ವೈದ್ಯಕೀಯ ವೃತ್ತಿಯಲ್ಲಿ ನೈತಿಕತೆ, ಕರುಣೆ, ಸೇವಾ ಮನೋಭಾವ ಅತ್ಯಗತ್ಯ: ರಾಜ್ಯಪಾಲ ಗೆಹ್ಲೋಟ್

ವೈದ್ಯಕೀಯ ವೃತ್ತಿಯು ಕೇವಲ ಉದ್ಯೋಗವಲ್ಲ, ಅದು ಸೇವೆ ಮತ್ತು ಕರುಣೆಯ ಕ್ಷೇತ್ರವಾಗಿದ್ದು, ವೈದ್ಯರು ಸದಾ ನೈತಿಕತೆ, ಪ್ರಾಮಾಣಿಕತೆ ಹಾಗೂ ಮಾನವೀಯ (Ethics, Compassion and Spirit of Service Essential) ಮೌಲ್ಯಗಳಿಗೆ ಬದ್ಧರಾಗಿರಬೇಕು ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ (Governor) ಥಾವರ್‍ಚಂದ್ ಗೆಹ್ಲೋಟ್ (Gehlot) ಅವರು ಹೇಳಿದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (ಖಉUಊS) 28ನೇ ವಾರ್ಷಿಕ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಘಟಿಕೋತ್ಸವದಲ್ಲಿ ಪದವಿ ಸ್ವೀಕರಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಅವರು, ಇಂದಿನಿಂದ ಅವರ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತಿದ್ದು, ಸಮಾಜದ ಆರೋಗ್ಯ ಮತ್ತು ಮಾನವ ಜೀವಗಳನ್ನು ರಕ್ಷಿಸುವ ಮಹತ್ತರ ಜವಾಬ್ದಾರಿ ಅವರ ಮೇಲಿದೆ ಎಂದು ತಿಳಿಸಿದರು.
ವೈದ್ಯರ ಮಾತುಗಳು ಭರವಸೆ ನೀಡುತ್ತವೆ, ಅವರ ಸ್ಪರ್ಶ ನಂಬಿಕೆಯನ್ನು ಮೂಡಿಸುತ್ತದೆ ಮತ್ತು ಅವರ ನಿರ್ಧಾರಗಳು ಜೀವ ಉಳಿಸುವ ಸಾಮಥ್ರ್ಯವನ್ನು ಹೊಂದಿವೆ. ವೈದ್ಯಕೀಯ ವೃತ್ತಿಯಲ್ಲಿ ನಂಬಿಕೆಯೇ ಅತಿದೊಡ್ಡ ಆಸ್ತಿ. ರೋಗಿಗಳು ತಮ್ಮ ಜೀವವನ್ನು ವೈದ್ಯರ ಕೈಯಲ್ಲಿ ಇಡುತ್ತಾರೆ. ಆದ್ದರಿಂದ ವೈದ್ಯರು ಪಾರದರ್ಶಕತೆ, ಸೂಕ್ಷ್ಮತೆ ಮತ್ತು ನೈತಿಕ ಮೌಲ್ಯಗಳನ್ನು ತಮ್ಮ ವೃತ್ತಿಜೀವನದ ಅವಿಭಾಜ್ಯ ಅಂಗವನ್ನಾಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.


ದೇಶದ ಆರೋಗ್ಯ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (ಎಐ), ಟೆಲಿಮೆಡಿಸಿನ್ ಮತ್ತು ಸಂಶೋಧನೆಯ ಮೂಲಕ ಮಹತ್ವದ ಬದಲಾವಣೆಗಳು ನಡೆಯುತ್ತಿವೆ ಎಂದು ಉಲ್ಲೇಖಿಸಿದ ಅವರು, ಯುವ ವೈದ್ಯರು ನಿರಂತರ ಕಲಿಕೆಗೆ ಒತ್ತು ನೀಡಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಬೇಕು ಎಂದು ಸಲಹೆ ನೀಡಿದರು.
ಪ್ರಧಾನಮಂತ್ರಿ ನೇತೃತ್ವದಲ್ಲಿ “ಆರೋಗ್ಯಕರ ಭಾರತ” ಮತ್ತು “ವಿಕಸಿತ ಭಾರತ-2047” ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ವೈದ್ಯಕೀಯ ಸಮುದಾಯದ ಪಾತ್ರ ಮಹತ್ವದ್ದಾಗಿದೆ. ಗ್ರಾಮೀಣ ಆರೋಗ್ಯ ಸೇವೆ, ತಾಯಿ ಮತ್ತು ಶಿಶು ಆರೋಗ್ಯ, ತಡೆಗಟ್ಟುವ ಆರೋಗ್ಯ ಸೇವೆ ಹಾಗೂ ಸಾರ್ವಜನಿಕ ಜಾಗೃತಿ ಕ್ಷೇತ್ರಗಳಲ್ಲಿ ಯುವ ವೈದ್ಯರ ಕೊಡುಗೆ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಭಾರತೀಯ ಸಂಸ್ಕøತಿಯಲ್ಲಿ ಸೇವೆಗೆ ಅತ್ಯುನ್ನತ ಸ್ಥಾನವಿದ್ದು, “ಸರ್ವೇ ಸಂತು ನಿರಾಮಯಾಃ” ಎಂಬ ಸಂದೇಶವೇ ಭಾರತೀಯ ವೈದ್ಯಕೀಯ ಪರಂಪರೆಯ ಆತ್ಮವಾಗಿದೆ ಎಂದು ರಾಜ್ಯಪಾಲರು ಹೇಳಿದರು. ಆಯುರ್ವೇದ, ಯೋಗ, ಪ್ರಕೃತಿ ಚಿಕಿತ್ಸೆ ಸೇರಿದಂತೆ ಭಾರತದ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳು ವಿಶ್ವದಾದ್ಯಂತ ಮನ್ನಣೆ ಪಡೆಯುತ್ತಿದ್ದು, ಆಧುನಿಕ ವೈದ್ಯಕೀಯ ಮತ್ತು ಸಾಂಪ್ರದಾಯಿಕ ಜ್ಞಾನವನ್ನು ಸಮನ್ವಯಗೊಳಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ವಿಶ್ವವಿದ್ಯಾಲಯದಿಂದ ಗೌರವ ಪದವಿ ಪಡೆದ ಡಾ. ಎನ್. ಶ್ರೀಧರ್ ಶೆಟ್ಟಿ, ಡಾ. ಹರ್ಷಗಿ ವೀರಭದ್ರಪ್ಪ ಹಾಗೂ ಡಾ. ಎ.ಸಿ. ಷಣ್ಮುಗಂ ಅವರನ್ನು ಅಭಿನಂದಿಸಿದ ರಾಜ್ಯಪಾಲರು, ಅವರು ಮುಂದೆಯೂ ತಮ್ಮ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಲಿ ಎಂದು ಹಾರೈಸಿದರು.
ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶಿಷ್ಟ ಸ್ಥಾನ ಗಳಿಸಿದೆ ಎಂದು ಶ್ಲಾಘಿಸಿದ ಅವರು, ಇಲ್ಲಿಂದ ಶಿಕ್ಷಣ ಪಡೆದ ಸಾವಿರಾರು ವೈದ್ಯರು ದೇಶ-ವಿದೇಶಗಳಲ್ಲಿ ಮಾನವೀಯ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು. ಭವಿಷ್ಯದಲ್ಲಿಯೂ ವಿಶ್ವವಿದ್ಯಾಲಯವು ನಾವೀನ್ಯತೆ, ಸಂಶೋಧನೆ ಮತ್ತು ಗುಣಮಟ್ಟದ ಶಿಕ್ಷಣದ ಪ್ರಮುಖ ಕೇಂದ್ರವಾಗಿ ಮುಂದುವರಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಂಶೋಧನೆ ಮತ್ತು ನಾವೀನ್ಯತೆ ರಾಷ್ಟ್ರದ ಪ್ರಗತಿಯ ಅಡಿಪಾಯವಾಗಿದ್ದು, ಆರೋಗ್ಯ ವಿಜ್ಞಾನ ಕ್ಷೇತ್ರದಲ್ಲಿ ಭಾರತವನ್ನು ಇನ್ನಷ್ಟು ಸ್ವಾವಲಂಬಿಯನ್ನಾಗಿಸಲು ಸಂಶೋಧನೆಗೆ ಹೆಚ್ಚಿನ ಉತ್ತೇಜನ ನೀಡಬೇಕು ಎಂದು ರಾಜ್ಯಪಾಲರು ಕರೆ ನೀಡಿದರು. ಯುವ ವೈದ್ಯರು ವೈದ್ಯಕೀಯ ಸಂಶೋಧನೆ, ಹೊಸ ಔಷಧಗಳ ಅಭಿವೃದ್ಧಿ ಹಾಗೂ ಸಾರ್ವಜನಿಕ ಆರೋಗ್ಯ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡುವ ವಿಶ್ವಾಸವಿದೆ ಎಂದು ಅವರು ಹೇಳಿದರು. ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್, ವಿಶ್ವವಿದ್ಯಾಲಯದ ಕುಲಪತಿ ಡಾ. ಭಗವಾನ್ ಬಿ.ಸಿ. ಉಪಸ್ಥಿತರಿದ್ದರು.

Hot this week

ಬಂಡೆ ಒಡೆಯೋರಿಗೆ ರೈತರ ಕಷ್ಟ ತಿಳಿಯಲ್ಲ

ಬೆಂಗಳೂರು: ಕೃಷಿ ಮಾಡಿದವರಿಗೆ ಮಾತ್ರ ರೈತರ ಕಷ್ಟ ತಿಳಿಯುತ್ತೆ ಹೊರತು ಬಂಡೆ...

ಪದ್ಮನಾಭನಗರದಲ್ಲಿ ಧಾರ್ಮಿಕ ಜಾಗೃತಿ ಮೆರವಣಿಗೆ

ಬೆಂಗಳೂರು: ಸುರಭಾರತಿ ಸಾಂಸ್ಕೃತಿಕ ಪ್ರತಿಷ್ಠಾನ, (SuraBharathi Cultural Prathistana) ಹೊರಮಾವು (Horamavu)...

ವೈದ್ಯರು ಕಣ್ಣಿಗೆ ಕಾಣುವ ದೇವರು, ಜನರ ನಂಬಿಕೆ ಉಳಿಸಿಕೊಳ್ಳಿ : ಡಿ.ಕೆ. ಶಿವಕುಮಾರ್

ವೈದ್ಯರು ಕಣ್ಣಿಗೆ ಕಾಣುವ ದೇವರು. (Doctors are Gods) ಕಷ್ಟ ಇದ್ದರೂ...

ಕುಡಿತಿನಿ ಪ್ರದೇಶದ ಭೂಸ್ವಾಧಿನದಲ್ಲಿ ಭಾರೀ ಮೋಸ: ಜೂ. 18 – ಬಳ್ಳಾರಿ ಸಂಪೂರ್ಣ ಬಂದ್

Bellary : ಭಾರೀ ಕೈಗಾರಿಕೆಗಳ ಸ್ಥಾಪನೆಯ ಉದ್ದೇಶಕ್ಕೆಂದು ಬಳ್ಳಾರಿ ಜಿಲ್ಲೆಯ ಕುಡಿತಿನಿ...

Topics

ಬಂಡೆ ಒಡೆಯೋರಿಗೆ ರೈತರ ಕಷ್ಟ ತಿಳಿಯಲ್ಲ

ಬೆಂಗಳೂರು: ಕೃಷಿ ಮಾಡಿದವರಿಗೆ ಮಾತ್ರ ರೈತರ ಕಷ್ಟ ತಿಳಿಯುತ್ತೆ ಹೊರತು ಬಂಡೆ...

ಪದ್ಮನಾಭನಗರದಲ್ಲಿ ಧಾರ್ಮಿಕ ಜಾಗೃತಿ ಮೆರವಣಿಗೆ

ಬೆಂಗಳೂರು: ಸುರಭಾರತಿ ಸಾಂಸ್ಕೃತಿಕ ಪ್ರತಿಷ್ಠಾನ, (SuraBharathi Cultural Prathistana) ಹೊರಮಾವು (Horamavu)...

ಕುಡಿತಿನಿ ಪ್ರದೇಶದ ಭೂಸ್ವಾಧಿನದಲ್ಲಿ ಭಾರೀ ಮೋಸ: ಜೂ. 18 – ಬಳ್ಳಾರಿ ಸಂಪೂರ್ಣ ಬಂದ್

Bellary : ಭಾರೀ ಕೈಗಾರಿಕೆಗಳ ಸ್ಥಾಪನೆಯ ಉದ್ದೇಶಕ್ಕೆಂದು ಬಳ್ಳಾರಿ ಜಿಲ್ಲೆಯ ಕುಡಿತಿನಿ...

ನಿತ್ಯ ಪಂಚಾಂಗ 17.06.2026 ಬುಧವಾರ WEDNESDAY.

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 17.06.2026 ಬುಧವಾರ WEDNESDAY. ಸಂವತ್ಸರ: ಪರಾಭವ. SAMVATSARA : PARABHAVA. ಆಯಣ:...

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್: ಅರ್ಜಿ ಆಹ್ವಾನ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ದಿನಪತ್ರಿಕೆಗಳು/ಮಾಧ್ಯಮ ಸಂಸ್ಥೆಗಳಲ್ಲಿ...

ವಿವಿಧ ದೇಶಗಳ ಗೌರವಾನ್ವಿತ ರಾಯಭಾರಿಗಳ ನಿಯೋಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕಿರಣ್ ಮಜುಂದಾರ್ ಶಾ, ಸುರೇಶ್, ಗೀತಾಂಜಲಿ...

Related Articles