ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯು(The Karnataka Nataka Academy) 2025ನೇ ಸಾಲಿನಲ್ಲಿ ಪ್ರಕಟವಾದ ರಂಗಭೂಮಿಗೆ ಸಂಬಂಧಿಸಿದ ಆಕರ ಗ್ರಂಥಗಳಿಗೆ ಪುಸ್ತಕ ಬಹುಮಾನವನ್ನು ನೀಡಲು ನಿರ್ಧರಿಸಿದೆ. ಕನ್ನಡ ರಂಗಭೂಮಿಯ ಬೆಳವಣಿಗೆ, ವೈವಿಧ್ಯತೆ ಹಾಗೂ ಇತಿಹಾಸವನ್ನು ತಿಳಿಸುವ ವಿಮರ್ಶಾತ್ಮಕ ಕೃತಿಗಳಿಂದ ಈ ಬಹುಮಾನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಬಹುಮಾನದ ಮೊತ್ತ ರೂ. 25,000/- ನಿಗದಿಪಡಿಸಲಾಗಿದೆ. ಆಸಕ್ತ ಲೇಖಕರು ತಮ್ಮ ಹೆಸರು, ವಿಳಾಸ ಮತ್ತು ಪ್ರಕಟಣೆಯ ವರ್ಷವನ್ನು ನೀಡಿ, ಪುಸ್ತಕದ ನಾಲ್ಕು ಪ್ರತಿಗಳೊಂದಿಗೆ ನೇರವಾಗಿ ಅಕಾಡೆಮಿಗೆ ಕಳುಹಿಸಿಕೊಡಬೇಕು. ಅರ್ಜಿ ಸಲ್ಲಿಸಲು 2026 ನೇ ಅಕ್ಟೋಬರ್ 15 ಕೊನೆಯ ದಿನವಾಗಿರುತ್ತದೆ.
ಪ್ರಮುಖ ನಿಯಮಗಳು ಮತ್ತು ನಿಬಂಧನೆಗಳು:
ಕೃತಿಗಳು ಜನವರಿ 2025ರಿಂದ ಡಿಸೆಂಬರ್ 2025ರೊಳಗೆ ಮುದ್ರಣವಾದ ಮೊದಲ ಪ್ರಕಟಣೆಯಾಗಿರಬೇಕು. ಅನುವಾದಿತ ಕೃತಿಗಳು, ನಾಟಕಗಳು, ಮರುಮುದ್ರಣಗೊಂಡ ಪುಸ್ತಕಗಳು ಹಾಗೂ ಸಂಪಾದಿತ ಕೃತಿಗಳಿಗೆ ಅವಕಾಶವಿರುವುದಿಲ್ಲ.
ಪುಸ್ತಕಗಳು ಯಾವುದೇ ಪದವಿಗಾಗಿ, ಪಿಹೆಚ್‍ಡಿಗಾಗಿ ಅಥವಾ ಪಠ್ಯ ಪುಸ್ತಕಕ್ಕಾಗಿ ಸಿದ್ಧಪಡಿಸಿದ ವಿಷಯವಾಗಿರಬಾರದು. ಕೃತಿಯು ಕನಿಷ್ಠ 60 ಪುಟಗಳನ್ನು ಹೊಂದಿರಬೇಕು ಮತ್ತು ಕೃತಿಯ ತಾಂತ್ರಿಕ ಪುಟದಲ್ಲಿ ಮುದ್ರಣ ವರ್ಷವನ್ನು ನಮೂದಿಸಿರಬೇಕು.
ಅಕಾಡೆಮಿಯ ಸದಸ್ಯರು ರಚಿಸಿದ ಕೃತಿಗಳು ಈ ಬಹುಮಾನಕ್ಕೆ ಅರ್ಹವಾಗಿರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ರಿಜಿಸ್ಟ್ರಾರ್, ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು-560002 ಅಥವಾ ದೂರವಾಣಿ ಸಂಖ್ಯೆ 08022244176 ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ರಾಜ್ಯದ ಬರ ಪರಿಸ್ಥಿತಿ ಹಿನ್ನೆಲೆ: ಬೆಂಗಳೂರು ಕೃಷಿಮೇಳವನ್ನು ಒಂದು ದಿನ ಸರಳವಾಗಿ ಆಯೋಜಿಸಿ “ಬರ ನಿರ್ವಹಣೆ” ಕಾರ್ಯಾಗಾರ

