಳೆದರು. ಅವರು ರಾಜಕುಮಾರರಾಗಿ ಬೆಳೆಯಲಿಲ್ಲ, ಆಶ್ರಮದ ಮಕ್ಕಳಾಗಿ, ಪ್ರಕೃತಿಯ ಮಕ್ಕಳಾಗಿ, ಸಮಾನತೆಯ ಪಾಠ ಕಲಿತು ಬೆಳೆದರು.

ಇಂದಿನ ಭಾಷೆಯಲ್ಲಿ ಹೇಳಬೇಕೆಂದರೆ, ವಾಲ್ಮೀಕಿ ಆಶ್ರಮವೇ ಈ ನೆಲದ ಮೊದಲ ಸಮಾನತೆಯ ಶಾಲೆ. ಅಲ್ಲಿ ಜಾತಿ, ಅಧಿಕಾರ, ಆಸ್ತಿಯ ಭೇದವಿರಲಿಲ್ಲ. ಇದ್ದದ್ದು ಒಂದೇ ಕರುಣೆ, ಜ್ಞಾನ ಮತ್ತು ಬಂಧುತ್ವ.

ಇಂದು ವಾಲ್ಮೀಕಿ ವಿಚಾರ ಏಕೆ ಬೇಕು? – ತಳ ಸಮುದಾಯದ ನೋವು:

ಇಂದು ನಾವು ಮೀಸಲಾತಿ ಹೋರಾಟವನ್ನು ನೋಡುತ್ತಿದ್ದೇವೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ 101, ಪರಿಶಿಷ್ಟ ಪಂಗಡದಲ್ಲಿ 51 + ಒಳಸಮುದಾಯಗಳಿವೆ. ಇವರೆಲ್ಲರೂ ಶತಮಾನಗಳಿಂದ ಶಿಕ್ಷಣ, ಭೂಮಿ, ಅಧಿಕಾರದಿಂದ ವಂಚಿತರಾದವರು. ಅವರಿಗೆ ಸಿಕ್ಕಿದ್ದು ಸಣ್ಣದೊಂದು ಅವಕಾಶ ಮೀಸಲಾತಿ.

ಆ ಮೀಸಲಾತಿಯ ಪ್ರಮಾಣ 56%ಕ್ಕೆ ಹೆಚ್ಚಿಸಿ, ನಂತರ ನ್ಯಾಯಾಲಯದಲ್ಲಿ ತಡೆಯಾಗಿರುವುದು ಕೇವಲ ಕಾನೂನಿನ ವಿಷಯವಲ್ಲ, ಅದು ಕೋಟ್ಯಂತರ ತಳ ಸಮುದಾಯದ ಬದುಕಿನ ಪ್ರಶ್ನೆ. ಒಬ್ಬ ಮಗ ಉನ್ನತ ಶಾಲೆಗೆ ಹೋಗಬೇಕೋ ಬೇಡವೋ, ಒಬ್ಬ ಯುವಕನಿಗೆ ಉದ್ಯೋಗ ಸಿಗುತ್ತದೆಯೋ ಇಲ್ಲವೋ ಎಂಬ ಪ್ರಶ್ನೆ.!

ವಾಲ್ಮೀಕಿ ವಿಚಾರ ಇಲ್ಲಿ ನಮಗೆ ದಾರಿ ತೋರಿಸುತ್ತದೆ. ವಾಲ್ಮೀಕಿ ಹೇಳಿದ್ದು – ಸಮಾಜದ ಕೊನೆಯ ಮನುಷ್ಯನ ಕಣ್ಣೀರು ಒರೆಸುವವರೆಗೂ ನಿನ್ನ ಧರ್ಮ ಅಪೂರ್ಣ. ಅಸಮಾನತೆಯನ್ನು ಕಾಪಾಡುವ ಯಾವ ವ್ಯವಸ್ಥೆಯೂ ಧರ್ಮವಾಗುವುದಿಲ್ಲ.

ಕುತಂತ್ರ ರಾಜಕಾರಣಕ್ಕೆ .ವ್ಯವಸ್ಥೆಗೆ ವಾಲ್ಮೀಕಿಯಿಂದ ಎಚ್ಚರಿಕೆ:!

ಇಂದು ಮೀಸಲಾತಿ ವಿಷಯದಲ್ಲಿ ನಡೆಯುತ್ತಿರುವುದು ಕುತಂತ್ರದ ರಾಜಕಾರಣ. ಒಂದು ಸಮುದಾಯವನ್ನು ಇನ್ನೊಂದು ಸಮುದಾಯದ ವಿರುದ್ಧ ಎತ್ತಿಕಟ್ಟುವುದು, ಹಕ್ಕುಗಳನ್ನು ಕೊಟ್ಟಂತೆ ಮಾಡಿ ಕಸಿದುಕೊಳ್ಳುವುದು, ತಳ ಸಮುದಾಯಗಳನ್ನು ಕೇವಲ ಮತಕ್ಕಾಗಿ ಬಳಸಿಕೊಳ್ಳುವುದು – ಇದು ವಾಲ್ಮೀಕಿ ಕಂಡ ರಾಜಧರ್ಮವಲ್ಲ.

ರಾಮ ರಾಜ್ಯ ಎಂದರೆ ಎಲ್ಲರಿಗೂ ಸಮಪಾಲು, ಸಮಬಾಳು ಇರುವ ರಾಜ್ಯ. ಗುಹನ ದೋಣಿ, ಶಬರಿಯ ಹಣ್ಣು, ಹನುಮನ ಶಕ್ತಿಗೆ ಅಲ್ಲಿ ಬೆಲೆ ಇತ್ತು. ಇಂದು ತಳ ಸಮುದಾಯದ ಶ್ರಮಕ್ಕೆ, ಪ್ರತಿಭೆಗೆ ಬೆಲೆ ಸಿಗದೆ ಹೋದರೆ ಅದು ರಾಮರಾಜ್ಯವಾಗುವುದಿಲ್ಲ.

ಆದ್ದರಿಂದ ಈ ವಾಲ್ಮೀಕಿ ಜಯಂತಿ ಕೇವಲ ಹೂವಿನ ಹಾರ, ಭಾಷಣಕ್ಕೆ ಸೀಮಿತವಾಗಬಾರದು. ಅದು ಸರ್ಕಾರಗಳಿಗೆ, ವ್ಯವಸ್ಥೆಗಳಿಗೆ ಮನಮುಟ್ಟುವ ಎಚ್ಚರಿಕೆಯ ಸಂಕೇತವಾಗಬೇಕು. ನಾವು ಸೌಹಾರ್ದಯುತವಾಗಿ, ಶಾಂತಿಯುತವಾಗಿ, ಆದರೆ ದೃಢವಾಗಿ ಹೇಳಬೇಕು – ತಳ ಸಮುದಾಯಗಳ ನೋವಿಗೆ ಸ್ಪಂದಿಸಿ, ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಿರಿ ಎಂದು.

ಮಹರ್ಷಿ ವಾಲ್ಮೀಕಿ ಅವರು ಈ ನೆಲದ ಮೊದಲ ಬಂಧುತ್ವದ ಕವಿ. ಅವರ ಲೋಕದೃಷ್ಟಿ – ಎಲ್ಲರೂ ಒಂದೇ, ಎಲ್ಲರಿಗೂ ಸಮಾನ ಅವಕಾಶ, ಎಲ್ಲರ ಬದುಕಿಗೂ ಗೌರವ. ಇದೇ ಬಂಧುತ್ವ ಭಾರತದ ಸಂಕೇತ. ಇದೇ ಸೌಹಾರ್ದತೆಯ ದಾರಿ….

Hot this week

’ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ‘ಪಾಂಚಜನ್ಯ ಗುರುಶ್ರೇಷ್ಠ ಪುರಸ್ಕಾರ–2026′

ಎರಡು ವಿಭಾಗಗಳಲ್ಲಿ ಪ್ರಶಸ್ತಿ ಪ್ರದಾನ; ನಾಮನಿರ್ದೇಶನ ಸಲ್ಲಿಸಲು ನವೆಂಬರ್ 20 ಕೊನೆಯ...

ಬೆಂಗಳೂರಿನಲ್ಲಿ ೧೫ ರಂದು `ಜೋಳರಾಜನ ಕಥೆ’ ಕೃತಿ ಜನಾರ್ಪಣೆ

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ (Kannada Sahitya Academy) ಮಾಜಿ ಸದಸ್ಯ...

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನವನ್ನು ಅಧಿಕೃತವಾಗಿ ಅಂತ್ಯಗೊಳಿಸದೆ ದಾಖಲೆಯ 88 ದಿನಗಳ...

ಬೆಂಗಳೂರು: ಕರ್ನಾಟಕ ಸರ್ಕಾರವು(Karnataka Government) ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ  ನವೆಂಬರ್...

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವತಿಯಿಂದ ಕೃಷಿ ನಾವಿನ್ಯತೆಗಳು ಹಾಗೂ ಬರ...

Topics

’ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ‘ಪಾಂಚಜನ್ಯ ಗುರುಶ್ರೇಷ್ಠ ಪುರಸ್ಕಾರ–2026′

ಎರಡು ವಿಭಾಗಗಳಲ್ಲಿ ಪ್ರಶಸ್ತಿ ಪ್ರದಾನ; ನಾಮನಿರ್ದೇಶನ ಸಲ್ಲಿಸಲು ನವೆಂಬರ್ 20 ಕೊನೆಯ...

ಬೆಂಗಳೂರಿನಲ್ಲಿ ೧೫ ರಂದು `ಜೋಳರಾಜನ ಕಥೆ’ ಕೃತಿ ಜನಾರ್ಪಣೆ

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ (Kannada Sahitya Academy) ಮಾಜಿ ಸದಸ್ಯ...

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನವನ್ನು ಅಧಿಕೃತವಾಗಿ ಅಂತ್ಯಗೊಳಿಸದೆ ದಾಖಲೆಯ 88 ದಿನಗಳ...

ಬೆಂಗಳೂರು: ಕರ್ನಾಟಕ ಸರ್ಕಾರವು(Karnataka Government) ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ  ನವೆಂಬರ್...

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವತಿಯಿಂದ ಕೃಷಿ ನಾವಿನ್ಯತೆಗಳು ಹಾಗೂ ಬರ...

ಬೆಂಗಳೂರು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಭಾರತದ ಪ್ರಥಮ ಶಿಕ್ಷಣ ಸಚಿವರಾದ...

ಇ-20 ಎಥನಾಲ್ ಪ್ರಮಾಣ ಪರೀಕ್ಷೆ – ಕರ್ನಾಟಕ ಸರ್ಕಾರವು ಗ್ರಾಹಕರ ಹಿತರಕ್ಷಣೆಗೆ ಬದ್ಧ : ಸಚಿವ ರಿಜ್ವಾನ್ ಅರ್ಷದ್ 

ಬೆಂಗಳೂರು: ಪೆಟ್ರೋಲ್‌ನಲ್ಲಿ ಎಥನಾಲ್ ಮಿಶ್ರಣಕ್ಕೆ (E20) ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ಪರೀಕ್ಷಾ...

ಬೆಂಗಳೂರು: ಭಾರತದಲ್ಲೇ ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ ಕಾಮನ್ವೆಲ್ತ್ ಮಹಿಳಾ ಸಂಸದೀಯರ ಭಾರತ...

Related Articles