ಬೆಂಗಳೂರು: ಗೌರವಾನ್ವಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್(Thavar chand Ghehlot) ಅವರು ಲೋಕಭವನದ ಗಾಜಿನ ಮನೆಯಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದ ಮೂವರು ಹೆಚ್ಚುವರಿ ನ್ಯಾಯಧೀಶರಿಗೆ ಪ್ರಮಾಣ ವಚನ(oath of office) ಬೋಧಿಸಿದರು.
ನ್ಯಾ.ಶ್ರೀಮತಿ ಉಷರಾಣಿ, ನ್ಯಾ.ಕೆ.ಎಸ್.ಭರತ್ ಕುಮಾರ್ ಮತ್ತು ನ್ಯಾ.ಎಸ್.ಎಂ.ನೇರಳೆ ವಿ.ಭವಾನಿ ಅವರು ಕರ್ನಾಟಕ ಹೈಕೋರ್ಟ್ ನ ಹೆಚ್ಚುವರಿ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾದ ಗೌರವಾನ್ವಿತ ನ್ಯಾ.ವಿಭು ಬಖ್ರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಗಣ್ಯರು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

