ಕೃಷಿ ಮತ್ತು ತೋಟಗಾರಿಕಾ ನಷ್ಟವನ್ನು ತಗ್ಗಿಸಲು ಮತ್ತು ರೈತರ ಆದಾಯವನ್ನು ರಕ್ಷಿಸಲು ಕರ್ನಾಟಕ ರಾಜ್ಯದ ಹೆಜ್ಜೆ

ಬೆಂಗಳೂರು: ರಾಜ್ಯದ ರೈತರ ಬೆಳೆಗಳ ಕಟಾವಿನ ನಂತರದ ನಷ್ಟ ಮತ್ತು ಆಹಾರ ಸಂರಕ್ಷಣೆಯ ಮೂಲಕ ವ್ಯರ್ಥವನ್ನು ತಡೆಯಲು ಹಾಗೂ ರೈತರ ಆದಾಯವನ್ನು ಹೆಚ್ಚಿಸಲು ಮಾದರಿ ಪರಿಹಾರಗಳನ್ನು ಗುರುತಿಸುವ ಗುರಿಯೊಂದಿಗೆ ಕನಾಟಕ ಸರ್ಕಾರ ‘ಸಂಪೂರ್ಣ ಗ್ರ್ಯಾಂಡ್ ಚಾಲೆಂಜ್ 2026′(Complete Grand Challenge 2026)ನ್ನು ಹಮ್ಮಿಕೊಂಡಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್(Dr.Shalini Rajaneesh) ಅವರು ತಿಳಿಸಿದರು.

ಇಂದು ವಿಧಾನಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ  ‘ಸಂಪೂರ್ಣ ಗ್ರ್ಯಾಂಡ್ ಚಾಲೆಂಜ್ 2026’ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಕರ್ನಾಟಕ ಸರ್ಕಾರದ ನಾವೀನ್ಯತಾ ಉಪಕ್ರಮವಾದ ‘ಸಂಪೂರ್ಣ ಗ್ರ್ಯಾಂಡ್ ಚಾಲೆಂಜ್ 2026’ ಮೂಲಕ ಆರು ನಾವೀನ್ಯತಾ ಪರಿಹಾರಗಳನ್ನು ಅಂತಿಮಗೊಳಿಸಲಾಗಿದ್ದು, ಇವು ಮುಂದಿನ ಹಂತದಲ್ಲಿ ಸರ್ಕಾರಿ, ಮಾರುಕಟ್ಟೆ ಮತ್ತು ಹೂಡಿಕೆ ಸಂಪರ್ಕಗಳನ್ನು ಪಡೆದುಕೊಳ್ಳಲಿವೆ ಎಂದು ಹೇಳಿದರು.

ಉನ್ನತ ಮಟ್ಟದ ಸ್ಟೀರಿಂಗ್ ಸಮಿತಿಯ ಈ ಸಭೆಯಲ್ಲಿ ಭಾರತದಾದ್ಯಂತದ ಆಹಾರ ಮತ್ತು ಪಾನೀಯ, ಅಗ್ರಿಟೆಕ್, ಕೃಷಿ-ವ್ಯಾಪಾರ, ಪರಿಸರ ವಿಜ್ಞಾನ ಮತ್ತು ಲೋಕೋಪಕಾರಿ ಕ್ಷೇತ್ರಗಳ ಹಿರಿಯ ಮಾರುಕಟ್ಟೆ ನಾಯಕರು ಭಾಗವಹಿಸಿದ್ದರು.

‘ಸಂಪೂರ್ಣ 2026’ ವೇದಿಕೆಯ ಭಾಗವಾಗಿ ಕರ್ನಾಟಕ ಸರ್ಕಾರದ ದೂರದೃಷ್ಟಿ ಮತ್ತು ಮಾರ್ಗದರ್ಶನದಲ್ಲಿ ಈ ಉಪಕ್ರಮವನ್ನು ನಡೆಸಲಾಗುತ್ತಿದೆ. ನಾವೀನ್ಯಕಾರರು, ಉದ್ಯಮಿಗಳು, ಸಂಶೋಧಕರು, ಹೂಡಿಕೆದಾರರು ಮತ್ತು ಸರ್ಕಾರಿ ಸಂಸ್ಥೆಗಳನ್ನು ಒಂದೆಡೆ ಸೇರಿಸಿ ಆಹಾರ ನಷ್ಟದ ಸಮಸ್ಯೆಯನ್ನು ಬೃಹತ್ ಮಟ್ಟದಲ್ಲಿ ಪರಿಹರಿಸುವುದು ಇದರ ಆಶಯವಾಗಿದೆ.

ಕರ್ನಾಟಕ ಸರ್ಕಾರದ ತೋಟಗಾರಿಕೆ ಮತ್ತು ರೇಷ್ಮ್ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಶ್ರೀ ಆರ್. ಗಿರೀಶ್ ಐ.ಎ.ಎಸ್. ಅವರ ಬೆಂಬಲದೊಂದಿಗೆ ಈ ವೇದಿಕೆಯನ್ನು ರೂಪಿಸಲಾಗಿದೆ. ಕರ್ನಾಟಕದ ಕೃಷಿ ಮತ್ತು ತೋಟಗಾರಿಕೆ ಮೌಲ್ಯ ಸರಪಳಿಯಲ್ಲಿ ಆಹಾರ ನಷ್ಟ ಮತ್ತು ಕಟಾವಿನ ನಂತರದ ಅಡಚಣೆಗಳನ್ನು ತಡೆಯಬಲ್ಲ ತಂತ್ರಜ್ಞಾನ ಆಧಾರಿತ ಹಾಗೂ ತಂತ್ರಜ್ಞಾನೇತರ ಪರಿಹಾರಗಳನ್ನು ಗುರುತಿಸಲು ‘ಸಂಪೂರ್ಣ ಗ್ರ್ಯಾಂಡ್ ಚಾಲೆಂಜ್’ ಅನ್ನು ವಿನ್ಯಾಸಗೊಳಿಸಲಾಗಿದೆ.

ಆಹಾರ ನಷ್ಟವನ್ನು ಕೇವಲ ವ್ಯರ್ಥದ ಸಮಸ್ಯೆಯಾಗಿ ನೋಡದೆ, ರೈತ ಸಮುದಾಯದ ನೇರ ಆರ್ಥಿಕ ಸವಾಲಾಗಿ ಪರಿಗಣಿಸಿ ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಸಂಪೂರ್ಣ ವೇದಿಕೆಯ ಮುಖ್ಯ ಉದ್ದೇಶವಾಗಿದೆ. ಈ ನಷ್ಟವನ್ನು ಕಡಿಮೆ ಮಾಡುವ ಮೂಲಕ ರೈತರ ಉತ್ಪನ್ನಗಳ ಮೌಲ್ಯವನ್ನು ಕಾಪಾಡಿಕೊಳ್ಳಬಹುದು, ರೈತರ ಆದಾಯವನ್ನು ಬಲಪಡಿಸಬಹುದು ಮತ್ತು ಕೃಷಿ-ತೋಟಗಾರಿಕಾ ಆರ್ಥಿಕ ಲಾಭವನ್ನು ಹೆಚ್ಚಿಸಬಹುದಾಗಿದೆ.

ಥಿಂಕ್ಥ್ರೂ ಕನ್ಸಲ್ಟಿಂಗ್ನ ಸಂಸ್ಥಾಪಕಿ ಹಾಗೂ ಎಬಿಡಬ್ಲ್ಯುಸಿಐ ಪ್ರಧಾನ ಕಾರ್ಯದರ್ಶಿ ಡಾ. ಪರುಲ್ ಸೋನಿ ಮತ್ತು ಗೇನ್ ಭಾರತದ ದೇಶಿ ನಿರ್ದೇಶಕಿ ಡಾ. ಭುವನೇಶ್ವರಿ ಬಾಲಸುಬ್ರಮಣಿಯನ್ ಅವರು ಈ ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ಧಪಡಿಸಿದ್ದಾರೆ. ಆವಿಷ್ಕಾರಗಳನ್ನು ಗುರುತಿಸುವುದರ ಜೊತೆಗೆ ಅವುಗಳನ್ನು ಸರ್ಕಾರದ ಯೋಜನೆಗಳಲ್ಲಿ ಅಳವಡಿಕೆ, ಮಾರುಕಟ್ಟೆ ಪ್ರವೇಶ ಮತ್ತು ಹೂಡಿಕೆ ಅವಕಾಶಗಳತ್ತ ಕೊಂಡೊಯ್ಯಲು ಈ ಕಾರ್ಯಕ್ರಮವು ಒಂದು ವ್ಯವಸ್ಥಿತ ಮಾರ್ಗವನ್ನು ಒದಗಿಸುತ್ತದೆ.

ಕೃಷಿ-ಉದ್ಯಮಗಳು, ಎಫ್ಪಿಒ ಸಂಬಂಧಿತ ಉದ್ಯಮಗಳು, ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳು, ಇನ್ಕ್ಯುಬೇಟರ್ಗಳು ಮತ್ತು ಸರ್ಕಾರಿ ಸಂಸ್ಥೆಗಳನ್ನು ಒಳಗೊಂಡ ವ್ಯಾಪಕ ಸಂಪರ್ಕ ಅಭಿಯಾನದ ಮೂಲಕ ಈ ಗ್ರ್ಯಾಂಡ್ ಚಾಲೆಂಜ್ಗೆ ಒಟ್ಟು 210 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪ್ರಚಾರ ಅಭಿಯಾನವು ಸರಿಸುಮಾರು 1,062 ಹಾಗೂ 442 ಸಾಂಸ್ಥಿಕ ಸಂಸ್ಥೆಗಳನ್ನು ತಲುಪಿದ್ದು, 10 ವೆಬಿನಾರ್ಗಳ ಮೂಲಕ 1,162 ನೋಂದಣಿಗಳು ಮತ್ತು 1,047 ಭಾಗವಹಿಸುವಿಕೆ ದಾಖಲಾಗಿದೆ.

ಸರ್ಕಾರ, ಶಿಕ್ಷಣ ಕ್ಷೇತ್ರ ಮತ್ತು ಹೂಡಿಕೆದಾರರನ್ನು ಒಳಗೊಂಡ 14 ಸದಸ್ಯರ ತಜ್ಞರ ಗುಂಪು ಮೌಲ್ಯಮಾಪನ ಪ್ರಕ್ರಿಯೆಯನ್ನು ನಡೆಸಿದೆ. ಆಯ್ಕೆಯಾದ ಆರು ಪರಿಹಾರಗಳನ್ನು ‘ಸಂಪೂರ್ಣ’ ಪರಿಸರ ವ್ಯವಸ್ಥೆಯ ಮೂಲಕ ಮುನ್ನಡೆಸಲಾಗುತ್ತಿದ್ದು, ಕರ್ನಾಟಕದಲ್ಲಿ ಇವುಗಳ ಅನುಷ್ಠಾನ ಮತ್ತು ವಿಸ್ತರಣೆಗಾಗಿ ಸರ್ಕಾರಿ ಬೆಂಬಲ, ಹೂಡಿಕೆದಾರರ ಸಂಪರ್ಕ ಮತ್ತು ಮಾರುಕಟ್ಟೆ ನಂಟು ಕಲ್ಪಿಸಲು ವಿಶೇಷ ಗಮನಹರಿಸಲಾಗುತ್ತದೆ.

ಈ ನಾವೀನ್ಯತಾ ವೇದಿಕೆಯು ನೈಜ ಜಗತ್ತಿನಲ್ಲಿ ಹೇಗೆ ಅನುಷ್ಠಾನ ಗೊಳ್ಳಲಿದೆ ಎಂಬುದರ ಕುರಿತು ಸ್ಟೀರಿಂಗ್ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ. ‘ಸಂಪೂರ್ಣ ಗ್ರ್ಯಾಂಡ್ ಚಾಲೆಂಜ್ 2026’ ಕಾರ್ಯಕ್ರಮದ ಸಮಾರೋಪ ಸಮಾರಂಭವು ಅಕ್ಟೋಬರ್ 15 ರಿಂದ 18 ರವರೆಗೆ ಬೆಂಗಳೂರಿನ ಜಿಪಿಕೆಕೆ  ಕ್ಯಾಂಪಸ್ನಲ್ಲಿ ನಡೆಯಲಿರುವ ‘ಕೃಷಿಮೇಳ 2026’ರಲ್ಲಿ ಜರುಗಲಿದೆ. ಇಲ್ಲಿ ಆಯ್ಕೆಯಾದ ಪರಿಹಾರಗಳನ್ನು ಗೌರವಿಸಲಾಗುವುದು ಮತ್ತು ಸರ್ಕಾರಿ, ಮಾರುಕಟ್ಟೆ ಹಾಗೂ ಬಂಡವಾಳ ಕ್ಷೇತ್ರದ ಪ್ರಮುಖರೊಂದಿಗೆ ಸಂಪರ್ಕ ಕಲ್ಪಿಸಲಾಗುತ್ತದೆ.

ಸಂಪೂರ್ಣ 2026ರ ಕುರಿತು: ಸಂಪೂರ್ಣ 2026 ಎಂಬುದು ಕರ್ನಾಟಕ ಸರ್ಕಾರದ ಬೆಂಬಲದೊಂದಿಗೆ, ತೋಟಗಾರಿಕೆ ಮತ್ತು ರೇμÉ್ಮ ಇಲಾಖೆಯ ಆಶ್ರಯದಲ್ಲಿ, ಉಂIಓ, ನ್ಯೂಟ್ರಿಷನ್ ಕನೆಕ್ಟ್, ಥಿಂಕ್ಥ್ರೂ ಕನ್ಸಲ್ಟಿಂಗ್ ಮತ್ತು ಸಹಯೋಗದೊಂದಿಗೆ ರೂಪುಗೊಂಡ ಬಹು-ಕ್ಷೇತ್ರದ ವೇದಿಕೆಯಾಗಿದೆ. ಇದು ಕೃಷಿ ಮತ್ತು ತೋಟಗಾರಿಕಾ ಮೌಲ್ಯ ಸರಪಳಿಯಲ್ಲಿ ನಾವೀನ್ಯತಾ ಪರಿಹಾರಗಳನ್ನು ವೇಗವಾಗಿ ಗುರುತಿಸಲು, ಅಳವಡಿಸಿಕೊಳ್ಳಲು ಮತ್ತು ವಿಸ್ತರಿಸಲು ಸಹಾಯ ಮಾಡುತ್ತದೆ.

ಕೃಷಿ ಮತ್ತು ತೋಟಗಾರಿಕಾ ಆಹಾರ ನಷ್ಟವನ್ನು ಕಡಿಮೆ ಮಾಡುವ, ರೈತರ ಆದಾಯವನ್ನು ರಕ್ಷಿಸುವ ಹಾಗೂ ಹವಾಮಾನ-ಸ್ಥಿತಿಸ್ಥಾಪಕ ಆಹಾರ ವ್ಯವಸ್ಥೆಗಳಿಗೆ ಕೊಡುಗೆ ನೀಡುವ ಪರಿಹಾರಗಳ ಮೇಲೆ ‘ಸಂಪೂರ್ಣ’ ವೇದಿಕೆಯು ಗಮನ ಕೇಂದ್ರೀಕರಿಸುತ್ತದೆ. ‘ಸಂಪೂರ್ಣ ಗ್ರ್ಯಾಂಡ್ ಚಾಲೆಂಜ್’ ನಂತಹ ಉಪಕ್ರಮಗಳ ಮೂಲಕ, ಕಟಾವಿನ ನಂತರದ ಅಡಚಣೆಗಳಿಂದ ರೈತ ಸಮುದಾಯದ ಆದಾಯ ನಷ್ಟವಾಗುವುದನ್ನು ತಡೆಗಟ್ಟಿ, ಹೆಚ್ಚಿನ ಮೌಲ್ಯವನ್ನು ಉಳಿಸಿಕೊಳ್ಳಲು ಈ ವೇದಿಕೆ ಸಹಾಯ ಮಾಡುತ್ತದೆ.

ಈ ಉಪಕ್ರಮಕ್ಕೆ ಎಂಎಂ ಆ್ಯಕ್ಟಿವ್ ಸೈ-ಟೆಕ್ ಕಮ್ಯುನಿಕೇಷನ್ಸ್ ಮತ್ತು ಕೃಷಿ ಕಲ್ಪ ಫೌಂಡೇಶನ್ ಸಹಯೋಗಿ ಪಾಲುದಾರರಾಗಿ ಬೆಂಬಲ ನೀಡುತ್ತಿವೆ.

Hot this week

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ: ಪರಿಷ್ಕೃತ NCERT...

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ; MCC...

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ: ವಿದೇಶಿ ಹೂಡಿಕೆದಾರರ ಮಾರಾಟದ ಒತ್ತಡ

ಭಾರತೀಯ ಷೇರು ಮಾರುಕಟ್ಟೆಗಳು(Share Market) ಸತತ ಕುಸಿತದ ಒತ್ತಡಕ್ಕೆ ಸಿಲುಕಿದ್ದು, ಕಳೆದ...

ಹೆಜ್ಜೆಯಲ್ಲಿ ಶಾಸ್ತ್ರ, ಭಾವದಲ್ಲಿ ಭಕ್ತಿ: ‘ಸಮರ್ಪಣ್’ನಲ್ಲಿ ಶೀತಲ್ ಹೇಮಂತ್ ನೃತ್ಯ

ಅ. 3ರಂದು ವಿದುಷಿ ಶೀತಲ್ ಹೇಮಂತ್ ಅವರಿಂದ ವಿಶೇಷ ಭರತನಾಟ್ಯ ನೃತ್ಯ...

“ಚರಕ ಕಾರ್ಯಾಗಾರ”

157ನೇ ಗಾಂಧಿ ಜಯಂತಿ(157th Gandhi Jayanthi) ಅಂಗವಾಗಿ ಆರ್ಟ್ ಕಲ್ಚರಲ್ ಎಜುಕೇಶನಲ್ ...

Topics

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ: ಪರಿಷ್ಕೃತ NCERT...

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ; MCC...

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ: ವಿದೇಶಿ ಹೂಡಿಕೆದಾರರ ಮಾರಾಟದ ಒತ್ತಡ

ಭಾರತೀಯ ಷೇರು ಮಾರುಕಟ್ಟೆಗಳು(Share Market) ಸತತ ಕುಸಿತದ ಒತ್ತಡಕ್ಕೆ ಸಿಲುಕಿದ್ದು, ಕಳೆದ...

“ಚರಕ ಕಾರ್ಯಾಗಾರ”

157ನೇ ಗಾಂಧಿ ಜಯಂತಿ(157th Gandhi Jayanthi) ಅಂಗವಾಗಿ ಆರ್ಟ್ ಕಲ್ಚರಲ್ ಎಜುಕೇಶನಲ್ ...

ರಾಮರಸದಲ್ಲಿ ಆದಾಶರ್ಮಾ ದುರ್ಗಿ ರೋಲ್

ಗುರುದೇಶಪಾಂಡೆ ಒಡೆತನದ ’ಜಿ ಅಕಾಡೆಮಿ’ಯಲ್ಲಿ(Zee Academy) ನಟನೆ ಕಲಿತಿರುವ ಪ್ರತಿಭೆಗಳಿಗೆ ಅವಕಾಶ...

ಅಭಿನಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಸದಾ ಬ್ಯುಸಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Ex.CM.Siddaramayya) ಈಗ ನಟನೆಯಲ್ಲಿ(Acting) ತೊಡಗಿಕೊಂಡಿದ್ದಾರೆ. ಪತ್ರಕರ್ತರಾಗಿ...

ವಿ.ಕುಮಾರ್ ನಿರ್ದೇಶನದ ಹದಿನೆಂಟು ಎಕರೆ ಸಿನಿಮಾ ಲಕ್ಕಪ್ಪ

ಈ ಹಿಂದೆ ಗಾಯಿತ್ರಿ, ಪ್ರೀತಿಯ ಹುಚ್ಚ ಚಿತ್ರಗಳನ್ನು ನಿರ್ದೇಶಿಸಿದ್ದ ವಿ.ಕುಮಾರ್ (ರಾಘವ...

Related Articles