ಬೆಂಗಳೂರು: ಬೆಂಗಳೂರು(Bangalore) ನೀರು ಸರಬರಾಜು(Water Adalat|) ಮತ್ತು ಒಳಚರಂಡಿ ಮಂಡಳಿಯಿಂದ ಸಾರ್ವಜನಿಕರ ನೀರಿನ ಸಮಸ್ಯೆಗಳನ್ನು(Water Problems) ಬಗೆಹರಿಸಲು ನವೆಂಬರ್ 19 ರಂದು ಬೆಳಿಗ್ಗೆ 9:30 ರಿಂದ 11:00 ರವರೆಗೆ ನೀರಿನ ಅದಾಲತ್ ಆಯೋಜಿಸಲಾಗಿದೆ.
ನೀರಿನ ಬಿಲ್ಲುಗಳು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ಹಾಗೂ ಇತ್ಯಾದಿ ಕುಂದುಕೊರತೆಗಳನ್ನು ಪರಿಹರಿಸುವುದು ಪ್ರಮುಖ ಉದ್ದೇಶವಾಗಿದೆ.
ಪ್ರಮುಖ ಉಪವಿಭಾಗಗಳು ಮತ್ತು ಅದಾಲತ್ ನಡೆಯುವ ಸ್ಥಳಗಳ ವಿವರ:
ಪಶ್ಚಿಮ-1-2: 1ನೇ ‘ಎನ್’ ಬ್ಲಾಕ್, 4ನೇ ಅಡ್ಡ ರಸ್ತೆ, ವಿದ್ಯಾವರ್ಧಕ ಶಾಲೆ ಹಿಂಭಾಗ (ಕೇತಮಾರನಹಳ್ಳಿ ವಾಟರ್ ಟ್ಯಾಂಕ್ ಹತ್ತಿರ), ರಾಜಾಜಿನಗರ, ಬೆಂಗಳೂರು.
ಪಶ್ಚಿಮ-2-2: ಪೈಪ್‍ಲೈನ್ ರಸ್ತೆ, ಸುಂಕದಕಟ್ಟೆ, ಬೆಂಗಳೂರು.
ಪಶ್ಚಿಮ-3-2 / ಪಶ್ಚಿಮ-4-2: ನೆಲಮಹಡಿ, ಅರ್ಕಾವತಿ ಭವನ, 5ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಆರ್.ಪಿ.ಸಿ ಲೇಔಟ್, ವಿಜಯನಗರ 2ನೇ ಹಂತ, ಬೆಂಗಳೂರು.
ಉತ್ತರ-1-2: ನಂ.3, ಪಿ&ಟಿ ಕಾಲೋನಿ, ಆರ್.ಟಿ.ನಗರ, ಬೆಂಗಳೂರು. ಉತ್ತರ-2-2: 1ನೇ ಬ್ಲಾಕ್, 9ನೇ ‘ಡಿ’ ಮುಖ್ಯ ರಸ್ತೆ, ಸರ್ವಿಸ್ ರಸ್ತೆ, ಹೆಚ್.ಆರ್.ಬಿ.ಆರ್ ಲೇಔಟ್, ಕಲ್ಯಾಣ ನಗರ, ಬೆಂಗಳೂರು.
ಉತ್ತರ-3-2: 1ನೇ ಮಹಡಿ, ಪಿನಾಕಿನಿ ಭವನ, ದೊಡ್ಡಬಳ್ಳಾಪುರ ರಸ್ತೆ, ಮೇಜರ್ ಉನ್ನಿಕೃಷ್ಣನ್ ರಸ್ತೆ, ಯಲಹಂಕ, ಬೆಂಗಳೂರು.
ದಕ್ಷಿಣ-4-2: 4ನೇ ಬ್ಲಾಕ್, ಬನಶಂಕರಿ 6ನೇ ಹಂತ, ರಾಘವೇಂದ್ರ ಸ್ವಾಮಿ ಮಠದ ಎದುರು, ಅಂಗಧೀರನಹಳ್ಳಿ, ಬೆಂಗಳೂರು. ದಕ್ಷಿಣ-1-2: 21ನೇ ಮುಖ್ಯ ರಸ್ತೆ, 11ನೇ ಬ್ಲಾಕ್, ಅಂಜನಾಪುರ, ಬೆಂಗಳೂರು.
ದಕ್ಷಿಣ-2-2: ಎಇಸಿಎಸ್ ಲೇಔಟ್, ‘ಎ’ ಬ್ಲಾಕ್, ಕೂಡ್ಲು, ಬೆಂಗಳೂರು. ದಕ್ಷಿಣ-3-2: 9ನೇ ಮುಖ್ಯರಸ್ತೆ, ಬಿ.ಟಿ.ಎಂ 2ನೇ ಹಂತ, ಬೆಂಗಳೂರು.
ಉತ್ತರ-4-2: 1ನೇ ಮಹಡಿ, 7ನೇ ಮುಖ್ಯ ರಸ್ತೆ, ಎಂ.ಇ.ಐ ಲೇಔಟ್, ಹೆಸರಘಟ್ಟ ರಸ್ತೆ, ಬೆಂಗಳೂರು.
ಈ ಅದಾಲತ್ ಸೌಲಭ್ಯವನ್ನು ಸಾರ್ವಜನಿಕರು ಬಳಸಿಕೊಳ್ಳಬಹುದು.
ತುರ್ತು ದೂರುಗಳಿಗಾಗಿ ಜಲಮಂಡಳಿಯ 24/7 ಸಹಾಯವಾಣಿ ಸಂಖ್ಯೆ: 1916 ಅಥವಾ ವಾಟ್ಸ್ ಆಪ್ ಸಂಖ್ಯೆ: 8762228888 ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಜಾಗತಿಕ ಭವಿಷ್ಯಕ್ಕೆ ಸ್ಪರ್ಧೆಗಿಂತ ಸಹಕಾರವೇ ಮುಖ್ಯ: ಪ್ರಧಾನಿ ನರೇಂದ್ರ ಮೋದಿ

