ದೇಶದ ಚಿನ್ನದ (Gold Market) ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ (falling Down) ಮುಂದುವರಿದಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ (New Delhi) ಬುಧವಾರ ಸತತ ಏಳನೇ (7th Day) ವಹಿವಾಟಿನ ದಿನವೂ ಚಿನ್ನದ ದರ (Gold Price) ಕುಸಿತ ಕಂಡಿದ್ದು, 10 ಗ್ರಾಂಗೆ ಬರೋಬ್ಬರಿ ₹2,800 ಇಳಿಕೆಯಾಗಿದೆ. ಇದರೊಂದಿಗೆ ಚಿನ್ನದ ಬೆಲೆ ಕಳೆದ ವರ್ಷದ ಡಿಸೆಂಬರ್ ನಂತರದ ಅತ್ಯಂತ ಕೆಳಮಟ್ಟಕ್ಕೆ ತಲುಪಿದೆ.
10 ಗ್ರಾಂ ಚಿನ್ನದ ಬೆಲೆ ₹1,35,800ಕ್ಕೆ ಇಳಿಕೆ
ಬುಧವಾರ 99.9% ಶುದ್ಧತೆಯ ಚಿನ್ನದ ಬೆಲೆ 10 ಗ್ರಾಂಗೆ ₹2,800 ಇಳಿಕೆಯಾಗಿ ₹1,35,800ಕ್ಕೆ ತಲುಪಿದೆ. ಮಂಗಳವಾರ ಇದೇ ಪ್ರಮಾಣದ ಚಿನ್ನದ ಬೆಲೆ ₹1,38,600 ಇತ್ತು.
ಜಾಗತಿಕ ಮಾರುಕಟ್ಟೆಯಲ್ಲಿ ನಿರಂತರ ಮಾರಾಟದ ಒತ್ತಡ ಹೆಚ್ಚಾಗಿರುವುದು ದೇಶೀಯ ಚಿನ್ನದ ಬೆಲೆ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.
ಬೆಳ್ಳಿ ಬೆಲೆಯಲ್ಲೂ ಭಾರಿ ಇಳಿಕೆ
ಚಿನ್ನದ ಜೊತೆಗೆ ಬೆಳ್ಳಿ ಬೆಲೆಯೂ ಕುಸಿತ ಕಂಡಿದೆ. ಬುಧವಾರ ಒಂದು ಕೆ.ಜಿ ಬೆಳ್ಳಿಯ ಬೆಲೆ ₹5,000 ಇಳಿಕೆಯಾಗಿ ₹1,64,500ಕ್ಕೆ ತಲುಪಿದೆ. ಹಿಂದಿನ ದಿನ ಬೆಳ್ಳಿ ಬೆಲೆ ₹1,69,500 ಇತ್ತು.
ಜಾಗತಿಕ ಮಾರುಕಟ್ಟೆಯಲ್ಲೂ ಚಿನ್ನಕ್ಕೆ ಹೊಡೆತ
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಶೇ.2ಕ್ಕಿಂತ ಹೆಚ್ಚು ಕುಸಿದಿದೆ. ಪ್ರತಿ ಔನ್ಸ್ ಚಿನ್ನದ ಬೆಲೆ 78.71 ಡಾಲರ್ ಇಳಿಕೆಯಾಗಿ 3,770.54 ಡಾಲರ್ಗೆ ತಲುಪಿದೆ. ಬೆಳ್ಳಿ ಬೆಲೆಯೂ ಶೇ.3ಕ್ಕಿಂತ ಹೆಚ್ಚು ಕುಸಿತ ಕಂಡಿದೆ.
ಅಮೆರಿಕದ ಷೇರು ಮಾರುಕಟ್ಟೆಯಲ್ಲಿನ ದುರ್ಬಲತೆ ಮತ್ತು ಜಾಗತಿಕ ಹೂಡಿಕೆದಾರರು ಚಿನ್ನ ಹಾಗೂ ಬೆಳ್ಳಿಯಲ್ಲಿನ ಹೂಡಿಕೆಯನ್ನು ಹಿಂಪಡೆಯುತ್ತಿರುವುದು ಈ ಕುಸಿತಕ್ಕೆ ಕಾರಣವಾಗಿದೆ ಎಂದು HDFC Securities ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ ತಿಳಿಸಿದ್ದಾರೆ.
ಸತತವಾಗಿ ಚಿನ್ನದ ಬೆಲೆ ಇಳಿಕೆಯಾಗುತ್ತಿರುವುದರಿಂದ ಆಭರಣ ಖರೀದಿಸಲು ಕಾಯುತ್ತಿರುವ ಗ್ರಾಹಕರಲ್ಲಿ ಆಸಕ್ತಿ ಹೆಚ್ಚಾಗಿದೆ. ಆದರೆ ಮಾರುಕಟ್ಟೆಯಲ್ಲಿನ ಏರಿಳಿತ ಮುಂದುವರಿಯುವ ಸಾಧ್ಯತೆ ಇರುವುದರಿಂದ ಮುಂದಿನ ದಿನಗಳಲ್ಲಿ ಬೆಲೆ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದನ್ನು ಕಾದುನೋಡಬೇಕಿದೆ. ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಭಾರಿ ಕುಸಿತ ದಾಖಲಾಗಿದ್ದು, ಹೂಡಿಕೆದಾರರು ಹಾಗೂ ಆಭರಣ ಖರೀದಿದಾರರ ಗಮನ ಈಗ ಜಾಗತಿಕ ಮಾರುಕಟ್ಟೆಯ ಬೆಳವಣಿಗೆಗಳತ್ತ ನೆಟ್ಟಿದೆ.

