ವಿಧಾನ ಮಂಡಲ ಅಧಿವೇಶನ – ಅಧಿಕೃತ ಪ್ರವೇಶ ಪತ್ರ ಪಡೆಯುವ ಕುರಿತು

ಬೆಂಗಳೂರು: ಕರ್ನಾಟಕ ವಿಧಾನಮಂಡಲದ ಅಧಿವೇಶನವು(Session) 2026ನೇ ಆಗಸ್ಟ್ ಮೊದಲ ವಾರದಲ್ಲಿ ಬೆಂಗಳೂರಿನ ವಿಧಾನಸೌಧದಲ್ಲಿ ಆರಂಭವಾಗಲಿದೆ.
ಈ ಅಧಿವೇಶನದ ವರದಿಗಾಗಿ ಆಗಮಿಸುವ ಮಾಧ್ಯಮ ಪ್ರತಿನಿಧಿಗಳು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಮಾನ್ಯತೆ ಪತ್ರ (Accreditation Card) ಹೊಂದಿರುವ ಹಾಗೂ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿದ್ದು, ಬೆಂಗಳೂರಿನಲ್ಲಿ ಪ್ರಸಾರ ಹೊಂದಿರುವ ಮಾಧ್ಯಮ ಸಂಸ್ಥೆಗಳ ಪ್ರತಿನಿಧಿಗಳು ಮಾತ್ರ ಅಧಿಕೃತ ಪ್ರವೇಶಪತ್ರ ಪಡೆಯುವ ಸಲುವಾಗಿ (ವಿಧಾನ ಸಭೆ ಮತ್ತು ವಿಧಾನ ಪರಿಷತ್‍ಗೆ ಪ್ರತ್ಯೇಕವಾಗಿ) ಕಡ್ಡಾಯವಾಗಿ ತಮ್ಮ ಸಂಸ್ಥೆಯ ಶಿಫಾರಸ್ಸು ಪತ್ರದೊಂದಿಗೆ, ಮಾಧ್ಯಮ ಪ್ರತಿನಿಧಿಯ ಹೆಸರು, ಪದನಾಮ, ಮೊಬೈಲ್ ದೂರವಾಣಿ ಸಂಖ್ಯೆ, ಇ-ಮೇಲ್ ವಿಳಾಸ(email ID) ಮಾಹಿತಿ ಒಳಗೊಂಡಿರುವ ಮಾಹಿತಿ ಪತ್ರವನ್ನು ದಿನಾಂಕ: 28-07-2026 ರ ಮಧ್ಯಾಹ್ನ 3.00 ಗಂಟೆಯ ಒಳಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕೇಂದ್ರ ಕಚೇರಿಯ ಸುದ್ದಿ ಮತ್ತು ಪತ್ರಿಕಾ ಶಾಖೆಯಲ್ಲಿ ಸಲ್ಲಿಸುವುದು.

ವಿಶೇಷ ಸೂಚನೇ: ನಿಗದಿತ ದಿನಾಂಕದ ನಂತರ ಬರುವ ಯಾವುದೇ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ ಎಂದು ಈ ಮೂಲಕ ತಿಳಿಸಿದೆ.

ಮಾಧ್ಯಮ ಮಾನ್ಯತೆ ಕಾರ್ಡು (Accreditation Card Holders) ಹೊಂದಿರುವ ಬೆಂಗಳೂರಿನ ಮಾಧ್ಯಮ ಪ್ರತಿನಿಧಿಗಳು ನೇರವಾಗಿ ವಿಧಾನ ಸಭೆಯ ಅಧಿಕೃತ ಪ್ರವೇಶ ಪತ್ರಕ್ಕೆ ಕೊಠಡಿ ಸಂಖ್ಯೆ 128 ಮೊದಲನೇ ಮಹಡಿ ವಿಧಾನಸೌಧ ಹಾಗೂ ವಿಧಾನ ಪರಿಷತ್ತಿನ ಅಧಿಕೃತ ಪ್ರವೇಶ ಪತ್ರಕ್ಕಾಗಿ ಕೊಠಡಿ ಸಂಖ್ಯೆ 227, ಎರಡನೇ ಮಹಡಿ ವಿಧಾನಸೌಧ ಇಲ್ಲಿ ತಮ್ಮ ಇತ್ತೀಚಿನ 2 ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳನ್ನು ನೀಡಿ ತಮ್ಮ ಮಾಧ್ಯಮ ಮಾನ್ಯತೆ ಕಾರ್ಡು (Accreditation Card) ತೋರಿಸಿ ಪ್ರವೇಶ ಪತ್ರಗಳನ್ನು ಪಡೆದುಕೊಳ್ಳಬಹುದು.

Hot this week

ಭ್ರಷ್ಟರಿಂದ, ಭ್ರಷ್ಟರಿಗಾಗಿ, ಭ್ರಷ್ಟರಿಗೋಸ್ಕರ ಸರ್ಕಾರ

ಲಿಂಗಸುಗೂರು (ರಾಯಚೂರು ಜಿಲ್ಲೆ): ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಡಿ ಕೆ...

Topics

ಭ್ರಷ್ಟರಿಂದ, ಭ್ರಷ್ಟರಿಗಾಗಿ, ಭ್ರಷ್ಟರಿಗೋಸ್ಕರ ಸರ್ಕಾರ

ಲಿಂಗಸುಗೂರು (ರಾಯಚೂರು ಜಿಲ್ಲೆ): ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಡಿ ಕೆ...

ರೈತರ ಸಂಕಷ್ಟದ ಜ್ಞಾನೋದಯ ಆದಂತಿಲ್ಲ-ವಿಜಯೇಂದ್ರ

ಮಸ್ಕಿ (ರಾಯಚೂರು ಜಿಲ್ಲೆ): ನಾಗೇಂದ್ರ(Nagendra) ಅವರೇನೋ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರಬಹುದು....

ಕಂಠೀರವ ಸ್ಟುಡಿಯೋಸ್ ಆವರಣದಲ್ಲಿ ಟಿ.ಎಸ್. ಕರಿಬಸಯ್ಯ ಪುತ್ಥಳಿ ಅನಾವಣ

ಬೆಂಗಳೂರು: ಬೆಂಗಳೂರಿನ ಕಂಠೀರವ ಸ್ಟುಡಿಯೋ(Kanteerava Studio) ಸ್ಥಾಪನೆಯ ರೂವಾರಿ ತಿಪಟೂರಿನ ಟಿ.ಎಸ್...

Related Articles