ಸಹಕಾರ ಪದ್ದತಿಯಿಂದ ರೈತರ ಪ್ರಗತಿ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅಭಿಮತ

 ಬೆಂಗಳೂರು: “ಜೊತೆಗೂಡುವುದು ಆರಂಭ, ಜೊತೆಗೂಡಿ ಆಲೋಚಿಸುವುದು ಪ್ರಗತಿ, ಜೊತೆಗೂಡಿ ಕೆಲಸ ಮಾಡುವುದು ಯಶಸ್ಸು. ಇದೇ ಸಹಕಾರ ತತ್ವ.‌ ಸಹಕಾರ ಪದ್ದತಿಯಿಂದ ರೈತರ ಪ್ರಗತಿ(Farmer’s Progress) ಸಾಧ್ಯವಾಗಿದೆ” ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್(CM D. K. Shivakumar) ಅವರು ಹೇಳಿದರು. 
 
ಇಂದು ತೀರ್ಥಹಳ್ಳಿ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್) ಅಮೃತ ಮಹೋತ್ಸವವನ್ನು  ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು,  ನನಗೂ ಸಹಕಾರಿ ಚಳುವಳಿಗೂ ಅವಿನಾಭಾವ ಸಂಬಂಧ. ರಾಮಕೃಷ್ಣ ಹೆಗಡೆ ಅವರು 1983ರಲ್ಲಿ ಕನಕಪುರ ಕ್ಷೇತ್ರದಿಂದ ಗೆದ್ದು ಮುಖ್ಯಮಂತ್ರಿಯಾದರು. ಆಗ ನನಗೆ 22 ವರ್ಷ. ಆಗ ನಾನೂ ಟಿಎಪಿಸಿಎಂಸ್ ಚುನಾವಣೆಗೆ ಸಾಮಾನ್ಯ ಕ್ಷೇತ್ರದಿಂದ ನಿಂತು ಗೆದ್ದಿದ್ದೆ.‌ ಆದರೂ ನಾನು ಟಿಎಪಿಸಿಎಂಎಸ್ ಕಾರ್ಯಕ್ರಮಕ್ಕೆ ಹೋದವನಲ್ಲ. ಶಾಸಕರಾದ ಅರಗ ಜ್ಞಾನೇಂದ್ರ ಅವರ ಒತ್ತಾಯದ ಮೇರೆಗೆ ಇಲ್ಲಿದೆ ಬಂದೆ ಎಂದರು.
 
ಕಬ್ಬಿನ ಕಾರ್ಖಾನೆಗಳು ಸಹಕಾರಿ ಪದ್ದತಿಯಲ್ಲಿ ‌ನಡೆದು ರೈತರನ್ನು ಕಾಪಾಡಿವೆ. ಮಲೆನಾಡು ಭಾಗದಲ್ಲಿ ಬಸ್, ಆಸ್ಪತ್ರೆ, ಬ್ಯಾಂಕ್ ಗಳು ಸಹಕಾರಿ ಪದ್ದತಿಯಲ್ಲಿ ನಡೆಯುತ್ತಿವೆ. ಇದು ಈ ಭಾಗದ ಹೆಗ್ಗಳಿಕೆ. ಟಿಎಪಿಸಿಎಂಎಸ್ 75 ವರ್ಷ ಆಚರಿಸುತ್ತಿದೆ. ಒಂದು ಸಂಸ್ಥೆ ಇಷ್ಟು ವರ್ಷಗಳ ಕಾಲ ಉಳಿಯುವುದು ಕಷ್ಟ.‌ ಅದನ್ನು ತೀರ್ಥಹಳ್ಳಿ ಟಿಎಪಿಸಿಎಂಎಸ್ ಸುಳ್ಳಾಗಿಸಿದೆ.‌ ಇಲ್ಲಿನ ಆಡಳಿತ ಮಂಡಳಿಗೆ ಅಭಿನಂದನೆಗಳು ಎಂದರು. 
 
ಮಲೆನಾಡು ಭಾಗಕ್ಕೆ ಹೊಸ ಪ್ರವಾಸೋದ್ಯಮ ನೀತಿ, ಹೆಚ್ಚುವರಿ ಆಡಳಿತ ಭಾಷೆಯಾಗಿ ತುಳು ಎಂದು ಘೋಷಣೆ ಮಾಡಲಾಗಿದೆ. ಹೀಗೆ ಅನೇಕ ಐಸಿಹಾಸಿಕ ನಿರ್ಣಯಗಳನ್ನು ಕರಾವಳಿ ಭಾಗದಲ್ಲಿ ಸಚಿವ ಸಂಪುಟ ನಡೆಸಿ ನಮ್ಮ‌ ಸರ್ಕಾರ ತೆಗೆದುಕೊಂಡಿದೆ. ಮಲೆನಾಡು ಭಾಗವನ್ನು ಉಳಿಸುವ ಬಗ್ಗೆ ಜನರ ಅಭಿಪ್ರಾಯ ಪಡೆದು ತೀರ್ಮಾನ, ಚರ್ಚೆ ಮಾಡೋಣ ಎಂದರು.
 
Hot this week

BIG NEWS :MUMBAI TOLL : ಮುಂಬೈ ಟೋಲ್ ದರಗಳಲ್ಲಿ ಶೇ.20ರಷ್ಟು ಏರಿಕೆ

ಮುಂಬೈ (Mumbai) ನಗರದ ಐದು ಪ್ರಮುಖ ಪ್ರವೇಶ ದ್ವಾರಗಳಲ್ಲಿ ಅಕ್ಟೋಬರ್ 1,...

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ: ಪರಿಷ್ಕೃತ NCERT...

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ; MCC...

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ: ವಿದೇಶಿ ಹೂಡಿಕೆದಾರರ ಮಾರಾಟದ ಒತ್ತಡ

ಭಾರತೀಯ ಷೇರು ಮಾರುಕಟ್ಟೆಗಳು(Share Market) ಸತತ ಕುಸಿತದ ಒತ್ತಡಕ್ಕೆ ಸಿಲುಕಿದ್ದು, ಕಳೆದ...

Topics

“ಚರಕ ಕಾರ್ಯಾಗಾರ”

157ನೇ ಗಾಂಧಿ ಜಯಂತಿ(157th Gandhi Jayanthi) ಅಂಗವಾಗಿ ಆರ್ಟ್ ಕಲ್ಚರಲ್ ಎಜುಕೇಶನಲ್ ...

ರಾಮರಸದಲ್ಲಿ ಆದಾಶರ್ಮಾ ದುರ್ಗಿ ರೋಲ್

ಗುರುದೇಶಪಾಂಡೆ ಒಡೆತನದ ’ಜಿ ಅಕಾಡೆಮಿ’ಯಲ್ಲಿ(Zee Academy) ನಟನೆ ಕಲಿತಿರುವ ಪ್ರತಿಭೆಗಳಿಗೆ ಅವಕಾಶ...

Related Articles