ಅಗಲಿದ ಪತ್ರಕರ್ತರಿಗೆ ಕೆಯುಡಬ್ಲ್ಯೂಜೆ ಶ್ರದ್ಧಾಂಜಲಿ

ಬೆಂಗಳೂರು: ಕರ್ನಾಟಕ(Karnataka) ಕಾರ್ಯನಿರತ ಪತ್ರಕರ್ತರ(Journalist) ಸಂಘದ (ಕೆಯುಡಬ್ಲ್ಯೂಜೆ) ವತಿಯಿಂದ ಅಗಲಿದ ಪತ್ರಕರ್ತರಿಗೆ ಶ್ರದ್ಧಾಂಜಲಿ(Tribute) ಸಲ್ಲಿಸಲಾಯಿತು.

ನಗರದ ಕೆಯುಡಬ್ಲ್ಯೂಜೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಗಲಿದ ಪತ್ರಕರ್ತರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ, ಒಂದು ನಿಮಿಷ ಮೌನಾಚರಣೆ ಮೂಲಕ ಗೌರವ ಸಲ್ಲಿಸಲಾಯಿತು.

ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಕರ್ತರ ಒತ್ತಡದ ಬದುಕಿನಿಂದಾಗಿ ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆಗಳು ತೀವ್ರಗೊಳ್ಳುತ್ತಿದ್ದು, ಸಾವಿನ ಪ್ರಕರಣಗಳು ಹೆಚ್ಚುತ್ತಿರುವುದು ನೋವಿನ ಸಂಗತಿಯಾಗಿದೆ. ಪತ್ರಕರ್ತರ ಆರೋಗ್ಯ ಮತ್ತು ಅವರ ಸಂಕಷ್ಟಗಳ ಬಗ್ಗೆ ಸರ್ಕಾರ ವಿಶೇಷ ಗಮನಹರಿಸಿ, ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಅಗತ್ಯ ನೆರವು ನೀಡಬೇಕು ಎಂದು ಒತ್ತಾಯಿಸಿದರು. ಅಗಲಿದ ಪತ್ರಕರ್ತರ ಸೇವೆ ಸ್ಮರಿಸಿದರು.

ಐಎಫ್‌ಡಬ್ಲ್ಯೂಜೆ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ಮಾತನಾಡಿ, ಬದುಕಿನಲ್ಲಿ ಅವಕಾಶ ದೊರೆತಾಗ ನಾವು ಮಾಡುವ ಉತ್ತಮ ಕೆಲಸಗಳೇ ಜೀವನದ ಸಾರ್ಥಕತೆಗೆ ಸಾಕ್ಷಿಯಾಗುತ್ತವೆ ಎಂದರು. ಗೋಪಾಲರಾವ್ ಮತ್ತು ಎನ್.ಎಸ್.ಶಂಕರ್ ಸೇವೆ ಸ್ಮರಿಸಿದರು

ಹಿರಿಯ ಪತ್ರಕರ್ತರು ಹಾಗೂ ಚಿತ್ರ ನಿರ್ದೇಶಕ ಎನ್.ಎಸ್. ಶಂಕರ್, ಜನವಾಹಿನಿ ಪತ್ರಿಕೆಯ ಮಾಜಿ ಸಂಪಾದಕ ಪ್ರೊ. ಕೆ.ಟಿ. ಬಾಲಕೃಷ್ಣಗಟ್ಟಿ, ಕೆಯುಡಬ್ಲ್ಯೂಜೆ ಮಾಜಿ ರಾಜ್ಯ ಕಾರ್ಯದರ್ಶಿ ದಾವಣಗೆರೆಯ ಪೆ.ನ. ಗೋಪಾಲರಾವ್, ಒ.ಎನ್. ಸಿದ್ದಯ್ಯ, ತುಮಕೂರಿನ ಕಮಲಾ ಗಂಗಹನುಮಯ್ಯ, ಈಶ್ವರಪ್ಪ, ಬಳ್ಳಾರಿಯ ವೇಣು ಲೋಕನಾಥ್, ಚಿತ್ರದುರ್ಗದ ಉಜಿನಪ್ಪ, ಇಂದಿರಾ ಲಂಕೇಶ್, ಉಡುಪಿಯ ನಾಗೇಶ್ ಗಾಣಿಗ ಸಿದ್ದಾಪುರ, ಬೈಂದೂರಿನ ಜನಾರ್ದನ ಮರವಂತೆ, ಮಹೇಶ್ ಕುಮಾರ್, ಸಿಂದಗಿಯ ಇಸ್ಮಾಯಿಲ್ ಶೇಖ್, ಬಸವಾಪಟ್ಟಣದ ಜಯಕುಮಾರ್, ಬಸವರಾಜಪ್ಪ, ತುಮಕೂರಿನ ವೆಂಕಟೇಶ್ ಮೂರ್ತಿ, ಧ್ರುವಕುಮಾರ್, ನಾಗೇಂದ್ರ ಹಾಗೂ ಶೇಷಗಿರಿ ಸೇರಿದಂತೆ ಅಗಲಿದ ಪತ್ರಕರ್ತರನ್ನು ಸ್ಮರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕೆಯುಡಬ್ಲ್ಯೂಜೆ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್, ಖಜಾಂಚಿ ವಾಸುದೇವ ಹೊಳ್ಳ, ಬೆಂಗಳೂರು ಘಟಕದ ರವೀಶ್, ಶಿವಾನಂದ, ಶಶಿಕಲಾ ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯಕ್ಕೆ 7,142.64 ಕೋಟಿ ರೂ. ಬರ ಪರಿಹಾರ ನೀಡಿ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್

Hot this week

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ 61ನೇ ಸಂಸ್ಥಾಪನಾ ದಿನಾಚರಣೆ ಮುಂದೂಡಿಕೆ

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ(Bangalore Agricultural University) ವತಿಯಿಂದ ಅಕ್ಟೋಬರ್ 5...

ಶ್ರೀ ಗಣೇಶ್ ನಾಚಿಕೇತು ಎಂಬುವವರ ನೇಮಕಾತಿ ಕುರಿತಾದ ವರದಿಗಳ ಬಗ್ಗೆ ಸ್ಪಷ್ಟೀಕರಣ

ಬೆಂಗಳೂರು: ಶ್ರೀ ಗಣೇಶ್ ನಾಚಿಕೇತು(Shri Ganesh Nachiketu) ಎಂಬುವವರನ್ನು ಸರ್ಕಾರದಿಂದ "ರಾಜ್ಯ ಪಿ.ಆರ್....

ಇಂಜಿನಿಯರ್ ಎಂದರೆ ಕಟ್ಟಡ ಕಟ್ಟುವವರಲ್ಲ, ಭವಿಷ್ಯ ರೂಪಿಸುವ ಶಿಲ್ಪಿಗಳು: ಸಚಿವ ಚಲುವರಾಯಸ್ವಾಮಿ

ತಂತ್ರಜ್ಞಾನ ಸ್ಮಾರ್ಟ್ ಆಗಿರದೆ, ಸುಸ್ಥಿರವಾಗಿರಬೇಕು: ಸರ್ ಎಂ.ವಿ. ಅವರನ್ನು ಇಂದಿಗೂ ಮೀರಿಸಲು...

ರಾಜ್ಯದಲ್ಲೇ ಪ್ರಥಮ: ಪಶ್ಚಿಮ ಘಟ್ಟದ 10 ಜಿಲ್ಲೆಗಳನ್ನು ಪ್ರತಿನಿಧಿಸುವ ವಿಶೇಷ ಪೋಸ್ಟ್ ಕಾರ್ಡ್ ಸರಣಿ ಬಿಡುಗಡೆ

ಬೆಂಗಳೂರು: ಕರ್ನಾಟಕ ರಾಜ್ಯ(Karnataka State) ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿಯ ವತಿಯಿಂದ,...

Topics

ಕೇಂದ್ರ ಬರ ಅಧ್ಯಯನ ತಂಡದೊಂದಿಗೆ  ಸಮಾಲೋಚನೆ - ಎನ್.ಡಿ.ಆರ್.ಎಫ್  ಮಾನದಂಡಗಳನ್ವಯ ಪರಿಹಾರಕ್ಕೆ...

BIG NEWS : ಪಾಕಿಸ್ತಾನವನ್ನು ಮಣಿಸಿದ ಭಾರತ; ಚಿನ್ನದ ಪದಕ ಗೆದ್ದು ಸಂಭ್ರಮ

ನವದೆಹಲಿ: ಏಷ್ಯನ್ ಕ್ರೀಡಾಕೂಟದ ಕ್ರಿಕೆಟ್‌ ಫೈನಲ್‌ (Asian Games) ನಲ್ಲಿ ಪಾಕಿಸ್ತಾನವನ್ನು...

Related Articles