ಬೆಂಗಳೂರು: ದೇಶದ ಆಂತರಿಕ ಭದ್ರತೆಗೆ ಮಾರಕವಾಗಿರುವ ವೈಚಾರಿಕ ಭಯೋತ್ಪಾದನೆ ವಿರುದ್ಧ ಜನಜಾಗೃತಿ ಮೂಡಿಸಲು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಸೆಪ್ಟೆಂಬರ್ 3ರಂದು ಬೆಂಗಳೂರಿನ ವಿ ವಿ ಪುರಂ ನಲ್ಲಿ ವಿಶೇಷ ಚರ್ಚಾಕೂಟ ಆಯೋಜಿಸಲಾಗಿದೆ.
ಶಿಕ್ಷಣ ಸಂಸ್ಥೆಗಳು ಹಾಗೂ ನ್ಯಾಯಾಂಗ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಯತ್ನಿಸುತ್ತಿರುವ ‘ದಿಮಾಗಿ ನಕ್ಸಲಿಸಂ’ ಮತ್ತು ಇತ್ತೀಚಿನ ವಿದ್ಯಾರ್ಥಿ ಚಳುವಳಿ ಹಿಂದಿನ ಷಡ್ಯಂತ್ರಗಳನ್ನು ಬಯಲಿಗೆಳೆಯಲು ‘CJP ಆಂದೋಲನದ ಹಿಂದೆ ದಿಮಾಗಿ ನಕ್ಸಲಿಸಂ ಕೈವಾಡವೇ?’ ಎಂಬ ವಿಷಯದ ಕುರಿತು ಸಮಾಲೋಚನೆ ನಡೆಯಲಿದೆ.
ಕಾರ್ಯಕ್ರಮದ ವಿವರ:
ದಿನಾಂಕ: ಸೆಪ್ಟೆಂಬರ್ 3, 2026 (ಗುರುವಾರ)
ಸಮಯ: ಸಂಜೆ 5.30 PM
ಸ್ಥಳ: ಮಾನಂದಿ ನಂಜುಂಡ ಶೆಟ್ಟಿ ಸಭಾಂಗಣ, ವಾಸವಿ ದೇವಸ್ಥಾನ ರಸ್ತೆ, ವಿ.ವಿ. ಪುರಂ, ಬೆಂಗಳೂರು
ವಕ್ತಾರರು:
1. ಶ್ರೀ. ಚಕ್ರವರ್ತಿ ಸೂಲಿಬೆಲೆ, ಸಂಸ್ಥಾಪಕರು, ಯುವ ಬ್ರಿಗೇಡ್
2. ಶ್ರೀ. ಮೋಹನ್ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ.
ಸಂಪರ್ಕ: 7204082609
ನಾಗರಿಕರು ಹಾಗೂ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

